Connect with us

Mysore

ಚುಂಚನಕಟ್ಟೆಯ ಧನುಷ್ಕೋಟಿ ಯಲ್ಲಿ ಮೈದುಂಬಿ ಹರಿಯುತ್ತಿರುವ   ಕಾವೇರಿ ಜಲಪಾತ 

Published

on

ಸಾಲಿಗ್ರಾಮ : ಶ್ರೀರಾಮನ ನೆಲಬೀಡಾದ , ಜೀವನಾಡಿ ಕಾವೇರಿ ನದಿ ಧನುಷ್ಕೋಟಿಯ ಜಲಪಾತದಲ್ಲಿ ಭೋರ್ಗರೆತದ ನೀನಾದದೊಂದಿಗೆ ಧುಮ್ಮಿಕ್ಕಿ ಹರಿಯುತ್ತಿರುವ ರೌದ್ರ, ರಮ್ಯ, ರಮಣೀಯ ನೀರಿನ  ಸೌಂದರ್ಯ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.

ಸಾಲಿಗ್ರಾಮ ತಾಲೂಕಿನ  ಚುಂಚನಕಟ್ಟೆ  ಯಲ್ಲಿರುವ ಜಲಪಾತ ನೋಡಲು ಎರಡು ಕಣ್ಣುಗಳು ಸಾಲದು, ಹೌದು,  ಪ್ರಕೃತಿ ನಾಡು ಮಲೆನಾಡಿನ ಮಡಿಕೇರಿಯಲ್ಲಿ ಮುಂಗಾರಿನ ಮಳೆ ಸ್ಪರ್ಶಿಸುತ್ತಿದ್ದಂತೆ, ಕಾವೇರಿ ಕಣಿವೆಯಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಯಾತ್ರೆ ಸ್ಥಳ ಹಾಗೂ ಪ್ರವಾಸಿ ತಾಣವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿನ ಧನುಷ್ಕೋಟಿ ಜಲಪಾತಕ್ಕೆ ಜೀವ ನದಿ, ಕಾವೇರಿ ನೀರಿನಿಂದ ಜೀವ ಕಳೆ ಬಂದಿದ್ದು. ಪ್ರಕೃತಿ ನೈಜ್ಯ ಸೌಂದರ್ಯದ ನಡುವೆ ಮೈದುಂಬಿ ಹರಿಯುತ್ತಿರುವ ಕಾವೇರಿ ಜಲಪಾತದಲ್ಲೀಗ ಕೆಂಬಣ್ಣದ ಹಾಲ್ನೊರೆಯ ಚಿತ್ತಾರದ ರೌದ್ರ ನರ್ತನದೊಂದಿಗೆ ದುಮ್ಮಿಕ್ಕಿ ಹರಿಯಲಾರಂಭಿಸಿದ್ದು, ಪ್ರವಾಸಿಗರ  ಪ್ರಿಯರಿಗೆ ತನ್ನ ಸೌಂದರ್ಯವನ್ನು ಸೂಜಿಗಲ್ಲಿನಂತೆ ಸೂಸುತ್ತಿದ್ದು ವ್ಹಾವ್ ಎಂಥ ಸೊಬಗು,! ಎಂಬ ಉದ್ಘಾರ ಹೊರಡಿಸಬಹುದಾದ ಸ್ಥಳವಾಗಿದ್ದು ನಿತ್ಯ ಸಾವಿರಾರು ಮಂದಿ ಈ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಜಲಪಾತ ವೈಭವ :- ರಾಜ್ಯದ ಪ್ರಮುಖ 11 ಜಲಪಾತಗಳೊಲ್ಲೊಂದಾಗಿರುವ ಈ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಜಿಲ್ಲೆಗೆ ಮೆರಗು ಹಾಗೂ ಏಕೈಕ ಜಲಪಾತವಾಗಿರುವುದು ಹೆಗ್ಗಳಿಕೆಯಾಗಿದ್ದು. ಬಂಡೆಗಳ ಕೊರೆದು ಕಲಾಕೃತಿ ನಿರ್ಮಿಸಿಕೊಂಡು ಸುಮಾರು 27 ಮೀಟರ್ ಎತ್ತರದ ಬಂಡೆಗಳ ಮೇಲಿಂದ ಮೈದುಂಬಿ, ಧುಮ್ಮಿಕ್ಕಿ,ಭೋರ್ಗರೆಯುತ್ತ, ಕೆಂಬಣ್ಣದ ಹಾಲ್ನೊರೆಯಂತೆ ಹರಿಯುವ ಕಾವೇರಿ ನದಿಯ ನಯನ ಮನಮೋಹಕ ಜಲಧಾರೆ ತನ್ನೆಡೆಗೆ ಪ್ರವಾಸಿಗರ ತನು,ಮನ ಸೆಳೆಯುತ್ತಿದೆ. ಕಾವೇರಿಯ ಈ ರೌದ್ರ, ರಮ್ಯ, ರಮಣಿಯ ದೃಶ್ಯ ಎಂತವರನ್ನು ಕೂಡ ಮುಗ್ದರನ್ನಾಗಿಸುತ್ತದೆ.

ನೈಜ್ಯ ಪ್ರಕೃತಿಯಿಂದ ಕೂಡಿರುವ ಸೌಂದರ್ಯಕ್ಕೆ ಅಭಿವೃದ್ಧಿಯ ಲೇಪನವಾಗಿ ,ಪ್ರವಾಸಿ ತಾಣಕ್ಕೆ ಮತ್ತಷ್ಟು ಮೆರಗು ತಂದಿರುವುದು, ಪ್ರವಾಸಿಗರಿಗೆ ಬೂಸ್ಟ್ ಸಿಕ್ಕದಂತಾಗಿದೆ. ಮಳೆಗಾಲದಲ್ಲಿ ಜಲಪಾತ ಸತತ ಮೂರು ತಿಂಗಳಿಗೂ ಹೆಚ್ಚು ಕಾಲ ಮೈದುಂಬಿ ಹರಿಯುತ್ತದೆ. ಕಾವೇರಿ ನದಿಯ ನಯನ ಮನಮೋಹಕ ಜಲಪಾತವನ್ನು ನೋಡುವ ಪ್ರವಾಸಿಗರಿಗಂತೂ ಈ ಜಲಧಾರೆಯ ದೃಶ್ಯ ರಸದೌತಣವಾಗಿದೆ. ದಿನನಿತ್ಯ ಹಾಗೂ ರಜಾದಿನಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ನೋಡಲು ಕಿಕ್ಕಿರಿದು ಬರುವ ಸಹಸ್ರಾರು ಮಂದಿ ಪ್ರವಾಸಿಗರ ಕಣ್ಣುಗಳಲ್ಲೇ ಜಲಪಾತದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತ ತನು,ಮನ ತಣಿಸಿಕೊಳ್ಳುತ್ತಾರೆ. ಜತೆಗೆ ರೌದ್ರ ರಮ್ಯ ರಮಣೀಯ ಜಲಪಾತದ ದೃಶ್ಯವನ್ನು ಮೊಬೈಲ್ ಕ್ಯಾಮಾರಗಳಲ್ಲಿ ಫೋಟೊ ಕ್ಲಿಕ್ ಮಾಡುತ್ತಿದ್ದರೆ, ಇನ್ನೊಂದೆಡೆ ಕುಟುಂಬದ ಸದಸ್ಯರು, ಸ್ನೇಹಿತರು,ನವವಿವಾಹಿತಯರು,ಹಾಗೂ ಯುವಕ ಯುವತಿಯರು ಜಲಪಾತದೊಂದಿಗೆ ಸೆಲ್ಫಿ ಫೋಟೋ ತೆಗೆದು ಕೊಂಡು ಪುಳಕಗೊಳ್ಳುತ್ತ ಸಂತಸ ವ್ಯಕ್ತಪಡಿಸುವರು.

ಮುಂಗಾರಿನ ಮಳೆಯಿಂದಾಗಿ ಚುಂಚನಕಟ್ಟೆ ಧನುಷ್ಕೋಟಿ ಕಾವೇರಿ ಜಲಪಾತದಲ್ಲಿ ಮೈದುಂಬಿ ಹರಿಯುತ್ತಿದೆ. ಬೆಳ್ಳಿ ವರ್ಣದ ನೀರಿನ ಮೋಹಕತೆಯನ್ನು ಕುಟುಂಬ ಸಮೇತ ಕಣ್ತುಂಬಿಕೊಳ್ಳುವುದೇ ಚೆಂದ. ಆದರೆ ಆವರಣದಲ್ಲಿ ಯಾವುದೇ ಭದ್ರತೆ ಇಲ್ಲ ಕೆಲ ಪುಂಡರ ಹಾಗೂ ಕುಡುಕರ ಕಿರಿಕಿರಿ ಹೆಚ್ಚಿದ್ದು, ಭಯದಲ್ಲಿ ಈ ಜಲಪಾತದ ಸೌಂದರ್ಯ ಸವಿಯ ಬೇಕಿದೆ. ಹಾಗಾಗಿ ಭದ್ರತೆ ವ್ಯವಸ್ಥೆ ಕಲ್ಪಿಸಿ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಬೇಕೆಂದು ಪ್ರವಾಸಿಗರು ಒತ್ತಾಯ ಮಾಡಿ ಅಭಿಪ್ರಾಯ ಪಟ್ಟಿರುತ್ತಾರೆ.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು

Published

on

ಮೈಸೂರು: ಶ್ರೀ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 27ರಂದು 155 ಜೋಡಿಗಳು ಸತಿ-ಪತಿಗಳಾಗಲಿದ್ದಾರೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಉಡಿಗಾಲ ಆರ್‌.ಕುಮಾರಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಪ್ರಸಕ್ತ ವರ್ಷದ ಸಾಮೂಹಿಕ ವಿವಾಹದಲ್ಲಿ 155 ಜೋಡಿಗಳು ಸತಿ-ಪತಿಗಳಾಗಲಿದ್ದು, ಇದರಲ್ಲಿ ಮೈಸೂರು ಜಿಲ್ಲೆಯ 29 ಜೋಡಿಗಳು ಹಾಗೂ ಚಾಮರಾಜನಗರ ಜಿಲ್ಲೆಯ 43 ಜೋಡಿಗಳು ಸೇರಿವೆ. ಸುತ್ತೂರು ಶ್ರೀ ಮಠ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆರ್ಟ್‌ ಆಫ್‌ ಲಿವಿಂಗ್ಸ್‌ನ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ, ಗದಗ ಜಿಲ್ಲೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಶ್ರೀ ಕಲ್ಲಯ್ಯಜ್ಜ ಅವರು ಉಪಸ್ಥಿತರಿದ್ದು ನವ ವಧು-ವರರನ್ನು ಆಶಿರ್ವದಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಾಹವಾಗಲಿರುವ ವಧು-ವರರ ವಿವರ:ವೀರಶೈವ ಲಿಂಗಾಯತ ಸಮುದಾಯ-3 ಜೋಡಿ. ಪರಿಶಿಷ್ಠ ಜಾತಿ-84 ಜೋಡಿ. ಪರಿಶಿಷ್ಟ ಪಂಗಡ-22 ಜೋಡಿ. ಹಿಂದುಳಿದ ವರ್ಗ-22 ಜೋಡಿ. ಅಂತರ್ಜಾತಿ-23 ಜೋಡಿ. ಅಂತರಧರ್ಮ -1 ಜೋಡಿ. ವಿಶೇಷ ಜೋಡಿಗಳ ವಿವರ: ತಮಿಳುನಾಡು-17ಜೋಡಿ.ವಿಶೇಷ ಚೇತನರು-3 ಜೋಡಿ.ಮರು ವಿವಾಹ 1 ಜೋಡಿ ಎಂದು ಅವರು ಹೇಳಿದರು

Continue Reading

Mysore

ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್‌ ಚೀಟ್‌ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ

Published

on

ಮೈಸೂರು: ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡೋದು ಸರ್ಕಾರ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದೆ ಎಂದು ಎಂಎಲ್‌ಸಿ ಡಾ. ಎಚ್‌.ವಿಶ್ವನಾಥ್‌ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ನೀಡಲಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದೆಯಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ.? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೋ ಶಾಸಕರ ಅಧಿಕಾರಿಗಳಾಗಬಾರದು ಎಂದು ಎಚ್.ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಸಿಎಂ ಅದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸೆಟಲ್ಮೆಂಟ್ ಮಾಡಬಹುದಿತ್ತು. ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.
ಸಿಎಂ ಅದಾಗಲೆಲ್ಲಾ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ಕೊಡ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ. ನಾನು ಡೆಮೋಕ್ರ್ಯಾಟಿಕ್ ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆ. ಸಿಎಂ ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದರು.

ಜನಾರ್ಧನರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ. ದುಡ್ಡೇನು ಅವರಪ್ಪನ ಮನೆಯಿಂದ ತಂದಿದ್ದಾ? ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು.
ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿ ಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಜನಾರ್ಧನರೆಡ್ಡಿ-ಶ್ರೀರಾಮುಲು ನಡುವೆ ವೈಮನಸ್ಸು ವಿಚಾರವಾಗಿ ಶ್ರೀರಾಮುಲು ಪರ MLC ಎಚ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.

ಬಿಜೆಪಿ ವರಿಷ್ಠರು ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಇರೋರು ಡಮ್ಮಿ ವರಿಷ್ಠರು. ಯಾರೋ ಹೇಳಿದ್ದನ್ನು ಬಂದು ಹೇಳುವ ವರಿಷ್ಠರು ಇದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಇದೇ ತರಹದ ವರಿಷ್ಠರು ಇದ್ದಾರೆ. ವಿಜಯೇಂದ್ರ ಯಾರು? ಯಡಿಯೂರಪ್ಪ ಯಾರು? ಎಂದು ಎಲ್ಲರಿಗೂ ಗೊತ್ತು. ವಿಜಯೇಂದ್ರಗೆ ಅಧಿಕಾರ ಮಾಡಲು ಯತ್ನಾಳ್ ಗುಂಪು ಬಿಡುತ್ತಿಲ್ಲ. ನನ್ನ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ನನ್ನನ್ನು ಬಿಜೆಪಿ ಸಭೆಗೆ ಕರೆಯೋದಿಲ್ಲ. ಸಭೆಯಲ್ಲಿ ಎಲ್ಲಿ ನಾನು ಕೆಲವು ವಿಷಯ ಬಾಯಿ ಬಿಡುತ್ತೇನೋ ಎಂದು ಕರೆಯೋದಿಲ್ಲ. ಮೈಸೂರಿನ ಬಿಜೆಪಿಯವರು ಕರೆಯೋದಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಸಭೆಗೂ ಕರೆದಿಲ್ಲ ಎಂದು ವಿಶ್ವನಾಥ್‌ ಕಿಡಿಕಾರಿದ್ದಾರೆ.

Continue Reading

Mysore

ನಂಜನಗೂಡು: ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ

Published

on

ನಂಜನಗೂಡು ಜ.25 ಮಹದೇವಸ್ವಾಮಿ ಪಟೇಲ್.

ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕರುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಗಿಡಕ್ಕೆ ನೀರಾಕುವ ಮೂಲಕ ಉದ್ಘಾಟಿಸಿದರು.

ಬಳಿಕ ಶಾಸಕರು ಮಾತನಾಡಿ ಪಶುವೈದ್ಯ ಆಸ್ಪತ್ರೆ ಆಗಬೇಕೆಂದು ಸಾಕಷ್ಟು ಬಳಿ ಗ್ರಾಮಸ್ಥರು ಹೇಳಿದ್ದೀರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೆ, ಇವಾಗ ನಿಮ್ಮ ಊರಿಗೆ ಪ್ರತ್ಯೇಕವಾಗಿ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಲಾಗಿದೆ ಮುಖ್ಯಮಂತ್ರಿ ಅವರು ಮಾಡಿಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಪಶು ವೈದ್ಯಕೀಯ ಸಚಿವರಾದ ವೆಂಕಟೇಶ್ ಅವರನ್ನು ಕರೆತಂದು ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.

ಕರುಗಳಿಗೆ ಜಂತು ನಾಶ, ಮತ್ತು ಕಂದೂರೋಗ, ಬರಬಾರದು ಎಂದು ಪಶುವೈದ್ಯಕೀಯ ಮಲ್ಲಿಕಾರ್ಜುನ ರವರು ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ಉಚಿತವಾಗಿ ಎಲ್ಲಾ ಕರುಗಳಿಗೆ ತೊಂದರೆ ಆಗಬಾರದುವೆಂದು ನಿಯಂತ್ರಣ ಮೂಲಕ ಲಸಿಕೆ ನೀಡಿದ್ದಾರೆ ಈ ಅವಕಾಶವನ್ನು ರೈತ ಬಾಂಧವರು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪಶುವೈದ್ಯ ಇಲಾಖೆಯ ಸಹಕಾರ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡಿ

ಕರುಗಳನ್ನು ಉತ್ತಮ ರೀತಿಯಲ್ಲಿ ಪಾಲನೆ ಪೋಷಣೆ ಮಾಡಿದರೆ 500 ಉದ್ಯಮಿ ಲಾಭಾಂಶ ಮಾಡುವುದಕ್ಕೆ ಮುಖ್ಯ ಅಂಶವಾಗಿರುತ್ತದೆ. ಕಾಲಕಾಲಕ್ಕೆ ಕರುಗಳಿಗೆ ಜಂತು ನಾಶ ಉತ್ಸವ ನೀಡಿದರೆ. ಒಳವರಿ ಜೀವಿ ಮತ್ತು ಹೂರ ಒಳ ಜೀವಿಗಳಿಗೆ ಜಂತುಹುಳಗಳು ಮುಕ್ತ ಮಾಡಿದರೆ ಉತ್ತಮ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ಸರಿಯಾಗಿ ಕಾಲಕಾಲಕ್ಕೆ ಮುಖ್ಯವಾಗಿ ಲಸಿಕೆ ಹಾಕಿಸಿದರೆ ಹಸುಗೆ ಯಾವುದೇ ಕಾರಣಕ್ಕೂ ಮುಂದಿನ ಗಳಲ್ಲಿ ಅಬೋಶನ್ ಹಾಗುವುದಿಲ್ಲ, ಮತ್ತು ಹಸು ಗರ್ಭ ಕಟ್ಟುತ್ತದೆ, ಅಥವಾ ಕಂದು ಹಾಕುವುದಿಲ್ಲ ಆದ್ದರಿಂದ ರೈತರು ಲಸಿಕೆ ಹಾಕಿಸಿ ಇಂತಹ ತಡೆಗಟ್ಟಬಹುದು ಎಂದು ತಿಳಿಸಿದರು.

ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನ, ಆಯೋಜಿಸಲಾಗಿತ್ತು.
ಎಚ್.ಎಫ್.ತಳಿ, ಜೆರ್ಸಿ ತಳಿ , ನಾಟ ತಳಿ, ವಿಜೇತರಾಗಿದ್ದ ರೈತರಿಗೆ ಬಹುಮಾನವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಗ್ರಾ. ಪಂ ಅಧ್ಯಕ್ಷರಾದ ವನಕರ ನಾಯಕ, ಉಪಾಧ್ಯಕ್ಷರಾದ ಲತಾ ಬಸಪ್ಪ , ಶಾಂತ ಮಲ್ಲು, ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ಸಿದ್ದರಾಜು, ಮಣಿಕಂಠ , ನಾಗಮ್ಮ , ಶಾರದಮ್ಮ, ಗುರುಸಿದ್ದಪ್ಪ , ಪುಟ್ಟಸ್ವಾಮಿ, ನಂಜನಗೂಡು ಪಶುವೈದ್ಯಾಧಿಕಾರಿ, ಪಶುವೈದ್ಯ ಸಿಬ್ಬಂದಿಗಳು, ಸೇರಿದಂತೆ ಮುಖಂಡರು, ಯಜಮಾನರು ಮತ್ತು ಗ್ರಾಮಸ್ಥರು ಗಳ ಇದ್ದರು.

Continue Reading

Trending

error: Content is protected !!