Connect with us

Location

ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತ – ಡಿಕೆಶಿ

Published

on

*ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತ – ಡಿಕೆಶಿ*

ಶ್ರೀರಂಗಪಟ್ಟಣ: ಜೆಡಿಎಸ್ ಇವಾಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು, ಭಾವ ಬಿಜೆಪಿಯಿಂದ, ತಾವು ಹಾಗೂ ತಮ್ಮ ಅಣ್ಣನ ಮಗ ಜೆಡಿಎಸ್ ನಿಂದ ಸ್ಪರ್ಧಿಸುದ್ದಾರೆ. ಇದು ಕುಟುಂಬ ರಾಜಕಾರಣವಲ್ಲವೇ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಮಂಡ್ಯ ಲೋಕಸಭಾ ಕಾಂಗ್ರಸ್ ಅಭ್ಯರ್ಥಿ ವೆಂಕಟರಮಣೇಗೌಡ ಪರವಾಗಿ ಶನಿವಾರ ರಾತ್ರಿ ಪ್ರಚಾರ ನಡೆಸಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಗೆ ಜೆಡಿಎಸ್, ಬಿಜೆಪಿ ಎ ಮತ್ತು ಬಿ ಟೀಮ್ ಒಂದಾಗಿವೆ. ಇಬ್ಬರೂ ಒಂದಾಗಿದ್ದಾರಲ್ಲ, ರಾಜ್ಯದ ಪರವಾಗಿ ಒಂದು ದಿನವಾದರೂ ಧ್ವನಿ ಎತ್ತಿದ್ದಾರಾ?. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರಾ?. ಕಳೆದ ವರ್ಷ ನಡೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಪ್ರಧಾನ ಮಂತ್ರಿಗಳು ಬಂದು ಜೆಡಿಎಸ್ ವಿರುದ್ಧ ಏನು ಮಾತನಾಡಿದ್ದರು?. ಇದು ಕುಟುಂಬದ ಪ್ರೈವೆಟ್ ಲಿಮಿಟೆಡ್ ಎಂದಿದ್ದರು. ಈಗ ಅವರ ಜೊತೆಯೇ ನೆಂಟಸ್ಥನ ಬೆಳೆಸಿದ್ದಾರೆ.

ಈ ಚುನಾವಣೆಯಲ್ಲಿ ಎಚ್‌ಡಿ.ಕುಮಾರಸ್ವಾಮಿ ಅವರಿಗೆ ಸೋಲುವ ಭಯದಿಂದ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಎರಡು ಬಾರಿ ಮುಖ್ಯಮಂತ್ರಿ ಆದರೂ ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು. ಜನ ಅವರನ್ನು ನಂಬಿ ಏಳಕ್ಕೆ ಏಳು ಶಾಸಕರನ್ನು ಕೊಟ್ಟರೂ ಮಂಡ್ಯಕ್ಕೆ ಶೂನ್ಯ ಕೊಡುಗೆ ನೀಡಿದ್ದೀರಿ.

ರಾಜ್ಯ ಸರ್ಕಾರ ಮಾತು ಕೊಟ್ಟಂತೆ 5 ಗ್ಯಾರಂಟಿಗಳನ್ನು ನೀಡುತ್ತಿದೆ. ಅದಕ್ಕೆ ಪ್ರತಿಯಾಗಿ ನೀವು ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದೀರಿ. ಅದಕ್ಕೆ ರಾಜ್ಯ ಮಹಿಳೆಯರು ಗೋಬ್ಯಾಕ್ ಕುಮಾರಸ್ವಾಮಿ ಅಂದರೂ ಇನ್ನು ಬುದ್ದಿ ಬರಲಿಲ್ಲವೇ. ಮಂಡ್ಯದ ಜನ ಅನ್ನದಾತರು, ಈ ರೈತರನ್ನು ಕಾಪಾಡಲು ಮಂಡ್ಯದ ನಾಯಕರು ಹೋರಾಟ ಮಾಡುತ್ತಿದ್ದಾರೆ. ಇಲ್ಲಿನ ಸಕ್ಕರೆ ಕಾರ್ಖಾನೆ ಮುಚ್ಚುತ್ತಿದೆ. ಹೊಸ ಕಾರ್ಖಾನೆ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈಗ ನಮ್ಮ ಸರ್ಕಾರ ಈ ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸಲಿದೆ. ಅದಕ್ಕಾಗಿ ಹಣ ಮೀಸಲಿಟ್ಟಿದೆ. ಇನ್ನು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದೆವು. ಜೆಡಿಎಸ್ ನವರು ಈ ಹೋರಾಟ ಮಾಡಿದರಾ?. ಈಗ ದೇವೇಗೌಡರು ಪ್ರಧಾನಮಂತ್ರಿಗೆ ಮನವಿ ಮಾಡುತ್ತಾರಂತೆ. ನಾವು ಹೋರಾಟ ಮಾಡುವಾಗ ಬೆಂಬಲ ನೀಡದೇ, ಟೀಕೆ ಮಾಡುತ್ತಿದ್ದರು.

ಮಿಸ್ಟರ್ ಕುಮಾರಸ್ವಾಮಿ ನೀವು ರೈತರ ಪರವಾಗಿ ಇಲ್ಲ. ನಿಮ್ಮದು ಕೇವಲ ಖಾಲಿ ಮಾತು. ನ್ಯಾಯಾಲಯದಿಂದ ಆದೇಶ ಸಿಗುತ್ತಿದ್ದಂತೆ ನಮ್ಮ ಸರ್ಕಾರ ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ.

ನಮ್ಮ ಎಐಸಿಸಿ ನಾಯಕರು ಐದು ನ್ಯಾಯ ಯೋಜನೆ ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆ ಮೂಲಕ ವಾರ್ಷಿಕ 1 ಲಕ್ಷ, 25 ಲಕ್ಷದ ವರೆಗೂ ಆರೋಗ್ಯ ವಿಮೆ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷದವರೆಗೆ ಶಿಷ್ಯ ವೇತನ ನೀಡಲಾಗುವುದು. ಈ ಗ್ಯಾರಂಟಿ ಯೋಜನೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಸಹಿ ಹಾಕಿದ್ದಾರೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌ (ಸ್ಠಾರ್ ಚಂದ್ರು)ಗೆ ಮತ ನೀಡಿ ಗೆಲ್ಲಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಎಎಪಿ ಪಕ್ಷದ ವಕೀಲ ಚಂದಗಾಲು ವೆಂಕಟೇಶ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಶಾಸಕ ನರೇಂದ್ರಸ್ವಾಮಿ, ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಮಾದ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಪುರಸಭೆ ಸದಸ್ಯ ಎಂ.ಎಲ್. ದಿನೇಶ್, ತಗ್ಗಳ್ಳಿ ವೆಂಕಟೇಶ್, ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಬೃಹತ್ ಸೇಬು ಹಾಗೂ ಮೋಸಂಬಿ ಹಾರವನ್ನು ಹಾಕುವುದರ ಮೂಲಕ ಡಿ.ಕೆ.ಶಿವಕುಮಾರ್ ರವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Kodagu

ಶಾಲಾ ವಾಹನ ಅಪಘಾತ

Published

on

ವಿರಾಜಪೇಟೆ ಗಾಂಧಿನಗರದ ಕೃಷಿ ಇಲಾಖೆಯ ಮುಂಭಾಗ ತ್ರಿವೇಣಿ ಶಾಲೆಯ ವಾಹನ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. ಬಸ್ ಚಾಲಕ ಅನಾರೋಗ್ಯದಿಂದ ದಿಡೀರನೆ ಕುಸಿದು ಬಿದ್ದ ಪರಿಣಾಮ ನೇರವಾಗಿ ಟ್ರ್ಯಾಕ್ಟರ್ ಹಾಗೂ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು 80 ಮೀಟರ್ ದೂರ

ಎಳೆದುಕೊಂಡು ಹೋಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲು ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಾಗ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಒಂದೇ ಒಂದು ಆಂಬುಲೆನ್ಸ್ ಇಲ್ಲದಿರುವುದು ಗೋಚರಿಸಿದೆ. ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದ್ದು ಕಳೆದ ಎರಡು ತಿಂಗಳ

ಹಿಂದೆ ಬಿಟ್ಟಂಗಾಲದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಇಲ್ಲಿ ತನಕ ತಾಲೂಕು ಆಸ್ಪತ್ರೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ಮತ್ತೊಂದು ಆಂಬುಲೆನ್ಸ್ ಅನ್ನು ದುರಸ್ತಿಗಾಗಿ ಶೋರೂಮ್ ಗೆ ಬಿಟ್ಟು ಕೆಲವು ತಿಂಗಳುಗಳೇ ಕಳೆದರೂ ಇನ್ನು ದುರಸ್ತಿ ಪಡಿಸಿ ಪಡೆದುಕೊಂಡಿಲ್ಲ. ಈ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡ ತಾಲೂಕು ಜೆಡಿಎಸ್

ಅಧ್ಯಕ್ಷರಾದ ಪಿ.ಎ ಮಂಜುನಾಥ್ ಅವರು ತಾಲೂಕು ಆಸ್ಪತ್ರೆಯ ಅವ್ಯವಸ್ಥೆಯ ಬಗೆ ಖಂಡಿಸಿ ಹೇಳಿಕೆ ನೀಡಿದ್ದಾರೆ. ಕೂಡಲೇ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಆಂಬುಲೆನ್ಸ್ ಸೌಕರ್ಯವನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.

Continue Reading

Kodagu

ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

Published

on

ಗೋಣಿಕೊಪ್ಪಲು : ಮಂಗಳವಾರ ಗೋಣಿಕೊಪ್ಪಲು ಪೊನ್ನಂಪೇಟೆ ರಸ್ತೆಯಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಸ್ಕೂಟರಿನ ಹಿಂಬದಿ ಕುಳಿತಿದ್ದ ಗೋಣಿಕೊಪ್ಪಲು ಸಂತ ಥಾಮಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆ


ಬೈಪಾಸ್ ರಸ್ತೆಯಲ್ಲಿ ಯುನೈಟೆಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶ್ರೀಜಾ ಎಂಬುವರ ಪುತ್ರಿಯಾಗಿದ್ದಾಳೆ. ಮೃತಪಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ ರವರ ಮನೆಯಲ್ಲಿ ತಂಗಿ ಟ್ಯೂಷನ್ ಪಡೆಯುತ್ತಿದ್ದ ಅನು ನಿನ್ನೆ ಸ್ಕೂಟರ್ನಲ್ಲಿ ಪ್ರಭಾವತಿಯೊಂದಿಗೆ ಪೊನ್ನಂಪೇಟೆಗೆ ತೆರಳಿ ಹಿಂದಿರುಗುವ ವೇಳೆ ಅವಘಡ ನಡೆದಿದೆ.


ಮಂಗಳವಾರ ಗೋಣಿಕೊಪ್ಪ ಸಮೀಪದ ಅರುವತೊಕ್ಲು ಗ್ರಾಮ ಪಂಚಾಯಿತಿ ಸಮೀಪ ಬೊಲೆರೋ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿಯೊಂದಿಗೆ ಮೃತಪಟ್ಟಿದ್ದರು. ಅನು ಎಂಬುವಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಕೆಯನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ಬೊಲೆರೋ ಜೀಪ್ ಸಂಖ್ಯೆ KA 03 AA 1394

ಗುರುತಿಸಲಾಗಿದ್ದು ಚಾಲಕನನ್ನು ಬಂಧಿಸಲಾಗಿದೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Mysore

ಹಿರಿಯ ರಂಗಕರ್ಮಿ ನ.ರತ್ನ ಇನ್ನಿಲ್ಲ

Published

on

ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.


ಅವರಿಗೆ 89 ವರ್ಷ ವಯಸ್ಸಾಗಿತ್ತು.
ಅವರಿಗೆ ಪುತ್ರ ಅಜಿತ್,‌ ಪುತ್ರಿ ಕವಿತಾರತ್ನ ಇದ್ದಾರೆ.


ಅವರು ರಚಿಸಿದ ‘ಶಾಂತಿ ಕುಟೀರ’ ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ.

Continue Reading

Trending

error: Content is protected !!