Connect with us

Hassan

ಯುವ ಜನಾಂಗವು ಕೈವಾರ ತಾತಯ್ಯ ಚರಿತ್ರೆ ಓದುವ ಕೆಲಸ ಮಾಡಲಿ ಸಂಸದ ಪ್ರಜ್ವಲ್ ರೇವಣ್ಣ ಸಲಹೆ

Published

on

ಹಾಸನ: ಕೈವಾರ ತಾತಯ್ಯ ಅವರ ಚರಿತ್ರೆಯನ್ನು ಯುವಕರು ಓದುವ ಕೆಲಸ ಮಾಡಿ ಅವರ ದಾರಿಯಲ್ಲಿ ನಡೆದರೇ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ಸಲಹೆ ನೀಡಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಕಾರ್ ನಿಲ್ದಾಣದಲ್ಲಿ ಸೋಮವಾರದಂದು ಬೆಳಿಗ್ಗೆ ಬಲಿಜ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಕೈವಾರ ತಾತಯ್ಯ ಜಯಂತಿ ಆಚರಣೆಗಾಗಿ ಬಂದಿದ್ದು, ಅವರ ಪುಸ್ತಕವನ್ನು ಓದಿದಾಗ ಹಲವಾರು ವಿಚಾರ ತಿಳಿದಿದ್ದು, ಬಹಳಷ್ಟು ವಿಚಾರವನ್ನು ಬೆಳಕು ಚೆಲ್ಲುವ ಕೆಲಸ ಮಾಡಿದ್ದೇನೆ. ಅನೇಕರಿಗೆ ತಾತಯ್ಯ ಅವರ ಸಾಧನೆ, ಸಮಾಜಕ್ಕೆ ನ್ಯಾಯ ಕೊಡಿಸುವ ವಿಚಾರ ಗೊತ್ತಿರಲಿಲ್ಲ. ತಿಳಿಸುವ ಕೆಲಸ ಆಗಬೇಕಾಗಿದೆ. ಯುವಕರು ಅವರ ಚರಿತ್ರೆ ಬಗ್ಗೆ ಓದುವ ಕೆಲಸ ಮಾಡಿದರೇ ಸವರ ದಾರಿಯಲ್ಲಿ ನಡೆದು ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು. ೧೧೦ ವರ್ಷ ಬದುಕಿ ಸ್ವಯಂ ಆಗಿ ಸಾವನಪ್ಪಿದರು. ಚಿಕ್ಕ ವಯಸ್ಸಿನಲ್ಲಿಯೇ ಮುನಿಯಮ್ಮ ಅವರನ್ನು ಮದುವೆ ಆಗಿದ್ದರು. ಬಡತನದ ಕುಟುಂಬ ಆಗಿದ್ದರೂ ಸಹ ಮಾಡಿದಂತಹ ಕಾರ್ಯಗಳು ಅಪಾರವಾಗಿದೆ. ಸಾಹಿತಿಯಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಲಿಲ್ಲ. ಹಲವಾರು ವಿಚಾರಗಳಲ್ಲಿ ಅವರು ಯಾವ ರೀತಿ ಸಮಾಜದಲ್ಲಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟ ಪುಣ್ಯ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಜಯಂತಿ ಅಂಗವಾಗಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಇದೆ ವೇಳೆ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಕೆ. ಕಮಲ್ ಕುಮಾರ್, ವರದರಾಜು, ಹರ್ಷಿತ್, ಧರ್ಮ, ಮೂರ್ತಿ, ಹರೀಶ್, ರಮೇಶ್, ಶಿವು ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ನಗರಸಭೆಯಿಂದ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಸ್ತರ

Published

on

ಹಾಸನ: ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಯಾವ ಅಂಗಡಿ ಮಾಲೀಕರು ಜಾಗ ಒತ್ತುವರಿ ಮಾಡಿ ರಸ್ತೆ ಮೇಲೆ ಅಂಗಡಿಯನ್ನು ಇಟುಕೊಂಟಿದ್ದು, ದೂರಿನ ಹಿನ್ನಲೆಯಲ್ಲಿ ಸೋಮವಾರದಂದು ಬೆಳಿಗ್ಗೆ ನಗರಸಭೆವತಿಯಂದ ತೆರವು ಕಾರ್ಯಚರಣೆ ಮಾಡಿದಲ್ಲದೇ ಯಾರಾರು ಸ್ವಚ್ಛತೆ ಇಲ್ಲದೇ ನೀರು ನಿಲ್ಲಲು ಅವಕಾಶ ಮಾಡಿದ್ರೂ ಅಂತವರ ಅಂಗಡಿಯ ಸಾಮಾನುಗಳನ್ನು ತೆರವು ಮಾಡಿದ ಘಟನೆ ನಡೆದಿದೆ.

ವ್ಯಾಪಾರ ಮಾಡಲು ನಗರಸಭೆಯಿಂದ ನೀಡಿರುವ ಜಾಗಕ್ಕಿಂತ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ಓಡಾಡಲು ಮತ್ತು ವಾಹನ ಚಾಲನೆ ಮಾಡುವುದಕ್ಕೆ ಸಮಸ್ಯೆ ಆಗುತ್ತಿತ್ತು. ಈ ಬಗ್ಗೆ ನಗರಸಭೆಗೆ ದೂರುಗಳು ಬಂದ ಹಿನ್ನಲೆಯಲ್ಲಿ ಸೋಮವಾರದಂದು ನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ತೆರವು ಕಾರ್ಯಚರಣೆ ಮಾಡಿದಲ್ಲದೇ ವ್ಯಾಪಾರಸ್ತರಿಗೆ ಎಚ್ಚರಿಕೆ ಕೂಡ ನೀಡಿದರು.

ನಗರಸಭೆ ಪರಿಸರ ಇಂಜಿನಿಯರ್ ವೆಂಕಟೇಶ್ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆಯ ಪೌರಕಾರ್ಮಿಕರು ಹಾಸನದ ಸ್ವಚ್ಛತೆಗೆ ಎಷ್ಟೆ ಪ್ರಯತ್ನ ಮಾಡಿದರೂ ಸಾರ್ವಜನಿಕರ ಸಹಕಾರ ಇಲ್ಲದೇ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಮಳೆ ಹೆಚ್ಚಾಗಿರುವುದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಮಾರ್ಕೇಟ್ ಭಾಗದಲ್ಲಿ ಕಸದ ಯಾರು ಸ್ವಚ್ಛತೆ ನಿರ್ವಹಣೆ ಮಾಡದೇ ಇರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಕಟ್ಟಿನಕೆರೆ ಮಾರ್ಕೇಟ್ ಭಾಗದಲ್ಲಿ ನಗರಸಭೆವತಿಯಿಂದ ಪರಿಶೀಲನೆ ಮಾಡಿದ ವೇಳೆ ಕೊಳೆತು ನಾರುತ್ತಿರುವ ಕಸದ ರಾಶಿ ಹೆಚ್ಚು ಕಂಡು ಬಂದಿದೆ. ಇನ್ನು ಟೈರು ಸೇರಿದಂತೆ ಇತರೆ ವಸ್ತುಳಲ್ಲಿ ನೀರು ಸಂಗ್ರಹವಾಗಲು ಸ್ಥಳ ಇರುವದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ ಎಂದು

ಆತಂಕವ್ಯಕ್ತಪಡಿಸಿದರು. ಈ ಮಾರ್ಕೇಟ್ ನನ್ನು ಸ್ವಚ್ಛತೆ ಮಾಡುವುದರ ಜೊತೆಗೆ ವ್ಯಾಪಾರಸ್ತರು ತಮ್ಮ ಅಂಗಡಿಯನ್ನು ಒತ್ತುವರಿ ಮಾಡಿದ್ದು, ಇದರಿಂದ ಸಾರ್ವಜನಿಕರ ಓಡಟಕ್ಕೆ ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಮನವಿ ಮಾಡಿದರು. ನಗರದ ವಿವಿಧ ಕಡೆ ತಮ್ಮ ಜಾಗಕ್ಕಿಂತ ಹೆಚ್ಚಿನ ಜಾಗವನ್ನು ಅತಿಕ್ರಮ ಮಾಡಿರುವುದು ಕೇಳಿ ಬಂದಿದ್ದು, ನಮಗೆ ಏನಾದರೂ ಕಂಡು ಬಂದರೇ ಯಾವ ರೀತಿಯ ಮುನ್ನೇಚರಿಕ ಕೊಡದೇ ಎಲ್ಲಾವನ್ನು ತೆರವು ಮಾಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದೆ ವೇಳೆ ನಗರಸಭೆ ಆರೋಗ್ಯಾಧಿಕಾರಿ ಆದೀಶ್ ಕುಮಾರ್, ಪ್ರಸಾದ್, ಚೇತನ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Hassan

ವಿಜೃಂಭಣೆಯಿಂದ ನಡೆದ ಶ್ರೀ ಸಾಯಿಬಾಬಾರವರ ಉತ್ಸವ

Published

on

ಹಾಸನ: ಶ್ರೀ ಗುರುಪೂರ್ಣಿಮ ಅಂಗವಾಗಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಕಳೆದ ಒಂದು ವಾರದಿಂದಲೂ ವಿವಿಧ ಕಾರ್ಯಕ್ರಮ ಜರುಗಿದ್ದು, ಸೋಮವಾರದಂದು ಬೆಳಿಗ್ಗೆ ಶ್ರೀ ಸಾಯಿಬಾಬಾರವರ ಉತ್ಸವವು ಆಕರ್ಷಣೆಯ ಹೂವಿನ ಅಲಂಕಾರದೊಂದಿಗೆ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ನಗರದ ಪ್ರಮುಖ ರಾಜಬೀದಿಗಳಲ್ಲಿ ಸಾಗಿತು.

ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಪ್ರತಿ ವರ್ಷದಂತೆ ಇವತ್ತು ಕೂಡ ವಿಜೃಂಭಣೆಯಿಂದ ಶ್ರೀ ಗುರುಪೂರ್ಣಿಮ ಮಹೋತ್ಸವ ನೆರವೇರಿದೆ. ಕಳೆದ ೮ ದಿನಗಳಿಂದಲೂ ಸಾಯಿಬಾಬಾರವರ ಮಂದಿರದಲ್ಲಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ೭ ದಿನಗಳ ಕಾಲ ಬೆಳಗಿನಿಂದ ಮದ್ಯಾಹ್ನದವರೆಗೂ ಶ್ರೀ ಸಾಯಿ ಸಚ್ಚರಿತೆ ಪಾರಾಯಣ. ಪ್ರತಿ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದೆ. ಕೊನೆಯ ದಿವಸದಂದು ಬಾಬಾರವರ ಮಂದಿರದಿಂದ ಆಕರ್ಷಣೆಯ ಉತ್ಸವ ಹೊರಟು ಶ್ರೀ ಶಿರಡಿ ಸಾಯಿ ವೃತ್ತ, ಅರಳೀಕಟ್ಟೆ ವೃತ್ತ,

ಸಹ್ಯಾದ್ರಿ ವೃತ್ತ, ಹಾಸನಾಂಬ ಕಲಾಭವನದ ರಸ್ತೆ ಮೂಲಕ ಸಾಗಿ ಮಹಾವೀರ ವೃತ್ತದಿಂದ ಕಸ್ತೂರ ಬಾ ರಸ್ತೆ, ಸುಭಾಷ್ ಚೌಕ, ಎನ್.ಆರ್. ವೃತ್ತ ಅಲ್ಲಿಂದ ಹಳೆ ಬಸ್ ನಿಲ್ದಾಣ, ಎವಿಕೆ ಕಾಲೇಜು, ಹರ್ಷ ಮಹಲ್ ರಸ್ತೆ, ಸಂಸ್ಕೃತ ಭವನ

(more…)

Continue Reading

Hassan

ಬೀದಿ ನಾಯಿ ಹಿಡಿಯುವ ಕಾರ್ಯಚರಣೆ ಆರಂಭ

Published

on

ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡಿ ಮತ್ತೆ ವಾಪಸ್

 

ಹಾಸನ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರ ಬಹು ಬೇಡಿಕೆಯಾಗಿದ್ದು, ನಗರಸಭೆಯು ಸೋಮವಾರದಿಂದ ನಾಯಿ ಹಿಡಿದು ಶಸ್ತ್ರ ಚಿಕಿತ್ಸೆ ಮೂಲಕ ಸಂತಾನ ಹರಣ ಮತ್ತು ರೇಬಿಸ್ ಲಸಿಕಾ ಕಾರ್ಯಕ್ರಮದ ಕಾರ್ಯಚರಣೆಯನ್ನು ಆರಂಭಿಸಿದರು.

 

ಹಾಸನ ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ನೂರಾರು ಜನರು ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ ಉದಾಹರಣೆ ಕಣ್ಣ ಮುಂದೆ ಇದ್ದು, ನಾಯಿ ಹಾವಳಿ ಕಡಿಮೆ ಮಾಡುವಂತೆ ನಗರಸಭೆ ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಅನೇಕ ಬಾರಿ ದೂರು ನೀಡಲಾಗಿತ್ತು. ಇವನ್ನೆಲ್ಲಾ ಗಮನಿಸಿದ ನಗರಸಭೆ ಅಧಿಕಾರಿಗಳು ನಾಯಿ ಹಿಡಿದು ಮುಂದೆ ಅದರಿಂದ ಸಂತಾನ ಆಗದಂತೆ ಶಸ್ತ್ರ ಚಿಕಿತ್ಸೆ ನೀಡಿ ಮತ್ತೆ ಯಾವ ಜಾಗದಲ್ಲಿ ನಾಯಿ ಹಿಡಿಯಲಾಗಿತ್ತು ಅದೆ ಜಾಗದಲ್ಲಿ ಬಿಡುವ ಕಾರ್ಯವರಣೆ ಸೋಮವಾರದಿಂದ ಸತತವಾಗಿ ನಾಲ್ಕು ತಿಂಗಳ ಕಾಳ ಕಾರ್ಯಚರಣೆ ನಡೆಸಲಿದ್ದಾರೆ. ಮನೆಯಲ್ಲಿ ಯಾರಾದರೂ ನಾಯಿ ಸಾಕಿದ್ದರೇ ಅದನ್ನು ಮನೆಯಲ್ಲೆ ಕಟ್ಟಿ ಹಾಕಿಕೊಳ್ಳಬೇಕು. ಹೊರಗೆ ಬಿಟ್ಟರೇ ಏನಾದರೂ ನಾಯಿ ಹಿಡಿಯುವವರ ಕಣ್ಣಿಗೆ ಬಿದ್ದರೇ ಅದನ್ನು ಹಿಡಿದು ಸಂತಾನ ಆಗದಂತೆ ಶಸ್ತ್ರ ಚಿಕಿತ್ಸೆ ನೀಡುವುದು ಗ್ಯಾರಂಟಿ.

ಪರಿಸರ ಇಲಾಖೆ ಇಂಜಿನಿಯರ್ ವೆಂಕಟೇಶ್ ಮಾಧ್ಯಮದೊಂದಿಗೆ ಮಾತನಾಡಿ, ನಗರಭಿವೃದ್ಧಿ ಇಲಾಖೆ ಮತ್ತು ಪುಷ್ಪಾನು ಇಲಾಖೆ ಜಂಠಿ ಸುತ್ತೂಲೆ ಪ್ರಕಾರ ಬೀದಿ ನಾಯಿಗಳಿಗೆ ಸಂತಾನ ಬಾರದ ರೀತಿ ಶಸ್ತ್ರ ಚಿಕಿತ್ಸೆಯನ್ನು ಹಾಸನ ನಗರಸಭೆವತಿಯಿಂದ ಕಾರ್ಯಚರಣೆ ಮಾಡಲಾಗುತ್ತಿದೆ. ಪ್ರತಿದಿನ ಎಲ್ಲಾ ವಾರ್ಡ್‌ಗಳಲ್ಲಿ ಹಿಡಿದಂತ ನಾಯಿಗಳನ್ನು ಕೈಗಾರಿಕ ಪ್ರದೇಶದಲ್ಲಿ ಶೆಡ್ ಮಾಡಲಾಗಿದ್ದು, ಇಲ್ಲಿ ಆಪರೇಷನ್ ಥಿಯೇಟರ್ ಗಳನ್ನು ಮಾಡಲಾಗಿದೆ. ಆಪರೇಷನ್ ನಂತರ ಆ ನಾಯಿಗಳನ್ನು ಮತ್ತೆ ನಾಯಿಗಳು ಎಲ್ಲಿ ಹಿಡಿಯಲಾಗಿತ್ತು ಅದೆ ಜಾಗಕ್ಕೆ ತಂದು ಬಿಡಲಾಗುವುದು. ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳು ಏನಾದರೂ ಇದ್ದರೇ ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು. ಏನಾದರೂ ಬೀದಿಗೆ ಬಿಡಲಾಗಿದ್ದರೇ ಎಲ್ಲಾವನ್ನು ಹಿಡಿದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದು. ಮುಂದೆ ಯಾವುದೆ ರೀತಿ ತೊಂದರೆ ಆದರೇ ನಗರಸಭೆ ಜವಬ್ಧಾರಿಯಲ್ಲ ಎಂದರು. ನಾಯಿ ಹಿಡಿದು ಶಸ್ತ್ರ ಚಿಕಿತ್ಸೆ ನೀಡುವ ಈ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಾಲ್ಕು ತಿಂಗಳ ಕಾಲ ನಾಯಿ ಹಿಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಟ್ಟು ೨೩೦೦ ನಾಯಿಗಳಿಗೆ ಆಪರೇಷನ್ ಮಾಡಲಾಗುತ್ತಿದ್ದು, ಕಳೆದ ಬಾರಿ ಒಂದು ಸಾವಿರ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಹಿಡಿದ ನಾಯಿಗಳನ್ನು ಆಪರೇಷನ್ ಮಾಡಿದ ಬಗ್ಗೆ ಪೋಟೊ ಸಮೇತ ದಾಖಲೆ ನೀಡಿದ್ದು, ಇದರಲ್ಲಿ ಯಾವ ಅವ್ಯವಹಾರಗಳು ನಡೆದಿರುವುದಿಲ್ಲ. ಹೊರ ಭಾಗದಿಂದ ನಾಯಿಗಳು ವಲಸೆ ಬರುವುದರಿಂದ ನಾಯಿಗಳ ಸಂಖ್ಯೆ ದಿನೆದಿನೆ ಹೆಚ್ಚಾಗಲು ಕಾರಣವಾಗಿದೆ. ನಗರಸಭೆಯ ಬಜೆಟ್ ನಲ್ಲಿ ಅನುಧಾನವನ್ನು ಮೀಸಲಾಗಿಟ್ಟಿದ್ದು, ಇನ್ನು ಮುಂದೆ ನಿರಂತರವಾಗಿ ಪ್ರತಿವರ್ಷ ಇಂತಹ ಕಾರ್ಯಚರಣೆ ಮಾಡಲಾಗುವುದು. ಇದರಿಂದ ನಾಯಿಗಳ ಸಂತಾನ ಕಡಿಮೆ ಮಾಡಲಾಗುವುದು ಎಂದು ಹೇಳಿದರು.

 

ಇದೆ ವೇಳೆ ಆರೋಗ್ಯಾಧಿಕಾರಿಗಳಾದ ಆದೀಶ್, ಪ್ರಸಾದ್, ಚೇತನ್, ಮಂಜುನಾಥ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಹಾಗೂ ನಾಯಿ ಹಿಡಿಯುವವರು ಉಪಸ್ಥಿತರಿದ್ದರು.

Continue Reading

Trending

error: Content is protected !!