Kodagu
ಹತ್ತನೆ ವರ್ಷದ ಕಾವೇರಿ ತೀರ್ಥ ವಿತರಣೆ
ವಿರಾಜಪೇಟೆ: ನಗರದ ನಾಗರಿಕರೀಗೆ ಪವಿತ್ರ ಕಾವೇರಿ ತೀರ್ಥ ವಿತರಣೆ ಮಾಡಿದ ಹಿಂದೂ ಆಗ್ನಿ ಧಳ ಸಂಘಟನೆ.
ಹಿಂದೂ ಅಗ್ನಿ ಧಳ ಮೂರ್ನಾಡು ರಸ್ತೆ ವಿರಾಜಪೇಟೆ ಸಂಘಟನೆಯ ವತಿಯಿಂದ ಹತ್ತನೇ ವರ್ಷದ ತೀರ್ಥ ವಿತರಣೆ ಕಾರ್ಯಕ್ರಮ ನಗರದಲ್ಲಿ ನಡೆಯಿತು. ತಾ ೧೭ರ ನಸುಕಿನಲ್ಲಿ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಭಕ್ತರಿಗೆ ತೀರ್ಥ ರೂಪಿನಿಯಾಗಿ ದರ್ಶನ ಕರುಣಿಸಿದ ಕಾವೇರಿಯ ಪವಿತ್ರ ತೀರ್ಥವನ್ನು ವಿರಾಜಪೇಟೆ ನಗರದ ಎಲ್ಲಾ ಬೀದಿಗಳಲ್ಲಿ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಹಿಂದೂ ಆಗ್ನಿ ಧಳ ಸಂಘಟನೆ ಯ ಅಧ್ಯಕ್ಷರಾದ ಸೋಮಶೇಖರ್ ಅವರು ಕಾವೇರಿ ತೀರ್ಥೋತ್ಬವ ದಿನದಂದು ಗೆಳೆಯರು ದ್ವೀಚಕ್ರ ವಾಹನದಲ್ಲಿ ತೆರಳಿ ನಮಗಳ ಮನೆಗೆ ತೀರ್ಥವನ್ನು ತರುತಿದ್ದೇವು. ಕುಟುಂಬ ವರ್ಗ ಸೇರಿದಂತೆ ನೆರೆಕರೆಯವರಿಗೂ ವಿತರಣೆ ಮಾಡಲು ಸಾದ್ಯವಾಗಲಿಲ್ಲ… ಈ ಹಿನ್ನೆಲೆಯಲ್ಲಿ ಗೆಳೆಯರೋಂದಿಗೆ ಹಿಂದೂ ಆಗ್ನಿ ಧಳ ಸಂಘಟನೆಯ ಸಹಯೋಗದೊಂದಿಗೆ ೧೦ ವರ್ಷಗಳಿಂದ ವಿರಾಜಪೇಟೆ ನಗರದ ಎಲ್ಲೆಡೆಯೂ ಪವಿತ್ರ ಕಾವೇರಿ ತೀರ್ಥ ವಿತರಣೆ ಮಾಡಲಾಗುತ್ತಿದೆ. ತೀರ್ಥ ವಿತರಣೆಗೆ ಹಲವರ ಸಹಕಾರ ಮತ್ತು ದೇಣಿಗೆ ನೀಡುತ್ತಾ ಬಂದಿದ್ದು ಇದು ಸಂಘಟನೆಗೆ ಆಸರೆಯಾಗಿದೆ ಎಂದು ಹೇಳಿದರು.
ಸಂಚಾಲಕ ದಿನೇಶ್ ನಾಯರ್ ಮಾತನಾಡಿ ಪವಿತ್ರ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮ ೧೦ ವರ್ಷಗಳಿಂದ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತಾ ಬಂದಿದೆ. ಸಂಘಟನೆಯೋಂದಿಗೆ ಸಂಘಟನೆಯ ಸದಸ್ಯರು ಮತ್ತು ಕಾರ್ಯಕರ್ತರ ಶ್ರಮ ಅವಿರತವಾದುದು. ೩೦೦೦ ಲೀ ಗೊ ಅಧಿಕವಾಗಿ ಡ್ರಂಗಳಲ್ಲಿ ತೀರ್ಥ ಸಂಗ್ರಹಿಸಿ. ನಗರಕ್ಕೆ ತಂದು ನಗರದ ಜನತೆಗೆ ವಿತರಣೆ ಮಾಡಲಾಗುತ್ತಿದೆ. ನಗರದ ನಾಗರಿಕರು ತೀರ್ಥ ವಿತರಣಾ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತಿದ್ದಾರೆ ಎಂದು ಹೇಳಿದರು.
ಪವಿತ್ರ ತೀರ್ಥ ವಿತರಣಾ ಕಾರ್ಯಕ್ರಮದಲ್ಲಿ ಹಿಂದೂ ಆಗ್ನಿ ಧಳದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಜರಿದ್ದರು.
Kodagu
ಮನವಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ : ಶಾಸಕ ಪೊನ್ನಣ್ಣ
ಗೋಣಿಕೊಪ್ಪ : ಅಂತರರಾಷ್ಟ್ರೀಯ ಆದಿವಾಸಿ ಬುಡಕಟ್ಟು ದಿನಾಚರಣೆಯ ಪ್ರಯುಕ್ತ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಪೊನ್ನಂಪೇಟೆ ತಾಲೂಕಿನ ನಾಣಚಿ ಭಾಗಕ್ಕೆ ಭೇಟಿ ನೀಡಿದರು.
ಹಾಡಿಯ ನಿವಾಸಿಗಳು ನೀಡಿದ ಹಲವು ಬೇಡಿಕೆಗಳಿದ್ದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಬಾಂಧವರಿಗೆ ಶುಭಾಶಯಗಳು ಕೋರಿದ ಶಾಸಕರು ಬಳಿಕ ಮಾತನಾಡಿ, ಸಂವಿಧಾನ ಬದ್ಧವಾಗಿ ತಾವುಗಳು ನೀಡಿರುವ ಮನವಿಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ತಾನು ಪ್ರಯತ್ನಿಸಿ ಈಗಾಗಲೇ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಕಳೆದ ಎರಡು ವರ್ಷದಲ್ಲಿ ಕಲ್ಪಿಸಿದ ಹತ್ತಾರು ಸೌಲಭ್ಯಗಳ ಬಗ್ಗೆ ನೆನಪಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 16ಕ್ಕೂ ಅಧಿಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದನ್ನು ನೆನಪಿಸಿದ ಶಾಸಕರು, ಬಹುತೇಕ ಎಲ್ಲಾ ಆದಿವಾಸಿ-ಬುಡಕಟ್ಟು ಜನಾಂಗದವರು ವಾಸಿಸುವ ಕಡೆ ರಸ್ತೆಗಳನ್ನು, ಕುಡಿಯುವ ನೀರನ್ನು, ಹಕ್ಕು ಪತ್ರಗಳನ್ನು ಒದಗಿಸಿದ್ದನ್ನು ಸ್ಮರಿಸಿದರು.
ಆದಿವಾಸಿ ಮಕ್ಕಳ ಅಭಿವೃದ್ಧಿಗಾಗಿ ಶಾಲೆಯನ್ನು ತೆರೆಯುವುದರೊಂದಿಗೆ, ಚಾಲ್ತಿಯಲ್ಲಿರುವ ಶಾಲೆಯ ಸೌಲಭ್ಯಗಳ ಉನ್ನತೀಕರಣ, ಮಕ್ಕಳಿಗೆ ಶಾಲಾ ಮೈದಾನ, ಕ್ರೀಡಾಪೋತ್ಸಹ ಈ ಹಿಂದೆ ಅಧಿಕಾರದಲ್ಲಿದ್ದ ಯಾರು ನೀಡದೆ ಇದ್ದು ತಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸವಲತ್ತುಗಳನ್ನು ನೀಡಿರುವುದನ್ನು ನೆನಪಿಸಿಕೊಳ್ಳುವಂತೆ ಮನವಿ ಮಾಡಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು, ಆದಿವಾಸಿ-ಬುಡಕಟ್ಟು ಜನಾಂಗದವರ ಏಳಿಗೆಗಾಗಿ ರೂಪಿಸಿದ ಕಾನೂನನ್ನು ನೆನಪಿಸಿಕೊಂಡ ಮಾನ್ಯ ಶಾಸಕರು, ಇಂದು ಎಲ್ಲಾ ಆದಿವಾಸಿ-ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಒದಗಿಸಲು ಈ ಕಾನೂನೇ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ. ಬಾಡಗ ವಲಯ ಅಧ್ಯಕ್ಷರಾದ ರವಿ, ಪಂಚಾಯಿತಿ ಸದಸ್ಯರಾದ ಬೋಪಣ್ಣ, ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ನಾಲ್ಕೇರಿ ವಲಯ ಅಧ್ಯಕ್ಷರಾದ ಕಟ್ಟಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷರು ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಗೋಣಿಕೊಪ್ಪ ವಲಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಅಪ್ಪಣ್ಣ, ಪಕ್ಷದ ಪ್ರಮುಖರು ಹರೀಶ್, ಬುಡಕಟ್ಟು ಜನಾಂಗದ ಅಧ್ಯಕ್ಷರು, ಸದಸ್ಯರು, ಹಾಡಿ ನಿವಾಸಿಗಳು ,ಐಟಿಡಿಪಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.
Kodagu
ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಪೊನ್ನಣ್ಣ ಭೇಟಿ
ವಿರಾಜಪೇಟೆ : ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ ತಾಲೂಕಿನ ಪ್ರವಾಸದಲ್ಲಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಳೆ ಹಾನಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿ, ಬೇಗೂರಿಗೆ ಭೇಟಿ ನೀಡಿದ ಶಾಸಕರು ಮೊದಲಿಗೆ ತೀವ್ರ ಮಳೆಯಿಂದ ಹಾನಿಗೀಡಾಗಿ ಕುಸಿರಿದ್ದ ಸೇತುವೆಯ ವೀಕ್ಷಣೆಯನ್ನು ಮಾಡಿದರು. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಇದರ ದುರಸ್ತಿಯ ಬಗ್ಗೆ ಕೂಡಲೇ ವರದಿ ನೀಡುವಂತೆ ಸೂಚಿಸಿದರು.

ಬಳಿಕ ಇದೆ ವ್ಯಾಪ್ತಿಯಲ್ಲಿ ಹಾಳಿಗೀಡಾದ ರಸ್ತೆ ಹಾಗೂ ಇದರಿಂದಾಗಿ ರಸ್ತೆಯು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದ ಶಾಸಕರು, ಇದರ ಬಗ್ಗೆ ವರದಿಯನ್ನು ನೀಡಿ ವೈಜ್ಞಾನಿಕವಾಗಿ ಇದರ ದುರಸ್ತಿ ಕಾರ್ಯಕ್ಕೆ ಯಾವುದೆಲ್ಲ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ಕೆ. ಬಾಡಗ ಪಂಚಾಯತಿ ಸದಸ್ಯರಾದ ಬೋಪಣ್ಣ, ಅಪ್ಪಣ್ಣ, ಪಕ್ಷದ ಪ್ರಮುಖರು,ಸ್ಥಳೀಯರು ಉಪಸ್ಥಿತರಿದ್ದರು.
Kodagu
ನೂತನ ಬಸ್ ಸ್ಟ್ಯಾಂಡ್ ಕಾಮಗಾರಿ ವೀಕ್ಷಿಸಿದ ಶಾಸಕ ಎ.ಎಸ್.ಪೊನ್ನಣ್ಣ
ಗೋಣಿಕೊಪ್ಪ : ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಗೋಣಿಕೊಪ್ಪಲು ಬಸ್ ಸ್ಟ್ಯಾಂಡ್ ನ ಕೊನೆ ಹಂತದ ಕಾಮಗಾರಿಯ ವೀಕ್ಷಣೆ ಹಾಗೂ ಪರಿಶೀಲನೆಯನ್ನು ನಡೆಸಿದರು.
ಅಂತಿಮ ಹಂತದ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕೊನೆ ಹಂತದ ಪರಿಶೀಲನೆಯನ್ನು ಮಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಗೋಣಿಕೊಪ್ಪಲುವಿನ ಜನಸಾಮಾನ್ಯರ, ವಿಶೇಷವಾಗಿ ಬಸ್ ಪ್ರಯಾಣಿಕರ ದಶಕಗಳ ಬೇಡಿಕೆ ಇದಾಗಿದ್ದು, ಇನ್ನು ಕೆಲವು ಸಮಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಾಗಿ ತಯಾರಾಗಲಿದೆ.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ,ಉಪಾಧ್ಯಕ್ಷರು ಮಂಜುಳ, ಸದಸ್ಯರಾದ ಆಫ್ ಜಲ್, ಸಫುರ, ಗ್ಯಾರಂಟಿ ಅನುಷ್ಠಾನ ಸದಸ್ಯರು ಕಲೀದ್,ಹಾಗೂ ಪ್ರಮುಖರು ಉಪಸ್ಥಿತರಿದ್ದರು.
-
National15 hours agoಅಕ್ರಮ ಆಯುಧ ಪೂರೈಕೆದಾರ ಸಲೀಂ ಪಿಸ್ಟಲ್ ಬಂಧನ
-
Chikmagalur22 hours agoಬೇಲ್ ಮೇಲೆ ಬಂದಿದ್ದ ಆರೋಪಿಯ ಕೊಲೆ
-
Special20 hours agoವ್ಯಕ್ತಿ- ವಿಶೇಷ: ಕನ್ನಡ-ಫ್ರೆಂಚ್ ಸಾಂಸ್ಕೃತಿಕ ಕೊಂಡಿ ಡಾ.ವಸುಂಧರಾ ಫಿಲಿಯೋಜಾ
-
Special18 hours agoದುಡಿಯುವ ವರ್ಗಕ್ಕೆ ಆತ್ಮ ಗೌರವ ತಂದುಕೊಟ್ಟ ಕಾಯಕಯೋಗಿ ನುಲಿಯ ಚಂದಯ್ಯ.
-
Hassan13 hours agoಡಾ. ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ: ಹಾಸನ ಜಿಲ್ಲಾ ಡಾಕ್ಟರ್ ವಿಷ್ಣು ಸೇನಾ ಸಮಿತಿ ವತಿಯಿಂದ ಪ್ರತಿಭಟನೆ
-
Politics13 hours agoಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ: ಕೆ.ಎಸ್.ಈಶರಪ್ಪ
-
Mysore17 hours agoಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಕಾಂಗ್ರೆಸ್ನಿಂದ ಉಚ್ಛಾಟನೆ
-
Hassan24 hours agoಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅ*ತ್ಯಾಚಾರ
