Connect with us

Sports

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಕೆ.ಎಲ್‌.ರಾಹುಲ್

Published

on

ನವದೆಹಲಿ: ಕೆ.ಎಲ್‌.ರಾಹುಲ್‌ ಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ ರಾಹುಲ್, ಪಂಜಾಬ್‌ ಕಿಂಗ್ಸ್‌ ವಿರುದ್ಧ 67 ಎಸೆತಗಳಲ್ಲಿ ಅಜೇಯ 152 ರನ್ ಸಿಡಿಸಿ, ಐಪಿಎಲ್‌ನಲ್ಲಿ ಒಂದೇ ಪಂದ್ಯದಲ್ಲಿ 150+ ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾದರು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ ಭರ್ಜರಿ 264 ರನ್ ಕಲೆಹಾಕಿತು. ರಾಹುಲ್ ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸೇರಿದ್ದವು.

ಈ ಸಾಧನೆಯೊಂದಿಗೆ ರಾಹುಲ್, ಅಭಿಷೇಕ್‌ ಶರ್ಮ(141 ರನ್, 2025) ದಾಖಲೆಯನ್ನು ಹಿಂದಿಕ್ಕಿ, ಭಾರತೀಯರ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದ ಒಟ್ಟು ಅತ್ಯಧಿಕ ಸ್ಕೋರ್ ಪಟ್ಟಿಯಲ್ಲಿ ಮಾತ್ರ ಕ್ರಿಸ್‌ ಗೇಲ್‌ (175) ಮತ್ತು ಬ್ರೆಂಡನ್ ಮೆಕಲಮ್‌ (158) ಮುಂಚೂಣಿಯಲ್ಲಿ ಉಳಿದಿದ್ದಾರೆ.

ಇನ್ನೊಂದು ತುದಿಯಲ್ಲಿ ನಿತೀಶ್‌ ರಾಣಾ  44 ಎಸೆತಗಳಲ್ಲಿ 91 ರನ್ ಸಿಡಿಸಿ ರಾಹುಲ್ ಜೊತೆ ಎರಡನೇ ವಿಕೆಟ್‌ಗೆ 220 ರನ್‌ಗಳ ಭಾರೀ ಜೊತೆಯಾಟ ನೀಡಿದರು — ಇದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಗಿತ್ತು.

Continue Reading

Sports

 ನಾಳೆಯಿಂದ  ಪ್ಲೇ ಆಫ್ ಹಣಾಹಣಿ

Published

on

ಮುಂಬೈ: ಜಿದ್ದಾಜಿದ್ದಿಯಿಂದ ಕೂಡಿದ್ದ   19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
10 ತಂಡಗಳ ಪೈಕಿ ಬೆಂಗಳೂರು, ಗುಜರಾತ್, ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡಗಳು ಈ ಬಾರಿಯ ಪ್ಲೇ ಆಫ್ ಪ್ರವೇಶಿಸಿವೆ. ಉಳಿದ ಆರು ತಂಡಗಳು ಐಪಿಎಲ್ ಅಭಿಯಾನ ಮುಗಿಸಿವೆ.

ದ್ವಿತೀಯ ಸುತ್ತಿನಲ್ಲಿ, ಅಂದರೆ ಪ್ಲೇ ಆಫ್ ಸುತ್ತಿನಲ್ಲಿ ಒಟ್ಟು ನಾಲ್ಕು ಮ್ಯಾಚ್‌ಗಳು ನಡೆಯಲಿದೆ. ಪ್ಲೇ ಆಫ್ ಸುತ್ತಿನಲ್ಲಿ ಮೊದಲು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಮೇ.26 ರಂದು ಅಗ್ರ ಎರಡು ತಂಡಗಳಾದ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.


ಈ ಪಂದ್ಯದಲ್ಲಿ ಗೆದ್ದ ತಂಡ ಮೇ.31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರವಾಗಿ ಎಂಟ್ರಿ ಕೊಡಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುತ್ತದೆ.

ಮೇ.27 ರಂದು ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಈ ಪಂದ್ಯ ನ್ಯೂ ಚಂಢೀಗಡದಲ್ಲಿ ನಡೆಯಲಿದ್ದು, ಗೆದ್ದ ತಂಡ ಕ್ವಾಲಿಫೈಯರ್ -2ಕ್ಕೆ ಲಗ್ಗೆ ಇಡಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.

ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ. ಮೇ.31 ರಂದು ನಡೆಯಲಿರುವ ಫೈನಲ್‌ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ.

ವೇಳಾಪಟ್ಟಿ ಹೀಗಿದೆ:
ಮೇ.26: ಕ್ವಾಲಿಫೈಯರ್ 1-ಆರ್‌ಸಿಬಿ v/s ಜಿಟಿ
ಸ್ಥಳ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಮೇ 27: ಎಲಿಮಿನೇಟರ್- ಎಸ್‌ಆರ್‌ಹೆಚ್ ವರ್ಸಸ್ ಆರ್‌ಆರ್-ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್‌ಪುರ್ (ನ್ಯೂ ಚಂಡೀಗಢ್)

ಮೇ.29: ಕ್ವಾಲಿಫೈಯರ್ 2- ಕ್ವಾಲಿಫೈಯರ್ 1ರಲ್ಲಿ
ಸೋತ ತಂಡ ವರ್ಸಸ್ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ, ಸ್ಥಳ: ನ್ಯೂ ಚಂಡೀಗಢ್)
ಮೇ .31: ಫೈನಲ್: ಕ್ವಾಲಿಫೈಯರ್ 2ವರ್ಸಸ್ ಕ್ವಾಲಿಫೈಯರ್ 2ನಲ್ಲಿ ಗೆದ್ದ ತಂಡ. ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

 

Continue Reading

Sports

ಅಹಮದಾಬಾದ್‌ನಲ್ಲಿ ಸಿಎಸ್‌ಕೆಗೆ ಸೋಲು: ಗಾಯಕ್ವಾಡ್‌ಗೆ 24 ರೂ. ಲಕ್ಷ ದಂಡ

Published

on

ಅಹಮದಾಬಾದ್: ಸಿಎಸ್‌ಕೆ ತಂಡದ ನಾಯಕ ರುತುರಾಜ್‌    ಅವರಿಗೆ ನಿಧಾನಗತಿ ಓವರ್‌ ರೇಟ್‌ ಕಾಯ್ದುಕೊಂಡ ಕಾರಣ ₹24 ಲಕ್ಷ ದಂಡ ವಿಧಿಸಲಾಗಿದೆ. ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿ ಉಳಿದ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯ ಶುಲ್ಕದ 25 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ ಆಡಳಿತ ಮಂಡಳಿ ಪ್ರಕಟಿಸಿದೆ.

ಗುಜರಾತ್ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ 89 ರನ್‌ಗಳ ಅಂತರದಲ್ಲಿ ಸೋಲು ಕಂಡು 2026ರ ಐಪಿಎಲ್ ಅಭಿಯಾನವನ್ನು ಮುಕ್ತಾಯಗೊಳಿಸಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜಿಟಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.

230 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ಆರಂಭದಲ್ಲೇ ಮೊಹಮ್ಮದ್‌ ಸಿರಾಜ್‌ ಆಘಾತ ನೀಡಿದರು. ಬಳಿಕ ಮಾಥ್ಯೂ ಶಾರ್ಟ್‌ 24 ರನ್‌ ಗಳಿಸಿ ಔಟಾದರು. ಮಧ್ಯಕ್ರಮದಲ್ಲಿ  ಶಿವಂ ದುಬೆ 17 ಎಸೆತಗಳಲ್ಲಿ 47 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೂ, ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ಸಿಎಸ್‌ಕೆ ಹೀನಾಯ ಸೋಲಿನೊಂದಿಗೆ ಪ್ಲೇಆಫ್‌ ರೇಸ್‌ನಿಂದ ಹೊರಬಿತ್ತು.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ ಇದು ಸಿಎಸ್‌ಕೆಯ ಎರಡನೇ ನಿಧಾನಗತಿ ಓವರ್‌ ರೇಟ್‌ ಉಲ್ಲಂಘನೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಹಿಂದೆ

Continue Reading

National

IPL ನೀತಿ ಸಂಹಿತೆ ಉಲ್ಲಂಘನೆ: ಹಾರ್ದಿಕ್‌ ಪಾಂಡ್ಯಗೆ ಶೇ. 10% ದಂಡ, 1 ಡಿಮೆರಿಟ್ ಅಂಕ

Published

on

ಕೋಲ್ಕತ್ತಾ: ಹಾರ್ದಿಕ್‌ ಪಾಂಡ್‌  ಅವರಿಗೆ  ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ ಕಾರಣವಾಗಿ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್‌ಗೆ ನಾಯಕನಾಗಿರುವ ಪಾಂಡ್ಯ ಅವರಿಗೆ ಪಂದ್ಯ ಶುಲ್ಕದ ಶೇ.10% ದಂಡ ಹಾಗೂ 1 ಡಿಮೆರಿಟ್ ಅಂಕ ನೀಡಲಾಗಿದೆ.

ಈ ಘಟನೆ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ  ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸಂಭವಿಸಿದೆ. ಫೀಲ್ಡಿಂಗ್ ವೇಳೆ ಅಸಮಾಧಾನಗೊಂಡ ಪಾಂಡ್ಯ ಅವರು ವಿಕೆಟ್ ಬೇಲ್ಸ್‌ಗೆ ಬಾಲ್‌ನಿಂದ ಹೊಡೆದು ಕೋಪ ವ್ಯಕ್ತಪಡಿಸಿದ್ದು, ಇದರಿಂದ Code of Conduct 2.2 ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ.

ಪಂದ್ಯದಲ್ಲಿ ಕೆಕೆಆರ್ 148 ರನ್ ಗುರಿಯನ್ನು ಬೆನ್ನಟ್ಟಿ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

Continue Reading

Trending

error: Content is protected !!