Connect with us

National - International

ಕತಾರ್ ನಲ್ಲಿ ೬೮ ನೆ ಕನ್ನಡ ರಾಜ್ಯೋತ್ಸವದ ಆಚರಣೆ

Published

on

ಕರ್ನಾಟಕ ಸಂಘ ಕತಾರ್, ೬೮ ನೆ ಕನ್ನಡ ರಾಜ್ಯೋತ್ಸವನ್ನು ೦೩  ನವೆಂಬರ್ ೨೦೨೩ ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು. ದೋಹಾದ ಡಿ ಪಿ ಎಸ್ ಶಾಲೆಯ 1500 ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯಿಂದ ಕನ್ನಡದ ದೀಪ ಹಚ್ಚುವ ಹಾಗೂ ಕೆ ಎಸ್ ನಿಸಾರ್ ಅಹ್ಮದ್ ರಚಿತ ಜೋಗದ ಸಿರಿ ಬೆಳುಕಿನಲ್ಲಿ ಗಾನ ಮತ್ತು ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್ ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.
ಸಭೆಯನ್ನು ಸ್ವಾಗತ ಮಾಡುತ್ತ ಶ್ರೀ ಮಹೇಶ್ ಗೌಡ ಅವರು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ, ಈ ಸಂಭ್ರಮವನ್ನು ವಿಜರುಮಬನೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ ಭಾರತೀಯ ಅಂತರ ರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ಧನ್ಯವಾದಗಳನ್ನು ತಿಳಿಸಿ ಅವರಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡದ ಪ್ರಸಿದ್ದ ಬರಹಗಾರರು ಹಾಗೂ ಪತ್ರಕರ್ತರಾದ ಜೋಗಿ ಖ್ಯಾತಿಯ ಗಿರೀಶ್ ರಾವ್ ಹತ್ವಾರ್ ಹಾಗೂ ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ಶ್ರೀ ವಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ ಮಣಿಕಂಠನ್, ಉಪಾಧ್ಯಕ್ಷರು ಶ್ರೀ ಸುಬ್ರಮಣ್ಯ ಹೆಬ್ಬಾಗೆಲು, ಐ ಸಿ ಬಿ ಫ್ ನ ಅಧ್ಯಕ್ಷರು ಶ್ರೀ ಶಾನವಸ್ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು.
ರವಿಚಂದ್ರನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಹೇಶ್ ಗೌಡ ಅವರ ಪ್ರೀತಿಯ ಕರೆ ಅವರನ್ನು ಕತಾರ್ ಗೆ ಬರುವಂತೆ ಪ್ರೇರೇಪಿಸಿದ್ದು ಹಾಗೂ ಅವರ ಕತಾರ್ ನ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಭೆಗೆ ತಿಳಿಸಿದರು. ಅವರ ತಂದೆಯ ಜೀವನ ಶೈಲಿಯನ್ನು ನೆನೆಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ಪ್ರೇಮಲೋಕ ಚಿತ್ರದ ಬಾಗ ೨ ನಿರ್ಮಿಸಿ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ದೀಪಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಸಂಜನಾ ಜೀವನ್ ಅವರು ಸಂಯೋಜಿಸಿದ ರವಿಚಂದ್ರನ್ ಅವರ ಹದಿನಾರು ಪ್ರಖ್ಯಾತ ಹಾಡುಗಳ ನೃತ್ಯ ಮಾಲೆಯು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷರ ಹಾಗೂ ಮುಖ್ಯ ಅತಿಥಿಗಳು ಶ್ರೀ ರವಿಚಂದ್ರನ್ ಅವರಿಂದ ಮೆಚ್ಚುಗೆ ಪಡೆಯಿತು. ಉದಯೋನ್ಮುಖ ಗಾಯಕರು ಭೂಮಿಕಾ ಮಧುಸೂದನ್ ಹಾಗೂ ಶ್ರೀನಿಧಿ ಶಾಸ್ತ್ರಿ ಅವರು ಸಂಗೀತ ಸಂಜೆ ನೆಡೆಸಿಕೊಟ್ಟರು. ಕಾರ್ಯಕ್ರಮ ನಿರ್ವಹಣೆಯನ್ನು ಪ್ರಸಿದ್ದ ನಿರೂಪಕರಾದ ಸವಿ ಪ್ರಕಾಶ್ ಅವರು ನಡೆಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಘದ  ಸಾಂಸ್ಕೃತಿಕ   ಕಾರ್ಯದರ್ಶಿ ಶ್ರೀಮತಿ ಸುಶೀಲ ಸುನಿಲ್ ಅವರು ನೆರವೇರಿಸಿದರು.

Continue Reading
Click to comment

Leave a Reply

Your email address will not be published. Required fields are marked *

National - International

ಪಾಕ್‌ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್‌ ಲಿಬರೇಶನ್‌ ಆರ್ಮಿ

Published

on

ಇಸ್ಲಾಮಾಬಾದ್:‌ ಪಾಕಿಸ್ತಾನದ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ ಹೇಳಿಕೊಂಡಿದೆ.

ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಸೈನಿಕರಿದ್ದ ಬಸ್ಸಿಗೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದಿದೆ.

ವಿಶೇಷವೆಂದರೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಸೈನಿಕರನ್ನು ಉಗ್ರರು ಹೇಗೆ ಗುರಿ ಮಾಡಿ ಕೃತ್ಯ ಎಸಗಿದ್ದರೋ ಅದೇ ರೀತಿಯಾಗಿ ಇಂದು ಪಾಕಿಸ್ತಾನದಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಬಸ್ಸಿಗೆ ಡಿಕ್ಕಿಯಾದ ಬೆನ್ನಲ್ಲೇ ಕಾರು ತೀವ್ರವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಳ್ಳುತ್ತಿದ್ದಂತೆ ಛಿದ್ರಗೊಂಡಿರುವ ಬಸ್ಸಿನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

ಘಟನೆಯಲ್ಲಿ 90 ಮಂದಿ ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ ಹೇಳಿಕೊಂಡಿದ್ದು, ಇದನ್ನು ಪಾಕ್‌ ಸೇನೆ ನಿರಾಕರಿಸಿದೆ. ಘಟನೆಯಲ್ಲಿ ಕೇವಲ 12 ಮಂದಿ ಸೈನಿಕರು ಮೃತರಾಗಿದ್ದಾರೆ ಎಂದು ಪಾಕ್‌ ಸೇನೆ ಹೇಳಿಕೊಂಡಿದೆ.

Continue Reading

National - International

ಮಧ್ಯ ಅಮೇರಿಕಾದಲ್ಲಿ ಭಾರೀ ಚಂಡಮಾರುತ: ಕನಿಷ್ಠ 32 ಸಾವು

Published

on

ವಾಷಿಂಗ್ಟನ್‌: ಭೀಕರ ಸುಂಟರಗಾಳಿಗತೆ ತತ್ತರಿಸಿದ ಮಧ್ಯ ಅಮೇರಿಕಾದಲ್ಲಿ ಕನಿಷ್ಠ 32 ಮಂದಿ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಭೀಕರ ಸುಂಟರಗಾಳಿಗೆ ಮನೆ ಛಾವಣಿಗಳು ಹರಿದು ಹೋಗಿದ್ದು, ಬೃಹತ್‌ ಟ್ರಕ್‌ಗಳು ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.

ಭಾರಿ ಗಾಳಿಯಿಂದ ಎದ್ದ ಧೂಳಿನಿಂದ ಕಾನ್ಸಾಸ್‌ನಲ್ಲಿ 50ಕ್ಕೂ ಹೆಚ್ಚು ವಾಹನಗಳು ಸಂಪರ್ಕ ಕಡಿತಗೊಂಡು ಸರಣಿ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಡಮಾರುತದಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಿಸೌರಿ ರಾಜ್ಯದ ಹೆದ್ದಾರಿ ಗಸ್ತು ಪೊಲೀಸರು ದೃಢಪಡಿಸಿದ್ದಾರೆ. ಮರಗಳು ಮತ್ತು ವಿದ್ಯುತ್‌ ತಂತಿಗಳು ಉರುಳಿ ಬಿದ್ದಿದೆ. ಗಾಳಿಯ ರಭಸಕ್ಕೆ ಮರೀನಾ ಬಂದರಲ್ಲಿ ಒಂದೆಡೆ ರಾಶಿ ಬಿದ್ದಿರುವ ದೋಣಿಗಳ ಚಿತ್ರವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ಇದು ನಾನು ಅನುಭವಿಸಿದ ಅತ್ಯಂತ ಭಯಾನಕ ವಿಷಯ. ಚಂಡಮಾರತುದ ವೇಗ ಅತ್ಯಂತ ಭೀಕರವಾಗಿತ್ತು. ಅದರ ವೇಗಕ್ಕೆ ನಮ್ಮ ಕಿವಿಗಳು ಸಿಡಿಯುತ್ತಿದ್ದವು ಎಂದು ಮಿಸೌರಿಯ ನಿವಾಸಿ ಅಲಿಸಿಯಾ ವಿಲ್ಸನ್‌ ಚಂಡಮಾರುತದ ಭೀಕರತೆಯನ್ನು ತೆರೆದಿಟ್ಟರು.

ಮಿಸೌರಿಯ ವೇಯ್ನ್‌ ಕೌಂಟ್‌ನಲ್ಲಿ 6, ಒಝಾರ್ಕ್‌ ಕೌಂಟಿಯಲ್ಲಿ 3 ಹಾಗೂ ಲೂಯಿಸ್‌ ಕೌಂಟಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟೆಕ್ಸಾಸ್‌ನ ದಕ್ಷಿಣ ಭಾಗದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್‌ ಭಾಗದಲ್ಲಿ ಮೂವರು ಮೃತಪಟ್ಟು 29 ಮಂದಿ ಗಾಯಗೊಂಡಿದ್ದಾರೆ. ಮಧ್ಯ ಅಮೇರಿಕಾದ ಕನಿಷ್ಠ 2 ಲಕ್ಷ ಮನೆ ಹಾಗೂ ಕಚೇರಿಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

National - International

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಅಧಿಕಾರ ಸ್ವೀಕಾರ

Published

on

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಇದಕ್ಕೂ ಮೊದಲು ಮಾರ್ಕ್‌ ಕಾರ್ನಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆಫ್‌ ಕೆನಡಾದ ಅಧ್ಯಕ್ಷರಾಗಿದ್ದರು.

ಕಳೆದ ಜನವರಿಯಲ್ಲಿ ಜಸ್ಟಿನ್‌ ಟ್ರುಡೊ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ನಿ ಅವರು ಲಿಬರಲ್‌ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಕೆನಡಾದ 24ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಬಗ್ಗೆ ಮಾತನಾಡಿದ ಕಾರ್ನಿ ಅವರು, ನಮ್ಮ ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕೆನಡಿಯನ್ನರ ನಿರೀಕ್ಷೆ ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಕೆನಡಾದ ಭವಿಷ್ಯವನ್ನು ರಕ್ಷಿಸುವ ಅನುಭವಿ ಸಚಿವ ಸಂಪುಟ ನಮ್ಮದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Continue Reading

Trending

error: Content is protected !!