Uncategorized
ಸರ್ವಪಕ್ಷಗಳ ಸಭೆಗೆ ಹೆಚ್ಡಿಕೆ ಗೈರು : ಚಲುವರಾಯಸ್ವಾಮಿ ಕಿಡಿ – ರಾಜಕೀಯ ನಿವೃತ್ತಿ ಘೋಷಣೆಯ ಪಂಥಾಹ್ವಾನ*
ನಾಗಮಂಗಲ: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಅವಧಿಯ ಐದು ವರ್ಷದಲ್ಲಿ ಕಾವೇರಿ ನೀರಿನ ವಿವಾದವನ್ನು ಬಗೆಹರಿಸಿ ಕಾವೇರಿ ನೀರನ್ನ ಸಂಪೂರ್ಣವಾಗಿ ರಾಜ್ಯವೇ ನಿರ್ವಹಿಸುವಂತೆ ಕೇಂದ್ರ ಸರ್ಕಾರದಿಂದ ಆದೇಶ ಮಾಡಿಸಿದ್ದೇ ಆದ್ರೆ ನಾನು ರಾಜಕೀಯ ನಿವೃತ್ತಿ ತಗೊತ್ತಿನಿ. ರಾಜಕೀಯದಿಂದ ದೂರ ಉಳಿದು ಅವರ ಸೇವಕನಾಗಿ ಇರ್ತಿನಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಪಂಥಾಹ್ವಾನ ನೀಡಿದ್ದಾರೆ.
ನಾಗಮಂಗಲದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ಕಾವೇರಿ ನೀರಿನ ವಿಷಯವಾಗಿ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಗೆ ಗೈರಾಗುವ ಮೂಲಕ ಜಿಲ್ಲೆಯ ಜನತೆಗೆ ದ್ರೋಹವೆಸಗಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸಚಿವರಾಗಿ ಅವರು ಸಭೆಗೆ ಬರುವುದು ಬೇಡ. ಮಂಡ್ಯ ಜಿಲ್ಲೆಯ ಸಂಸದರಾಗಿ ಬರಬೇಕಲ್ಲವಾ. ಸಭೆಗೆ ಬರದಿದ್ದಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸಲಹೆಗಳನ್ನು ಹೇಗೆ ನೀಡಲಿದ್ದಾರೆ ಎಂದು ಪ್ರಶ್ನಿಸಿದರು.
ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಸರ್ವಪಕ್ಷಗಳ ಸಭೆಗೆ ಗೈರಾಗಿ ಅವರು ಕೊಡುವ ಗೋಡಂಬಿ ಬಾದಾಮಿ ತಿನ್ನಲು ಬರಬೇಕಿತ್ತ ಎಂಬ ಕುಮಾರಸ್ವಾಮಿ ಅವರ ಸ್ಪಷ್ಟನೆಯನ್ನು ಜಿಲ್ಲೆಯ ಜನತೆ ಒಪ್ಪತಕ್ಕಧ್ದಲ್ಲಿ. ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನ ಕೊಡುವುದು ಜವಾಬ್ದಾರಿಯುತ ಸಂಸದರ ಕರ್ತವ್ಯ ಎಂದರು.
ಇದೀಗ ವಿಶ್ವೇರಸ್ವರಯ್ಯ ನಾಲೆ(ವಿಸಿ) ಆಧುನೀಕರಣವಾಗುತ್ತಿದ್ದು, ನಾಗೇಗೌಡರ ಕಾಲದಲ್ಲಿ
ಅದಾದ ನಂತರ ಪೂರ್ತಿ ನಾಲೆ ಆಧುನೀಕರಣವಾಗಿದ್ದು ನಮ್ಮಕಾಲದಲ್ಲಿ. ಆದ್ರೆ ನಾಲೆ ಆಧುನೀಕರಣದ ಕೆಲಸವನ್ನ ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳಲಿಲ್ಲ. ಆಗ ನಾವು ನೀರು ಬಿಟ್ಟಿದ್ದರೂ ನೀರು ಕೊನೆ ಭಾಗಕ್ಕೆ ತಲುಪಿತ್ತಿರಲಿಲ್ಲ. ಮತ್ತೊಂದು ಕಡೆ ನಾಲೆ ಆಧುನೀಕರಣದ ಕೆಲಸವೂ ಆಗ್ತಿರಲಿಲ್ಲ. ಆದ್ರೆ ಈಗ ನಾಲೆಗೆ ನೀರು ಬಿಟ್ಟ 24 ಗಂಟೆಯಲ್ಲೇ ಮಳವಳ್ಳಿಯ ಕೊನೆ ಭಾಗಕ್ಕೆ ನೀರು ಹೋಗಿದೆ ಎಂದರು.
ನಮಗೆ ಪ್ರತೀ ವರ್ಷ ನೀರು ಇರಲಿ ಇಲ್ಲದಿರಲಿ, ಜುಲೈ ಕೊನೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಾಲೆಗೆ ನೀರು ಬಿಡಲಾಗ್ತಿತ್ತು.
ಆದ್ರೆ ನೀವು ಮಾಧ್ಯದವರೂ ನಮ್ಮ ವಿರುದ್ದ ಬರೆದ್ರಿ. ನೀರು ಬಿಡಿ ಎಂದ್ರಿ.
ಸುಳ್ಳು ಬರೆಯಲು ಹಿತ ಎನ್ನಿಸುತ್ತೆ.
ಈಗ ಸರ್ಕಾರ ತೀರ್ಮಾನ ತೆಗೆದುಕೊಂಡು ಇದೇ 10 ರಿಂದ ನಾಲೆಗೆ ನೀರು ಬಿಡಲಾಗಿದೆ.
ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಪ್ರತೀನಿತ್ಯ 1 ಟಿಎಂಸಿ ನೀರು ಬಿಡಲು ಸೂಚನೆ ಕೊಟ್ಟಿತ್ತು. ಈ ಸಂಬಂಧ ಚರ್ಚಿಸಲು ನಾವು ಕಳದ ಭಾನುವಾರ ಸರ್ವಪಕ್ಷ ಸಭೆ ಕರೆದೆವು. ಆ ಸಭೆಯಲ್ಲಿ ಸಮಿತಿಯ ಸೂಚನೆ ವಿರುದ್ದ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಯ್ತು. ಈ ತಿಂಗಳ ಕೊನೆವರೆಗೆ ನಾವು ನೀರು ಬಿಡೊ ಬಗೆಗೆ ಏನೂ ಹೇಳಲಾಗಲ್ಲ ಎಂದು ತಿಳಿಸಿದ್ದೇವೆ. ಇಷ್ಟಾದರೂ ವಿರೋಧ ಪಕ್ಷದವರು ಮಾತಾಡ್ತಾರೆ.
ಸದ್ಯ ಕಬಿನಿಯಿಂದಲೇ 30 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗ್ತಿದೆ. ಕೆ ಆರ್ ಎಸ್ ಡ್ಯಾಂ ಗೆ 35 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ನಾವು ಕೆಆರ್ ಎಸ್ ನಿಂದ ತಮಿಳುನಾಡಿಗೆ ಅಣೆಕಟ್ಟೆ ಭರ್ತಿಯಾಗುವವರೆಗೂ ನೀರು ಬಿಡಲ್ಲ. ಡ್ಯಾಂ ನ ನೀರಿನ ಮಟ್ಟ ಸಂಜೆ ನಾಲ್ಕು ಗಂಟೆಗೆ 111 ಅಡಿ ಮುಟ್ಟಿದೆ. ಪ್ರಸ್ತುತ ಮಳೆ ಏನಾದ್ರು ನಿಂತರೆ ಡ್ಯಾಂ ನ ಮಟ್ಟ 115 ಅಡಿಗೆ ನಿಲ್ಲಬಹುದು ಎಂದರು.
ಜಿಲ್ಲೆಯ ರೈತರು ಮೊದಲ ಬೆಳೆಯಾಗಿ ಭತ್ತ ಅಥವಾ ಕಬ್ಬನ್ನ ನಾಟಿ ಮಾಡಬಹುದು. ಮೊದಲ ಬೆಳೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ. ಜಿಲ್ಲೆಯ ಜನರು ಒಂದು ಬೆಳೆ ಬೆಳೆಯಲು ಕಟ್ಟು ನಿಟ್ಟಿನ ರೀತಿಯಲ್ಲಿ ನೀರು ಬಿಡಲಾಗುವುದಿಲ್ಲ ಎಂದರು.
ಇದೇ ವೇಳೆ ಮಾಜಿ ಸಚಿವರ ಪತ್ರಿಕಾ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಸಚಿವ ಸಲುವರಾಯಸ್ವಾಮಿ, ಅವರು ಎಷ್ಟು ಸಲ ಶಾಸಕರಾಗಿದ್ದರು, ಎಷ್ಟು ಸಲ ಸಂಸದರಾಗಿದ್ದರು, ಎಷ್ಟು ಸಲ ಮಂತ್ರಿಯಾಗಿದ್ದರು ಎಂಬುದು ನನಗೆ ಚೆನ್ನಾಗಿ ತಿಳಿದಿದೆ.
ಅವರು ಒಮ್ಮೆ ಅವರ ಬೆನ್ನನ್ನು ಸ್ವಲ್ಪ ತಿರುಗಿ ನೋಡಿಕೊಳ್ಳಲಿ. ಅವರು ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ತ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದರು. ಯಾಕೆ ಭೇಟಿ ಮಾಡಿದ್ದರು. ಯಾರ್ಯಾರನ್ನು ಕರೆತಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಹಿಂಗಿತ ವ್ಯಕ್ತಪಡಿಸಿದ್ದರು ಎಂಬುದನ್ನು ನೆನೆದು ಮಾತನಾಡಲಿ. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಸ್ವಲ್ಪ ಎಚ್ಚರಿಕೆಯಿಂದ ಇರಲಿ. ನಾನೇನೂ ಮಾತನಾಡಲು ಹೋಗೊಲ್ಲ. ನಮ್ಮ ಶಾಸಕರು ಹಾಗೂ ಕಾರ್ಯಕರ್ತರೇ ಉತ್ತರ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಚಿವರ ಆಪ್ತರು ಉಪಸ್ಥಿತರಿದ್ದರು.
ಕೂ
Uncategorized
ಅ.ಭಾ.ಕ.ಸಾ ಸಮ್ಮೇಳನದ ಯಶಸ್ಸಿಗೆ ಕಾರಣರಾದವರಿಗೆ ನಾಳೆ ಅಭಿನಂಧನಾ ಸಮಾರಂಭ : ಸುರೇಶ್ ಕಂಠಿ
ಅ.ಭಾ.ಕ.ಸಾ ಸಮ್ಮೇಳನದ ಯಶಸ್ಸಿಗೆ ಕಾರಣರಾದವರಿಗೆ ನಾಳೆ ಅಭಿನಂಧನಾ ಸಮಾರಂಭ : ಸುರೇಶ್ ಕಂಠಿ
ಮಂಡ್ಯ: ಜಿಲ್ಲೆಯಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ರೂವಾರಿಗಳಿಗೆ ಮಂಡ್ಯ ಜಿಲ್ಲಾ ನಾಗರೀಕ ಅಭಿನಂದನಾ ಸಮಿತಿ, ನೆಲಯೋಗಿ ಸಮಾಜಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಸುರೇಶ್‌ಕಂಠಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಸಮಾರಂಭವು ಜನವರಿ ೨೬ರ ಸಂಜೆ.೦೬ಕ್ಕೆ ನಗರದ ಬಾಲಕರ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ, ಅಭಿನಂದಿತರನ್ನು ಅಭಿನಂದಿಸುವರು ಎಂದು ಹೇಳಿದರು.
ಅಭಿನಂದಿತರಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಎ.ಬಿ.ರಮೇಶ್‌ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಹೆಚ್.ಟಿ.ಮಂಜು, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ, ಸಮ್ಮೇಳನದ ಸಂಚಾಲಕರಾಗಿದ್ದ ಡಾ.ಮೀರಾ ಶಿವಲಿಂಗಯ್ಯ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ಸಂಚಾಲಕ ಕೆ.ಹೆಚ್.ಲವ, ಕಾಂಗ್ರೆಸ್ ಪರಿಶಿಷ್ಠ ಜಾತಿ ರಾಜ್ಯ ಉಪಾಧ್ಯಕ್ಷ ತಿಬ್ಬನಹಳ್ಳಿ ರಮೇಶ್, ಮುಖಂಡ ಮಹದೇವು, ವೀಣಾ ಶಂಕರ್, ಶ್ರೀಧರ್ ಉಪಸ್ಥಿತರಿದ್ದರು.
Uncategorized
ಸಾಯಿ ಶಂಕರ್ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ದಿನಾಚರಣೆ
ಪೊನ್ನಂಪೇಟೆ : ಪೊನ್ನಂಪೇಟೆ ಸಾಯಿ ಶಂಕರ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ದಿನಾಚರಣೆ ನಡೆಸಲಾಯಿತು. ಕ್ರೀಡಾ ದಿನಾಚರಣೆಯ ಅಧ್ಯಕ್ಷತೆಯನ್ನು ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೊಳೆರ ಝರು ಗಣಪತಿ ವಹಿಸಿದ್ದರು. ನಂತರ ಅಧ್ಯಕ್ಷೀಯ ನುಡಿಯಾಡಿದ ಅವರು, ಕ್ರೀಡೆಗಳು ಸಣ್ಣಪ್ರಾಯದಲ್ಲೇ ಶಾಲಾ ವಾತಾವರಣದಲ್ಲಿ ಮಕ್ಕಳಲ್ಲಿ ಅನ್ಯೂನತೆಯನ್ನು ಬೆಳೆಸಿ ಸಹಕಾರ ಮನೋಭಾವನೆಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಯಿ ಶಂಕರ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕವಾದ ಕವಾಯತ್ತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಸಾಯಿ ಶಂಕರ್ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ರಮ್ಯ, ಮುಖ್ಯೋಪಾಧ್ಯಾಯನಿ ನಿವ್ಯ, ರೀನಾ ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಕಿ ಮಾಲಾ ಸ್ವಾಗತಿಸಿ ಬಿ .ಇಡಿ ಕಾಲೇಜಿನ ಪ್ರಾಂಶುಪಾಲ ಪಿ.ಎ ನಾರಾಯಣ ವಂದಿಸಿದರು. ಸಂಸ್ಥೆಯ ಶಿಕ್ಷಕಿ ಭವಾನಿ ಮತ್ತು ರೇಷ್ಮಾ ನಿರೂಪಿಸಿದರು.
Uncategorized
ಅಕ್ರಮ ಬಾಂಗ್ಲಾ ವಲಸಿಗರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಠವಾಗುವ ಸಾಧ್ಯತೆ: ಕವನ್ ಗೌಡ
ಹಾಸನ: ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ವಕೀಲ ಕವನ್ ಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತಾಡಿದ ಅವರು, ಆಲೂರು, ಸಕಲೇಶಪುರ, ಬೇಲೂರು ಸೇರಿದಂತೆ ಮಲೆನಾಡಿನ ವಿವಿದೆಡೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ಬಂದು ಇಲ್ಲೇ ಬಾಡಿಗೆ ಮನೆ ಪಡೆದು ವ್ಯಾಪಾರ ವಹಿವಾಟುಗಳನ್ನು ಪಡೆದುಕೊಂಡು ಹಂತಃ ಹಂತವಾಗಿ ಆಧಾರ್ ಕಾರ್ಡ್, ಓಟರ್ ಐಡಿ ಪಡೆದು ಭಾರತ ದೇಶದ ಪ್ರಜೆಯಾಗಿ ಇಲ್ಲೇ ನೆಲೆಸುವ ತಂತ್ರಗಾರಿಕೆ ನಡೆಯುತ್ತಿದೆ. ಕಾನೂನು ಪ್ರಕಾರ ವಿದೇಶಿಗರಿಗೆ ಭಾರತ ದೇಶದಲ್ಲಿ ನೆಲೆಸಲು ಅವಕಾಶ ಇಲ್ಲ, ಆದರೂ ನುಸುಳು ಕೋರರು ಈಗಾಗಲೇ ಒಳ ನುಸುಳಿದ್ದಾರೆ, ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ಅವರ ಬಗ್ಗೆ ತನಿಖೆ ನಡೆಸಿ ಅಗತ್ಯ ದಾಖಲೆಗಳು ಇಲ್ಲದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ದೇಶಿಯರಿಗೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದರು.
ವಲಸಿಗರು ಈಗಾಗಲೇ ಬಾಡಿಗೆ ಮನೆ ಪಡೆದುಕೊಂಡು ಕರಾರು ಪತ್ರ ಪಡೆದುಕೊಂಡು ಹಂತ ಹಂತವಾಗಿ ಭಾರತೀಯ ಪ್ರಜೆಯಾಗಿ ಉಳಿಯುವ ಒಳಸಂಚು ನಡೆದಿದೆ, ಇದನ್ನು ನಿರ್ಲಕ್ಷ್ಯ ಮಾಡುವುದು ಬೇಡ ಮುಂದಿನ ದಿನಗಳಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಅಕ್ರಮ ಬಾಂಗ್ಲಾ ವಲಸಿಗರು ಕಂಟಕ ವಾಗಲಿದ್ದಾರೆ ಈ ಬಗ್ಗೆ ಎಚ್ಚರ ಅಗತ್ಯವಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ಕಾಫಿ ಬೆಳೆಗಾರರು ಹಾಗೂ ಪೊಲೀಸ್ ಇಲಾಖೆಯ ಬಹುದೊಡ್ಡ ಜವಾಬ್ದಾರಿ ಇದೆ, ಆರಂಭದಲ್ಲಿಯೆ ಮುಂದಾಗಬಹುದಾದ ಅನಾಹುತಗಳಿಗೆ ಕಡಿವಾಣ ಹಾಕದಿದ್ದರೆ. ಭಾರತೀಯ ಪ್ರಜೆಗಳಿಗೆ ಸಮಸ್ಯೆ ಅಗಳಿವೆ ಜೊತೆಗೆ ದೇಶೀಯ ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ಕಿತ್ತುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಇದೆ ರೀತಿಯ ಸಮಸ್ಯೆ ಉಂಟಾದಾಗ ಅಲ್ಲಿನ ಎಸ್ಪಿ ಎಚ್ಚೆತ್ತುಕೊಂಡು ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಹಾಸನಲ್ಲಿ ಕೂಡ ಸ್ಥಳೀಯ ಪೊಲೀಸ್ ಠಾಣೆ ಹಂತದಲ್ಲಿ ಅವರ ದಾಖಲೆ ಪರಿಶೀಲನೆ ಮಾಡುವ ಕೆಲಸಗಳು ಆಗಬೇಕಿದೆ ಎಂದು ಸಲಹೆ ನೀಡಿದರು.
-
Mysore19 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu20 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Mysore16 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu17 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
Kodagu20 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Kodagu15 hours ago
ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ
-
Hassan14 hours ago
ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ
-
Mysore15 hours ago
ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು