Chamarajanagar
ಯಳಂದೂರು – ಉದ್ಯೋಗ ಮೇಳ ಕಾರ್ಯಕ್ರಮ
ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಯೋಗ ಕೋಶ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ ಇಂದು ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಯೋ ಕಂಪನಿಯ ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಭಾಗದ ನಿರ್ವಾಹಕರಾದ ಶ್ರೀ ಸೈಯದ್ ಅವರು ಮತ್ತು ಅವರ ಸಹಪಾಠಿಗಳೊಡನೆ ಕಾಲೇಜಿಗೆ ಆಗಮಿಸಿ ಸಂದರ್ಶನಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಮೊದಲು ಮಾರ್ಗದರ್ಶನ ನೀಡಿ ಆನಂತರ ಒಬ್ಬೊಬ್ಬರಾಗಿ ಸಂದರ್ಶನ ನಡೆಸಲಾಯಿತು
ಸಂದರ್ಶನದಲ್ಲಿ ವಿದ್ಯಾರ್ಥಿಗಳು ಮಾತನಾಡುತ್ತಾ ನಮ್ಮಂತಹ ಗ್ರಾಮೀಣ ಭಾಗದ ಕಾಲೇಜಿಗೂ ಜಿಯೋ ಅಂತ ಕಂಪನಿ ಅವಕಾಶ ನೀಡುತ್ತಿರುವುದು ನಮ್ಮ ಖುಷಿಗೆ ಕಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಉದ್ಯೋಗ ಕೋಶದ ಸಂಚಾಲಕರಾದ ಕುಮಾರಿ ದಾಕ್ಷಾಯಿಣಿಯವರು ಮಾತನಾಡುತ್ತಾ ಕಾಲೇಜಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಂಶುಪಾಲರ ಪ್ರಯತ್ನದಿಂದ ಇಂದು ನಮ್ಮ ಕಾಲೇಜಿನಲ್ಲಿ ಬದಲಾವಣೆಯ ಯುಗ ಆರಂಭವಾಗಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಉದ್ಯೋಗ ಕೋಶವನ್ನು ತೆರೆಯಲಾಗಿದ್ದು ಆ ನಿಮಿತ್ತ ಇಂದು ನಮ್ಮ ಕಾಲೇಜಿನ ಪ್ರಾಂಶುಪಾಲರ ಸಹಕಾರ ದೊಂದಿಗೆ ಜಿಯೋ ಕಂಪನಿಯ ಸಂಯುಕ್ತ ಆಶ್ರಯದಲ್ಲಿ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿರುವುದು ನಮಗೆಲ್ಲ ಸಂತಸವನ್ನು ತಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಮಾತನಾಡುತ್ತಾ ಇದು ಮೊದಲ ಪ್ರಯತ್ನವಾಗಿದ್ದು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿ ಯಶಸ್ಸನ್ನು ಪಡೆಯಬೇಕೆಂಬುದು ನಮ್ಮ ಉದ್ದೇಶ ಒಂದು ವೇಳೆ ಆಯ್ಕೆ ಆಗದಿದ್ದರೂ ಇದು ಮೊದಲ ಪ್ರಯತ್ನವಾದ ಕಾರಣ ಮತ್ತಷ್ಟು ನಿಮ್ಮನ್ನು ಸಿದ್ಧಗೊಳಿಸಿ ಉದ್ಯೋಗಕ್ಕೆ ನಿಮ್ಮನ್ನು ಸಜ್ಜುಗೊಳಿಸುವತ್ತ ನಮ್ಮ ಕಾಲೇಜು ನಿರಂತರವಾಗಿ ಪ್ರಯತ್ನಿಸುತ್ತದೆ ಎಂಬ ಭರವಸೆಯ ಮಾತುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಯಾವುದೇ ಒಂದು ಯಶಸ್ಸು ಅಂಕವನ್ನು ನೋಡಿ ಗಳಿಸುವುದಲ್ಲ ಅದಕ್ಕೆ ನಿರಂತರ ಪರಿಶ್ರಮದ ಅಗತ್ಯವಿದೆ ಮೊದಲ ಪ್ರಯತ್ನದಲ್ಲಿ ಸೋಲಾಯಿತು ಎಂಬ ಕಾರಣಕ್ಕೆ ಮತ್ತೆ ಪ್ರಯತ್ನಿಸಿದಿರುವುದು ಮೂರ್ಖತನವಾಗುತ್ತದೆ ಎಂಬ ಮಾತುಗಳನ್ನು ಹೇಳುತ್ತಲೇ ಪ್ರತಿ ಎರಡು ತಿಂಗಳಿಗೊಮ್ಮೆ ಇಂಥ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗುತ್ತದೆ ತಾವೆಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವತ್ತ ಗಮನಹರಿಸಬೇಕು ಅಲ್ಲದೇ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕೂಡ ಈ ಮಾಹಿತಿ ಲಭ್ಯವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು ಗ್ರಾಮೀಣ ಭಾಗದ ಇಂತ ಕಾಲೇಜಿಗೆ ನಮ್ಮ ಕೋರಿಕೆ ಮೇರೆಗೆ ಆಗಮಿಸಿದ ಜಿಯೋ ಕಂಪನಿಯ ನಿರ್ವಾಹಕರಾದ ಶ್ರೀ ಸಯ್ಯದ್ ಅವರನ್ನು ಅಭಿನಂದಿಸಿದ ಪ್ರಾಂಶುಪಾಲರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಮೇಳವನ್ನು ತಮ್ಮ ಕಂಪನಿಯ ಕಡೆಯಿಂದ ಸಂಘಟಿಸಬೇಕೆಂಬ ಕೋರಿಕೆಯನ್ನು ತಿಳಿಸಿದರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಯೋ ಕಂಪನಿಯವರು ಪ್ರತಿ ಎರಡು ತಿಂಗಳಿಗೊಮ್ಮೆ ಈ ತರದ ಪ್ರಯತ್ನವನ್ನು ತಮ್ಮ ಕಾಲೇಜಿನಲ್ಲಿ ನಾವು ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹಾಂತೇಶ್ ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಚೈತನ್ಯವನ್ನು ತುಂಬಿದರು ಕಾಲೇಜಿನ ಗ್ರಂಥಾಲಯದ ಮುಖ್ಯಸ್ಥರಾದ ಅರುಣ್ ರವರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಗ್ರಂಥಾಲಯ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುತ್ತದೆ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದೇವೆ ತಾವು ನಿರಂತರವಾಗಿ ಗ್ರಂಥಾಲಯವನ್ನು ಬಳಸಿಕೊಂಡು ಇಂಥ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ಯಶಸ್ಸನ್ನು ಪಡೆಯಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು
Chamarajanagar
ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಚಾಮರಾಜನಗರ ಜಿಲ್ಲೆಯಲ್ಲಿರುವ ವಿವಿಧ ವಸತಿ ಶಾಲೆಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಹತ್ತಿರದ ವಸತಿ ಶಾಲೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 25ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಯನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
Chamarajanagar
ಮೂರು ಚಕ್ರದ ಸ್ಕೂಟರ್‌ಗೆ ವಿಕಲಚೇತನರಿಂದ ಅರ್ಜಿ ಆಹ್ವಾನ
ಚಾಮರಾಜನಗರ:- ಕೊಳ್ಳೇಗಾಲ ನಗರಸಭೆಯ ೨೦೨೦-೨೧ ಮತ್ತು೨೦೨೧-೨೨ನೇ ಸಾಲಿನ ಎಸ್.ಎಫ್.ಸಿ ಸಾಲಿನ ಶೇ.೫ರ ಅನುಮೋದಿತ ಕ್ರಿಯಾ ಯೋಜನೆಯಂತೆ ಯಂತ್ರಚಾಲಿತ ಕಂಪನಿಯ ಮೂರು ಚಕ್ರದ ಸ್ಕೂಟರ್‌ಗಳನ್ನು ನೀಡಲು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುವ ಶೇ.೭೫ರಷ್ಟು ಮೇಲ್ಪಟ್ಟ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ನಗರಸಭಾ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದೃಢೀಕರಿಸಿ ಜನವರಿ ೩೦ ರೊಳಗೆ ಕಚೇರಿಗೆ ಸಲ್ಲಿಸಬೇಕು.
Chamarajanagar
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ.ನಾಳೆ ನವೋದಯ ಪರೀಕ್ಷೆ
ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ನಡೆದ ನವೋದಯ ಪರೀಕ್ಷೆಯ ಪೂರ್ವ ಸಿದ್ಧತೆಯನ್ನು ಶಿಕ್ಷಕರಿಗೆ ತಿಳಿಸಿದ್ದಾರೆ
ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ರವರು ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಸಲಹೆ ನೀಡಿದರು
ಮಾತನಾಡಿದ ಶಾಖೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ನಮ್ಮ ಶಾಲೆಯಲ್ಲಿ ನಡೆಯುವ ನವೋದಯ ಪರೀಕ್ಷೆಯು ಯಶಸ್ವೀಯಾಗಿ ನಡೆಸಿ ಕೋಡಿ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಶಶಿಧರ, ಮಹೇಶ್ ಕುಮಾರ್, ಪುಟ್ಟರಾಜು, ಹಾಜರಿದ್ದರು,
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech18 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports23 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International24 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore22 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan23 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ