Mysore
11ನೇ ವರ್ಷದ ಕಾವೇರಿ ಸಂಕ್ರಮಣದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ
ಪಿರಿಯಾಪಟ್ಟಣ: ಬಾರವಿ ಕಾವೇರಿ ಕನ್ನಡ ಸಂಘ ವತಿಯಿಂದ ತಾಲೂಕಿನ ಗಡಿಭಾಗ ಕೊಪ್ಪ ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಕಾವೇರಮ್ಮ ಪ್ರತಿಮೆ ಆವರಣದಲ್ಲಿ
11ನೇ ವರ್ಷದ ಕಾವೇರಿ ಸಂಕ್ರಮಣದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬುಧವಾರ ಮುಂಜಾನೆಯಿಂದಲೇ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಶ್ರೀ ಕಾವೇರಮ್ಮ ಮೂರ್ತಿಗೆ ವಿವಿಧ ಬಗೆ ಅಭಿಷೇಕ ಮಾಡಿ ಪುಷ್ಪಾಲಂಕಾರ ಬಳಿಕ ಮಹಾ ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ತೀರ್ಥ ಪ್ರಸಾದ ವಿತರಿಸಲಾಯಿತು, ಕಾವೇರಮ್ಮ ಪ್ರತಿಮೆ ಆವರಣ ಹಾಗೂ ನದಿ ಸೇತುವೆಯನ್ನು ಕನ್ನಡ ಬಾವುಟ ಹಾಗೂ ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು, ಸತೀಶ್ ಮತ್ತು ತಂಡದವರಿಂದ ನಾದಸ್ವರ ಸಂಗೀತ ಕಾರ್ಯಕ್ರಮ ನಡೆಯಿತು,
ಈ ವೇಳೆ ಕಾವೇರಮ್ಮ ಪ್ರತಿಮೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾವೇರಮ್ಮ ಅನ್ನಸಂತರ್ಪಣ ಭವನದ ಉದ್ಘಾಟನೆಯನ್ನು ಕುಶಾಲನಗರದ ಎಸ್ಎಲ್ಎನ್ ಉದ್ಯಮದ ಮಾಲೀಕರಾದ ಸಾತಪ್ಪನ್ ನೆರವೇರಿಸಿ ಶುಭಕೋರಿದರು.
ಮಡಿಕೇರಿ ಶಾಸಕರಾದ ಮಂತರ್ ಗೌಡ ಅವರು ಪೂಜಾ ಕಾರ್ಯಕ್ರಮ ವೇಳೆ ಭೇಟಿ ನೀಡಿ ಮಾತನಾಡಿ ಕಾವೇರಿ ಮಾತೆ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ರೈತರ ಬಾಳು ಬೆಳಗುವ ಮೂಲಕ ಕನ್ನಡ ನಾಡು ಸಂಪತ್ಭರಿತವಾಗುವಂತೆ ಪ್ರಾರ್ಥಿಸಿ ಬಾರವಿ ಸಹೋದರರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾವೇರಮ್ಮ ಅನ್ನಸಂತರ್ಪಣ ಭವನಕ್ಕೆ ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೈಲಾಶ್ ಕಮೊಡಿಟಿಸ್ ಮಾಲೀಕರಾದ ಬಿ.ಕೆ ಸುದೀಪ್ ಕುಮಾರ್ ಹಾಗೂ ಎಸ್ಎಲ್ಎನ್ ಉದ್ಯಮದ ಮಾಲೀಕರಾದ ವೆಂಕಟಾಚಲ ಅವರು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಶುಭ ಕೋರಿದರು.
ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್ ಅವರು ಮಾತನಾಡಿ ಬಾರವಿ ಸಹೋದರರ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 11 ವರ್ಷಗಳಿಂದ ತುಲಾ ಸಂಕ್ರಮಣ ಪ್ರಯುಕ್ತ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕಾವೇರಿ ಅಮ್ಮನ ಪ್ರತಿಮೆ ಬಳಿ ಭಕ್ತಾದಿಗಳಿಗೆ ವಿತರಿಸಿ ಅನ್ನ ಸಂತರ್ಪಣೆ ನಡೆಸಲಾಗುತ್ತಿದ್ದು ಇದಕ್ಕೆ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭ ಪಾರವಿ ಕನ್ನಡ ಸಂಘದ ಅಧ್ಯಕ್ಷರಾದ ಬಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಪಿರಿಯಾಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ ರಾಜೇಗೌಡ, ಜೆಡಿಎಸ್ ಮುಖಂಡರಾದ ಜಯಂತಿ ಸೋಮಶೇಖರ್, ಮುಖಂಡರಾದ ಮಹದೇವ್, ಚಂದ್ರು, ಜಬಿಉಲ್ಲಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಇದ್ದರು.

Mysore
ನೂತನ ಪೌರಾಯುಕ್ತಾಧಿಕಾರಿಯಾಗಿ ಎಂ.ಬಸವರಾಜ್ ಅಧಿಕಾರ ಸ್ವೀಕಾರ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ನಂಜನಗೂಡು ನಗರಸಭೆ ಪೌರಾಯುಕ್ತಾಧಿಕಾರಿ ವಿಜಯ್ ವರ್ಗಾವಣೆಗೊಂಡ ಹಿನ್ನೆಲೆ ನೂತನ ಅಧಿಕಾರಿಯಾಗಿ ಎಂ. ಬಸವರಾಜ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ನಂಜನಗೂಡು ನಗರಸಭೆ ನೂತನ ಪೌರಾಯುಕ್ತಧಿಕಾರಿಯಾಗಿ ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿದ ಎಂ.ಬಸವರಾಜ್ ಅವರು, ನಾನು ಮೈಸೂರಿನ ಬೋಗಾಧಿ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ, ಆದೇಶ ಮೇರೆಗೆ ನಂಜನಗೂಡು ನಗರಸಭೆಗೆ ಆಗಮಿಸಿ ಅಧಿಕಾರ ಸ್ವೀಕರಿಸಿಕೊಂಡಿದ್ದೇನೆ.

ನಂಜನಗೂಡು ನಗರಸಭೆ ಐಕ್ಯತೆ ಸ್ಥಳ ಮತ್ತು ಪ್ರವಾಸೋದ್ಯಮ ಸ್ಥಳವಾಗಿದೆ. ನನ್ನ ಮೊದಲ ಆದ್ಯತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ಐಕ್ಯತೆ ಸ್ಥಳಕ್ಕೆ ಹೊರಗಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಾರೆ. ಈ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಏನು ನಿರೀಕ್ಷೆ ಇದೆ. ಅದರಂತೆ ಮೊದಲು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ನಗರಸಭೆಯಲ್ಲಿ ಅಧಿಕಾರಿಗಳ ಕೆಲಸ ವಿಳಂಬವಾದರೆ ಸಾರ್ವಜನಿಕರು ನನ್ನ ಬಳಿ ಬಂದು ಮಾಹಿತಿ ನೀಡಬಹುದು ಎಂದರು.

ನಗರಸಭೆಯಲ್ಲಿ ಸೇವೆ ಲಭ್ಯಗಳಿವೆ ನಿರ್ಗಮನ ಅವಧಿಗೆ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧಿಕಾರಿ ಎಂ ಬಸರಾಜುರವರಿಗೆ ನಗರಸಭೆಯ ನಾಮನಿರ್ದೇಶಕರಾದ ರವಿ, ಕೆ.ಎಂ. ಬಸವರಾಜು, ರಮೇಶ್, ಇವರುಗಳು ಹೂಗುಚ್ಚ ನೀಡಿ ಅಭಿನಂದನೆಗಳು ಸಲ್ಲಿಸಿದರು.
Mysore
ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದ ಯದುವೀರ್
ನವದೆಹಲಿ/ಮೈಸೂರು: ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸಂಸದರು, ಮಾಹಿತಿ ನೀಡಿದ್ದಾರೆ.
ಎರಡು ಯೋಜನೆಗಳಿಗೆ ಅನುದಾನ: ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ (KTIL) ಇದನ್ನು ಅನುಷ್ಠಾನಕ್ಕೆ ತರಲಿದೆ. ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ (EEZ) ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ ರೂ. ಅನುದಾನವನ್ನು ಹಾಗೂ ಮೈಸೂರಿನ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 2.71 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದು ಸಂಸದರು ವಿವರಿಸಿದರು.

ನಂತರ ಮಾತನಾಡಿದ ಯದುವೀರ್ ಒಡೆಯರ್, ಈ ಯೋಜನೆಗೆ ಅಂತಿಮ ಅನುಮೋದನೆ ದೊರಕಿರುವುದು ಸಂತಸ ಆಗಿದೆ. ಈ ಯೋಜನೆಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗಲಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಪೂಜೆ ನಡೆಸಲು ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೇಂದ್ರ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ಇನ್ನೂ ಕೆಲವು ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಎಲ್ಲ ರೀತಿಯಿಂದಲೂ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡಲಿದೆ. ಈ ಸಂಬಂಧ ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉನ್ನತಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದರು.
Mysore
ಇಂಡಿಗೋ ಸಮಸ್ಯೆ ಕೇಂದ್ರ ಸರ್ಕಾರದ ವೈಫಲ್ಯ: ಕೆ.ವಿ.ಮಲ್ಲೇಶ್ ಆರೋಪ
ಮೈಸೂರು: ದೇಶದ ವಿಮಾನಯಾನ ವ್ಯವಸ್ಥೆಯಲ್ಲಿ ಆಗಿರುವ ಅಲ್ಲೋಲ ಕಲ್ಲೋಲಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಕೆ.ವಿ.ಮಲ್ಲೇಶ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಮಾನ ಸಿಬ್ಬಂದಿಯ ಕರ್ತವ್ಯದ ಅವಧಿಗೆ ಸಂಬಂಧಪಟ್ಟಂತೆ ಕೆಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿದ ನಿಯಮ ಎಫ್‌ಡಿಟಿಎಲ್ (ವಿಮಾನ ಸಂಚಾರ ಕರ್ತಾವ್ಯಾವಧಿಯ ಮಿತಿ) ದ್ವಂದಕ್ಕೆ ಕಾರಣವಾಗಿದೆ. ಉದ್ಯೋಗಿಗಳ ಒತ್ತಡ ನಿವಾರಣೆ, ಸುರಕ್ಷಿತ ವಾತಾವರಣ ಒದಗಿಸಬೇಕಾದದ್ದು ಕೇಂದ್ರ ಸರ್ಕಾರದ ಜವಾಬ್ದಾರಿ. ಉದ್ಯಮಪತಿಗಳ ಅನುಕೂಲಕ್ಕೆ ತಕ್ಕಂತೆ ನಿಯಮ ಜಾರಿಗೊಳಿಸುವುದು ಅಕ್ಷಮ್ಯ. ಕೇಂದ್ರ ಸರ್ಕಾರ ಇಂತಹ ಅಕ್ಷಮ್ಯಗಳನ್ನು ಮೇಲಿಂದ ಮೇಲೆ ಮಾಡುತ್ತಲೇ ಇದೆ. ಅದರ ಪರಿಣಾಮ ಇಂದು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಧ್ವನಿಸಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರು, ಉದ್ಯಮಿಗಳು ಇಂದು ವಿಮಾನಯಾನವನ್ನು ಅವಲಂಬಿಸಿದ್ದಾರೆ. ಅಂತಹವರು ಇಂದು ತಮ್ಮ ವೃತ್ತಿ, ವ್ಯಾಪಾರ, ವಹಿವಾಟು ನಡೆಸಲು ಪರದಾಡುವಂತಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ತುರ್ತು ಗಮನಹರಿಸಿ ವಿಮಾನಯಾನ ಬಿಕ್ಕಟ್ಟುನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
-
Hassan13 hours agoಎಲೈಟ್ ಸಂಸ್ಥೆಯ ನಾಗರಾಜ್ಗೆ ’ಕರ್ನಾಟಕ ಗುರುರತ್ನ ಪ್ರಶಸ್ತಿ-2025’
-
Mysore19 hours agoಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಏಕವಚನ ಬಳಕೆ: ಸಿಎಂ ವಿರುದ್ಧ ಹೇಮಾ ನಂದೀಶ್ ಅಸಮಾಧಾನ
-
Mandya12 hours agoಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗಧಿ
-
Mysore18 hours agoಚಾಮುಂಡಿಬೆಟ್ಟದ ವಿಶೇಷ ದರ್ಶನ, ಸೇವೆಗಳ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ
-
Manglore10 hours agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Hassan14 hours agoಈ ಶಿಕ್ಷಕ ಎಣ್ಣೆದಾಸ, ಆತನ ಹೆಂಡತಿ ಮಕ್ಕಳ ಪಾಲಿಗೆ ರಾಕ್ಷಸಿ: ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ
-
Hassan14 hours agoNOC ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ: ಆರ್. ಮರಿಜೋಸೆಫ್ ಆಗ್ರಹ
-
Sports10 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
