Mandya
ಕಾಂಗ್ರೆಸ್ ಪಕ್ಷದಿಂದ ಬೈಕ್ ರ್‍ಯಾಲಿ
ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಎರು ಮಂಡ್ಯದಲ್ಲಿ ಬೈಕ್ ರ್‍ಯಾಲಿ ಮೂಲಕ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಜೊತೆಗೂಡಿ ಕೊನೆಯ ದಿನದ ಪ್ರಚಾರ ಮಾಡಿದರು.

ನಗರದ ಕಾರಿಮನೆ ಗೇಟ್ ನಿಂದ ಬೈಕ್ ರ್‍ಯಾಲಿ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ನಾಯಕರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಯ ಚಾಮರಾಜೇಂದ್ರ ಒಡೆಯರ್ ವೃತ್ತ, ಆರ್ ಪಿ ರಸ್ತೆ, ಅಂಬೇಡ್ಕರ್ ರಸ್ತೆ ಯಲ್ಲಿ ಮತಯಾಚಿಸಿ ಹೊಸಹಳ್ಳಿಯಲ್ಲಿ ಪ್ರಚಾರ ಮಾಡಿದರು.
ಕಾಂಗ್ರೆಸ್ ಪಕ್ಷ ಜನರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನತೆಗೆ ಸವಲತ್ತು ದೊರಕಿಸಿಕೊಟ್ಟಿದೆ, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Mandya
ಮಾ.22ಕ್ಕೆ ಭಾರತ ಸಂವಿಧಾನದಿಂದ ನಾವು ಕಲಿಯಬೇಕಿರುವುದು ಏನನ್ನು?’ ಕುರಿತು ಪ್ರಬಂಧ ಸ್ಪರ್ಧೆ : ಉಮಾಮಹದೇವು
ಮಂಡ್ಯ: ದಲಿತ ಸಂಘರ್ಷ ಸಮಿತಿ(ಬಣ ರಹಿತ) ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಬದುಕು, ಸಾಧನೆಗಳು ಹಾಗೂ ದೇಶದ ಭವಿಷ್ಯದ ಬಗ್ಗೆ ಅವರ ಚಿಂತನೆಗಳು ಹಾಗೂ `ಭಾರತ ಸಂವಿಧಾನದಿಂದ ನಾವು ಕಲಿಯಬೇಕಿರುವುದು ಏನನ್ನು?’ ಕುರಿತು ಮಾ.22ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಉಮಾಮಹದೇವು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಅದರ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದುದು ಬಹಳಷ್ಟಿದೆ. ಆದ್ದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಳೆದ ಬಾರಿಯು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ೪೦ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈಗಾರಿ 75 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 75 ಕಾಲೇಜಿನ ಪ್ರಾಂಶುಪಾಲರಿಗೂ ಮನವಿ ಮಾಡಿದ್ದು, ಅವರು ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಒಪ್ಪಿಕೊಂಡಿದ್ದಾರೆ. ಕಾಲೇಜು ಶಿಕ್ಷಕರ ಇಲಾಖೆಯ ಆಯುಕ್ತರು, ವಿವಿಯ ಕುಲಸಚಿವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಅರ್ಹತಾ ಪರೀಕ್ಷೆ ಎದುರಿಸಬೇಕಾಗುವುದು. ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಮಾ.9 ಅಂತಿಮ ದಿನವಾಗಿರುತ್ತದೆ. ಮಾ.9ರಂದು ಆಯಾ ಕಾಲೇಜಿನಲ್ಲಿ ಸಂವಿಧಾನದ ಆಧಾರದಲ್ಲಿ 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅಲ್ಲಿ 20 ಕ್ಕಿಂತ ಹೆಚ್ಚು ಅಂಕಗಳಿಸಿದವರು ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಅವರು ಮಾ.22ರಂದು ಮುಖ್ಯ ಪ್ರಬಂಧ ಸ್ಪರ್ಧೆ ಮಂಡ್ಯ ನಗರದ ಪಿಇಎಸ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಚಾಮರಾಜನಗರದ ಕೇಂದ್ರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
ಅಂಬೇಡ್ಕರ್ ಅಧ್ಯಯನ ಸಂಸ್ಥೆಯಿಂದ ಮೌಲ್ಯ ಮಾಪನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನಕ್ಕೆ ಡಾ.ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆಯಿಂದ 37 ಸಾವಿರದ ಟ್ಯಾಬ್, ಎರಡನೇ ಬಹುಮಾನವಾಗಿ ಇಬ್ಬರಿಗೆ ತಲಾ 5000 ಸಾವಿರ, 3ನೇ ಬಹುಮಾನವಾಗಿ ಮೂವರಿಗೆ ತಲಾ 2000 ಪ್ರೋತ್ಸಾಹ ನೀಡಲಾಗುವುದು. ಇದು ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿರುತ್ತದೆ. 1ನೇ ಸ್ಥಾನಕ್ಕೆ 3, 2ನೇ ಸ್ಥಾನಕ್ಕೆ 6, 2ನೇ ಸ್ಥಾನಕ್ಕೆ 9 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.
ಕಳೆದ ಬಾರಿ ಅಂಧ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯೂ ವಿಶೇಷ ಚೇತನರ ಭಾಗವಹಿಸುವಿಕೆಗೆ ಅವಕಾಶವಿದೆ. ಅವರಲ್ಲಿ ವಿಜೇತರನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುವುದು. ಯುವ ಜನತೆ ಅಂಬೇಡ್ಕರ್ ಅವರ ಚಿಂತನೆ ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಮೌಲ್ಯ ತಿಳಿದು ಅದರ ಮೂಲಕ ದೇಶದ ಆಗು-ಹೋಗುಗಳ ಬಗ್ಗೆ ಅರಿಯಬೇಕು ಎಂಬುದು ಸ್ಪರ್ಧೆಯ ಉದ್ದೇಶವಾಗಿದೆ ಎಂದರು.
ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಸಂಚಾಲಕ, ಮಂಡ್ಯ ಜಿಲ್ಲಾ ಸಂಚಾಲಕ ಉರುಗಲವಾಡಿ ರಾಮಯ್ಯ, ಅಶೋಕ್, ಮಹಿಳಾ ಜಿಲ್ಲಾ ಸಂಚಾಲಕಿ ಕೆ.ಪಲ್ಲವಿ, ಸಿದ್ದರಾಜು, ಶಿವಮ್ಮ, ಮರಿಸ್ವಾಮಿ ಇದ್ದರು.
Mandya
25 ರಂದು `ಕನ್ನಡ ಮೊದಲು ಆಟೋ ರ್‍ಯಾಲಿ’ : ಎಂ.ಬಿ.ನಾಗಣ್ಣಗೌಡ
ಮಂಡ್ಯ: ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಉಳಿವಿಗಾಗಿ ಮತ್ತು ಕನ್ನಡ ಪರಂಪರೆಯ ಪೋಷಣೆಗಾಗಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಸಹಯೋಗದೊಂದಿಗೆ ಕನ್ನಡಪರ ಸಂಘಟನೆಗಳ ವತಿಯಿಂದ ಫೆ. 25ರಂದು ಮಂಡ್ಯ ನಗರದಲ್ಲಿ `ಕನ್ನಡ ಮೊದಲು ಆಟೋ ರ್‍ಯಾಲಿ’ ಆಯೋಜಿಸಲಾಗಿದೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ರ್‍ಯಾಲಿಯಲ್ಲಿ ೫೦ ಆಟೋ ಹಾಗೂ ಒಂದು ತೆರೆದ ಜೀಪ್ ಮೂಲಕ ನಗರದಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಉಳಿವಿಗಾಗಿ ಅರಿವು ಮೂಡಲಾಗಿಸಲಾಗುವುದು ಎಂದರು.

ರಾಜ್ಯದ ಆಡಳಿತದಲ್ಲಿ ಕನ್ನಡ ತರುವುದಾಗಿ ಹೇಳಿ 50 ವರ್ಷ ಕಳೆದಿದೆ. ಆಡಳಿತದಲ್ಲಿ, ಜನ ಬಳಕೆಯಲ್ಲಿ, ನಾಮ ಫಲಕಗಳಲ್ಲಿ, ರಸ್ತೆಯ ಹೆಸರುಗಳಲ್ಲಿ ಕನ್ನಡ ಬಳಕೆಯಗುತ್ತಿಲ್ಲ. ಇದರ ವಿರುದ್ಧ ಮೊದಲ ಹಂತದಲ್ಲಿ ಸಾರ್ವಜನಿಕವಾಗಿ ಕನ್ನಡಿಕರೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂದು ಕಾಳಿಕಾಂಬ ದೇವಾಲಯದಿಂದ ರ್‍ಯಾಲಿ ಆರಂಭಿಸಿ, ಪೇಟೆ ಬೀದಿ, ಜೆ.ಸಿ ವೃತ್ತ, ಆರ್.ಪಿ.ರಸ್ತೆ, 100 ಅಡಿ ರಸ್ತೆ, ವಿವಿ ರಸ್ತೆಗಳಲ್ಲಿ ರ್‍ಯಾಲಿ ಮಾಡಿ ಕರಪತ್ರ, ಗುಲಾಭಿ ನೀಡಲಾಗುವುದು. ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಶಾಸಕ ಪಿ.ರವಿಕುಮಾರ್ ಗೌಡ, ಕನ್ನಡ ಪರ ಚಳುವಳಿಯಲ್ಲಿ ಸಕ್ರಿಯರಾದ ಶ್ಯಾಂಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ್, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರಾಜೇಂದ್ರ ಬಾಬು, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಎಚ್.ಎಸ್.ಧನುಷ್‌ಗೌಡ, ಆಟೋ ಚಾಲಕ ಸಂಘದ ವೆಂಕಟೇಶ್, ಸೋಮಶೇಖರ್ ಇದ್ದರು.
Mandya
ಫೆ.23 ರಿಂದ 26 ರ ವರೆಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಬೀದಿ ನಾಟಕ ಪ್ರದರ್ಶನ : ಎಸ್.ಬಸವರಾಜು
ಮಂಡ್ಯ: ಜನಪದ ಮತ್ತು ಬೀದಿನಾಟಕ ಕಲಾತಂಡಗಳ ಒಕ್ಕೂಟದ ವತಿಯಿಂದ ಎಲ್ಲರೊಳಗೊಂದಾಗು ವಿನಯ್ ಸ್ನೇಹ ಬಳಗದ ಸಹಯೋಗದೊಂTVದಿಗೆ ಫೆ.೨೩ರಿಂದ ೨೬ರವರೆಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಬೀದಿ ನಾಟಕ ಪ್ರದರ್ಶನ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಸ್.ಬಸವರಾಜು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಬೀದಿ ನಾಟಕದ ಮೂಲಕ ಸಮಾಜಮುಖಿ ಸಾಂಸ್ಕೃತಿಕ ಜಾಗೃತಿ ಕಾರ್‍ಯಕ್ರಮ ನಡೆಸಲಾಗುತ್ತಿದೆ ಎಂದರು.

ವಿಶ್ವಮಾನವ ಸಂದೇಶ ಸಾರುವ ಎಲ್ಲರೊಳಗೊಂದಾಗು ಮಂಕುತಿಮ್ಮ ನಾಟಕವನ್ನು ನಗರದ ಮಂಡ್ಯ ವಿಶ್ವವಿದ್ಯಾಲಯ, ಸರಕಾರಿ ಮಹಿಳಾ ಕಾಲೇಜು, ಡವರಿ ಸಮಾಜ ಕಾಲೋನಿ ಸೇರಿದಂತೆ ತಾಲೂಕಿನ ೧೨ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗುವುದು. ಈ ಮೂಲಕ ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು, ನಾವೆಲ್ಲರೂ ವಿಶ್ವಮಾನವರು ನಾವು ಎಲ್ಲರೊಳಗೊಂದಾಗಬೇಕು ಎಂಬ ಸಂದೇಶ ಸಾರಲಾಗುವುದು ಎಂದು ಹೇಳಿದರು.
ಕಾರ್‍ಯಕ್ರಮವನ್ನು ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುನಂದ ಜಯರಾಂ ಉದ್ಘಾಟಿಸುವರು. ನಾಟಕ ಪ್ರದರ್ಶನದ ಸಮಯದಲ್ಲಿ ಆಯಾ ಸ್ಥಳಗಳ ಸ್ಥಳೀಯ ಮುಖಂಡರಲು, ಸಂಘ ಸಂಸ್ಥೆಗಳ ಮುಖಂಡರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಗೋಷ್ಠಿಯ್ಲಿ ಕಾರ್ಯದರ್ಶಿ ಟಿ.ನಾಗರಾಜು, ಖಜಾಂಚಿ ಎನ್.ಶೇಖರ್, ನಿರ್ದೇಶಕ ಹೊನ್ನೇಶ್, ಸದಸ್ಯ ದೇವರಾಜ್ ಕೊಪ್ಪ ಇದ್ದರು.
-
Special12 hours agoನಮ್ಮ ಹೊಲ ನಮ್ಮ ದಾರಿ” ರೈತರ ಹೊಲಗಳಿಗೆ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿ.ಮೀ ₹12.5 ಲಕ್ಷ ಸಹಾಯಧನ!
-
Hassan10 hours agoಎಟಿಎಂಗಳಿಗೆ ಹಣ ಹಾಕದೆ ವಂಚನೆ ಪ್ರಕರಣ : ಎಫ್ಐಆರ್ ದಾಖಲು
-
National - International37 minutes agoಡೊನಾಲ್ಡ್ ಟ್ರಂಪ್ ಸುಂಕ ರದ್ದುಗೊಳಿಸಿದ ಯುಎಸ್ ಸುಪ್ರೀಂಕೋರ್ಟ್: ಭಾರತ ಸರ್ಕಾರದ ಫಸ್ಟ್ ರಿಯಾಕ್ಷನ್ ಏನು?
-
Mysore5 hours agoಡಾ.ಯತೀಂದ್ರ ಸಿದ್ದರಾಮಯ್ಯಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು
-
Chikmagalur3 hours agoಹೋಂ ಸ್ಟೇಯೊಂದರಲ್ಲಿ ಯುವತಿ ಅನುಮಾನಾಸ್ಪದ ಸಾ*ವು: 4 ತಿಂಗಳ ನಂತರ ಮಾಲೀಕನ ವಿರುದ್ಧ FIR ದಾಖಲು
-
State5 hours agoವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ರಾಜ್ಯ ಸರ್ಕಾರದ ವಿರುದ್ದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
-
State4 hours agoಹೈಕಮಾಂಡ್ ನಾಯಕರು ತಾರ್ಕಿಕ ತೀರ್ಮಾನಕ್ಕೆ ಬಂದಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಬಹುದು: ಸತೀಶ್ ಜಾರಕಿಹೊಳಿ
-
State3 hours agoವೈದ್ಯಖೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು: ಸಿಎಂ ಸಿದ್ದರಾಮಯ್ಯ
