Connect with us

Hassan

ಕಾವೇರಿ ಜಲಾನಯನ ಪ್ರದೇಶದ 10 ಎಂಪಿ ಸ್ಥಾನ ಗೆದ್ದರೆ ಕಾವೇರಿ ಉಳಿವಿನ ಹೋರಾಟಕ್ಕೆ ಶಕ್ತಿ: ಎಚ್ಡಿ ದೇವೇಗೌಡ

Published

on

ಚನ್ನರಾಯಪಟ್ಟಣ: ಕಾವೇರಿ ಜಲಾನಯನ ಪ್ರದೇಶದ 10 ಜನ ಲೋಕಸಭಾ ಸದಸ್ಯರು ಗೆದ್ದು ಲೋಕಸಭೆಗೆ ಹೋದರೆ ನಮಗೆ ಶಕ್ತಿ ಬರುತ್ತದೆ ಈ ಮೂಲಕ ಕಾವೇರಿ ಹೋರಾಟಕ್ಕೂ ದ್ವನಿಗೂಡಿಸಲು ಸಹಕಾರಿ ಆಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಮಂಜಿಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯ ಕಟ್ಟಿ ಹಾಸನ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ಮುಂದಾಗಿದ್ದು ಯಾರು, ಆದರೆ ಇಂದು ಹೇಮಾವತಿ ನೀರು ಕುಡಿಯಲು ನಮಗೆ ಅಡ್ಡಗಾಲು ಹಾಕುವವರು ಇದ್ದಾರೆ ಅಲ್ಲದೆ ಈ ಹಿಂದೆ ಕಾವೇರಿ ನೀರನ್ನು ರಾಜ್ಯದ ಜನರಿಗೆ ಕುಡಿಯಲು ಬಿಡದ ಪರಿಸ್ಥಿತಿ ಇತ್ತು ಈ ಬಾರಿ ರಾಜ್ಯ ಸುತ್ತಿ ಹಳೆ ಮೈಸೂರು ಭಾಗದಲ್ಲಿ ಕನಿಷ್ಠ 10 ಲೋಕಸಭಾ ಸದಸ್ಯರನ್ನು ಗೆಲ್ಲಿಸಿ ಈ ಹಿಂದೆ ಒಂದು ಲೋಟ ನೀರನ್ನು ಕೊಡುವಲ್ಲ ಎಂಬ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಗೆ ಉತ್ತರ ನೀಡುತ್ತೇವೆ ಎಂದರು.

ಇಡೀ ಬೆಂಗಳೂರು ಒಬ್ಬ ಮಂತ್ರಿ ಹಿಡಿತದಲ್ಲಿದೆ. ಬಿ.ಡಿ. ಏ. ಕಾರ್ಪೋರೇಶನ್, ಪ್ಲಾನಿಂಗ್ ಅತಾರಿಟಿ ಸೇರಿದಂತೆ ಪ್ರಮುಖ ಆದಾಯದ ಮೂಲಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಲೂಟಿ ಹೊಡೆಯುತ್ತಿದ್ದಾರೆ,
ಬೆಂಗಳೂರಿನಲ್ಲಿ ನನ್ನ ಅಳಿಯ ಡಾ.ಮಂಜುನಾಥ್ ಚುನಾವಣೆಗೆ ನಿಂತಿದ್ದಾರೆ ಆದರೆ ಅವರನ್ನು ತೆಗೆಯಲೇ ಬೇಕು ಎಂಬ ಉದ್ದೇಶ ಹೊಂದಿರುವ ಅಣ್ಣಾ ತಮ್ಮಂದಿರು ಇಲ್ಲದ ತಂತ್ರ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ರೇವಣ್ಣ ಅವರಷ್ಟು ಕೆಲಸ ಮಾಡಿದ ಯಾರಾದ್ರೂ ಶಾಸಕ ಇದ್ದರೆ ಅವರು ನಮ್ಮ ಮುಂದೆ ಬಂದು ನಿಲ್ಲಲಿ, ಇಂಜಿನಿಯರಿಂಗ್ ಕಲಿಯುವ ಆಸಕ್ತಿ ಹೊಂದಿರುವ ಮಕ್ಕಳಿಗೆ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲು ಆಗುತ್ತಿದ್ದ ಕಷ್ಟ ಅರಿತು, ಮೊಸಳೆ ಹೊಸಳ್ಳಿ ಯಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯಲೇ ಬೇಕು ಎಂಬ ಹಟ ಮಾಡಿ ಬಡವರ ಮಕ್ಕಳಿಗೆ ಕೇವಲ 5 ಸಾವಿರ ಶುಲ್ಕ ದೊಂದಿಗೆ ಕಾಲೇಜು ಆರಂಭಿಸಿದ್ದಾರೆ. ಜೊತೆಗೆ ರೇವಣ್ಣ ಪದವೀಧರ ಅಲ್ಲ ಕೇವಲ 10ನೇ ತರಗತಿ ಓದಿದರು ಅಭಿವೃದ್ದಿ ಕಾರ್ಯಗಳಿಗೆ ರೇವಣ್ಣ ನಿಗೆ ಯಾರು ಸರಿ ಸಾಟಿ ಇಲ್ಲ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಈ ಭಾರಿಯ ಚುನಾವಣೆ ದೇಶದ ಚುನಾವಣೆಯು ಹೌದು ಹಾಗೂ ರೇವಣ್ಣ ಅವರ ಗೌರವದ ಚುನಾವಣೆಯು ಹೌದು ಎರಡನ್ನೂ ಉಳಿಸುವ ಸಲುವಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಮುಂದಾಗಬೇಕು ಎಂದು ಕರೆ ನೀಡಿದರು.

ಇಂದು ಕಣ್ಣೀರು ಹಾಕಿ ಸೆರಗು ಒಡ್ಡಿ ಮತಬಿಕ್ಷೆ ಬೇಡುವ ಜನ
ಸಿಗರನಹಳ್ಳಿ ದೇವಾಲಯದ ವಿಚಾರವಾಗಿ ನಡೆದ ಗಲಾಟೆ ವೇಳೆ ಮಹಿಳೆಯರ ಹಾಗೂ ಮುಖಂಡರ ಮೇಲೆ ಹಲ್ಲೆ ಹಾಗೂ ಬಂಧನ ಅದಾಗ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ಅವರ ತಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು, ಬಡವರ, ರೈತರಿಗೆ ಮಾರಕವಾದ ಆಡಳಿತ ನಡೆಸುವ ಮೂಲಕ ರೈತರ ಪಂಪ್ ಸೆಟ್ ಗೆ ವಿದ್ಯುತ್ ಟಿಸಿ ಗಳಿಗೆ ಕೂಡ ಹಣ ಕಟ್ಟಿಸಿಕೊಂಡು ರೈತರಿಗೆ ಅನ್ಯಾಯ ಮಾಡಿದೆ, ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು ಹಾಸನ ಜಿಲ್ಲೆಯಲ್ಲೇ ಬರಗಾಲ ಬಂದು ಸಾಯುತ್ತಿರುವ ವೇಳೆ ಪೊಲೀಸ್ ಭದ್ರತೆ ಮೇಲೆ ತುಮಕೂರು ಜಿಲ್ಲೆಗೆ ನೀರು ಬಿಡುವ ಕೆಲಸ ಮಾಡಿದ್ದಾರೆ ಇದಕ್ಕೆಲ್ಲ ಈ ಭಾರಿ ಚುನಾವಣೆಯಲ್ಲಿ ಉತ್ತರ ನೀಡಬೇಕು ಎಂದರು.

ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇದ್ದರು ಅದನ್ನೆಲ್ಲಾ ಮರೆತು ಒಟ್ಟಾಗಿ ಕೆಲಸ ಮಾಡಿ ಜೆಡಿಎಸ್ ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶದಲ್ಲಿ ಕೂಡ ಪ್ರಜ್ವಲ್ ರೇವಣ್ಣ ತಮ್ಮ ಜೊತೆಗೆ ಇದ್ದು ತಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ, ದೇವೇಗೌಡರ ರಾಜಕೀಯ ಭವಿಷ್ಯ ಉಜ್ವಲ ಮಾಡುವ ಅಂದಿನಿಂದಲೂ ಇಂದಿನ ವರೆಗೆ ಜೆಡಿಎಸ್ ಗೆ ಶಕ್ತಿ ತುಂಬಿದ್ದೀರಿ ಆದೆ ರೀತಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ನಮ್ಮ ಕೈ ಹಿಡಿದು ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಜೊತೆ ಕೈ ಜೋಡಿಸಬೇಕು ಎಂದರು

ಎಂ.ಎಲ್ಸಿ ಸೂರಜ್ ರೇವಣ್ಣ ಮಾತನಾಡಿ ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯಯಲ್ಲಿ ಏನು ಕೆಲ್ಸ ಆಗಿದೆ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ ಅದಕ್ಕೆ ಈ ಹೋಬಳಿ ಜನರೇ ಉತ್ತರ ನೀಡುತ್ತಾರೆ. ಮೂಲಭೂತ ಸೌಕರ್ಯ ಅಥವಾ ವೈಯಕ್ತಿಕ ಸಮಸ್ಯೆಗಳಿಗೂ ತಮ್ಮ ಮನೆಯ ಮಗನಾಗಿ ನಿಂತು ಸಾವು, ನೋವು ಗಳಲ್ಲಿ ಕೂಡ ತಮ್ಮ ಮನೆಯ ಮಗನಾಗಿ ನಿಂತು ಕೆಲಸ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಕೂಡ ತಮ್ಮ ಜೊತೆಃ ಇರುತ್ತೆ ನೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಈ ಹಿಂದೆ ಹಾಸನಕ್ಕೆ ಬಂದು ಕೊಬ್ಬರಿಯನ್ನು ಯಾರು ಮಾರಾಟ ಮಾಡಬೇಡಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡುತ್ತೇವೆ ಎಂದು ಭರವಸೆ ನೀಡಿದರು ಆದರೆ ನಾಫೇಡ್ ಮೂಲಕ ಕೊಬ್ಬರಿ ಖರೀದಿ ಮಾಡಲು ಮಣ್ಣಿನ ಮಗ ದೇವೇಗೌಡ ಅವರೇ ಬರಬೇಕಾಯಿತು ಎಂದರು.

ಇದೇ ವೇಳೆ ಕಾಂಗ್ರೆಸ್ ನ ವಿವಿಧ ಮುಖಂಡರು ಜೆಡಿಎಸ್ ಸೇರ್ಪಡೆ ಯಾದರು

ಸಭೆಯಲ್ಲಿ ಹೊನ್ನ ಶೆಟ್ಟಿಹಳ್ಳಿ ಪುಟ್ಟಸ್ವಾಮಿ ಗೌಡ, ಮಲ್ಲಿಕ್, ಹಾಗೂ ಜೆಡಿಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು

Continue Reading
Click to comment

Leave a Reply

Your email address will not be published. Required fields are marked *

Hassan

ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಪೋದಾರ್ ಪರಿಸರ ಸ್ನೇಹಿಗಳು

Published

on

ಹಾಸನ: ಬಿ. ಕಾಟಿಹಳ್ಳಿ ದೂರವಾಣಿ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಪಂಚಮುಖಿ ಪಾರ್ಕ್ ಉದ್ಯಾನದಲ್ಲಿ “ವಿಶ್ವ ಪರಿಸರ ದಿನಾಚರಣೆ”ಯ ಅಂಗವಾಗಿ ಪೋದಾರ್ ಪರಿಸರ ಸ್ನೇಹಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಗಣ್ಯರು ಭಾಗಿಯಾಗಿ ಗಿಡ ನೆಟ್ಟು ಸಸ್ಯೋತ್ಸವ ಆಚರಣೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

Continue Reading

Hassan

ಬಿರುಗಾಳಿ ಸಹಿತ ಮಳೆಗೆ ಭಾರೀ ಪ್ರಮಾಣದಲ್ಲಿ ಭೂಕುಸಿತ

Published

on

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾರೀ  ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.

ಈ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ ಗ್ರಾಮದ ಬಳಿ ಶಿರಾಡಿಘಾಟ್ ರಸ್ತೆ ಎನ್‌ಎಚ್‌- 75 ರಲ್ಲಿ ನಡೆದಿದೆ. ಮೊದಲೇ ಭೂಕುಸಿತವಾಗಿದ್ದರಿಂದ ಒಂದು ಬದಿ ರಸ್ತೆ ಸಂಚಾರ ಬಂದ್ ಮಾಡಿದ್ದ ಅಧಿಕಾರಿಗಳು ಇಟಾಚಿ ಮೂಲಕ ನಡೆಯುತ್ತಿದ್ದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಹೀಗಾಗಿ  ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.

ಈ ವೇಳೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದ ಭೂಮಿ ಮರಗಳ ಸಮೇತ ಕುಸಿದು ರಸ್ತೆ ಪೂರ್ತಿ ಜಖಂಗೊಂಡಿದೆ. ಇನ್ನೂ ವಾಹನಗಳ ಸಂಚಾರವನ್ನು ಬಂದ್  ಮಾಡಿದ್ದರಿಂದ  ದೊಡ್ಡ ಅನಾಹುತ ತಪ್ಪಿದೆ.

Continue Reading

Hassan

ಮರಿ ಸತ್ತು ಮೂರು ದಿನವಾದರೂ ಸ್ಥಳ ಬಿಟ್ಟು ಕದಲದ ತಾಯಿಯಾನೆ

Published

on

ಅರೇಹಳ್ಳಿ: ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್‌ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ:

ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು. ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

“ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ” ಎಂದು
ಬೇಲೂರಿನ ಆರ್‌ಎಫ್‌ಒ ಅಧಿಕಾರಿ ಯತೀಶ್ ತಿಳಿಸಿದ್ದಾರೆ.

Continue Reading

Trending

error: Content is protected !!