Connect with us

Hassan

ಜಿಲ್ಲಾ ಪತ್ರಕರ್ತರ ಸಂಘದ ಮುಂದಿನ ಅಧ್ಯಕ್ಷರಾಗಿ ಕೆ.ಹೆಚ್. ವೇಣುಕುಮಾರ್ ಅಧಿಕಾರ ಸ್ವೀಕಾರ

Published

on

ಹಾಸನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಅವದಿ ನಿಗಧಿಯಂತೆ ಮುಂದಿನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕೆ.ಹೆಚ್. ವೇಣುಕುಮಾರ್ ಅವರಿಗೆ ಬುಧವಾರದಂದು ಬೆಳಿಗ್ಗೆ ಅಧಿಕಾರ ಹಸ್ತಾಂತರಿಸಿದರು,. ಇದೆ ವೇಳೆ ಮೈಸೂರು ಪೇಟ ತೊಡಿಸಿ ಹೂವಿನ ಹಾರ ಹಾಕುವುದರ ಮೂಲಕ ಅಭಿನಂದಿಸಿದರು.

ಅಧಿಕಾರ ಸ್ವೀಕರಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಮಾತನಾಡಿ, ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಬಾಳ್ಳುಗೋಪಾಲಣ್ಣರವರು ಮುಂದಿನ ಅವಧಿಗೆ ತಮ್ಮ ಸ್ಥಾನವನ್ನು ನನಗೆ ವಹಿಸಿಕೊಟ್ಟಿದ್ದಾರೆ. ಈ ಸ್ಥಾನಕ್ಕೆ ಅನುವು ಮಾಡಿಕೊಟ್ಟ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು, ಮಾರ್ಗದರ್ಶಕರಾದ ಮದನ್ ಗೌಡರು ರವಿನಾಕಲಗೂಡು ಸೇರಿದಂತೆ ಎಲ್ಲಾ ಮಾಜಿ ಅಧ್ಯಕ್ಷರು ಹಾಗೂ ಎಲ್ಲಾ ಮಿತ್ರರಾದ ಪತ್ರಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದುವರೆಗೂ ಪತ್ರಕರ್ತರ ಸಂಘದಲ್ಲಿ ನಡೆದು ಬಂದಿದಂತೆ ಅದೆ ದಾರಿಯಲ್ಲಿ ಪತ್ರಕರ್ತರ ಭವಿಷ್ಯದಲ್ಲಿ ಏಳಿಗಾಗಿ, ಕ್ಷೇಮಾಭಿವೃದ್ಧಿಗಾಗಿ ನಾನು ಸದಾ ಸಂಘದ ಒಳಿತಾಗಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ. ಸಂಘದ ಎಲ್ಲಾರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮುನ್ನೆಡಿಸಿಕೊಂಡು ಹೋಗೋಣ. ಈ ಸಂಘದಲ್ಲಿ ಯಾರು ಮೇಲು, ಕೆಳೆ ಎಂದುಕೊಳ್ಳದೇ ಸಮನಾಗಿ ಹೋಗುವುದಾಗಿ ವಿಶ್ವಾಸವ್ಯಕ್ತಪಡಿಸಿದರು.

ಹಿಂದಿನ ಅವಧಿಯ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಳ್ಳುಗೋಪಾಲ್ ಮಾತನಾಡಿ, ಕಳೆದ ಎರಡು ವರ್ಷಗಳ ಕಾಲ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಸಂಘಕ್ಕೆ ಕಪ್ಪು ಚುಕ್ಕಿ ಬಾರದಾಗೆ ನಡೆದುಕೊಂಡಿದ್ದು, ಇದಕ್ಕೆ ಎಲ್ಲಾರು ಸಹಕಾರ ಕೊಟ್ಟಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ಸಹಕಾರ ನೀಡಿದಂತೆ ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆ ನಡೆಸಲು ನೂತನ ಅಧ್ಯಕ್ಷರಿಗೂ ಕೂಡ ಸಹಕಾರ ನೀಡಬೇಕೆಂದು ಕೋರಿದರು. ವಯಕ್ತಿಕ ವಿಚಾರವನ್ನು ಸಂಘದಲ್ಲಿ ತರಬೇಡಿ. ಸಂಘದ ಚೌಕಟ್ಟಿನಲ್ಲಿ ಇರಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಬೇಕು. ಈ ಭೂಮಿ ಮೇಲೆ ಸಾವಿರಾರು ಸಂಘಗಳಿದ್ದು, ಅದರಲ್ಲಿ ನಮ್ಮದು ಪತ್ರಿಕಾ ಸಂಘ. ಸಮಾಜ ತಿದ್ದುವ ಸಂಘ. ಸಂಘದ ಅಧ್ಯಕ್ಷರಿಗೆ ಬೆಲೆ ಕೊಟ್ಟಷ್ಟು ಸಂಘಕ್ಕೆ ಮತ್ತು ನಮಗೆ ಬೆಲೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು

ರಾಜ್ಯ ಕಾರ‍್ಯನಿರತ ಪತ್ರಕರ್ತರ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ಮದನ್ ಗೌಡ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಹಿರಿಯರು ಬಾಳ್ಳುಗೋಪಾಲ್ ಅವರು ತಮ್ಮ ಅವಧಿಯನ್ನು ಪೂರೈಸಿದ್ದಾರೆ. ಹಿಂದೆ ಇದೆ ಸಭಾಂಗಣದಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ತೀರ್ಮಾನದಂತೆ ಸಮ್ಮತಿವ್ಯಕ್ತಪಡಿಸಿ ಅವರ ಮಾತಿಗೆ ಗೌರವ ಕೊಟ್ಟು ಜಿಲ್ಲಾಧ್ಯಕ್ಷರಾದ ಬಾಳ್ಳುಗೋಪಾಲ್ ಅವರು ೨೦೨೪ ಮೇ ತಿಂಗಳಲ್ಲಿ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದಂತೆ ತಮ್ಮ ಅಧಿಕಾರವನ್ನು ಉಪಾಧ್ಯಕ್ಷರಾಗಿದಂತಹ ಕೆ.ಹೆಚ್. ವೇಣುಕುಮಾರ್ ಅವರಿಗೆ ಅಧ್ಯಕ್ಷ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ ಎಂದರು. ಹಿರಿಯರಾದ ಬಾಳ್ಳುಗೋಪಾಲ್ ಅವಧಿಯಲ್ಲಿ ಒಳ್ಳೆಯ ಕಾರ್ಯಕ್ರಮವನ್ನು ಮಾಡಿ ಕಿರಿಯ ಪತ್ರಕರ್ತರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಹಾಸನದಲ್ಲಿ ನಡೆದ ಮೂರು ಜಿಲ್ಲೆಗಳ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಹಮ್ಮಿಕೊಂಡು ವಿದೇಶಿಯಲ್ಲಿರುವ ಪತ್ರಕರ್ತರನ್ನು ಮೊದಲ ಬಾರಿಗೆ ಕರೆಯಿಸಿ ಸಂಘಟನೆ ಮಾಡಿದವರು. ಎನ್ನುವ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನು ಜಿಲ್ಲಾ ಪತ್ರಕರ್ತರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಕೆ.ಹೆಚ್. ವೇಣುಕುಮಾರ್ ಕೂಡ ಕ್ರಿಯಾಶೀಲ ಪತ್ರಕರ್ತನಾಗಿದ್ದು, ಬಹಳ ವರ್ಷಗಳಿಂದಲೂ ಪತ್ರಕರ್ತರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ ವೇಳೆ ಅವಿರೋಧವಾಗಿ ಅಧ್ಯಕ್ಷ ಸ್ಥಾನವನು ಆಯ್ಕೆ ಮಾಡಬೇಕೆಂದು ಚರ್ಚೆ ಮಾಡಿ ನಿರ್ಧರಿಸಿದಂತೆ ಚುನಾವಣೆ ಇಲ್ಲದೇ ಬಾಳ್ಳುಗೋಪಾಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳ ಕಾಲ ಎಲ್ಲಾರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡು ಒಳ್ಳೆಯ ಕಾರ್ಯಚಟುವಟಿಕೆ ಮಾಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಿರುವುದಾಗಿ ಶ್ಲಾಘಿಸಿದರು. ಅಧಿಕಾರ ಬಿಟ್ಟುಕೊಟ್ಟ ನಂತರ ಗೋಪಾಲಣ್ಣ ರವರನ್ನು ರಾಜ್ಯ ಕಾರ‍್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಪತ್ರ ಕೂಡ ಸಲ್ಲಿಸಲಾಗಿದೆ. ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಕೂಡ ಅಭಿನಂದಿಸುವುದಾಗಿ ಹೇಳಿದರು.

.ಇದೆ ವೇಳೆ ಇತ್ತಿಚಿಗೆ ಸಾವನಪ್ಪಿದ ಹಿರಿಯ ಪತ್ರಕರ್ತರಾದ ಹೇಮಕುಮಾರ್ ಆಸ್ಪತ್ರೆ ಖರ್ಚು ವೆಚ್ಚ ಭರಿಸುವ ಬಗ್ಗೆ ಕೆಲ ಸಲಹೆ ಸೂಚನೆ ಕೊಡಲಾಯಿತು. ನಂತರ ನೂತನ ಜಿಲ್ಲಾ ಪತ್ರಕರ್ತರ ಸಂಃಘದ ಅಧ್ಯಕ್ಷರಿಗೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮೈಸೂರು ಪೇಟ ತೊಡಿಸಿ ಹೂವಿನ ಹಾರ ಹಾಕಿ ಶುಭ ಹಾರೈಸಿದರು. ಇದೆ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಭೆಯಲ್ಲಿ ರಾಜ್ಯ ಕಾರ‍್ಯಕಾರಣಿ ವಿಶೇಷ ಸದಸ್ಯರಾದ ರವಿನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು, ಸಂಘದ ನಟರಾಜು, ಮೋಹನ್ ಕುಮಾರ್, ಕುಮಾರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ಸಲ್ಲಿಸಿದ್ದ ಅರ್ಜಿ ವಜಾ

Published

on

ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಆದೇಶ ಹೊರಡಿಸಿದ್ದಾರೆ.


ಇದೇ ಕೇಸಿನಲ್ಲಿ ಜೈಲಿಗೆ ಹೋಗಿದ್ದ ಸೂರಜ್:

ಇನ್ನು ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಡಾ.ಸೂರಜ್ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಸೂರಜ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು.
ಈ ಹಿನ್ನೆಲೆ ಸೂರಜ್ ಒಂದು ತಿಂಗಳ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ೨೦೨೪ರ ಜೂನ್ ೨೨ ರಂದು ಸಂತ್ರಸ್ತ ದೂರು ನೀಡಿದ್ದರು. ಇದರ ಆಧಾರದಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು.


ಆರಂಭದಲ್ಲಿ ಹಾಸನ ಜಿಲ್ಲಾ ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಲು ಆಗಮಿಸಿದ್ದರು. ಆದರೆ, ನಂತರ ಅದನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿತ್ತು.

ಅದರಂತೆ, ಜೂನ್ 23 ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು. ಮತ್ತೊಂದೆಡೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವರು ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದರು.

ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, ಐದು ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ರಾಜ್ಯ ಸರ್ಕಾರ, ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.

 

Continue Reading

Hassan

ಗುಡ್ಡಗಾಡು ಓಟ: ಕಲಾ ಕಾಲೇಜು ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Published

on

ಹಾಸನ: ಹಾಸನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಅತ್ಯುತ್ತಮ ಸಾಧನೆ ಮೆರೆದಿದೆ.

ಪುರುಷರ ತಂಡವು ಸತತ ಎರಡನೇ ಬಾರಿ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ಮಹಿಳೆಯರ ತಂಡವು ತಂಡ ಕೂಡ ದ್ವಿತೀಯ ಸ್ಥಾನ ಗಳಿಸಿದೆ.

ಪುರುಷರ ವಿಭಾಗದಲ್ಲಿ ಬಿ.ಕೆ. ಲಕ್ಷ್ಮಣ ತೃತೀಯ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ತಂಡದಲ್ಲಿ ಲಕ್ಷ್ಮಣ ಬಿ.ಕೆ., ಹೇಮಂತ್ ಕುಮಾರ್ ಬಿ.ಜೆ., ಶ್ರೀಜನ್ ಕೆ.ಎಸ್., ಜೀವನ್ ಕುಮಾರ್ ಟಿ.ಎಸ್., ಪ್ರಶಾಂತ್ ಎ.ಆರ್. ಹಾಗೂ ರಕ್ಷಿತ್ ಗೌಡ ಕೆ.ಎನ್. ಭಾಗವಹಿಸಿದ್ದರು.

ಮಹಿಳೆಯರ ತಂಡದಲ್ಲಿ ಬಿಂದುಶ್ರೀ ಜೆ.ಎಸ್., ಭಾವನಾ ಜಿ.ಎಚ್., ತೇಜಸ್ವಿನಿ ಸಿ.ಎಲ್., ಮಾನಸ ಕೆ.ವೈ., ಸಿಂಚನ ಸಿ.ಡಿ. ಮತ್ತು ಮಮತಾ ಎಂ.ಎಲ್. ಸ್ಪರ್ಧಿಸಿದ್ದರು.

ವಿಜೇತ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪವನ್ ಕೆ.ಜೆ. ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಇರ್ಷಾದ್ ಎಂ.ಬಿ., ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಪರೀಕ್ಷಾ ನಿಯಂತ್ರಕ ಡಾ. ಮುರಳೀಧರ ಕೆ.ಡಿ. ಮತ್ತು ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅಭಿನಂದಿಸಿ ಶುಭ ಹಾರೈಸಿದರು.

Continue Reading

Hassan

ಶೀಘ್ರವೇ ಪುರಸಭೆಯ ಹೊಸ ಕಟ್ಟಡದ ̄2ನೇ ಹಂತದ ನಿರ್ಮಾಣ ಕಾಮಗಾರಿಗೆ ಟೆಂಡರ್‌ ಕರೆಯಲಾಗುವುದು: ಸಿ.ಎಂ.ಬಾಲಕೃಷ್ಣ

Published

on

ವರದಿ: ದಯಾನಂದ ಶೆಟ್ಟಿಹಳ್ಳಿ

ಚನ್ನರಾಯಪಟ್ಟಣ: ಪುರಸಭೆಯ ಹೊಸ ಕಟ್ಟಡದ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಸಿ.ಎಂ.ಬಾಲಕೃಷ್ಣ ಹೇಳಿದರು.

ಪಟ್ಟಣದ ನವೋದಯ ವೃತ್ತದಲ್ಲಿ ಎಸ್ಇಪಿ ಯೋಜನೆಯಡಿ 3.25 ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಸಭೆಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ಎಸ್ಇಪಿ ವತಿಯಿಂದ 80 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದ್ದು 2.45 ಕೋಟಿ ರೂ. ಬರಬೇಕಾಗಿದೆ. ಆದರೆ ಈಗಾಗಲೇ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ 20 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಮಾರ್ಚ್ ತಿಂಗಳ ಅಂತ್ಯದೊಳಗೆ ಉದ್ಘಾಟನೆ ಮಾಡಲಿದ್ದು ಎರಡನೇ ಹಂತದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಟೆಂಡರ್ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ವರ್ಷಾಂತ್ಯದಲ್ಲಿ ಅದನ್ನು ಸಹ ಉದ್ಘಾಟನೆಗೊಳಿಸಲಾಗುವುದು ಎಂದು ತಿಳಿಸಿದರು.

ಡಬಲ್ ಲಿಫ್ಟ್ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ವಿದ್ಯುತ್ ಪರಿಕರಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಗುಣಮಟ್ಟದ ಕಾಮಗಾರಿಯಿಂದ ಕಟ್ಟಡವು ನಿರ್ಮಾಣವಾಗಿದೆ. ಇದರಿಂದ ಹೆಚ್ಚು ಅವಧಿ ಬಾಳಿಕೆ ಬರಲಿದೆ ಎಂದರು.

ಟಿಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಅನಿಲ್ ಮರಗೂರು, ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್, ಎಇಇ ರುಕ್ಮಿಣಿ, ಎಇ ಮಂಜಣ್ಣ ಗೌಡ, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಹಾಗೂ ಇತರರು ಇದ್ದರು.

Continue Reading

Trending

error: Content is protected !!