Hassan
ಕನ್ನಡ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ: ಡಾ. ಹಂಸಲೇಖ ಬೇಸರ
ಕನ್ನಡಕ್ಕೆ ಒಂದು ರೀತಿಯ ಅಪಾಯವಿದೆ, ಅಂದೆ ಕುವೆಂಪು ಸಾಹಿತ್ಯದಲ್ಲಿ ಎಚ್ಚರಿಸಿದ್ರು
ಹಾಸನ : ಕನ್ನಡಕ್ಕೆ ಒಂದು ರೀತಿಯ ಅಪಾಯವಿದೆ ಎಂದು ಅಂದೆ ತಮ್ಮ ಕಾಲದಲ್ಲಿ ರಾಷ್ಟ್ರಕವಿ ಕುವೆಂಉ ಅವರು ತಮ್ಮ ಸಾಹಿತ್ಯದಲ್ಲಿ ಎಚ್ಚರಿಕೆ ನೀಡಿದ್ದು, ಕನ್ನಡ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ಸಂಗೀತ ನಿರ್ದೇಶಕ ಹಾಗೂ ಬರಹಗಾರ ನಾದಬ್ರಹ್ಮ ಡಾ. ಹಂಸಲೇಖ ಬೇಸರವ್ಯಕ್ತಪಡಿಸಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಆದಿಚುಂಚನಗರಿ ಮಠದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪು ಅವರ ೧೧೯ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿದ ನಂತರ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇವತ್ತು ಕನ್ನಡ ಫಲಕಗಳು ಕಡ್ಡಾಯ ಎಂದು ಆಜ್ಞೆ ಹೊರಡಿಸಬೇಕಾದರೇ ಕನ್ನಡಕ್ಕೆ ಇವತ್ತು ಒಂದು ರೀತಿಯ ಅಪಾಯವಿದೆ. ಅಪಾಯ ಬಂದಿದೆ. ನiಗೆ ಈ ಕನ್ನಡ ನಮಗೆ ದೊರಕಿದ್ದು, ಭಾಷವಾರು ಭಾರತದಿಂದ. ಭಾಷವಾರು ರಾಜ್ಯಗಳಿಂದ ಈ ಭಾರತವನ್ನು ಕಟ್ಟಬೇಕು ಎನ್ನುವ ಒಪ್ಪಂದದಿಂದ ನಮಗೆ ಕನ್ನಡ ಈ ಕರ್ನಾಟಕ ಕೊಟ್ಟಿದೆ. ಈಗ ದಿಶವಾರು ಭಾರತ ಮಾಡುವುದಕ್ಕೆ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ಉತ್ತರ ಭಾರತದಲ್ಲಿ ಎಂಪಿ ಸೀಟುಗಳು ೭೦೦ ಆದರೇ ದಕ್ಷಿಣ ಭಾರತದಲ್ಲಿ ಕೇವಲ ೧೧೭ ಸೀಟುಗಳು ಮಾತ್ರ ಆಗುತ್ತದೆ. ದಿಶವಾರು ಆದರೇ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ದಿಕ್ಕಿಲ್ಲದವರಾಗುತ್ತೇವೆ. ಎಂದು ಲೇಖನ ಆಗಲೆ ಬರೆದಿದ್ದಾರೆ ಎಂದರು. ನಮಗೆ ಒಕ್ಕೂಟ ಕೊಟ್ಟ ಕನ್ನಡದ ಹಕ್ಕಿನ ಪತ್ರವನ್ನು ಈಗ ಜ್ಞಾಪನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಇದ್ದೇವೆ ಎಂದು ಆತಂಕವ್ಯಕ್ತಪಡಿಸಿದರು. ಕುವೆಂಪುರಂತಹ ಸಾಧಕ ಪುರುಷನಿಂದ ನಮ್ಮ ಕನ್ನಡಕ್ಕೆ ಅಭಯಬೇಕಾಗಿದೆ. ಕನ್ನಡಿಗರಿಗೆ ಅಭಯ ಧ್ಯಾನ ಬೇಕಾಗಿದೆ ಎಂದು ಹೇಳಿದರು. ಕನ್ನಡ ಎಂದರೇ ಏನು? ಕರ್ನಾಟಕ ಎಂದರೇ ಎನು ಎಂದ ಕೂಡಲೇ ನಮಗೆ ನೆನಪು ಆಗುವುದು ನಾಡಗೀತೆ. ಇದರಿಂದಲೇ ನಾವು ಒಗ್ಗಟ್ಟಾಗಿ ಇದ್ದೀವಿ, ಹೋಂದಾಗಿದ್ದೇವಿ. ಈ ನಾಡಿಗೆ ಒಂದು ಚಹರೆ ಇದೆ. ಇದಕ್ಕೆ ಇಷ್ಟು ಸಾಂಸ್ಕೃತಿಕ ಶಕ್ತಿ ಇದೆ ಎಂಬುದು ಈ ನಾಡಗೀತೆಯಿಂದ ಗೊತ್ತಾಗಿದೆ. ಇಷ್ಟೊಂದು ಅರ್ಥ ಮಾಡಿಸಿದ ಮಹಾನ್ ಕವಿ ಕುವೆಂಪು. ಅವರು ಕೊಟ್ಟ ಆ ಒಕ್ಕೂಟದ ಒಳಗಿನ ನಮ್ಮ ಒಲವು ಅದಂರೆ ಭಾರತ ಒಂದು ಒಕ್ಕೂಟ ಆಗಿರುವುದು ಒಂದು ಪವಾಡ. ರಾಷ್ಟ್ರಕವಿ ಹೇಳಿದಂತೆ ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಸರಳತೆಯಲ್ಲಿ ಬಿಡಿಸಿದ್ದಾರೆ. ಈ ಒಕ್ಕೂಟ ಒಂದು ತಾಯಿ. ಆ ತಾಯಿಯ ಮಕ್ಕಳು ನಮ್ಮ ಕನ್ನಡದ ಮಕ್ಕಳು. ನಮ್ಮ ಕನ್ನಡ ಒಂದು ಹಕ್ಕಿನ ಭದ್ರ ಎಂದು ಅಂದೆ ಕುವೆಂಪು ಅವರು ಹೇಳಿದ್ದಾರೆ ಎಂದರು. ಇಂದು ನಾವು ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡುತ್ತಾ, ರಾಷ್ಟ್ರ ಕಂಡ ಕುವೆಂಪು ಅಂತಹ ಶ್ರೇಷ್ಠ ಕವಿಗಳ ಜನ್ಮ ದಿನೋತ್ಸವವ್ನು ಆಚರಿಸುತ್ತಿರುವುದು ಉತ್ತಮವಾಗಿದೆ. ಶ್ರೀಮಠದ ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಅವರ ಅವಧಿಯಲ್ಲಿ ಕೊಟ್ಟ ಕೊಡಿಗೆ ಇಡೀ ರಾಷ್ಟ್ರಕ್ಕೆ ಉಪಯುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎರಡು ಕೃತಿ ಲೋಕಾರ್ಪಣೆಯನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೆರವೇರಿಸಿದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಂತಹ ನ್ಯೂಸ್ ೧೮ ನೆಟ್ ವರ್ಕ್ ಸಂಪಾದಕ ಹರಿಪ್ರಸಾದ್, ಸಾಹಿತಿ ಮೈಸೂರಿನ ಮೃತ್ಯುಂಜಯ, ಕೃಷಿಕರಾದ ಶಿವಮೊಗ್ಗದ ಕಡಿದಾಳ್ ಪ್ರಕಾಶ್, ಸಮಾಜ ಸೇವಕ ಬಿ.ಈ. ಶಿವರಾಮೇಗೌಡ, ಚಲನಚಿತ್ರ ನಟಿ ಸಕಲೇಶಫುರದ ರಿತನ್ಯಾ ಹೂವಣ್ಣ ಗೌಡ, ಸಾಮಾಜಿಕ ಕಾರ್ಯಕರ್ತ ಸೈಯದ್ ಸಜ್ಜಾದ್ ಪಾಷ, ಕ್ರೀಡಾ ಸಾಧಕ ಶಿವಕುಮಾರ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಆದಿಚುಂಚನಗಿರಿ ಮಹಾ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾ ಮಠದ ಶ್ರೀ ಶುಂಭುನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್. ಮುದ್ದೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ , ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್ ಮಲ್ಲೇಶ್ ಗೌಡ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಎಂ. ವಿಶ್ವನಾಥ್, ಹೆಚ್.ಪಿ. ಮೋಹನ್, ಕೆ.ಪಿ .ಶೈಲೇಶ್, ಆರ್. ಅನಂತಕುಮಾರ್, ಜಯಪಾಲ್, ಸ್ವಾತಂತ್ರ ಹೋರಾಟಗಾರ ಹೆಚ್.ಎಂ. ಶಿವಣ್ಣ, ವಿವಿಧ ಮಹಿಳ ಸಮಾಜದ ಭಾರತೀ ರಾಜಶೇಖರ್, ನಾಗಮ್ಮ ನಾರಾಯಣಗೌಡ, ರಶ್ಮಿ ಮಂಜು, ಭಾರತೀ, ವಾಸಂತಿ ಮಲ್ಲೇಶ್, ಮೀನಾ ರಾಜಶೇಖರ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚ.ನಾ. ಅಶೋಕ್, ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಹೆಚ್.ವಿ. ಚಂದನಾ, ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್ ಗೌಡ, ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಹೆಚ್.ಆರ್. ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.
Hassan
ತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಉಪವಾಸ ಆಚರಣೆಯಲ್ಲಿ ತೊಡಗಿದ್ದ ಜನರು ಬೆಳಗ್ಗೆಯಿಂದಲೂ ಆಲೂರು ಪಟ್ಟಣದ ಕೆ.ಇ.ಬಿ ವೃತ್ತದ ಬಳಿ ಇರುವ ಸಂಗಮೇಶ್ವರ ಶಿವನ ದೇವಸ್ಥಾನ, ಬೇಡುಚವಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಮರಸು ಗ್ರಾಮದ ಕಲ್ಲೇಶ್ವರ ಸ್ವಾಮಿ, ತೊಗರನಹಳ್ಳಿ ಬಸವಣ್ಣನವರ ದೇವಾಲಯ, ಕೆಂಚನಹಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಹೊಸೂರು ಚನ್ನಾಪುರ ಬಸವಣ್ಣ ದೇವಾಲಯ, ಬ್ಯಾಬ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಹುಣಸುವಳ್ಳಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ದೊಡ್ಡಕಣಗಾಲು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಮರಸು ಹೊಸಳ್ಳಿ ಗ್ರಾಮದ ಬಸವಣ್ಣ ದೇವಾಲಯ, ದೊಡ್ಡಕಣಗಾಲು ಕಲ್ಲೇಶ್ವರ ಮತ್ತು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮುದಿಗೆರೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ನಾಕಲಗೂಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಿರುಗಡಲು ಗ್ರಾಮದಶ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ, ಸೊಂಪುರ ಗ್ರಾಮದ ನಂಜುಂಡೇಶ್ವರ ಸ್ವಾಮಿ ದೇವಸ್ಥಾನ, ಡಿ. ಕಣಗಾಲು ಗ್ರಾಮದ ಕಾಳಸ್ಥೆಶ್ವರ ಸ್ವಾಮಿ ದೇವಸ್ಥಾನ, ಪಾಳ್ಯ ಹೋಬಳಿ ವ್ಯಾಪ್ತಿಯ ಪಾಳ್ಯ ಗ್ರಾಮದ ರಾಮೇಶ್ವರ ಸ್ವಾಮಿ ದೇವಸ್ಥಾನ, ತ್ರಿಪುರಂತೇಶ್ವರ, ಜೆ. ತಿಮ್ಮನಹಳ್ಳಿಯ ಭೈರವೇಶ್ವರ ಸ್ವಾಮಿ ದೇವಸ್ಥಾನ, ಕಾರ್ಜುವಳ್ಳಿಯ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಡದರವಳ್ಳಿ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಹುಲ್ಲಹಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಬಿಡದರವಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಅಳುವಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ದೇತಾಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ,

ಕುಂಬಾರಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೀರುಕನಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಕಾಮತಿಯ ಬಸವಣ್ಣ ಸ್ವಾಮಿ ದೇವಸ್ಥಾನ, ಚಿಕ್ಕಕಣಗಾಲು ಗ್ರಾಮದ ಕಾಳೇಶ್ವರ, ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಬೆಳಮೆ ಬಸವಣ್ಣ ಸ್ವಾಮಿ ದೇವಸ್ಥಾನಗಳಲ್ಲಿ ಹಾಗೂ ಕುಂದೂರು ಹೋಬಳಿ ವ್ಯಾಪ್ತಿಯ ತುರುಗನವಳ್ಳಿ ಮಲ್ಲೇಶ್ವರ ಹಾಗೂ ಬಸವಣ್ಣ ಸ್ವಾಮಿ ದೇವಸ್ಥಾನ, ಹಸುಗನೂರು ಕೈಲಾಸನಾಥೇಶ್ವರ ಸ್ವಾಮಿ ದೇವಸ್ಥಾನ, ಕಡಗಬಲ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಬಾಚನಹಳ್ಳಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಹಂಚೂರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮೇರ್ವೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಚಟ್ಟನಹಳ್ಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕಾರಿಗನಹಳ್ಳಿ ಬಸವಣ್ಣ ಸ್ವಾಮಿ ದೇವಸ್ಥಾನ, ಕದಾಳು ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮುದ್ದನಹಳ್ಳಿ ಬಸವಣ್ಣ ಸ್ವಾಮಿ ದೇವಸ್ಥಾನ, ಕುದರವಳ್ಳಿಯ ಜಂಗಮಾನ್ಯ ಸ್ವಾಮಿ ದೇವಸ್ಥಾನಗಳ್ಳಿ, ಕೆಂಚಮ್ಮ ಹೊಸಕೋಟೆ ಹೋಬಳಿಯ ವ್ಯಾಪ್ತಿಯಲ್ಲಿನ ಹರಹಳ್ಳಿಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಮಾದಿಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾರಗೋಡು ಬಸವಣ್ಣ ಸ್ವಾಮಿ ದೇವಸ್ಥಾನ, ಅಂಜಲಿಗೆ ಸೊಮೇಶ್ವರ ಸ್ವಾಮಿ ದೇವಸ್ಥಾನ, ಅಬ್ಬನ ಗ್ರಾಮದ ಅಮೃತ ಲಿಂಗೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ದೇವಸ್ಥಾನಗಳ ಅರ್ಚಕರಿಂದ ಶಿವಲಿಂಗ ಮೂರ್ತಿಗೆ ಅಭಿಷೇಕ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಬಿಲ್ವಪತ್ರೆ ಅರ್ಪಣೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ, ಬಳಿಕ ಮಹಾ ಆರತಿ ಕಾರ್ಯಕ್ರಮ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಭಕ್ತರು ಶ್ರದ್ಧಾ ಭಕ್ತಿಯಿಂದ ತೆರಳಿ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದರು.

ಪುರೋಹಿತ ಶಶಿ ಮಾತನಾಡಿ, ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ. ಅಲ್ಲದೇ, ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ ಎಂದು ತಿಳಿಸಿದರು.
ಪೋಟೋ ಕ್ಯಾಪ್ಶನ್: ಆಲೂರು ಪಟ್ಟಣದ ಕೆಇಬಿ ವೃತ್ತದ ಬಳಿ ಇರುವ ಸಂಗಮೇಶ್ವರ ದೇವಸ್ಥಾನದಲ್ಲಿ ಪುರೋಹಿತ ಶಶಿ ರವರ ನೇತೃತ್ವದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
Hassan
ಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
ಅರಸೀಕೆರೆ : ಸಂತ ಸೇವಾಲಾಲ್ ಜಯಂತಿ ಅರಸೀಕೆರೆ ನಗರದ ಮಿನಿ ವಿಧಾನಸೌಧದ ಕಂದಾಯ ಭವನದಲ್ಲಿ ತಾಲೂಕು ಆಡಳಿತದ ಮಂಡಳಿ ವತಿಯಿಂದ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಅರಸೀಕೆರೆ ಜನಪ್ರಿಯ ಶಾಸಕರಾದ ಕೆ,ಎಂ, ಶಿವಲಿಂಗೇಗೌಡರು ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಹರತನಹಳ್ಳಿ ಜಯಣ್ಣ, ವಕೀಲರಾದ ಕುಮಾರನಾಯ್ಕ್, ಮಂಜುಳಾ ಬಾಯಿ, ಕೃಷ್ಣಾ ನಾಯ್ಕ್, ಪೃಥ್ವಿ ನಾಯಕ್ ಹಾಗೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
Hassan
ಕೊಟ್ಟೂರಪ್ಪ ನಿಧನ
ಅರಸೀಕೆರೆ : ಅರಸೀಕೆರೆ ತಾಲೂಕಿನ ಮಾಡಾಳು ದಾಖಲೆ ಸೀತಾಪುರ ಗ್ರಾಮದ ನಿವಾಸಿ
ಕೊಟ್ಟೂರಪ್ಪರವರು, (ಜುಮ್ಮಿ)75 ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಪತ್ನಿ ಇಬ್ಬರು ಪುತ್ರರು ಹಾಗೂ ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾನ ಅವರ ತೋಟದಲ್ಲಿ ನೆರವೇರಿತು.
-
Mysore15 hours agoಮಲೆ ಮಹದೇಶ್ವರ ಶತನಾಮಾವಳಿ ಲೋಕಾರ್ಪಣೆ: ಶ್ರೀಮಾಯಕಾರ ಗುರುಕುಲದಿಂದ ನಿರ್ಮಾಣ
-
National - International7 hours agoIND v/s PAK T-20 WC| 114ಕ್ಕೆ ಪಾಕ್ ಆಲೌಟ್: ಟೀಂ ಇಂಡಿಯಾಗೆ ಭರ್ಜರಿ ಜಯ
-
Hassan15 hours agoಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
-
Hassan20 hours agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Chikmagalur7 hours agoತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸತ್ತು ಬಾಲಕಿ ಆತ್ಮಹ*ತ್ಯೆಗೆ ಶರಣು
-
Kodagu14 hours agoರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮ
-
Hassan11 hours agoತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ
-
Chikmagalur12 hours agoಭದ್ರಾ ನದಿಯಲ್ಲಿ ಸೆಳೆತ ಮತ್ತು ಅಪಾಯಕಾರಿ ಗುಂಡಿಗಳ ಬಗ್ಗೆ ಅರಿವು ಇಲ್ಲ : ಬಲಿಯಾಗುತ್ತಿರುವ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು
