Connect with us

Mysore

ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ

Published

on

ಮೈಸೂರು: ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. 2000 ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. 19519 ಮಾತೃ ಭಾಷೆಗಳು ಭಾರತದಲ್ಲಿ ಇವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಕೆ ಮಾಡುವ ಮೂಲಕ ಉಳಿಸಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಯ ಬೋಧನೆಯನ್ನು ಸುಲಭ ಗೊಳಿಸಿ ಬೋಧನೆ ಮಾಡಬೇಕು. ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕನ್ನಡ ಬೋಧನೆಯನ್ನು ಹೆಚ್ಚು ಮಾಡಬೇಕು. ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಹೊರ ರಾಜ್ಯದವರು ಇರುತ್ತಾರೆ ಆದರೆ ಅವರು 3 ತಿಂಗಳ ಒಳಗೆ ಕನ್ನಡವನ್ನು ಕಲಿತು ವ್ಯವಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರೊಂದಿಗೆ ವ್ಯವಹಾರ ಮಾಡಲು ಕಷ್ಟ ಆಗುತ್ತದೆ.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಇರುವ ನಾಮಫಲಕಗಳು ಕನ್ನಡದಲ್ಲಿ ಇವೆ. ಆದರೆ ಕೆಲವು ಕಡೆ 60: 40 ಅನುಪಾತ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪರವಾನಗಿ ರಿನಿವಲ್ ಗೆ ಬಂದಾಗ ಈ ಬಗ್ಗೆ ಷರತ್ತನ್ನು ವಿಧಿಸಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಅವರು ಮಾತನಾಡಿ ಸರ್ಕಾರದ ಇಲಾಖೆಗಳ ಅಂತರ್ಜಾಲ ಪುಟ ಕನ್ನಡದಲ್ಲಿ ಇರಬೇಕು. ಜಿಲ್ಲೆಯ ಅಂಗಡಿ ಮುಗ್ಗಟ್ಟು ಗಳ ಬೋರ್ಡುಗಳು ಶೇಕಡಾ 60 ರಷ್ಟು ಕನ್ನಡದಲ್ಲಿ ಇರಬೇಕು. ಸರ್ಕಾರಿ ಇಲಾಖೆಗಳ ಕಡತಗಳಲ್ಲಿ ಕನ್ನಡವನ್ನು ಬಳಕೆ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳು ಅನುತ್ತೀರ್ಣ ಆಗುತ್ತಿರುವ ಬಗ್ಗೆ ವರದಿ ಇದ್ದು, ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಬೋಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಟಿ ಗುರುರಾಜ್ ಅವರು ಮಾತನಾಡಿ ಎಲ್ಲಾ ನಾಮಫಲಕಗಳು ಶೇಕಡಾ 60 ರಷ್ಟು ಕನ್ನಡದಲ್ಲಿ ಇರಬೇಕು. ಆದರೆ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎನ್ ಪಿ ಎಸ್ ಶಾಲೆಯ ನಾಮಫಲಕ ಸಂಪೂರ್ಣ ಇಂಗ್ಲಿಷ್ ಮಯವಾಗಿದ್ದು ಶೇಕಡಾ 60 ರಷ್ಟು ನಾಮಫಲಕ ಕನ್ನಡದಲ್ಲಿ ಇರಬೇಕು ಎಂಬ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲವು ಇಲಾಖೆಗಳ ಮೊಹರುಗಳು ಇಂಗ್ಲಿಷ್ ನಲ್ಲಿ ಇದ್ದು ಕನ್ನಡದ ಮೊಹರುಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷ ಸ. ರ. ಸುದರ್ಶನ, ಡಾ. ಪಿ. ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mysore

ಮುತ್ತೂಟ್ ಫಿನ್‌ಕಾರ್ಪ್‌ಗೆ 5.45 ಲಕ್ಷ ರೂ. ವಂಚನೆ

Published

on

ಮೈಸೂರು: ನಗರದಲ್ಲೊಬ್ಬ ಆಸಾಮಿ ಮುತ್ತೂಟ್ ಫಿನ್‌ಕಾರ್ಪ್ ಕಂಪನಿಯಿಂದ 5.45 ಲಕ್ಷ ರೂ. ಸಾಲ ಪಡೆದು ಪರಾರಿಯಾಗಿದ್ದಾನೆ.

ಮಹದೇವಪುರ ನಿವಾಸಿ ಅಬ್ದುಲ್ ಜಮೀಲ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು?

ಆರೋಪಿ ಅಬ್ದುಲ್ ಜಮೀಲ್ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್‌ನಲ್ಲಿ 5.57 ಲಕ್ಷ ರೂ. ಮೌಲ್ಯದ ಚಿನ್ನ ಗಿರವಿ ಇಟ್ಟಿದ್ದ. ಬಡ್ಡಿ ಹೆಚ್ಚಾದ ಕಾರಣ ಸಾಲ ತೀರಿಸಿ ಚಿನ್ನ ಬಿಡಿಸಿಕೊಡುವಂತೆ ಮುತ್ತೂಟ್ ಫಿನ್‌ಕಾರ್ಪ್ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ಪರಿಶೀಲಿಸಿದ ದೇವರಾಜ ಅರಸು ರಸ್ತೆ ಮುತ್ತೂಟ್ ಶಾಖೆಯ ವ್ಯವಸ್ಥಾಪಕಿ ಸಹನಾ 5.45 ಲಕ್ಷ ರೂ. ಸಾಲ ಕೊಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಜಮೀಲ್ ಕೂಡ ಒಪ್ಪಿದ್ದ. ಕೂಡಲೇ ಸಹನಾ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ.

ಚಿನ್ನ ಬಿಡಿಸಿಕೊಂಡು ಬರುವುದಾಗಿ ಹೇಳಿ ಹೋದ ಅಬ್ದುಲ್ ಜಮೀಲ್ ವಾಪಸ್ ಬಂದಿಲ್ಲ.
ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಬೇರೊಂದು ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ.

ಈ ಸಂಬಂಧ ಸಹನಾ ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Mysore

ಪ್ರತಿ ಮನೆಯಲ್ಲೂ ಸ್ವಾತಂತ್ರೋತ್ಸವ ಹಬ್ಬ ಆಚರಿಸಲಿ: ತಹಸೀಲ್ದಾರ್ ರುಕಿಯಾ ಬೇಗಂ

Published

on

ವರದಿ: ಎಸ್ .ಬಿ. ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಸ್ವಾತಂತ್ರ್ಯದ ಹಬ್ಬವನ್ನು ಪ್ರತಿಯೊಂದು ಮನೆಯಲ್ಲೂ ಆಚರಿಸಬೇಕು ಎಂದು ತಹಸೀಲ್ದಾರ್ ರುಕಿಯಾ ಬೇಗಂ ಹೇಳಿದರು.

ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 79 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಾಂಧೀಜಿ ರವರ ನೇತೃತ್ವದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಫಲದಿಂದ ತಮ್ಮಗಳ ಪ್ರಾಣತ್ಯಾಗದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟು, ವೀರ ಮರಣ ಹೊಂದಿದ ಪುಣ್ಯಾತ್ಮರು, ಪ್ರಾಣ ವನ್ನೇ ಅರ್ಪಣೆ ಮಾಡಿದ್ದಾರೆ.

ನಮ್ಮ ದೇಶಕ್ಕೆ 79 ನೇ ಸ್ವಾತಂತ್ರ್ಯ ಸಂಭ್ರಮದ ಆಚರಣೆ ಮಾಡುತ್ತಿದ್ದೇವೆ, ನಮ್ಮ ದೇಶದಲ್ಲಿ ಹಲವಾರು ರಂಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಯನ್ನು ಸಾಗಿಸಿವೆ,ವೈದ್ಯಕೀಯ, ತಂತ್ರಜ್ಞಾನ ಹಾಗೂ ಬಾಹ್ಯಕಾಶ ಹೀಗೆ ದೇಶ ಹಲವಾರು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದು ಹೆಮ್ಮೆಯ ವಿಷಯವಾಗಿದೆ ಎಂದರು.

ಸ್ವಾತಂತ್ರೋತ್ಸವದ ಹೋರಾಟದಲ್ಲಿ ಮಡಿದವರ ತತ್ವ, ಅವರ ಆದರ್ಶ ಹಾಗೂ ಸಾಧನೆ ಗಳನ್ನು ಮೈಗೂಡಿಸಿಕೊಂಡು ಅವರ ಸತ್ಯ ಮಾರ್ಗದಲ್ಲಿ ಸಾಗಬೇಕು.

ಇತ್ತೀಚಿನ ದಿನಗಳಲ್ಲಿ ಪ್ರಮುಖ ವಾಗಿ ಗಾಂಧೀಜಿ ರವರ ಆದರ್ಶವಾಗಿರುವಂತಹಗಳನ್ನ ವಿದ್ಯಾರ್ಥಿಗಳಲ್ಲಿ ಅಹಿಂಸೆ,ಸಮನ್ವಯ, ಸತ್ಯಾಗ್ರಹ,ಸತ್ಯಾನ್ವೆಷಣೆ,ಸಂಯಮ ಇವುಗಳು ಬಹಳ ಮುಖ್ಯ ವಾಗಿರುವ ಅಂಶವಾಗಿರುತ್ತದೆ.ಆದುದರಿಂದ ಯುವ ಪೀಳಿಗೆಯು ಇವರ ತತ್ವಗಳನ್ನು ಅಳವಡಿಸಿಕೊಂಡು ಚರಿತ್ರೆ ಏನಿದೆ, ನಡೆದ ಸ್ವಾತಂತ್ರೋತ್ಸವದ ಹೋರಾಟ, ಮಹನೀಯರುಗಳ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಂಡು ಆರಾಧಿಸಿ, ಸ್ಮರಿಸೋಣ ಇದು ಪ್ರತಿಯೊಂದು ಮನೆ ಮನೆಯಲ್ಲೂ ಆಚರಿಸುವ ಹಬ್ಬವಾಗಲಿ ಎಂದರು.

ಇದೇ ಸಂದರ್ಭದಲ್ಲಿ ಪಶು ಇಲಾಖೆ ಸಚಿನ್, ಯೋಧ ಸಿ ಕೆ ಲೋಕೇಶ್, ರೈತ ಶಶಿಧರ್, ಪೌರಕಾರ್ಮಿಕ ಮಂಜುನಾಥ್ ರವರನ್ನು ಸನ್ಮಾನಿಸಿದರು.

ಪಿಎಂಸಿ ಸರ್ಕಾರಿ ಶಾಲೆಯ ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳು ಇಂಗ್ಲಿಷ್ ನಲ್ಲಿ ಸ್ವಾಗತ ಭಾಷಣ ಮಾಡಿ, ನೃತ್ಯ ಮಾಡಿರುವುದು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಇ ಒ ರವಿಕುಮಾರ್, ವೃತ್ತ ನಿರೀಕ್ಷಕ ಶಶಿಕುಮಾರ್,ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯ್ ಕುಮಾರ್, ಚೆಸ್ಕಾಂ ಎ ಇ ಇ ಮಧುಸೂದನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುವರ್ಣ,ಉಪಾಧ್ಯಕ್ಷೆ ಶಶಿಕಲಾ, ಉಪನ್ಯಾಸಕ ನಾಗರಾಜು, ಮಹಿಳಾ ಸಂಘದ ಅಧ್ಯಕ್ಷೆ ರಾಣಿ, ಚೈತ್ರ, ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಉಪ ತಹಸೀಲ್ದಾರ್ ಸತೀಶ್, ಮಹೇಶ್, ಶಿರಸ್ತೇದಾರ್ ತಿಮ್ಮಯ್ಯ, ಆರ್ ಐ ಶಶಿಕಾಂತ್, ಕೃಷ್ಣಮೂರ್ತಿ, ಸಿಬ್ಬಂದಿಯವರಾದ ಅನುಷಾ, ಹಂಸ, ರಾಕೇಶ್, ಪ್ರಮೀಳಮ್ಮ, ನೇತ್ರಾವತಿ, ಶಂಕರ್, ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರುಗಳು ಸೇರಿದಂದೆ ಇತರರು ಇದ್ದರು.

Continue Reading

Mysore

ಮುಡಾ ಪ್ರಕರಣದ ಬಳಿಕ ಮೈಸೂರಿನಲ್ಲಿ ಹಗರಣಗಳೇ ನಡೆಯುತ್ತಿವೆ: ರಘು ಕೌಟಿಲ್ಯ

Published

on

ಮೈಸೂರು : ಮುಡಾ ಪ್ರಕರಣದ ಬಳಿಕ ಮೈಸೂರಿನಲ್ಲಿ ಇದೀಗ  ಹರಣಗಳೇ ನಡೆಯುತ್ತಿದ್ದು, ಮೈಸೂರನ್ನು ದಸರಾ ನಗರವೆಂದು ಕರೆಯುತ್ತಿದ್ದರು. ಆದರೆ ಇದೀಗ ಡ್ರಗ್ಸ್ ನಗರವಾಗಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಬಂದು ರೈಡ್ ಮಾಡಿದ್ದಾರೆ.
ಈ ಮಾಹಿತಿ ನಮ್ಮ ಪೊಲೀಸರಿಗೆ ಇರಲಿಲ್ವಾ? ಈ ಪ್ರಕರಣದಲ್ಲಿ ಮೈಸೂರು ಪೋಲೀಸರ ಕೈ ಕಟ್ಟಿ ಹಾಕಲಾಗಿದೆ. ಸರ್ಕಾರದ ಅಥವಾ ಪ್ರಭಾವಿ ವ್ಯಕ್ತಿಗಳ ಪ್ರಭಾವ ಇದೆ ಎಂದು ಆರೋಪಿಸಿದರು.

ಸಿಎಂ ತವರು ಜಿಲ್ಲೆ ಇದು, ಉಸ್ತುವಾರಿ ಸಚಿವರು ಸಹ ಇದೇ ಜಿಲ್ಲೆಯವರು. ಈ ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ಅಮಾನತು ಮಾಡಲಾಗುತ್ತದೆ. ಅಮಾನತು ಮಾಡಿದ 24ಗಂಟೆ ಒಳಗೆ ಅಮಾನತು ಆದೇಶ ವಾಪಾಸ್ ಪಡೆಯಲಾಗುತ್ತದೆ. ಇದು ಪೋಲೀಸರ ಮೇಲೆ ಇರುವ ಒತ್ತಡವನ್ನು ತೋರಿಸುತ್ತದೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು. ಇಲ್ಲವಾದಲ್ಲಿ ನಾವು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು  ಮನವಿ ಮಾಡುತ್ತೇವೆ ಎಂದು ತಿಳಿಸಿದರು.

Continue Reading

Trending

error: Content is protected !!