Connect with us

Hassan

ಹಾಸನಾಂಬೆ ದೇವಿ ದರ್ಶನ ಪಡೆದ ಜೆಡಿಎಸ್‌ನ ಶಾಸಕರು

Published

on

ಹಾಸನ : ಹಾಸನಾಂಬೆ ದೇವಿ ದರ್ಶನ ಪಡೆದ ಜೆಡಿಎಸ್‌ನ ಶಾಸಕರು

ಹಾಸನಾಂಬೆ ದೇವಿ ದರ್ಶನ ಪಡೆದು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ

ಹಾಸನದಲ್ಲಿ ಹಾಸನಾಂಬೆ ದೇವಿ ಆಶೀರ್ವಾದ ಬೇಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕುಟುಂಬ ಸಮೇತವಾಗಿ ಬಂದಿದ್ದಾರೆ

ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಿ, ಸುಖ, ಸಮೃದ್ದಿ ನೆಲಸಲಿ ಎಂದು ಪ್ರಾರ್ಥಿಸಿದ್ದಾರೆ

ಎಲ್ಲರೂ ಒಟ್ಟಿಗೆ ಸೇರೋಣ ಅಂತ ಹೇಳಿದ್ರು

ನಮ್ಮ ಪಕ್ಷದ ಹದಿನೆಂಟು ಶಾಸಕರು ಭಾಗವಹಿಸಿದ್ದಾರೆ

ಶರಣಗೌಡ ಬರಲು ಆಗಲ್ಲ ಅಂತ ಫೋನ್ ಮಾಡಿದ್ದರು

ಬರಗಾಲ ಸಮಸ್ಯೆ, ಅನುದಾನ ಇಲ್ಲದೆ ಇರುವುದು ಬಗ್ಗೆ ನಿನ್ನೆ ಚರ್ಚೆ ಮಾಡಿದ್ದಾರೆ

ಎಲ್ಲಾ ಶಾಸಕರು ಒಟ್ಟಾಗಿ ಹೋಗಬೇಕು, ಹಾಸನಾಂಬೆ ದೇವಿಯಲ್ಲಿ ಪ್ರಾರ್ಥನೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವು

ಎಚ್‌ಡಿಕೆ ಮತ್ತೊಮ್ಮೆ ಜನತಾದಳ ಅಧ್ಯಕ್ಷರಾಗಿ ಜನರ ಆಶೀರ್ವಾದದಿಂದ ಗೆದ್ದು ಬಂದು ಸಿಎಂ ಆಗಬೇಕು ಎಂದು ಮನವಿ ಮಾಡಿದ್ದೇವೆ

ದೇವೇಗೌಡರಿಗೆ ಉತ್ತಮ ಆರೋಗ್ಯ ಕೊಡಿ ಎಂದು ಬೇಡಿದ್ದೇವೆ

ಮಳೆ ಪ್ರಾರಂಭವಾಗಿದೆ, ನಿರಂತರವಾಗಿ ಬರಲಿ

ಕೆರೆ ಕಟ್ಟೆಗಳು ತುಂಬಲಿ, ಕುಡಿಯುವ ನೀರು ಸಿಗಲಿ

ದೀಪಾವಳಿ ರೀತಿ ಜನತಾದಳ ಪ್ರಜ್ಬಲಿಸುತ್ತೆ

ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯ ನಮಗಿಲ್ಲ

ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಬೇಕಿತ್ತು ಬಂದಿದ್ದೇವೆ

Continue Reading
Click to comment

Leave a Reply

Your email address will not be published. Required fields are marked *

Hassan

ಸಂವಿಧಾನದ ಮೌಲ್ಯಗಳನ್ನು ಉಳಿಸಲು ಮೋದಿ ಸರ್ಕಾರ ಶ್ರಮಿಸುತ್ತಿದೆ: ಲಾಲ್ ಸಿಂಗ್ ಆರ್ಯ

Published

on

ಹಾಸನ: ಪಿಎಂ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆಡಳಿತ ವ್ಯವಸ್ಥೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ ಎಂದು ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿ ಬಳಿಯ ಖಾಸಗಿ ಹೋಟೆಲಿನ ಸಭಾಂಗಣದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿವಸ್ ಹಾಗೂ ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಮಾಜ ಪರ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಸಮಾನ್ಯ ಕೊಡುಗೆಯನ್ನು ಹೃದಯಂಗಮವಾಗಿ ಸ್ಮರಿಸಿದರು. ದಲಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಮಾಜದ ನಿರ್ಗತಿಕ ವರ್ಗಗಳಿಗೆ ನ್ಯಾಯ ಹಾಗೂ ಹಕ್ಕುಗಳನ್ನು ಒದಗಿಸಲು ಅಂಬೇಡ್ಕರ್ ಮಾಡಿದ ಹೋರಾಟವನ್ನು ಅವರು ನೆನೆದು ನಮನ ಸಲ್ಲಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದ ಕೋಟ್ಯಾಂತರ ಜನರಿಗೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತಿದ್ದು, ಸಾಮಾಜಿಕ ನ್ಯಾಯವನ್ನೂ, ಅವಕಾಶಗಳ ಸಮಾನತೆಯನ್ನೂ ಒದಗಿಸಿದೆ ಎಂದು ಹೇಳಿದರು. ನಿರ್ಗತಿಕರಿಗೆ ನ್ಯಾಯ, ಬದುಕಿಲ್ಲದವರಿಗೆ ಗೌರವ, ದುರ್ಬಲರಿಗೆ ಸಾಮಾಜಿಕ ಭದ್ರತೆ ? ಇವುಗಳನ್ನು ಅಂಬೇಡ್ಕರ್ ಕನಸಿನ ಭಾರತಕ್ಕೆ ನೀಡಿದ ಮಹತ್ವದ ದಿಕ್ಕುಗಳು ಎಂದು ಕೊಂಡಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಕನಸು ಕಂಡ ದೇಶವನ್ನು ನಿರ್ಮಿಸಲು ಮೋದಿ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಆರ್ಯ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ಪ್ರಪಂಚದಲ್ಲಿ ಅತ್ಯುನ್ನತ, ಬಲಿಷ್ಠ ಮತ್ತು ಸಮಗ್ರ ಸಂವಿಧಾನವನ್ನು ದೇಶಕ್ಕೆ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕೊಂಡಾಡಿದರು. ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ ಹೀಗೆ ಹಲವು ದೇಶಗಳ ಅಸ್ಥಿರ ಪರಿಸ್ಥಿತಿಯನ್ನು ಉಲ್ಲೇಖಿಸಿ, ಬಲಿಷ್ಠ ಸಂವಿಧಾನ ಒಂದು ರಾಷ್ಟ್ರವನ್ನು ಹೇಗೆ ರಕ್ಷಿಸುತ್ತದೆ ಎಂಬುದಕ್ಕೆ ಭಾರತದ ಉದಾಹರಣೆಯನ್ನು ಅವರು ಮುಂದಿಟ್ಟರು. ಸಂವಿಧಾನ ಬರೆಯುವುದು ಅಷ್ಟೇನೂ ಸುಲಭದ ಕಾರ್ಯವಲ್ಲ ಅಪಮಾನಗಳನ್ನು ಸಹಿಸಿಕೊಂಡು, ನೂರಾರು ಗ್ರಂಥಗಳನ್ನು ಓದಿ, ಅಂಬೇಡ್ಕರ್ ಸಂವಿಧಾನ ರಚಿಸಿದ ಮಹಾನುಭಾವ ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನ ಬರೆಯದೆ ಹೋಗಿದ್ದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುತ್ತಿರಲಿಲ್ಲ ಅಭಿಪ್ರಾಯಪಟ್ಟರು. ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ಸಮಾಜದ ದುರ್ಬಲ ವರ್ಗಗಳಿಗೆ ಅವಕಾಶ ಇವೆಲ್ಲಾ ಬಾಬಾಸಾಹೇಬ್ ನೀಡಿದ ದಾರಿ ಎಂದು ಹೇಳಿದರು.

ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ಅವರು, ದೇಶಕ್ಕೆ ಸಂವಿಧಾನ ಎನ್ನುವ ಅಮೃತ ಕೊಟ್ಟು, ವಿಷವನ್ನು ಕುಡಿದ ವ್ಯಕ್ತಿ ಅಂಬೇಡ್ಕರ್ ಎಂದು ಮೋದಿ ಅವರು ಹೇಳಿದ ಮಾತುಗಳನ್ನು ಸ್ಮರಿಸಿದರು.

ಮಹಿಳೆಯರ ಮೇಲೆ ಅನ್ಯಾಯ, ದಲಿತರ ಮೇಲಿನ ಅವಮಾನ, ಧರ್ಮಾಧಾರಿತ ರಾಜಕೀಯದ ವಿರುದ್ಧ ಅಂಬೇಡ್ಕರ್ ಧೈರ್ಯವಾಗಿ ಧ್ವನಿ ಎತ್ತಿದ ಸಿದ್ಧಾಂತಗಳನ್ನು ಹಂಚಿಕೊಂಡರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿರುವುದು ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರದಲ್ಲಿ ಎಂದು ಅವರು ತಿಳಿಸಿದರು.

ದೇಶದಲ್ಲಿ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ನಡೆದಿವೆ. ಇದರಲ್ಲೇ ಕಾಂಗ್ರೆಸ್ 75 ಬಾರಿ, ಕಾಂಗ್ರೆಸ್‌ಯೇತರ ಸರ್ಕಾರಗಳು 31 ಬಾರಿ ಸಂವಿಧಾನವನ್ನು ಬದಲಿಸಿದವರು. ಆದರೇ ಮೋದಿ ಅಲ್ಲ, ಕಾಂಗ್ರೆಸ್ ಸರ್ಕಾರಗಳು ಎಂದು ಹೇಳಿದರು. ನಿಜವಾದ ಪ್ರಜಾಪ್ರಭುತ್ವ ಉಳಿಸುವವರು ನರೇಂದ್ರ ಮೋದಿ, ಸಂವಿಧಾನ ಪಾಲಿಸುವವರು ಬಿಜೆಪಿ. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿರುವವರು ಮೋದಿ ಎಂದು ಶಾಸಕರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಮೋರ್ಚಾ ಕಾರ್ಯಾಧ್ಯಕ್ಷ ಕುಮಾರ್ ನಾಯಕ್, ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಎಸ್.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಎಸ್.ಡಿ. ಚಂದ್ರು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ, ಉಪಾಧ್ಯಕ್ಷ ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಓಂಕಾರ್, ಪ್ರಶಾಂತ್ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿ ನೀಡಿದರು. ವೇಧವತಿ ದೇಶಗೀತೆ ಹಾಡಿ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸೊಬಗು ನೀಡಿದರು. ಗಿರೀಶ್ ಸ್ವಾಗತಿಸಿದರು.

Continue Reading

Hassan

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ

Published

on

50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,

ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,

*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*

ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,

ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,

ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,

ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,

ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು

Continue Reading

Hassan

MLA ಸಿಮೆಂಟ್ ಮಂಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌: ಕಾನೂನು ಕ್ರಮಕ್ಕೆ ಆಗ್ರಹ

Published

on

ಸಕಲೇಶಪುರ: ಆಲೂರು, ಕಟ್ಟಾಯ -ಸಕಲೇಶಪುರ,ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌ ಮಾಡಿರುವ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲಾಡಳಿತದ ವತಿಯಿಂದ ಶನಿವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಶಾಸಕರು ಅಧಿಕಾರಿಗಳು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು Hassan News ಹಾಸನ್ ನ್ಯೂಸ್ ಫೇಸ್ಬುಕ್ ಪೇಜ್ ನಲ್ಲಿ ಬಿತ್ತರಿಸಲಾಗಿತ್ತು. ಸದರಿ ಪೇಜ್ ನಲ್ಲಿ vasanth kumar ಎಂಬ ಹೆಸರಿನ ಫೇಸ್ ಬುಕ್ ಖಾತೆಯುಳ್ಳ ವ್ಯಕ್ತಿಯು  ಶಾಸಕರ ವಿರುದ್ಧ “ಸಿಮೆಂಟ್ ಮಂಜಣ್ಣ ಹುಟ್ಟು ಕಳ್ಳನ್ ಮಗ” ಎಂದು ಕಾಮೆಂಟ್ ಮಾಡಿದ್ದು ಈ ರೀತಿಯ ಕಾಮೆಂಟ್ ನಿಂದ ಶಾಸಕರ ಘನತೆಗೆ ಧಕ್ಕೆ ಯಾವುದರ ಜೊತೆಗೆ ಕ್ಷೇತ್ರದ ಜನತೆಗೆ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಠಾಣೆಗೆ ಬಾಳ್ಳುಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ. ಎಸ್. ಶಿವಕುಮಾರ್ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಳಗೋಡು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಮುಖಂಡರಾದ ನವೀನ್ ಶೆಟ್ಟಿ. ಕಿಟ್ಟಿ ಪುಟ್ಟರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading

Trending

error: Content is protected !!