Connect with us

Hassan

ಸಂವಿಧಾನ ಜಾಗೃತಿ ಜಾಥ ಪ್ರಯುಕ್ತ ಸರಕಾರಿ ವಸತಿ ಶಾಲೆಗಳ ಮಕ್ಕಳಿಂದ ಮಾಡಲ್ ಪ್ರದರ್ಶನ

Published

on

ಹಾಸನ: ಸಂವಿಧಾನ ಜಾಗೃತಿ ಜಾಥಾ -ರಾಷ್ಟ್ರಮಟ್ಟ ಸಮ್ಮೇಳನದ ಭಾಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ಸಂವಿಧಾನ ಜಾಗೃತಿ ಎಕ್ಸ್-ಪೋ ಮತ್ತು ಪ್ರದರ್ಶನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಲಕ್ಷ್ಮೇಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದವತಿಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಇಂದೀರ ಗಾಂಧಿ ವಸತಿ ಶಾಲೆಗಳ ವಿದ್ಯಾರ್ಥಿಗಳೆ ತಯಾರಿಸಿದ ಮಾಡಲ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉತ್ತಮವಾದ ರೀತಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಮಾಡಲಾಗಿದೆ ಎಂದರು. ಸಂವಿಧಾನದ ಜಾಗೃತಿ ಜಾಥ, ರಾಷ್ಟ್ರಮಟ್ಟದ ಸಮ್ಮೇಳನದ ಅಂಗವಾಗಿ ಎಕ್ಸೋ-ಪೋ ಪ್ರದರ್ಶನಕ್ಕಾಗಿ ಈ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು ೩೭ ಶಾಲೆಗಳು ಭಾಗವಹಿಸಿದ್ದು, ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ಸಂವಿಧಾನ ಪೀಠಿಕೆ, ಎನರ್ಜಿ ಮಾಡಲ್ ಮಾಡಲಾಗಿದ್ದು, ಸಾಮಾಜಿಕ ಸುಸ್ತೀರಗಳು ಸೇರಿದಂತೆ ಹಲವಾರು ಉಪಯುಕ್ತ ಮಾಡಲ್ ಗಳನ್ನು ಮಕ್ಕಳು ಮಾಡಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಚಂದ್ರಶೇಖರ್, ಹಾಸನ ಜಿಲ್ಲಾ ಸಮನ್ವಯಾಧಿಕಾರಿಗಳಾದ ಜಿ.ಪಿ. ರಾಜರವಿಚಂದ್ರನ್, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕರು ನೀಲಕಂಠಪ್ಪ, ಸುಜಲಾ ಪಿಯು ಕಾಲೇಜಿನ ಉಪನ್ಯಾಸಕರಾದ ಮೈತ್ರಿ ಮತ್ತು ಧವನ್, ವಸತಿ ಶಾಲೆಯ ಪ್ರಾಂಶುಪಾಲರುಗಳಾದ ಭಾಗ್ಯಲಕ್ಷ್ಮೀ ಮತ್ತು ಯೋಗೇಶ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾಧ್ಯಕ್ಷರಾದ ಸಿ.ಎನ್. ಉಷಾ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನೆ ಹಾನಿ ಪ್ರದೇಶಕ್ಕೆ ಭೇಟಿ

Published

on

ಹಾಸನ : *ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನು ಪ್ರಯೋಜನ ಆಗಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ*

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆರ್.ಅಶೋಕ್ ತಿರುಗೇಟು

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ

*ಡಿ.ಕೆ.ಶಿವಕುಮಾರ್ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು*

*ಅವರು ಬರಲ್ಲ, ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತಿರಾ, ನೀವಾದರೂ ಬನ್ನಿ*

*ನಿಮಗೆ ಬರುವ ಯೋಗ್ಯತೆ ಇಲ್ಲವಾ, ನೀವು ಬಂದು ಬೇರೆಯವರಿಗೆ ಬುದ್ದಿವಾದ ಹೇಳಿ*

ನೀವು ಕೊಡುತ್ತಿರುವುದು ಎನ್‌ಡಿಆರ್‌ಎಫ್ ಹಣ, ನೀವು ನಯಾಪೈಸೆ ಕೊಟ್ಟಿಲ್ಲ

*ಕುಮಾರಸ್ವಾಮಿ ಬರಲು ರೈಟ್ಸ್ ಇದೆ, ಕೇಳಲು ರೈಟ್ಸ್ ಇದೆ*

ಕುಮಾರಸ್ವಾಮಿ ಕೇಂದ್ರ ಮಂತ್ರಿ ಇದ್ದಾರೆ ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತೆ

ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ

ಕುಮಾರಸ್ವಾಮಿ ಅವರಿಗೆ ಕೈಯಲ್ಲಿ ಆಗಲ್ಲ ಅಂದರೆ ನೀವು ಬಂದು ಕೆಲಸ ಮಾಡಿ

*ಕುಮಾರಸ್ವಾಮಿ ದೇಶ ಎಲ್ಲಾ ಸುತ್ತಬೇಕು, ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಬರುತ್ತಿದ್ದಾರೆ*

ನಿಮಗೆ ಏಕೆ ಬರಲು ಆಗುತ್ತಿಲ್ಲ

*ಸರ್ಕಾರ ಸತ್ತು ಹೋಗಿದೆ, ಸರ್ಕಾರ ಬದುಕಿದ್ದರೆ ತಾನೇ ಏನಾದರೂ ಕೇಳೋದು*

ಸರ್ಕಾರ ಸ್ಕ್ಯಾಂಡಲ್‌ಗಳಿಗೆ ಮುಳುಗಿ ಉತ್ತರ ಕೊಡಲು ಆಗುತ್ತಿಲ್ಲ

*ಸರ್ಕಾರ ಬದುಕಿದೆ ಅಂತ ಮೊದಲು ತೋರಿಸಲಿ*

Continue Reading

Hassan

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ಆರ್.ಅಶೋಕ್

Published

on

 

  1. ಹ್ಹjjHASSAN-BREAKI

ಹಾಸನ : ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ಆರ್.ಅಶೋಕ್

ಸರ್ಕಾರ ಸ್ಕ್ಯಾಂಡಲ್‌ಗಳಲ್ಲಿ ಸಿಲುಕಿಕೊಂಡಿದೆ

ಅದರಿಂದ ಹೊರಬರಲು ಅವರಿಗೆ ಆಗ್ತಿಲ್ಲ, ಅದಕ್ಕೆ ಅದರಲ್ಲಿ ಬ್ಯುಸಿ ಇದ್ದಾರೆ

ನಾನು ರವಿನ್ಯೂ ಮಿನಿಸ್ಟರ್ ಆಗಿ ಮಳೆಹಾನಿಗೆ ತುರ್ತು ಪರಿಹಾರ ನೀಡಿದ್ದೆ

ಇಲ್ಲಿ ಪರಿಹಾರ ಕೊಡಲು ಇನ್ನೂ ಶುರು ಮಾಡಿಲ್ಲ

ಕೇಂದ್ರ ಸರ್ಕಾರ ಕೊಟ್ಟಿರುವ ಹಣವನ್ನು ಇವರು ಕೊಡುತ್ತಿದ್ದಾರೆ

ಕೇಂದ್ರ ಸರ್ಕಾರ ಕೊಟ್ಟಿರುವುದನ್ನು ನೀಡಿ ಕೈಚೆಲ್ಲಿ ಕೂರಬಾರದು

ರಾಜ್ಯ ಸರ್ಕಾರ ಅದಕ್ಕೆ ಹೆಚ್ಚಿನ ಹಣ ಹಾಕಿ ಪರಿಹಾರ ನೀಡಬೇಕು

ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ, ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ

*ಸರ್ಕಾರ ಪಾಪರ್ ಆಗಿದೆ, ಕಳೆದ ಆರೇಳು ತಿಂಗಳಿನಿಂದ ಅದೇ ಸ್ಥಿತಿಯಲ್ಲಿದೆ*

ಈಗ ಗ್ಯಾರೆಂಟಿಗಾಗಿ ಟ್ಯಾಕ್ಸ್ ಆಗ್ತಿದ್ದಾರೆ, ದಲಿತರ ಹಣ ಉಪಯೋಗಿಸಿಕೊಂಡಿದ್ದಾರೆ

ಸರ್ಕಾರದ ಬಳಿ ಹಣ ಇಲ್ಲ

Continue Reading

Hassan

ಕ್ಯಾಮನಹಳ್ಳಿ ಗ್ರಾಮ ಪಂಚಾಂಯ್ತಿ ಬಿಜೆಪಿ ತಕ್ಕೆಗೆ

Published

on

ಸಕಲೇಶಪುರ : ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ ಗ್ರಾಮ ಪಂಚಾಂತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಇಂದು ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಚುನಾವನಣಾಧಿಕಾರಿ ಆದಿತ್ಯ ಅವರ ನೇತೃತ್ವದಲ್ಲಿ ಚುನಾವಣೆ ನೆಡೆದಿದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಏನ್. ಜಿ ಸಚ್ಚಿನ್, ಉಪಾಧ್ಯಕ್ಷರಾಗಿ ಹೆಚ್. ಸಿ ಪೂರ್ಣಿಮಾ ಹರೀಶ್ ಜಂಬರಡಿ ಇವರು ಆಯ್ಕೆಯಾಗಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಸಚ್ಚಿನ್ ಕ್ಯಾಮನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗು ಮೂಲ ಸೌಕರ್ಯಗಳಿಗೆ ಮೊದಲ ಅಧ್ಯತೆ ಕೊಟ್ಟು ಗ್ರಾಮಗಳ ಅಭಿರುದ್ದಿಗೆ ಪ್ರಾಮಾಣಿಕವಾಗಿ ನನ್ನ ಸೇವೆ ಸಲ್ಲಿಸುತ್ತೇನೆ ಎಂದರು.

ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ ತಾಲೋಕು ಅಧ್ಯಕ್ಷರಾದ ಅಶ್ವಥ್ ವಳಲಳ್ಳಿ, ಬಿಜೆಪಿ ಮಾಜಿ ತಾ, ಅಧ್ಯಕ್ಷ ರಾಜ್ ಕುಮಾರ್, ಕೌಶಿಕ್ ಹೆನ್ನೆಲ್ಲಿ, ರಘು ಸಕಲೇಶಪುರ, ಜೆ. ಏನ್ ಚಂದ್ರಶೇಖರ್, ಜಯರಾಜ್, ಜೆ. ಪಿ ಪುನೀತ್, ಧನಂಜಯ್, ಗ್ರಾಮ ಪಂಚಾಂಯ್ತಿ ಸದಸ್ಯರುಗಳಾದ ಆಕಾಶ್ ಹಾದಿಗೆ ಶೋಭಾ, ಪ್ರಿಯ, ಭಾಸ್ಕರ್,ಭವ್ಯ ಸುರೇಂದ್ರ, ಮಣಿಕಂಠ ಹಾಜರಿದ್ದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ವರದಿ
ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ

Continue Reading

Trending

error: Content is protected !!