Connect with us

Mandya

ಕಂದಾಯ ಇಲಾಖೆಯಲ್ಲಿ ಉತ್ತಮ ಪ್ರಗತಿ

Published

on

ಮಂಡ್ಯ : ಕಂದಾಯ ಇಲಾಖೆಯ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕೋಟ್೯ಗಳಲ್ಲಿರುವ ಕೇಸ್ ಗಳು ಗಣನೀಯವಾಗಿ ಕಡಿಮೆಯಾಗಿದೆ‌. ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಗಾಗಿ ಕಾನೂನಿನಲ್ಲಿ 90 ದಿನಗಳು ಗಡವು ಇದೆ, ಆದರೆ 76 ದಿನಗಳಲ್ಲಿ ವಿಲೇವಾರಿಯಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ.
ರೈತರು ಕಚೇರಿಗೆ ಅಲೆಯುವುದನ್ನು
ಕಳೆದ ಒಂದು ವರ್ಷದಿಂದ ಕೋಟ್೯ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಕಡಿಮೆ ಮಾಡಿದೆ ಎಂದರು.

ತಹಶೀಲ್ದಾರ್ ಕೋಟ್೯ನಲ್ಲಿ ಒಂದು ವರ್ಷ ಅವಧಿಗಿಂತ ಬಾಕಿ ಇದ್ದ 2207 ಕೇಸ್ ಗಳು ವಿಲೆ ಮಾಡುವ ಉದ್ದೇಶದಿಂದ ಅಭಿಯಾನ ಮಾಡಿದ ಮೇಲೆ 2207 ಕೇಸ್ ಗಳ ಪೈಕಿ ಒಂದು ವರ್ಷದ ನಂತರ ಕೇವಲ 46 ಕೇಸ್ ಇದೆ. ಶೇ.98ರಷ್ಟು ಪ್ರಕರಣಗಳು ವಿಲೇವಾರಿಯಾಗಿವೆ ಎಂದರು.

ಎಸಿ ಕೋರ್ಟ್ ಗೆ ಬಂದರೆ, ಅಲ್ಲಿ ಪರಿಸ್ಥಿತಿ, ಒಂದು ವರ್ಷಕ್ಕಿಂತ ಮುಂಚೆ ಇರುವ ಕೇಸ್ ಗಳೇ 50359 ಕೇಸ್ ಗಳಿತ್ತು. ಹಳೇ ಕೇಸ್ ಗಳ ವಿಲೇವಾರಿ ಅಭಿಯಾನ ಮಾಡಿದ ಮೇಲೆ, ಒಂದು ವರ್ಷದ ಅವಧಿಯಲ್ಲಿ ಸುಮಾರು ಹಳೇ ಕೇಸ್ ಗಳನ್ನೆ 36 ಸಾವಿರ ವಿಲೇವಾರಿ ಮಾಡಿದ್ದೇವೆ. 25 ಸಾವಿರ ಕೇಸ್ ಗಳು ಬಾಕಿ ಇವೆ ಎಂದರು.

ಎಸಿ ಕೋರ್ಟ್ ಲ್ಲಿ 6 ತಿಂಗಳ ಅವಧಿಯಲ್ಲಿ ಕೇಸ್ ವಿಲೇವಾರಿ ಮಾಡಬೇಕು. ಆದರೆ, 32787 ಕೇಸ್ ಗಳು ಎಸಿ‌ ಕೋರ್ಟ್ ನಲ್ಲಿ 5 ವರ್ಷದ ಅವಧಿ ಮೀರಿದ ಪ್ರಕರಣಗಳು ಬಾಕಿ ಉಳಿದಿದ್ದು ಅವುಗಳನ್ನ ವಿಲೇವಾರಿ ಮಾಡಲು ವಿಶೇಷ ಆದ್ಯತೆ ಕೊಟ್ಟು 32 ಸಾವಿರ ಕೇಸ್ ಗಳ ಪೈಕಿ, ಸುಮಾರು24 ಸಾವಿರ ಕೇಸ್ ಗಳನ್ನು ವಿಲೇವಾರಿ ಮಾಡಿದ್ದೇವೆ, 6800 ಕೇಸ್ ಬಾಕಿ ಇವೆ ಎಂದರು.

ಮಂಡ್ಯ ತೆಗೆದುಕೊಂಡರೆ ಕಳೆ ವರ್ಷ 5670 ಕೇಸ್ ಇತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2630 ಕೇಸ್ ಬಂದಿದೆ. 1616 ಕೇಸ್ ಬಾಕಿ ಇವೆ ಎಂದರು.

ರಾಜ್ಯದಲ್ಲಿ ಆರ್.ಟಿಸಿ ಗೆ ಆಧಾರ್ ಜೋಡಣೆ ಅಭಿಯಾನ ‌ಮಾಡಿ ಶೇ.85 ರಷ್ಟು ಫೈಲ್ ಗಳನ್ನು ಪರಿಶೀಲನೆ ನಡೆಸಿದ್ದೇವೆ. ಆಧಾರ್ ಜೋಡಣೆಯಿಂದ ಯಾರದೋ ಭೂಮಿಯನ್ನ ಇನ್ಯಾರೋ ಲಪಟಾಯಿಸಲು ಸಾಧ್ಯವಿಲ್ಲ. ದೇಶದಲ್ಲೇ ಕರ್ನಾಟಕ ಆಧಾರ್ ಜೋಡಣೆಯನ್ನು ಹೆಚ್ಚು ಮಾಡಿದೆ ಎಂದರು.

ರಾಜ್ಯದಲ್ಲಿ ಲ್ಯಾಂಡ್ ಬೀಟ್ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸರ್ಕಾರಿ ಭೂಮಿ ಎಷ್ಟಿವೆ ಎಂಬುದು ಗೊತ್ತಾಗಿದೆ‌ 14.5 ಲಕ್ಷ ಸರ್ಕಾರಿ ಭೂಮಿ ಇದೆ. ಯಾವ ಜಿಲ್ಲೆ, ಯಾವ ತಾಲ್ಲೂಕಿನ ಲ್ಲಿ ಎಷ್ಟಿದೆ, ಅದರ ವಿಸ್ತೀರ್ಣ ಎಷ್ಟು. ಒಂದೊಂದು ಸರ್ವೇ ನಂಬರಿನಲ್ಲಿ ಎಷ್ಟಿವೆ, ಎಲ್ಲಿ ಒತ್ತುವರಿಯಾಗಿದೆ, ಎಲ್ಲಿ ಒತ್ತುವರಿಯಾಗಿಲ್ಲ ಎಂಬುದನ್ನು ಗುರುತಿಸಿದ್ದೇವೆ.ಮುಂದಿನ ದಿನಗಳಲ್ಲಿ ತೆರವು ಕಾರ್ಯಚರಣೆ ಹಮ್ಮಿಕೊಳ್ಳಲಿದ್ದೇವೆ ಎಂದರು.

ರಾಜ್ಯದ ಎಲ್ಲ ಕಡೆ ಸುಮಾರು ವರ್ಷಗಳಿಂದ ಪೌತಿ ಖಾತೆ ಆಗದೆ ಉಳಿದಿದೆ. ಪೌತಿ ಖಾತೆ ಅಂದೋಲನ ಮಾಡಬೇಕಿದೆ. ಮಂಡ್ಯದಲ್ಲೇ 33000 ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ. 1.29 ಲಕ್ಷ ಪೌತಿ ಖಾತೆ ಬಾಕಿ ಇವೆ. ಅವುಗಳನ್ನು ಕೂಡ ಸಧ್ಯದಲ್ಲೇ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ರೈತರು ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ದಾಖಲೆಗಳೊಂದಿಗೆ ಮುಂದೆ ಬರಬೇಕು ಎಂದರು.

ಪೌತಿಖಾತೆ ಮಾಡುವುದಕ್ಕೆ ಕಂದಾಯ ಇಲಾಖೆ ತಯಾರಿದೆ ಆದರೆ ಎಷ್ಟೋ ಕಡೆ ಪೌತಿಖಾತೆ ಮಾಡಿಸಿ ಕೊಳ್ಳುವದಕ್ಕೆ ಜನಗಳೇ ಮುಂದೆ ಬರುತ್ತಿಲ್ಲ. ಬಹುಶಃ ಕುಟುಂಬದಲ್ಲಿ ವ್ಯಾಜ್ಯ, ಅಣ್ಣ ತಮ್ಮಂದಿರ ನಡುವೆ ಕಲಹ, ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡುವುದಕ್ಕೆ ತಕರಾರು ಇರಬಹುದು ಆದರೆ ಜನಗಳು ಮುಂದೆ ಬಂದು ಪೌತಿಖಾತೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಸರ್ವೇ ಯಲ್ಲಿ ಡಿಡಿಎಲ್ ಆರ್, ಎಡಿಎಲ್ ಆರ್, ಕೋರ್ಟ್ ಗಳಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 1911 ಕೇಸ್ ಬಾಕಿಯಿದ್ದು, ಬಹಳಷ್ಟು ಕೇಸ್ ಗಳನ್ನು ಇತ್ಯರ್ಥ ಮಾಡಿ 255 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ.

ಕಂದಾಯ ಹಾಗೂ ಕೃಷಿ ಇಲಾಖೆ ವತಿಯಿಂದ ಫ್ರೂಟ್ಸ್ ನ್ನು ಅಪ್ ಡೇಟ್ ಮಾಡಿದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ 38 ರಿಂದ 39 ಲಕ್ಷ ರೈತರಿಗೆ 4200 ಕೋಟಿ ರೂ ಪರಿಹಾರವನ್ನು ರೈತರಿಗೆ ಒದಗಿಸಲಾಗಿದೆ. ಇದು ನೇರವಾಗಿ ರೈತರ ಖಾತೆಗೆ ಹಣ ಪಾವತಿ ಮಾಡುವ ಹಿನ್ನಲೆ ಯಾವುದೇ ಅವ್ಯವಹಾರ ನಡೆಯಲು ಸಾಧ್ಯವಿಲ್ಲ. ಕಳೆದ ಬಾರಿ 28 ಲಕ್ಷ ರೈತರಿಗೆ ಪರಿಹಾರ ಒದಗಿಸಲಾಗಿತ್ತು. ಹೆಚ್ಚು ಜನರಿಗೆ ಪರಿಹಾರ ಒದಗಿದಸಿರುವುದು ಸಹ ಕಂದಾಯ ಇಲಾಖೆಯ ಸಾಧನೆ ಎಂದರು‌.

ಕಂದಾಯ ಇಲಾಖೆಯಿಂದ ಕೆರೆ ಅಥವಾ ಸ್ಮಾಶನ ಒತ್ತುವರಿ ಕುರಿತಂತೆ ಸರ್ವೆ ಮಾಡಿಸಿದ ನಂತರ ತೆರವುಗೊಳಿಸಿದ ನಂತರ ಅವುಗಳನ್ನು ರಕ್ಷಿಸುವುದು ಆಯಾ ಇಲಾಖೆಯ ಕರ್ತವ್ಯವಾಗಿರುತ್ತದೆ. ಸರ್ವೆಯ ನಂತರ ರಕ್ಷಿಸದಿದ್ದಲ್ಲಿ ಕೆರೆ, ಸ್ಮಶಾನ ಒತ್ತುವರಿ – ಸರ್ವೆ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದರು.

ಕೃಷಿಯೇತರ ಜಮೀನುಗಳನ್ನು ಗುರುತಿಸಿ ಅವುಗಳನ್ನು ಭೂಮಿ ಸಾಫ್ಟ್‌ವೇರ್ ನಲ್ಲಿ ಫ್ಲ್ಯಾಗ್ ಮಾಡುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ಮಂಡ್ಯ ಶಾಸಕ ಪಿ. ರವಿಕುಮಾರ್,ಮೇಲುಕೋಟೆ ಶಾಸಕ ದರ್ಶನ ಪುಟ್ಟಣಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಪ್ರಾದೇಶಿಕ ಆಯುಕ್ತೆ ಕವಿತಾ ರಾಜರಾಂ, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಬೆಂಗಳೂರಿನ ಭೂಮಿ ಕೋಶ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಉಪಸ್ಥಿತರಿದ್ದರು.

Continue Reading

Mandya

*ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ : ನ್ಯಾ.ಎಂ.ಡಿ ರೂಪ*

Published

on

*ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ : ನ್ಯಾ.ಎಂ.ಡಿ
ರೂಪ*

ಶ್ರೀರಂಗಪಟ್ಟಣ : ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯನ್ನ ಆಚರಿಸಲಾಗುತ್ತಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಂ.ಡಿ ರೂಪ ಹೇಳಿದರು.

ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ, ತಾಲೂಕು ಆಡಳಿತ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ೨೦೧೧ ರಿಂದ ಪ್ರತಿ ವರ್ಷ ಜ. ೨೫ ರಂದು ದೇಶಾದ್ಯಂತ ರಾಷ್ಟೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಹೊಸ ಮತದಾರರನ್ನು ಸೆಳೆಯುವ, ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್. ಮಹದೇವಪ್ಪ ಮಾತನಾಡಿ, ಭಾರತದ ಚುನಾವಣಾ ಆಯೋಗದ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. “ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ತಿಳುವಳಿಕೆ ನೀಡಲು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನ್ಯಾಯಾಧೀಶರಾದ ಹರೀಶ್‌ಕುಮಾರ್, ಹನುಮಂತ ರಾಯಪ್ಪ, ತಹಸೀಲ್ದಾರ್ ಪರಶುರಾಮ್ ಸತ್ತಿಗೆರಿ, ಬಿಇಒ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ನೌಕರರು, ಕಾಲೇಜು ವಿದ್ಯಾರ್ಥಿಗಳು ಇದ್ದರು.

Continue Reading

Mandya

ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರಿಗೆ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ

Published

on

ಮಂಡ್ಯ : ಚುನಾವಣಾ ಆಯೋಗವು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ 2024-25 ನೇ ಸಾಲಿನ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿಗಳು ಎಂದು ಪ್ರಶಸ್ತಿ ಪ್ರಕಟಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಾನಿತ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಶಸ್ತಿ ನೀಡಿ ಗೌರವಿಸಿದರು

Continue Reading

Mandya

ಜ.29 ರಂದು ನಬಾರ್ಡ್ ನೀತಿ ವಿರೋಧಿಸಿ ಪ್ರತಿಭಟನೆ

Published

on

ಮಂಡ್ಯ: ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ, ಮೈಕ್ರೋ ಫೈನಾನ್ಸ್ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜನವರಿ ೨೯ರ ಬೆಳಿಗ್ಗೆ ೧೧ಗಂಟೆಗೆ ಬೆಂಗೂರಿನ ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಕಾರ ಕಳೆದ ಮೂರು ವರ್ಷದಿಂದ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಿಲೇ ಬಂದಿದ್ದು, ಕಳೆದ ವರ್ಷ ರಾಜ್ಯಕ್ಕೆ ೫೬೦೦ ಕೋಟಿ ನೀಡಲಾಗಿದ್ದ ಸಾಲ ಪ್ರಸಕ್ತ ವರ್ಷಕ್ಕೆ ೨೩೪೦ಕ್ಕೆ ಇಳಿಸಿದೆ ಎಂದು ಆರೋಪಿಸಿದರು.

ರಾಜ್ಯಕ್ಕೆ ನೀಡುವ ಸಾಲದ ಮೊತ್ತವನ್ನು ಶೇ.೫೮ರಷ್ಟು ತಗ್ಗಿಸುವ ಮೂಲಕ ರಾಜ್ಯದ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿದೆ. ರೈತರು ಹೆಚ್ಚು ಬಡ್ಡಿ ತೆತ್ತು ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಿ, ಖಾಸಗಿ ಸಾಲದ ಸುಳಿಗೆ ಸಿಲುಕೊಂಡು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಇದರಿಂದ ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡಲು ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿದ್ದು, ಅವರ ಕಿರುಕುಳದಿಂದ ಗ್ರಾಮೀನ ಪ್ರದೇಶದ ಮಹಿಳೆಯರು ಹಾಗೂ ಇತರೆ ದುಡಿಯುವ ವರ್ಗ ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿಯೂ ಮಹಿಳೆ ಆತ್ಮಹತ್ಯೆಗೆ ಶರಣಾದ ಪ್ರಕರಣ ನಡೆದಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನಡೆಯೇ ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ರೈತರು, ಸ್ವ ಸಹಾಯ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು ಭಾಗವಹಿಸುವಂತೆ ಕರೆ ನೀಡಿದರು.

ಗೋಷ್ಠಿಯಲ್ಲಿ ಬೋರಾಪುರ ಶಂಕರೇಗೌಡ, ಲಿಂಗಪ್ಪಾಜಿ, ಅಣ್ಣಯ್ಯ, ವಿ.ಸಿ.ಉಮೇಶ್, ವಿಜಿಕುಮಾರ್, ಮಂಜು ಇತರರಿದ್ದರು.

Continue Reading

Trending

error: Content is protected !!