Location
ಬಿಜೆಪಿ ಜೆಡಿಎಸ್ ಮೈತ್ರಿಗೆ ಇನ್ನೂ ಫೈನಲ್ ಆಗಿಲ್ಲ. ಆದರೂ ಕಾಂಗ್ರೆಸ್ ನವರು ದೆವ್ವ ಬಂದಂಗೆ ಆಡುತ್ತಿದ್ದಾರೆ ಎಂದು ಶಾಸಕ ಆರ್.ಅಶೋಕ್
ಮೈಸೂರು : ಬಿಜೆಪಿ ಜೆಡಿಎಸ್ ಮೈತ್ರಿಗೆ ಇನ್ನೂ ಫೈನಲ್ ಆಗಿಲ್ಲ. ಆದರೂ ಕಾಂಗ್ರೆಸ್ ನವರು ದೆವ್ವ ಬಂದಂಗೆ ಆಡುತ್ತಿದ್ದಾರೆ ಎಂದು ಶಾಸಕ ಆರ್.ಅಶೋಕ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ದೇವೇಗೌಡರ ಜೊತೆ ಮಾತನಾಡಿರೋದು ನಿಜ.ಇದರ ಬಗ್ಗೆ ದೇವೇಗೌಡರೇ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ನವರು ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್,ಸಚಿವರು ರಿಯಾಕ್ಟ್ ಮಾಡಿದ್ದಾರೆ.ಇನ್ನೂ ಮೈತ್ರಿ ಹೊಂದಾಣಿಕೆ ಫೈನಲ್ ಆಗಿಲ್ಲ. ಆಗಲೇ ಕಾಂಗ್ರೆಸ್ ನವರು ದೆವ್ವ ಬಂದಂಗೆ ಆಡ್ತಿದ್ದಾರೆ ಎಂದರು.
ಪಾರ್ಲಿಮೆಂಟ್ ಚುನಾವಣೆಗೆ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗುತ್ತೆ ಅನ್ನೋ ಭಯದಿಂದ ಮೈ ಮೇಲೆ ದೆವ್ವ ಬಂದಂಗೆ ಆಡ್ತಿದ್ದಾರೆ ಎಂದರು.
ಬಿಜೆಪಿ ಜೆಡಿಎಸ್ ಹೊಂದಾಣಿಕೆಯಾದರೆ ಕಾಂಗ್ರೆಸ್ ಒಂದು ಸೀಟ್ ಗೆಲ್ಲಲಿಕ್ಕೆ ಆಗಲ್ಲ.ಬಿಜೆಪಿ ಜೆಡಿಎಸ್ ಹೊಂದಾಣಿಕೆಯಿಂದ ಭಯ ಇಲ್ಲ ಎಂದ ಮೇಲೆ ಯಾಕೆ ರಿಯಾಕ್ಟ್ ಮಾಡಬೇಕು.ಕಾರ್ಯಕರ್ತರ ಅಭಿಪ್ರಾಯ ಸಹ ಹೊಂದಾಣಿಕೆಯಾದ್ರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
ಆದರೆ ಎಲ್ಲಾ ತೀರ್ಮಾನ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರು.ಸೀಟ್ ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು
Chikmagalur
ಹೀರೆಕೊಳಲೆ ಕೆರೆಗೆ ವರಸಿದ್ಧಿ ವೇಣುಗೋಪಾಲ್ ಬಾಗಿನ ಅರ್ಪಣೆ
ಚಿಕ್ಕಮಗಳೂರು: ನಗರದ ಏಳೆಂಟು ವಾರ್ಡ್‌ಗಳಿಗೆ ಕುಡಿಯುವ ನೀರೊದಗಿಸುವ ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ ಬಾಗಿನ ಅರ್ಪಿಸಲಾಯಿತು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ಇತರರು ಗಂಗಾ ಪೂಜೆ ನೆರವೇರಿಸಿ ಒಟ್ಟಿಗೆ ಬಾಗಿನ ಅರ್ಪಿಸಿದರು.
ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಳೆದ ವರ್ಷ ಬರಗಾಲ ಇದ್ದರೂ ಹಿರೇಕೊಳಲೆ ಮತ್ತು ಅಯ್ಯನ ಕೆರೆ ಕೋಡಿ ಬಿದ್ದಿದ್ದವು. ಭೂಮಿ, ನೀರನ್ನು ಮಾತೆಯರಿಗೆ ಹೋಲಿಸುವ ಪದ್ಧತಿ ಇದ್ದರೆ ಭಾರತದಲ್ಲಿ ಮಾತ್ರ. ಸಧ್ಯದಲ್ಲೇ ಯಗಚಿ ಜಲಾಶಯ ಕೋಡಿ ಬೀಳಲಿದೆ. ಹಿರೇಕೊಳಲೆಯಲ್ಲಿ ಇನ್ನೂ ಹೆಚ್ಚು ನೀರು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ೫೦ ಲಕ್ಷ ರೂ. ವೆಚ್ಚದಲ್ಲಿ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ಇನ್ನೂ ೭೫ ಲಕ್ಷ ರೂ. ಮೊನ್ನೆಯಷ್ಟೆ ಬಿಡುಗಡೆ ಆಗಿದೆ ಎಂದರು.
ನಮ್ಮ ಜಿಲ್ಲೆಯನ್ನು ಅತೀ ಹೆಚ್ಚು ಮಳೆ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಒಳ್ಳೆ, ಮಳೆ, ಬೆಳೆ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪಂಚಭೂತಗಳಿಂದಲೇ ಜಗತ್ತು ಸೃಷ್ಠಿಯಾಗಿದೆ. ಅದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡು ಬದುಕುವುದು ಸನಾತನ ಸಂಸ್ಕೃತಿಯ ಒಂದು ಭಾಗ. ಅದರ ಅಂಗವಾಗಿ ಗಂಗೆಗೆ ಇಂದು ಬಾಗಿನ ಅರ್ಪಿಸಿ ಎಲ್ಲವೂ ನಿನ್ನಿಂದಲೇ ಬಂದಿರುವುದು ಎನ್ನುವ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇವೆ. ಈ ವರ್ಷವೂ ಕೆರೆ ಭರ್ತಿ ಆಗಿದೆ. ಪ್ರತಿ ವರ್ಷವೂ ಸುಖ ಸಂವೃದ್ಧಿ ನೆಲೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಿಂದೆ ಹಿರೇಕೊಳಲೆ ಕೆರೆಯಿಂದ ನೈಸರ್ಗಿಕವಾಗಿ ಇಡೀ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಈ ಕೆರೆಯನ್ನು ಸಂರಕ್ಷಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆದರೆ ಇಂದಿಗೂ ಅರ್ಧ ನಗರಕ್ಕೆ ನೀರು ಕೊಡಲು ಸಾಧ್ಯವಿದೆ. ಕೆರೆಗಳ ನಿರ್ವಹಣೆ ವಿಚಾರದಲ್ಲಿ ಸರ್ಕಾರವೂ ಕಾಳಜಿ ವಹಿಸಬೇಕಿದೆ ಎಂದರು.
ಪ್ರಾಕೃತಿಕವಾಗಿ ಒಂದೇವಾರದಲ್ಲಿ ಇಡೀ ರಾಜ್ಯದ ಎಲ್ಲಾ ಜಲಾಶಯ, ಕೆರೆಗಳಿಗೆ ನೀರು ಹರಿದು ಬಂದೇ ವಾರದಲ್ಲಿ ಚಿತ್ರಣ ಬದಲಾಗಿದೆ. ಇದೆಲ್ಲ ಭಗವಂತನ ಕೃಪೆ, ಪರಿಸರವನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಪ್ರಾಣಿ, ಪಕ್ಷಿ, ಪರಿಸರವನ್ನು ಸಂರಕ್ಷಿಸಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮದ್ ಸಯ್ಯದ್ ಮತ್ತು ಸದಸ್ಯರು, ಆಶ್ರಯ ಸಮಿತಿ ಸದಸ್ಯರುಗಳು, ನಗರಸಭೆ ಸದಸ್ಯರುಗಳು, ಹಿರೇಕೊಳಲೆ ಗ್ರಾ.ಪಂ.ಅಧ್ಯಕ್ಷರು ಇತರರು ಈ ಸಂದರ್ಭದಲ್ಲಿ ಇದ್ದರು
Mysore
ಗುರುವಿನ ಕೃಪೆ ಇಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ: ದತ್ತ ವಿಜಯಾನಂದ ತೀರ್ಥ ಶ್ರೀ
ಮೈಸೂರು, ಜು.21: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ, ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.
ನಮ್ಮ ಗುರಿ ಮುಟ್ಟಲು ಭಕ್ತಿ,ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.
ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನವನ್ನು ನೀಡಿದ್ದಾನೆ, ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು, ಒಂದು ವಜ್ರವನ್ನು ಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ, ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.
ಇಂದು ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳವರು 8,000 ಮಂದಿಯಿಂದ ಗೀತ ಪಠನ ಮಾಡಿಸಿದ್ದಾರೆ, ಇದೊಂದು ಅದ್ಭುತ ಕ್ಷಣ ಈ ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು, ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲ ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು ಅದೇ ಗುರಿ ಆ ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ.
ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ ಹಾಗಾಗಿ ವೇದವ್ಯಾಸರನ್ನು ಮರೆಯಬಾರದು ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ.
ಗುರುಕೃಪೆಯಿಂದ ಅನುಭವ ಬರುತ್ತದೆ ನಮಗೆ ಗುರು ಕೃಪೆ ಸಿಗುತ್ತದೆ ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ.
ಯಾರು ಬೇಕಾದರೂ ಚಾತುರ್ಮಸ್ಯ ವ್ರತ ಮಾಡಬಹುದು ನೀವು ಮಾಡಿ ನಾವೀಗ ಮೈಸೂರಿನಲ್ಲಿ ಮೈಸೂರಿನಲ್ಲೇ ಇಂದಿನಿಂದ ಚಾತುರ್ಮಾಸ್ಯ ವ್ರತ ಕೊಂಡಿದ್ದೇವೆ ನೀವು ಒಂದಲ್ಲ ಒಂದು ಅಂದರೆ ಕ್ಷೀರ ವ್ರತ, ಕ್ಷಾರ ವ್ರತವನ್ನು ಈ ಮಾಸಗಳಲ್ಲಿ ಮಾಡಬಹುದು ಎಂದು ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಇದೇ ವೇಳೆ ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ. ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.
ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀ ವೆಂಕಟೇಶ್ವರ ಸನ್ನಿಧಿ ಮತ್ತು ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ತರಲಾಯಿತು.
ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.
ತದನಂತರ ಸಂಕಲ್ಪ ಮಾಡಿ ಭಕ್ತ ರಿಂದಲೂ ಸಂಕಲ್ಪ ಮಾಡಿಸಿದರು.ಗುರು ಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು.
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ವವವೂ ಕೂಡಾ ನೆರವೇರಿತು.
ರಾಜ್ಯ,ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
Kodagu
ಪಾಲೂರಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಬದಿಯ ಮರದ ಕೊಂಬೆ
ನಾಪೋಕ್ಲು :ನಾಪೋಕ್ಲುವಿನಿಂದ ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯ ಪಾಲೂರು ಗ್ರಾಮದ ಬಳಿಯ ರಸ್ತೆಯ ತಿರುವಿನಲ್ಲಿ ಮರದ ಗೊಂಬೆಯೊಂದು ರಸ್ತೆಗೆ ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿದೆ.
ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ ನಾಪೋಕ್ಲು ಬೆಟ್ಟಗೇರಿ ಮುಖ್ಯರಸ್ತೆಯ ಪಾಲೂರು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಈ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಆದರೆ ಮರ ತೆರವುಗೊಳಿಸುವ ಸಂದರ್ಭ ಪೂರ್ಣ ಪ್ರಮಾಣದಲ್ಲಿ ತೆರೆವುಗೊಳಿಸದೆ ಅರ್ಧದಷ್ಟು ರಸ್ತೆಯಲ್ಲೇ ಬಿಟ್ಟಿದ್ದು ಇದರಿಂದ ವಾಹನ ಸಂಚಾರದ ವೇಳೆ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಹಗಲು ರಾತ್ರಿ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆ ಬದಿಯಲ್ಲಿ ಬಿದ್ದ ಮರದ ಕೊಂಬೆ ರಸ್ತೆಯ ಅರ್ಧಕ್ಕೆ ವಾಲಿಕೊಂಡಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತೆ ಎದ್ದು ಕಾಣುತ್ತಿದೆ.ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತು ಕೊಂಡು ಮರದ ಕೊಂಬೆಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಚಾಲಕರು ಒತ್ತಾಯಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.