Connect with us

Politics

ಆರ್ ಅಶೋಕ ಪ್ರತಿಪಕ್ಷ ನಾಯಕ – ಬಿಜೆಪಿ ಹೈಕಮಾಂಡ್

Published

on

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ನಡೆದ ಬಿಎಲ್​ಪಿ ಸಭೆಯಲ್ಲಿ ಹೈಕಮಾಂಡ್ ವೀಕ್ಷಕರಾದ ನಿರ್ಮಲಾ, ದುಷ್ಯಂತ್ ಕುಮಾರ್ ಉಪಸ್ಥಿತರಿದ್ದರು. ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಬಿಜೆಪಿ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

ವಿಧಾನಸಭೆ ಚುನಾವಣೆ ನಡೆದು ಬರೋಬ್ಬರಿ ಆರು ತಿಂಗಳಿಗೂ ಹೆಚ್ಚು ಸಮಯ ಕಳೆದ ನಂತರ ಪ್ರತಿಪಕ್ಷ ಬಿಜೆಪಿ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಮಾಡಿದೆ. ಒಕ್ಕಲಿಗ ಸಮುದಾಯದ ನಾಯಕ, ಮಾಜಿ ಉಪ ಮುಖ್ಯಮಂತ್ರಿ, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್​ ಅಶೋಕ ಅವರಿಗೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ವಹಿಸಲಾಗಿದೆ. ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ವಾರವಷ್ಟೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿತ್ತು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ನಡೆದ ಬಿಎಲ್​ಪಿ ಸಭೆಯಲ್ಲಿ ಹೈಕಮಾಂಡ್ ವೀಕ್ಷಕರಾದ ನಿರ್ಮಲಾ, ದುಷ್ಯಂತ್ ಕುಮಾರ್ ಉಪಸ್ಥಿತರಿದ್ದರು. ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಬಿಜೆಪಿ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

ಶಾಸಕರನ್ನು ಉದ್ದೇಶಿಸಿ ಭಾಷಣದ ವೇಳೆ ವಿಪಕ್ಷ ನಾಯಕರ ವಿಚಾರವಾಗಿ ಹೈಕಮಾಂಡ್ ಸೂಚನೆಯನ್ನು ಸೂಚ್ಯವಾಗಿ ದುಶ್ಯಂತ್ ಕುಮಾರ್ ಗೌತಮ್ ಮತ್ತು ಬಿ.ಎಸ್‌. ಯಡಿಯೂರಪ್ಪ ಪ್ರಸ್ತಾಪಿಸಿದರು. ಅಶೋಕ್ ಹೆಸರು ಘೋಷಣೆಗೆ ಮಾಜಿ ಸಿಎ ಬಸವರಾಜ ಬೊಮ್ಮಾಯಿ ಸೂಚಿಸಿದರೆ, ಮಾಜಿ ಸಚಿವ ಸುನೀಲ್ ಕುಮಾರ್ ಅನುಮೋದನೆ ಮಾಡಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಸ್ಫೋಟ
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್​ ವೀಕ್ಷಕರು ಪ್ರಮುಖರ ಜೊತೆ ಸಭೆ ನಡೆಸಿದ್ದರು. ವರಿಷ್ಠರ ನಿರ್ಧಾರ ಬಗ್ಗೆ ಆಕಾಂಕ್ಷಿಗಳ ಗಮನಕ್ಕೆ ತಂದಿದ್ದರು. ಇದೇ ವೇಳೆ ಆರ್​ ಅಶೋಕ್ ನೇಮಕ ಕುರಿತು ತಿಳಿಸಿದಾಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹೈಕಮಾಂಡ್ ತೀರ್ಮಾನ ಒಪ್ಪದೆ ಸಭೆಯಿಂದ ತೆರಳಿದ್ದಾರೆ. ಬಿಎಲ್​ಪಿ ಸಭೆ ಸಭೆಗೂ ಮುನ್ನವೇ ಹೊರನಡೆದಿದ್ದಾರೆ.

ಯಾರಿಗೂ ಬೇಸರವಾಗಿಲ್ಲ, ಸಭೆ ಬಹಿಷ್ಕರಿಸಿಲ್ಲವೆಂದ ಬೆಲ್ಲದ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟಗೊಂಡ ಬಗ್ಗೆ ಪ್ರತಿಕ್ರಿಯಸಿದ ಅರವಿದ ಬೆಲ್ಲದ, ಯಾರಿಗೂ ಬೇಸರ ಆಗಿಲ್ಲ, ಬಿಎಲ್​ಪಿ ಸಭೆ ಬಹಿಷ್ಕರಿಸಿಲ್ಲವೆಂದಿದ್ದಾರೆ,​​ ವೀಕ್ಷಕರು ಒನ್​ ಟು ಒನ್​ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದ ಶಾಸಕರೇ ಹೆಚ್ಚು ಇದ್ದಾರೆ ಎಂದು ಅವರು ಹೇಳಿದ್ದಾರೆ.

ಉಳಿದಂತೆ, ಶಾಸಕಾಂಗ ಪಕ್ಷದ ಸಭೆಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ ಎಸ್​​ಟಿ ಸೋಮಶೇಖರ್ ಗೈರಾಗಿದ್ದಾರೆ.

ಸಭೆಗೆ ಹಾಜರಾದ ಶಾಸಕರು ಯಾರೆಲ್ಲ?
ಗೋಪಾಲಯ್ಯ, ಸುರೇಶ್ ಕುಮಾರ್, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಸಿಮೆಂಟ್ ಮಂಜು, ಹರೀಶ್ ಪೂಂಜ, ಎಸ್. ಮುನಿರಾಜು, ಸುರೇಶ್ ಗೌಡ, ಬಸವರಾಜ್ ಬೊಮ್ಮಾಯಿ, ಶೈಲೇಂದ್ರ ಬೆಳ್ದಾಳೆ, ಜ್ಯೋತಿ ಗಣೇಶ್, ಬಸವರಾಜ್ ಮತ್ತಿಮೂಡ್, ಅರವಿಂದ್ ಬೆಲ್ಲದ್, ದೊಡ್ಡನಗೌಡ ಪಾಟೀಲ್, ಅಭಯ್ ಪಾಟೀಲ್, ಮಂಜುಳ ಲಿಂಬಾವಳಿ, ಸಿ.ಸಿ. ಪಾಟೀಲ್, ಚನ್ನಬಸಪ್ಪಮ ಎಂ. ಕೃಷ್ಣಪ್ಪ, ಸುನಿಲ್ ಕುಮಾರ್, ಚಂದ್ರಪ್ಪ, ಮುನಿರತ್ನ, ಸಿದ್ದು ಸವದಿ, ಭಾಗೀರಥಿ ಮುರುಳ್ಯ

ಸಭೆಗೆ ಹಾಜರಾದ ವಿಧಾನ ಪರಿಷತ್ ಸದಸ್ಯರು ಯಾರೆಲ್ಲ?
ಎಂ.ಕೆ. ಪ್ರಾಣೇಶ್, ಸುಜಾ ಕುಶಾಲಪ್ಪ, ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್, ಕೇಶವ ಪ್ರಸಾದ್, ಗಣಪತಿ ಉಳ್ವೇಕರ್, ತುಳಸಿ ಮುನಿರಾಜು ಗೌಡ, ಶಶೀಲ್ ನಮೋಶಿ, ಅ. ದೇವೇಗೌಡ, ವೈ.ಎ. ನಾರಾಯಣಸ್ವಾಮಿ, ಪ್ರತಾಪ್ ಸಿಂಹ ನಾಯಕ್, ರುದ್ರೇಗೌಡ, ರಘುನಾಥ್ ರಾವ್ ಮಲ್ಕಾಪುರೆ.

Politics

ಉತ್ತರದಲ್ಲಿ ಮೋದಿ ಹವಾ – ದಕ್ಷಿಣದಲ್ಲಿ ರಾಹುಲ್ ಗಾಳಿ.

Published

on

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ.

3 ರಾಜ್ಯಗಳಲ್ಲಿ ಬಿಜೆಪಿ ತ್ರಿವಿಕ್ರಮ.
ತೆಲಂಗಾಣದಲ್ಲಿ ಕೈ ಹಿಡಿದ ಮತದಾರ.

ಮಧ್ಯ ಪ್ರದೇಶ
ಒಟ್ಟು ಸ್ಥಾನ -230
ಬಿಜೆಪಿ-164
ಕಾಂಗ್ರೆಸ್=64


..
ರಾಜಸ್ಥಾನ
ಒಟ್ಟು ಸ್ಥಾನ -199
ಬಿಜೆಪಿ-112
ಕಾಂಗ್ರೆಸ್ -71


..
ಛತ್ತೀಸ್ ಘಡ
ಒಟ್ಟು ಸ್ಥಾನ -90
ಬಿಜೆಪಿ-53
ಕಾಂಗ್ರೆಸ್-35
..

ತೆಲಂಗಾಣ
ಒಟ್ಟು ಸ್ಥಾನ -119
ಕಾಂಗ್ರೆಸ್-65
ಬಿಆರ್ ಎಸ್
ಬಿಜೆಪಿ -9
..
ಲೋಕಸಭಾ ಚುನಾವಣೆ ಗೆ ಮುನ್ನ ಸೆಮಿ ಫೈನಲ್ ಚುನಾವಣೆ ಎಂದೇಬಿಂಬಿಸಲಾಗಿದ್ದ ದೇಶದ ಪ್ರಮುಖ ರಾಜ್ಯಗಳ ಚುನಾವಣೆ.

ಉತ್ತರದಲ್ಲಿ ಕಮಲ ಪಕ್ಷದ ಕಮಾಲ್.
ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್.
ತೆಲಂಗಾಣದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊಂದಿದ್ದರು.
ಉಳಿದ 3 ರಾಜ್ಯಗಳಲ್ಲಿ ಹಿಂದೂ ಪರ ಹೇಳಿಕೆಗಳು ಬಿಜೆಪಿ ಭರ್ಜರಿ ಗೆಲುವಿಗೆ ಕಾರಣ ಆದವು.

Continue Reading

Politics

Telangana Election: ತೆಲಂಗಾಣದಲ್ಲಿ BJPಯನ್ನು ಗೆಲ್ಲಿಸಿದ ಕಾಂಗ್ರೆಸ್ !!

Published

on

Telangana Election: ಇಡೀ ದೇಶವೇ ಪಂಚರಾಜ್ಯ ಚುನಾವಣೆಗಳ ಫಲಿತಾಂಶದತ್ತ ದೃಷ್ಟಿ ನೆಟ್ಟಿದೆ. ಇಂದು ಕೇವಲ 4 ರಾಜ್ಯಗಳತ ಎಣಿಕೆ ನಡೆಯುತ್ತಿದ್ದರೂ ಭಾರೀ ಕುತೂಹಲ ಕೆರಳಿಸಿದೆ. ಅಚ್ಚರಿಯಂತೆ ಹಿನ್ನಡೆ, ಮುನ್ನಡೆಗಳು ಆಗುತ್ತಿವೆ. ಊಹಿಸದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಆದರೆ ಎಲ್ಲಿ ಕಾಂಗ್ರೆಸ್ ತಾನು ಗೆಲ್ಲುವುದರೊಂದಿಗೆ ಬಿಜೆಪಿಯನ್ನೂ ಗೆಲ್ಲಿಸಿಬಿಟ್ಟಿದೆ. ಅರೆ ಏನಪ್ಪಾ ಇದು ಹೊಸ ಸುದ್ದಿ ಅಂತೀರಾ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಲೆಕ್ಕಾಚಾರ .

ಹೌದು, ಮಧ್ಯಪ್ರದೇಶ , ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಉದಾಖಲಿಸಿದೆ. ಅಂತೆಯೇ ತೆಲಂಗಾಣದಲ್ಲಿ(Telangana Election) ಎಲ್ಲರೂ ಊಹಿಸಿದಂತೆ ಕಾಂಗ್ರೆಸ್ ಭರ್ಜರಿ ಗೆಲುವೊಂದಿಗೆ ಇತಿಹಾಹ ಸೃಷ್ಟಿಸಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಗ್ಯಾರಂಟಿಗಳು ಕೊನೆಗೂ ಕಾಂಗ್ರೆಸ್ ಗೆ ಜಯಭೇರಿ ತಂದಿವೆ. ಆದರೆ ಈ ನಡುವೆ ಕಾಂಗ್ರೆಸ್ ಗೆಲುವು ಬಿಜೆಪಿಗೂ ಲಾಭವನ್ನು ತಂದಿದೆ.

ಕಾಂಗ್ರೆಸ್ ಗೆಲುವು ಬಿಜೆಪಿಗೆ ಲಾಭ !!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಪ್ರತಿಪಕ್ಷಗಳೆಲ್ಲವೂ ಸೇರಿ ‘ಇಂಡಿಯಾ’ ಮೈತ್ರಿ ಕೂಟವನ್ನು ರಚಿಸಿಕೊಂಡಿವೆ. ಇದರಲ್ಲಿ ಕಾಂಗ್ರೆಸ್ ಹಾಗೂ ಕೆಲವೊಂದು ಪ್ರಮುಖ ಪಕ್ಷಗಳನ್ನು ಬಿಟ್ಟರೆ ಉಳಿದವೆಲ್ಲವೂ ಪ್ರಾದೇಶಿಕ ಪಕ್ಷಗಳು. ಮೋದಿ ಹವಾ ಮುಂದೆ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳ ವರ್ಚಸ್ಸು ಕಮ್ಮಿಯಾಗುತ್ತಿರುವದರಿಂದ ಎಲ್ಲವೂ ‘ಇಂಡಿಯಾ’ ಕೂಟ ಸೇರಿವೆ. ಆದರೆ ಹೀಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೊಂದು ರಾಜ್ಯವನ್ನು ಗೆಲ್ಲುತ್ತಾ ಬಂದಂತೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ವಿರುದ್ಧವಾಗುತ್ತವೆ. ಅದರಲ್ಲೂ ದಕ್ಷಿಣ ಭಾರತ ಪ್ರಾದೇಶಿಕ ಪಕ್ಷಗಳ ನಾಡು ಆದ್ದರಿಂದ ಇದು ಸಂಭವಿಸುದು ಪಕ್ಕಾ ಎನ್ನಲಾಗುತ್ತೆ.

ಅಲ್ಲದೆ ತನ್ನ ಗೆಲುವಿನ ಪ್ರಾಬಲ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಟಿನ ಕ್ಷೇತ್ರಗಳನ್ನು ಕೇಳಬಹುದು. ಇದು ಪ್ರಾಧೇಶಿಕ ಪಕ್ಷಗಳ ಅಸ್ತಿತ್ವವನ್ನೇ ಕಸಿದಂತೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲು ಮೈತ್ರಿ ಮಾಡಿಕೊಂಡಿದ್ದವು. ಬಳಿಕ ಬೇರೆ ಬೇರೆಯಾದವು. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಬಳಿಕವಂತೂ ಹಾವು ಮುಂಗುಸಿಯಾಗಿದವು. ಇದೀಗ ತೆಲಂಗಾಣದಲ್ಲೂ ಅದೇ ಪರಿಸ್ಥಿತಿ ಉಂಟಾಗಬಹುದು. ಯಾವ ಮೈತ್ರಿ ಸೇರದೆ ತಟಸ್ಥವಾಗಿರುವ ಕೆಸಿಆರ್ ಪಾರ್ಟಿ ಕಾಂಗ್ರೆಸ್ ದೋಸ್ತಿ ತೊರೆದು, ರಾಜ್ಯದಲ್ಲಿ ಅದನ್ನು ಎದುರಿಸಲು NDA ಮೈತ್ರಿ ಸೇರಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಬಿರುಕಿನಿಂದ ನೇರವಾಗಿ ಲಾಭವಾಗಬಹುದು. ಇದು ಬಿಜೆಪಿಗೆ ದೊಡ್ಡ ಲಾಭ ಆಗುತ್ತದೆ. ಕಾಂಗ್ರೆಸ್ ತಾನು ಗೆಲ್ಲುವುದರೂಂದಿಖೆ ಸುಲಭವಾಗಿ ಬಿಜೆಪಿಯನ್ನು ಗೆಲ್ಲಿಸಿದಂತಾಗಿದೆ.

Continue Reading

Hassan

ಹಾಸನ : ಇಂದು ತವರು ಜಿಲ್ಲೆಗೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ

Published

on

ಸಂಸದರು, ಶಾಸಕರು, ಮಾಜಿಶಾಸಕರು, ಮಾಜಿ ಜಿ.ಪಂ., ತಾ.ಪಂ. ಅಧ್ಯಕ್ಷರು, ಮಾಜಿ ಸದಸ್ಯರು, ನಗರಸಭೆ, ಪುರಸಭೆ ಹಾಲಿ, ಮಾಜಿ ಅಧ್ಯಕ್ಷರು, ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳ ಸಭೆ ಕರೆದಿರುವ ಎಚ್.ಡಿ.ದೇವೇಗೌಡರು

ಹೊಳೆನರಸೀಪುರ ತಾಲ್ಲೂಕಿನ, ಹಳೇಕೋಟೆ ಹೋಬಳಿ, ಶ್ರೀರಾಮದೇವರಕಟ್ಟೆಯಲ್ಲಿ ಮ.12.15 ಕ್ಕೆ ನಡೆಯಲಿರುವ ಸಭೆ

ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ

ಮುಂಬರುವ, ತಾ.ಪಂ., ಜಿ.ಪಂ., ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಭೆ ಕರೆದಿರುವ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು

ಸಭೆಯಲ್ಲಿ ಭಾಗಲಿರುವ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು

Continue Reading

Trending

error: Content is protected !!