Connect with us

Hassan

ಬೊಜ್ಜು ನಿಯಂತ್ರಣಕ್ಕಾಗಿ ನಗರದಲ್ಲಿ ವೈದ್ಯರಿಂದ ಜಾಗೃತಿ ಜಾಥ

Published

on

ಹಾಸನ: ನಗರದ ಹೇಮಾವತಿ ಪ್ರತಿಮೆ ಮುಂಬಾಗ ಭಾರತೀಯ ವೈದ್ಯಕೀಯ ಸಂಘ, ಪ್ರಸ್ತೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ಶಿಶು ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬೊಜ್ಜು (ಸ್ಥೂಲಕಾಯ) ಜಾಗೃತಿ ಜಾಥವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು.

ಭಾರತೀಯ ವೈದ್ಯಕೀಯ ಸಂಗದ ಅಧ್ಯಕ್ಷರಾದ ದೇವದಾಸ್ ಮಾಧ್ಯಮದೊಂದಿಗೆ ಮಾತನಾಡಿ, ಇತ್ತಿಚಿನ ಸಮೀಕ್ಷೆ ಪ್ರಕಾರ ಪ್ರಪಂಚಾದ್ಯಂತ ನೂರು ಕೋಟಿ ಜನರಿಗೆ ಬೊಜ್ಜಿನ ಸಮಸ್ಯೆ ಕಂಡು ಬಂದಿದೆ. ಅದರಲ್ಲೂ ಮಕ್ಕಳಲ್ಲೆ ಹೆಚ್ಚು ಕಾಣಿಸುತ್ತಿದೆ. ಭಾರತದಲ್ಲೆ ಒಂದು ಕಾಲ್ ಕೋಟಿ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಂಡು ಬಂದಿದೆ. ೭೫ ಲಕ್ಷ ಜನ ಗಂಡು ಮಕ್ಕಳಿಗೆ ೬೫ ಲಕ್ಷ ಹೆಣ್ಣು ಮಕ್ಕಳಿಗೆ ಶುರುವಾಗಿದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಲ್ಲಿ ಬಹಳ ಬದಲಾವಣೆಯಾಗಿದೆ ಎಂದರು. ಕೋವಿಡ್ ಬಂದ ನಂತರ ಎಲ್ಲಾರು ಸೋಮಾರಿಗಳಾಗಿದ್ದು, ಜಂಕ್ ಫುಡ್ ಸೇವನೆಯಿಂದ ಮತ್ತು ಕಾರ್ವಡಿಟ್ ಡ್ರಿಂಕ್ ಕುಡಿಯುವುದರಿಂದ ಮಕ್ಕಳ ದೇಹದಲ್ಲಿ ಬಾರ ಹೆಚ್ಚು ಕಾಣುತ್ತಿದೆ. ವ್ಯಾಯಾಮ ಮಾಡುವುದು ಕಡಿಮೆ ಮಾಡಿ ಮೊಬೈಲ್ ಬಳಕೆಗೆ ಅಡಿಟ್ ಹೆಚ್ಚು ಆಗಿದ್ದು, ಈ ಎಲ್ಲಾ ಕಾರಣದಿಂದಲೇ ಬೊಜ್ಜು ಜಾಸ್ತಿ ಆಗುತ್ತಿದೆ. ಈ ಬೊಜ್ಜು ಒಂದು ಸಾಮಾಜಿಕ ಫಿಡುಗು ಆಗಿ ಮಾರ್ಪಟ್ಟಿದೆ. ಬೊಜ್ಜು ಬಂತೆಂದರೇ ಹಲವಾರು ಸಮಸ್ಯೆಗಳು ಹಾಗೂ ನೂರಾರು ಖಾಯಿಲೆಗಳು ದೇಹದಲ್ಲಿ ಕಾಣಿಸಲು ಪ್ರಾರಂಭಿಸುತ್ತದೆ. ಸಾರ್ವಜನಿಕರು ಈಗಲಾದರೂ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಒಳ್ಳೆಯ ಆಹಾರ ಪದ್ಧತಿ ರೂಡಿಸಿಕೊಂಡು ಪ್ರತಿನಿತ್ಯ ಕೆಲ ಸಮಯ ವ್ಯಾಯಾಮ ಮಾಡಿ ಸಕ್ರಿಯರಾಗಬೇಕು ಎಂದು ಕಿವಿಮಾತು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ದಿನೇಶ್ ಮಾತನಾಡಿ, ವಿಶ್ವ ಬೊಜ್ಜು ದಿನಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕಾಲ್ನಡಿಗೆ ಕಾರ್ಯಕ್ರಮವಾಗಿದ್ದು, ಜನರಲ್ಲಿ ಬರುವ ಬೊಜ್ಜಿನಿಂದ ಅನೇಕ ಖಾಯಿಲೆಗಳು ಹರಡಿ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೇ ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ. ಹಣ್ಣು, ತರಕಾರಿ, ನೀರು ಇವನ್ನು ಹೆಚ್ಚು ಬಳಕೆ ಮಾಡಬೇಕು. ಸ್ವಿಟ್ಸ್ ಸೇವನೆ ಕಡಿಮೆ ಮಾಡಬೇಕು ಎಂದರು. ನಿಯಮಿತವಾದ ವ್ಯಾಯಾಮ, ವಾಕಿಂಗ್ ಮಾಡುವಂತೆ ಸಲಹೆ ನೀಡಿದರು.

ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಮತ್ತು ಮಕ್ಕಳ ತಜ್ಞರು ಡಾ. ಹೆಚ್. ಪಾಲಾಕ್ಷ ಅವರು ಮಾತನಾಡಿ, ಶಿಶು ವೈದ್ಯಕೀಯ ಸಂಘ ಹಾಸನ ಶಾಖೆ, ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಲ್ಲಿ ಬೊಜ್ಜಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಅದರಲ್ಲೂ ಮಕ್ಕಳಲ್ಲಿ ಬೊಜ್ಜುತನ ಹೆಚ್ಚು ಕಂಡು ಬರುತ್ತಿದೆ. ಇದರಿಂದ ಸಣ್ಣ ವಯಸ್ಸಿನಲ್ಲೆ ಖಾಯಿಲೆ ಹಾಗೂ ಸಾವು ಸಂಭವಿಸುತ್ತಿದೆ. ಇದನ್ನು ತಡೆಯಲು ಆಹಾರದ ಬಗ್ಗೆ ಗಮನ ನೀಡಬೇಕೆಂದರು.

ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅಬ್ದೂಲ್ ಬಶೀರ್ ಮಾತನಾಡಿ, ಬೊಜ್ಜು ನಿವಾರಿಸುವ ದಿನಾಚರಣೆ ಆಚರಿಸಲಾಗುತ್ತಿದ್ದು, ಬೊಜ್ಜು ಎಂದರೇ ದೇಹ ತುಕ್ಕು ಹಿಡಿದಂತೆ. ನಮ್ಮ ಆಯಾಸ್ಸನ್ನು ಕಡಿಮೆ ಮಾಡುತ್ತಿದೆ. ದೊಡ್ಡವರಿಗೆ ಬರುತ್ತಿದ್ದ ಬೊಜ್ಜು ಇಂದು ಮಕ್ಕಳಲ್ಲೆ ಕಾಣಿಸಿಕೊಳ್ಳುತ್ತಿದೆ. ಫ್ಯಾಟ್ ಇರುವ ಆಹಾರವನ್ನು ಯಾರು ಬಲಸ ಬೇಡಿ ಎಂದು ಕರೆ ನೀಡಿದರು.

ಪ್ರಸ್ತೂತಿ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷ ಗಿರೀಜಾ ಮಾತನಾಡಿ, ಪ್ರಸ್ತೂತದಲ್ಲಿ ಓಬೆಸಿಟಿ ಸಮಸ್ಯೆ ಮೂರುಪಟ್ಟು ಹೆಚ್ಚು ಕಂಡು ಬರುತ್ತಿದೆ. ಸ್ತ್ರೀಯರು ಸ್ಥೂಲಕಾಯಕರಾಗಿ ಗರ್ಭೀಣಿ ಆದಾಗ ಇದರಿಂದ ದುಷ್ಪಾರಿಣಾಮ ಬೀರುತ್ತಿದೆ. ಬೊಜ್ಜಿನಿಂದ ಗರ್ಭ ಧರಿಸುವುದಕ್ಕೂ ಕೂಡ ಕಷ್ಟವಾಗುತ್ತದೆ. ಇದರಿಂದಲೇ ಬಿಪಿ ಶೂಗರ್ ಬರುವುದು ಪಿಡ್ಸ್ ಬರುವ ಸಮಸ್ಯೆಗಳ ಕಾಣಬಹುದು ಜೊತಗೆ ಮಗುವಿನ ಮೇಲು ಕೆಟ್ಟ ಪರಿಣಾಮ ಬೀರಲಿದೆ ಎಂದರು. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಜೀವನ ಸಾಗಿಸುವಂತೆ ಮನವಿ ಮಾಡಿದರು.

ಇದೆ ವೇಳೆ ಜಾಗೃತಿ ಜಾಥದಲ್ಲಿ ಪ್ರಸ್ತೂತಿ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷ ಗಿರೀಜಾ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅಬ್ದೂಲ್ ಬಶೀರ್, ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಮತ್ತು ಮಕ್ಕಳ ತಜ್ಞರು ಡಾ. ಹೆಚ್. ಪಾಲಾಕ್ಷ, ಪ್ರಸ್ತೂತಿ ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ, ಖಾಸಗೀ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಯತೀಶ್, ಡಾ. ಭವ್ಯ ಇತರರು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಆರು ಜನ ನಿವೃತ್ತ ಸರಕಾರಿ ವಾಹನ ಚಾಲಕರಿಗೆ ಸನ್ಮಾನ

Published

on

ಹಾಸನ: ಅನೇಕ ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸ್ಲಲ್ಲಿಸಿ ನಿವೃತ್ತಗೊಂಡ ಆರು ಜನ ಸರಕಾರಿ ವಾಹನ ಚಾಲಕರನ್ನು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಶಿವಾನಂದ್ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಅವರು ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಮಾಧ್ಯಮದೊಂದಿಗೆ ಈ. ಕೃಷ್ಣೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು ೨೪ ಸಾವಿರ ಜನ ಸರಕಾರಿ ನೌಕರರು ಇದ್ದು, ಇವರಲ್ಲಿ ವಾಹನ ಚಾಲಕರಾಗಿ ೬ ಜನರು ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರಿಗೆ ವಾಹನ ಚಾಲಕರ ಸಂಘದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಕಾರ್ಯ ಧಕ್ಷತೆಯೊಂದಿಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಗೊಂಡ ವಾಹನ ಚಾಲಕರ ಕುಟುಂಬಕ್ಕೆ ದೇವರು ಒಳ್ಳೆಯದನ್ನು

ಮಾಡಲಿ ಎಂದು ಹಾರೈಸಿದರು. ವಾಹನ ಚಾಲಕರ ಕಷ್ಟಗಳಿವೆ ಅದಕ್ಕೆ ಸರಕಾರ ಮತ್ತು ಸರಕಾರಿ ನೌಕರರ ಸಂಘ ಸದಾ ಅವರ ಜೊತೆ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ವಾಹನ ಚಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಧರಿಯಾಗಿ ಸಂಘಟನೆ ಮಾಡಿಕೊಂಡು ಬರುತ್ತಿದೆ. ಯಾವಾಗಲು ನಿಮ್ಮ ಜೊತೆ ಸಂಘ ಇರುವುದಾಗಿ ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಕಂದಾಯ ಇಲಾಖೆಯ ಎಂ.ಎನ್. ಬಸಪ್ಪ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೊಳೆನರಸೀಪುರದ ರಂಗನಾಥ್, ಡಿ.ಹೆಚ್.ಓ. ಆರೋಗ್ಯ ನಿರ್ದೇಶಕರ ಚಾಲಕರಾಗಿದ್ದ ದಿಗಂಬರಗೌಡ, ಅರಸೀಕೆರೆ

ಆರೋಗ್ಯ ಇಲಾಖೆಯಲ್ಲಿ ವಾಹ ಚಾಲಕರಾಗಿ ಕರ್ತವ್ಯ ಇಲಾಖೆಯ ಹೆಚ್.ಎಸ್. ಪಂಚಾಕ್ಷರಿ ಈ ಆರು ಜನರು ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರನ್ನು ವಾಹನ ಚಾಲಕರ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು.

Continue Reading

Hassan

ಹೊಳೆನರಸೀಪುರದಲ್ಲಿ ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ

Published

on

ಹೊಳೆನರಸೀಪುದಲ್ಲಿ ಆಯೋಜಿಸಿದ್ದ ನೂತನ ಲೋಕಸಭಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆ

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷಗಳು ಸತತ ಕುತಂತ್ರ ನಡೆಸುತ್ತಿವೆ*

*ಜಾತಿ ವ್ಯವಸ್ಥೆ ಎಷ್ಟಿದೆ ಎಂದರೆ ಒಬ್ಬ ಹಿಂದುಳಿದ ವರ್ಗದವರು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ಆಗಿಲ್ಲ*

ದೇವರಾಜ ಅರಸು ಅವರನ್ನು ಬಿಟ್ಟರೆ ಎರಡನೇ ಬಾರಿ ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ

ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ನೀವು ಕಾರಣ

*ನೀವು ಒಗ್ಗಟ್ಟಾಗಿ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದರಿಂದ ಅವರು ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿದ್ದಾರೆ*

*ಇಷ್ಟೆಲ್ಲಾ ರಾಜಕೀಯ ವಿರೋಧಗಳಿದ್ದರೂ ಕೂಡ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ*

*ನೀವು ಎಲ್ಲಿಯವರೆಗೆ ರಾಜಕೀಯವಾಗಿ ಅವರ ಹಿಂದೆ ನಿಂತಿರುತ್ತೀರೋ ಅಲ್ಲಿಯವರೆಗೆ ಅವರನ್ನು ರಾಜಕೀಯವಾಗಿ ಅಳಿಯಲು, ಸೋಲಿಸಲು ಆಗುವುದಿಲ್ಲ*

*ಅಧಿಕಾರದಲ್ಲಿದ್ದಾಗ ಅವರಿಗೆ ಪ್ರತಿ ಹೆಜ್ಜೆಯಲ್ಲೂ ಅಗ್ನಿಪರೀಕ್ಷೆ ಇರುತ್ತದೆ*

*ಸಣ್ಣ ತಪ್ಪು ಮಾಡಿದರೂ ಸಹ ಕಾಯುತ್ತಾ ಇರುತ್ತಾರೆ*

*ಸಣ್ಣ ತಪ್ಪು ಮಾಡಿದರೂ ಸಹ ಅದನ್ನು ದೊಡ್ಡದಾಗಿ ಬಿಂಬಿಸಿ ಅವರನ್ನು ಕಾಲೆಳೆಯಲು, ಅಧಿಕಾರದಿಂದ ಕೆಳಗಿಳಿಸಲು ಎಂದು ಕಾಯ್ತಾ ಇರ್ತಾರೆ*

*ಆದರೂ ಸಹ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆ ಆಗಿರುವುದಕ್ಕೆ ನಿಮ್ಮಗಳ ಬೆಂಬಲವೇ ಕಾರಣ*

*ಯಾರೇ ಎಷ್ಟು ಅಪಪ್ರಚಾರ ಮಾಡಿದರು ಸಹ ಅದಕ್ಕೆ ಕಿವಿ ಕೊಡಬೇಡಿ ಅದನ್ನು ನಂಬಬೇಡಿ*

ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ನಿಮಗೆ ಗೊತ್ತಿದೆ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು

ಸಿದ್ದರಾಮಯ್ಯ ಅವರು ಸಮಾಜದ ಕಟ್ಟ ಕಡೆಯ, ತುಳಿತಕ್ಕೆ, ಶೋಷಣೆಗೆ ಒಳಗಾದ ವ್ಯಕ್ತಿಗೆ ಬೆಂಬಲ ನೀಡಿಕೊಂಡು ಸುಮಾರು 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ

ಬೇರೆ ಯಾರಾದರೂ ಮುಖ್ಯಮಂತ್ರಿ ಆಗಿದ್ದರೆ

ಇಷ್ಟೊಂದು ಗ್ಯಾರೆಂಟಿ ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ವೆಚ್ಚವಾಗುವ ಹಣವನ್ನು ನೇರವಾಗಿ ಜನರ ಕೈಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿದ್ದರಾ

ಗ್ಯಾರೆಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತವಾಗದಂತೆ ನೋಡಿಕೊಳ್ಳುತ್ತಿದ್ದಾರೆ

ಆರ್ಥಿಕ ಪರಿಸ್ಥಿತಿ ಕುಸಿಯದಂತೆ ನೋಡಿಕೊಳ್ಳುತ್ತಿರುವುದು ಮುಖ್ಯಮಂತ್ರಿಗಳ ಸಾಧನೆಯಾಗಿದೆ

ಚುನಾವಣಾ ಸಮಯದಲ್ಲಿ ಮಾತ್ರ ನಾವು ರಾಜಕೀಯ ಮಾಡಬೇಕು ಪಕ್ಷದ ಪರವಾಗಿ ನಿಲ್ಲಬೇಕು

ಎಲ್ಲರಿಗೂ ಸರಿಯಾದ ನ್ಯಾಯ ಸಿಗುತ್ತಿದೆ ಎಂದರೆ ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ

Continue Reading

Hassan

ಪಿಯು ಎಂದರೇ ಪ್ರಧಾನವಾದ ಕಾಲಘಟ್ಟ, ಸಾಧನೆ ಮಾಡಿ – ಹೆಚ್.ಎಲ್. ಮಲ್ಲೇಶ್ ಗೌಡ

Published

on

ಹಾಸನ: ಪಿಯುಸಿ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಧಾನವಾದ ಕಾಲಘಟ್ಟವಾಗಿದ್ದು, ಈ ಹಂತದಲ್ಲಿ ಸಾಧನೆ ಮಾಡಿದರೇ ನಿಮ್ಮ ಪೋಷಕರಿಗೆ ಹಾಗೂ ಶಿಕ್ಷರಿಗೂ ಸೇರಿದಂತೆ ಎಲ್ಲಾರಿಗೂ ಸಂತೋಷ ತರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸುಜಲಾ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಸುಜಲ ಕಾಲೇಜಿನ ಅಧ್ಯಕ್ಷರಾದ ಲೋಕೇಶ್ ಅವರು ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ಸಂಸ್ಥೆಯಲ್ಲಿ ಬೆಳೆಸುವ

ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಜನರು ನನ್ನ ಶಿಷ್ಯರು ಹಾಗೂ ಗಂಗೇಗೌಡರ ಶಿಷ್ಯರು ಕೂಡ ಇರುವುದು ನಮಗೆ ಸಂತೋಷ ತಂದಿದೆ. ಇದೊಂದು ಬಹಳ ಪ್ರೀತಿಯ ಶಿಕ್ಷಣ ಸಂಸ್ಥೆ ಎಂದು ಬಣ್ಣಿಸಿದರು. ಪಿಯುಸಿ ಎಂದರೇ ತಮ್ಮೆಲ್ಲಾ ಪ್ರತಿಭೆಯನ್ನು ಹೊರಗೆ ಹಚ್ಚಿ ತಮ್ಮೆಲ್ಲ ಶ್ರಮವನ್ನು ಪರೀಕ್ಷೆಗೆ ಒಳಪಡಿಸಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕೆ

ಇದೊಂದು ಪ್ರಧಾನವಾದ ಕಾಲಘಟ್ಟ ಎಂದು ಭಾವಿಸಿದ್ದೇನೆ ಎಂದರು. ಪಿಯುಸಿ ಓದುವಾಗ ಮಕ್ಕಳು ಮಾತ್ರ ಓದುವುದಿಲ್ಲ. ಅವರ ಶಿಕ್ಷಕರು ಕೂಡ ಓದುತ್ತಿರುತ್ತಾರೆ. ಜೊತೆಗೆ ಅವರ ಅಪ್ಪ ಅಮ್ಮಂದಿರು ಕೂಡ ಓದುತ್ತಿರುತ್ತಾರೆ. ನಿಮ್ಮ ಸಾಧನೆ ಒಬ್ಬರಿಗೆ ಮಾತ್ರ ಖುಷಿ ಕೊಡುವಂತದಲ್ಲ. ನಿಮಗೆ ಪಾಠ ಮಾಡಿದ ಶಿಕ್ಷಕರಿಗೆ ಅಪಾರವಾದ ಸಂತೋಷ ತಂದರೇ ಇನ್ನು ನಿಮ್ಮ ತಂದೆ ತಾಯಿಗೆ ಇನ್ನು ಹೆಚ್ಚಿನ ರೀತಿ ಖುಷಿ ಕೊಡಲಿದೆ ಎಂದು ಕಿವಿಮಾತು ಹೇಳಿದರು. ಮಕ್ಕಳು ಏನಾದರೂ ಹೆಚ್ಚಿನ ಅಂಕವನ್ನು ಗಳಿಸಿಬಿಟ್ಟರೇ ಎಲ್ಲಾರಿಗೂ ಈ ವಿಚಾರ ಹೇಳಿಕೊಳ್ಳುವ ಹಂಬಲ ಹೊಂದಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಇದೆ ವೇಳೆ ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಗಂಗೇಗೌಡ, ಸುಜಲ ಕಾಲೇಜು ಅಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲರಾದ ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Trending

error: Content is protected !!