Connect with us

Uncategorized

ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್

Published

on

ಬೇಲೂರು: ಕಾಡಾನೆ ಸೆರೆ ಕಾರ್ಯಾಚರಣೆ

ಮೊದಲ‌ ದಿನದ ಕಾರ್ಯಾಚರಣೆ ಯಶಸ್ವಿ

ಸತತ ನಾಲ್ಕು ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿ

ಬೇಲೂರು ತಾಲ್ಲೂಕಿನ, ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಸೆರೆ ಸಿಕ್ಕ ಕಾಡಾನೆ

ಪುಂಡಾನೆಗಳನ್ನು ಗುರುತಿಸಿದ್ದ ಅರಣ್ಯ ಇಲಾಖೆ ಇಟಿಎಫ್‌ ಸಿಬ್ಬಂದಿ

ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು

ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಜೊತೆಗಿದ್ದ ಕಾಡಾನೆ‌ ಜೊತೆ ಓಡಾಡಿದ ಒಂಟಿಸಲಗ

ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿದ ಒಂಟಿಸಲಗ

ಹರಸಾಹಸಪಟ್ಟು ಎರಡು ಕಾಡಾನೆಗಳನ್ನು ಬೇರ್ಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ನಂತರ ಕುಸಿದು ಬಿದ್ದ ಒಂಟಿಸಲಗ

ಕಾಡಾನೆಯನ್ನು ಸೆರೆ ಹಿಡಿದು ಎಳೆದು ತಂದ ಸಾಕಾನೆಗಳು

ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ

Continue Reading

Uncategorized

ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿನ್ನೆಲೆ ಪತ್ನಿ ಮತ್ತು ಸಂಬಂಧಿಕರ ಮೇಲೆ ಹಲ್ಲೆ

Published

on

ಶ್ರೀರಂಗಪಟ್ಟಣ : ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿನ್ನಲೆ ಪತ್ನಿ, ಆಕೆಯ ತಾಯಿ ಹಾಗೂ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ‌.

ತಾಲೂಕಿನ ಪಾಲಹಳ್ಳಿ ಗ್ರಾಮದ ಲೇಟ್ ಈಶ್ವರ್ ರಾವ್ ರವರ ಮಗ ರವಿಕಿರಣ್ ಎಂಬುವವರು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂ್ ದೂರು ದಾಖಲಿಸಿದ್ದಾರೆ.

ನನ್ನ ಅಕ್ಕ ಲಕ್ಷ್ಮಿ ಅವರನ್ನ ಸುಮಾರು 15 ವರ್ಷಗಳ ಹಿಂದೆ, ನಮ್ಮ ಗ್ರಾಮದ ಲೇಟ್ ಬಾಲಚಂದ್ರ ಮತ್ತು ಕೃಷ್ಣವೇಣಿ ರವರ ಮಗ ಶ್ರೀಕಾಂತ್ ಎಂಬುವನಿಗೆ ನಮ್ಮ ಹಿಂದೂ ಸಂಪ್ರಾದಾಯದಂತೆ, ಮದುವೆ ಮಾಡಿರುತ್ತೇವೆ.

ನನ್ನ ಅಕ್ಕ ಮತ್ತು ಶ್ರೀಕಾಂತ್ ಗೆ ಹೇಮಂತ್ ಮತ್ತು ಸುಮಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಸುಮಾಂತ್ ಎಂಬ ಮಗುವಿಗೆ ಬ್ಲಡ್ ಕ್ಯಾನ್ಸರ್ ಇರುತ್ತದೆ.

ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ ಇವರುಗಳು ಈಗ್ಗೆ ಸುಮಾರು 4 ವರ್ಷದ ಹಿಂದೆ ಕೆಲವು ಆಸೆ ಅಮಿಷಗಳಿಗೆ ಒಳಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಅವರ ಧರ್ಮ ಮತ್ತು ಹೆಸರುಗಳನ್ನು ಬದಲಾವಣೆ ಮಾಡಿಕೊಂಡು ಶ್ರೀಕಾಂತ್‌ ರವರು ಜಾನ್ ಮತ್ತು ಅವರ ಅಣ್ಣ ಹರೀಶ್ ಪೀಟರ್ ಮತ್ತು ತಮ್ಮ ಪ್ರಶಾಂತ್ ಡೇವಿಡ್ ಹಾಗೂ ಅವರ ತಾಯಿ ಮೇರಿ ಎಂದು ಬದಲಾವಣೆ ಮಾಡಿಕೊಂಡಿರುತ್ತಾರೆ.

ನಂತರ ನನ್ನ ಅಕ್ಕನಿಗೂ ಸಹ ಕಳೆದ ನಾಲ್ಕುವರ್ಷಗಳಿಂದ ಬಲವಂತವಾಗಿ ಮತಾಂತರವಾಗಲು ಆಸೆ, ಆಮಿಷ ಮತ್ತು ಬೆದರಿಕೆ ಹಾಕುತ್ತಿರುವುದಾಗಿ‌ ಅಕ್ಕನಿಂದ ತಿಳಿದ ನಂತರ ಅವರಿಗೆ ಬುದ್ದಿವಾದ ಹೇಳಿ, ನಮ್ಮ ಅಕ್ಕನಿಗೆ ಬಲವಂತವಾಗಿ ಮತಾಂತರವಾಗಲು ಬೆದರಿಕೆ ಹಾಕಬೇಡಿ ಎಂದು ತಿಳಿ ಹೇಳಿದ್ದೆವು.

ಇದಾದ ಬಳಿಕ ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ಅತ್ತಿಗೆ ನಾಗಿಣಿ, ತಮ್ಮ ಪ್ರಶಾಂತ್ ಹಾಗೂ ಅವರ ತಾಯಿ ಕೃಷ್ಣವೇಣಿ ಈ ಐದು ಮಂದಿ ಸೇರಿಕೊಂಡು ನನ್ನ ಅಕ್ಕನಿಗೆ ತವರು ಮನೆಯಿಂದ ಹಣ ತರಬೇಕು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ನಮಗೆ ತಿಳಿಸಿದ್ದರು. ನನ್ನ ಅಕ್ಕನ ಸಂಸಾರ ಚೆನ್ನಾಗಿರಬೇಕೆಂಬ ಉದ್ದೇಶದಿಂದ ನಾನು ಈಗಾಗಲೇ ಹಲವೆಡೆ ಸಾಲ ಪಡೆದು, ಸುಮಾರು 25 ಲಕ್ಷ ರೈ.ಗಳನ್ನ ನಮ್ಮ ಭಾವನಿಗೆ ಕೊಟ್ಟಿದ್ದೇನೆ.

ನನ್ನಿಂದ ಹಣ ಪಡೆದು ಮಂಟಿಯಲ್ಲಿ ಒಂದು ಚರ್ಚ್ ಕಟ್ಟಿಸಿಕೊಂಡಿರುವ ಅವರು ಹಲವಾರು ಜನರನ್ನ ಮತಾಂತರ ಮಾಡುತ್ತಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನನ್ನ ಅಕ್ಕ ಒಪ್ಪದ ಕಾರಣ, ಈ ಹಿಂದೆ ಪಾಂಡವಪುರ ಟೌನ್ ಹಳೆ ಬಸ್ ಸ್ಟ್ಯಾಂಡ್‌ ನಲ್ಲಿರುವ ಅವರ ಮನೆಯಲ್ಲಿ ಹಲ್ಲೆ ಸಹ ಮಾಡಿದ್ದು ಇವರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ, ನನ್ನ ಅಕ್ಕ ಮನೆ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟು ಹೋಗಿದ್ದರು. ನಮ್ಮ ತಾಯಿ ಶೃತಿ ರವರು ಪಾಂಡವಪುರ ಪೋಲೀಸ್ ಠಾಣೆಗೆ ದೂರು ಸಹ ದಾಖಲಿಸಿದ್ದರು.

ನಂತರ ಕೆ.ಆರ್.ಎಸ್ ಡ್ಯಾಂ ಬಳಿ ಸಿಕ್ಕಿದ್ದು, ಅಕೆಯನ್ನು ಸಮಾಧಾನ ಮಾಡಿಕೊಂಡು ನಮ್ನ ಮನೆಗೆ ಕರೆದುಕೊಂಡು ಬಂದಿದ್ದೆವು. ಏ.12 ರಂದು ಶ್ರೀರಂಗಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರವಿಕುಮಾರ್ ಬಿನ್ ಲೇಟ್ ಗೋವಿಂದಪ್ಪ ಎಂಬುವವರ ಮನೆಯಲ್ಲಿ ರಾಜಿ-ಪಂಚಾಯ್ತಿ ಮಾಡುವ ಸಲುವಾಗಿ ನಾನು, ನನ್ನ ಅಕ್ಕ ಲಕ್ಷ್ಮಿ ಮತ್ತು ನನ್ನ ತಾಯಿ ಶೃತಿರವರನ್ನು ಪೋನ್ ಮಾಡಿ ಕರೆಸಿಕೊಂಡು ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ಅತ್ತಿಗೆ ನಾಗಿಣಿ, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ, ಮತ್ತು ರವಿಕುಮಾರ್ ಅವರ ಮಗ ಸುಬ್ರಹ್ಮಣ್ಯ, ಪ್ರಭಾ ಸಾಗರ ಎಂಬುವವರು ಒಟ್ಟಾಗಿ ಪೂರ್ವಯೋಜಿತವಾಗಿ ನಮ್ಮ ಅಕ್ಕನನ್ನು ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ, ಅಥವಾ ಮತಾಂತರ ಮಾಡಲೇ ಬೇಕೆಂಬ ಉದ್ದೇಶದಿಂದ, ಈಗಾಗಲೇ ಮತಾಂತರವಾಗಿರುವ ರವಿಕುಮಾರು ಮತ್ತು ಆತನ ಅಳಿಯನ ಚಿತಾವಣೆ ಮೇರೆಗೆ, ನನ್ನ ಅಕ್ಕ ಲಕ್ಷ್ಮಿಗೆ ಕಬ್ಬಿಣದ ರಾಡ್‌ ನಿಂದ ತಲೆಗೆ ಶ್ರೀಕಾಂತ್, ಹರೀಶ್ ಮತ್ತು ರವಿಕುಮಾರ್‌ವರವರು ಹೊಡೆದಿರುತ್ತಾರೆ.

ಜೊತೆಗೆ ನಮ್ಮ ತಾಯಿ ಶೃತಿ ರವರಿಗೆ ಕಬ್ಬಿಣದ ರಾಡ್‌ನಿಂದ ಸುಬ್ರಹ್ಮಣ್ಯ ಮತ್ತು ಕೃಷ್ಣವೇಣಿ ಮತ್ತು ನಾಗಿಣಿ ರವರುಗಳು ಬಲವಾಗಿ ಹೊಡೆದಿದ್ದು, ನಾನು ಬಿಡಿಸಲು ಹೋದಾಗ ಹರೀಶ್ ಸುಬ್ರಹ್ಮಣ್ಯ ಮತ್ತು ಪ್ರಭಾ ರವರು ಕಬ್ಬಿಣ ರಾಡ್ ನಿಂದ ನನ್ನ ಬಲಕೈಗೆ ಹೊಡೆದಿರುವುದಾಗಿ ರವಿಕಿರಣ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ಲಕ್ಷ್ಮಿ, ಶೃತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಐಪಿಸಿ ಸಕ್ಷನ್ 109(1), 351(2), ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತಾಂತರ ಘಟನೆ ಬಗ್ಗೆ ರವಿಕಿರಣ್ ಹಿಂದೂ ಸಂಘಟನೆಗೆ ಮಾಹಿತಿ ನೀಡಿದ್ದು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಹಿಂದೂ ಸಂಘಟನೆಗಳ ಮುಖಂಡರು ಆಗಮಿಸಿ, ಹಲ್ಲೆಗೊಳಗಾದವರಿಗೆ ದೈರ್ಯ ಹೇಳಿ. ರವಿಕಿರಣ್ ಜೊತೆಯಲ್ಲಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

Continue Reading

Mysore

ಶ್ರೀಕಂಠೇಶ್ವರ ಸ್ವಾಮಿಯವರು ಗೌತಮ ಪಂಚಮಹಾ ರತೋತ್ಸವ ಹಿನ್ನೆಲೆ, ಶುಕ್ರವಾರ ಕಪಿಲಾ ನದಿಯಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ

Published

on

ನಂಜನಗೂಡು ಏ.11 ಮಹದೇವಸ್ವಾಮಿ ಪಟೇಲ್

ಶ್ರೀಕಂಠೇಶ್ವರ ಸ್ವಾಮಿಯವರು ಗೌತಮ ಪಂಚಮಹಾ ರತೋತ್ಸವ ಹಿನ್ನೆಲೆ, ಶುಕ್ರವಾರ ಕಪಿಲಾ ನದಿಯಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ನೆರವೇರಿತು.

ಇಂದು ಶುಕ್ರ ವಾರ ಸಂಜೆ 7 ಗಂಟೆಗೆ ದೇಗುಲದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ರವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಶ್ರೀಕಂಠಮುಡಿಧಾರಣೆಯಿಂದ ವಿಶೇಷವಾಗಿ ಕಂಗೊಳಿಸುತ್ತಿದ್ದ ಮೂರ್ತಿಯನ್ನು ನೋಡಿ ಸಾವಿರಾರು ಭಕ್ತರು ಪುಳಕಿತರಾದರು. ವಿದ್ಯುತ್ ದೀಪದಿಂದ ಅಲಂಕೃತಗೊಂಡ ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರ ಮೂರ್ತಿಯನ್ನು ಕುಳ್ಳಿರಿಸಿ, ಮೂರು ಸುತ್ತು ಪ್ರದಕ್ಷಣೆ ಮಾಡಲಾಯಿತು. ಸ್ನಾನಘಟ್ಟ ಮತ್ತು ಸೋಪಾನ ಕಟ್ಟೆ ಬಳಿ ಕುಳಿತಿದ್ದ ಸಹಸ್ರಾರು ಭಕ್ತರು ತೆಪ್ಪೋಸ್ತವ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬಾಣ ಬಿರುಸು ಮತ್ತು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ತೆಪ್ಪೋತ್ಸವ ನೋಡಿಕೊಂಡು ತೇರಿಗೆ ಹಣ್ಣುಜವನ ಎಸೆದು ಧೂಪ ಹಾಕಿ ಸಂಭ್ರಮಿಸಿದರು.

ಆರ್.ಪಿ.ರಸ್ತೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಅಂಗಡಿ ಮಾಲೀಕರು ಅನ್ನಸಂತರ್ಪಣೆ , ಭಕ್ತಾದಿಗಳಿಗೆ ಕೊಡಲು ಮುಂದಾದರು.

ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಸೇರಿದಂತೆ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರನ್ನು ಈ ಸಂದರ್ಭದಲ್ಲಿ ನಿಯೋಜನೆ ಮಾಡಲಾಗಿತ್ತು.

Continue Reading

Uncategorized

ವಾಲ್ಮೀಕಿ ನಿಗಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ

Published

on

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಇಡಿ ಮನವಿ ಮಾಡಿತ್ತು. ಅದರಂತೆ ಇಂದು (ಬುಧವಾರ) ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ಮತ್ತೆ ಸಚಿವರಾಗಲು ಕನಸು ಕಾಣುತ್ತಿದ್ದ ನಾಗೇಂದ್ರಗೆ ಬಿಗ್‌ ಶಾಕ್‌ ಎದುರಾಗಿದೆ.

ಸದ್ಯ ಜಾಮೀನು ಪಡೆದು ಹೊರ ಬಂದಿರುವ ನಾಗೇಂದ್ರಗೆ ಈಗ ಮತ್ತೆ ಇಡಿ ಶಾಕ್‌ ಎದುರಾಗಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

Trending

error: Content is protected !!