Connect with us

Chikmagalur

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಇತರೆ ಅಪರಾಧ

Published

on

ಜಯಪುರ: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಇತರೆ ಅಪರಾಧ ಚಟುವಟಿಕೆಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ದುಷ್ಕರ್ಮಿಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಕರಾಟೆಯಂತಹ ಆತ್ಮ ರಕ್ಷಣಾ ಕಲೆಯನ್ನು ಕಲಿಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಜಯಪುರದ ಸ್ಪಂದನ ಸ್ವಯಂಸೇವಾ ಸಂಸ್ಥೆ 4 ವರ್ಷ ಮೇಲ್ಪಟ್ಟ ಕರಾಟೆ ತರಭೇತಿ ಪಡೆಯಲಿಚ್ಚಿಸುವ ಬಾಲಕ, ಬಾಲಕಿಯರು, ಹಾಗೂ ವಯಸ್ಕರಿಗಾಗಿ ಹದಿನೈದು ದಿನಗಳ ಉಚಿತ ಕರಾಟೆ ತರಭೇತಿ ಶಿಭಿರವನ್ನು ಜಯಪುರದಲ್ಲಿ ಆಯೋಜಿಸಿದೆ ಎಂದು ಸ್ಪಂದನ ಸ್ವಯಂಸೇವಾ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಮೇ 06ರ ಸೋಮವಾರ ದಿಂದ ಮೇ 20ರ ಸೋಮವಾರದ ವರೆಗೆ ಜಯಪುರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರಾಟೆ ತರಭೇತಿ ಶಿಭಿರವನ್ನು ಆಯೋಜಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ 7 ಘಂಟೆಯಿಂದ ಬೆಳಗ್ಗೆ 08-30 ರವರೆಗೆ ಶಿಭಿರದಲ್ಲಿ ಕರಾಟೆಯ ವಿವಿಧ ಪ್ರಾಕಾರಗಳಾದ ಬೇಸಿಕ್ ಟೆಕ್ನಿಕ್, ಪಂಚ್ ಟೆಕ್ನಿಕ್, ಕಿಕ್ ಬಾಕ್ಸಿಂಗ್, ದೊಣ್ಣೆ ವರೆಸೆ, ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಹಾಗೂ ಯೋಗ, ಸೂರ್ಯ ನಮಸ್ಕಾರಗಳನ್ನು ಕಲಿಸಲಾಗುವುದು.

ಮಹಾರಾಷ್ಟ್ರದ ಸಾಂಗ್ಲಿಯ ಕರಾಟೆ ಶಿಕ್ಷಕ ಆರ್ ಮಣಿಕಂಠ್ ಹಾಗೂ ಇತರೆ ಶಿಕ್ಷಕರು ಕರಾಟೆ ಹಾಗೂ ಯೋಗದ ತರಭೇತಿಯನ್ನು ನೀಡಲಿದ್ದು, ಮಾಹಿತಿಗೆ ಶಿಭಿರ ನಿರ್ವಾಹಕ ವಿಶ್ವನಾಥ್ ಎಸ್ 9481074453 ಹಾಗೂ ಕರಾಟೆ ಶಿಕ್ಷಕ ಮಣಿಕಂಠ ಆರ್ 9923118800 ರನ್ನು ಸಂಪರ್ಕಿಸ ಬಹುದಾಗಿದೆ. ಜಯಪುರದ ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗ ಪಡೆದು ಕೊಳ್ಳ ಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಪ್ರೀತಿಸಿ ಮೋಸ: ಯುವಕನ ಮನೆ ಮುಂದೆ ಯುವತಿ ಗಲಾಟೆ

Published

on

ಚಿಕ್ಕಮಗಳೂರು : ನಗರದ ಕಲ್ಯಾಣ ನಗರದಲ್ಲಿ 10 ವರ್ಷದಿಂದ ಪ್ರೀತಿಸಿ ಈಗ ಬೇರೆ ಮದುವೆಗೆ ರೆಡಿಯಾದ ಯುವಕನ  ಮನೆ ಮುಂದೆ ಬಂದು ಯುವತಿ ಗಲಾಟೆ ಮಾಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಅಶ್ವಿನಿ ಎಂಬ ಯುವತಿ ಗಲಾಟೆ ಮಾಡಿದ್ದಾರೆ.

ಕಲ್ಯಾಣ ನಗರದ ಶರತ್ ಎಂಬ ಯುವಕನನ್ನು  ಅಶ್ವಿನಿ ಪ್ರೀತಿಸಿದ್ದರು. ಆಕೆಯಿಂದಲೇ ಯುವಕ 4 ಲಕ್ಷದ 50 ಸಾವಿರ ಪಡೆದುಕೊಂಡಿರೋ ಆರೋಪ ಮಾಡಿದ್ದಾರೆ.

ಶರತ್ ಮದುವೆಯಾಗಿ ಡಿವೋರ್ಸ್ ಆಗಿರೋದನ್ನು ಮುಚ್ಚಿಟ್ಟು ಪ್ರೀತಿಸಿದ್ದರು. ನಾಳೆ ಬೇರೆ ಹುಡುಗಿ ಜೊತೆ ಮದುವೆಯಾಗಲಿದ್ದಾರೆ. ಹಾಗಾಗಿ ಇಂದು ಶರತ್ ಮನೆ ಮುಂದೆ ಬಂದು ಯುವತಿಯಿಂದ ಗಲಾಟೆ ನಡೆಸಿದ್ದಾರೆ.

ಬೇಲೂರಿನ ಯುವತಿ ಮನೆಗೆ ಹೋಗಿ ಆಕೆ ತಾಯಿ ಬಳಿ ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೀನಿ ಎಂದು ತಿಳಿಸಿದ್ದರು.  ಈತ ಮದುವೆಯಾಗುತ್ತೇನೆ ಎಂದು ಆಕೆಗೆ ಬಂದು ಐದು ಸಂಬಂಧಗಳನ್ನು ಬಿಟ್ಟಿದ್ದರು. ಅಶ್ವಿನಿ ತಾಯಿ, ಮೊದಲು ಮದುವೆಯಾಗಿ 2 ತಿಂಗಳಿಗೆ ಡೈವರ್ಸ್ ನೀಡದ್ದಾನೆಂದು ಯುವತಿ‌ ಆರೋಪ ಮಾಡಿದ್ದಾರೆ. ಆದರೆ ಈಗ ನನಗೆ ಮೋಸ ಮಾಡಿದ್ದಾನೆ, ನಾಳೆ ಬೇರೆಯವರಿಗೂ ಮೋಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಯುವತಿ ಆತನ ವಿರುದ್ಧ ಅಟ್ರಾಸಿಟಿ ಸೇರಿದಂತೆ ಮೂರು ಕೇಸ್ ದಾಖಲಿಸಿದ್ದಾರೆ.  ಆದರೆ ಯುವಕ‌ ಶರತ್, ಎಲ್ಲಾ ಕೇಸಿಗೂ ಸ್ಟೇ ತಂದು ಬೇರೆ ಮದುವೆಯಾಗುತ್ತಿದ್ದಾರೆ. ಹೀಗಾಗಿ ಇಂದು ಯುವಕನ ಮನೆ ಮುಂದೆ ಬಂದು ಯುವತಿ ಅಶ್ವಿನಿ ನ್ಯಾಯಕ್ಕಾಗಿ ಗಲಾಟೆ ಮಾಡಿದ್ದಾರೆ.

Continue Reading

Chikmagalur

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

Published

on

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ.

ಅಡಿಕೆ ಮರದಲ್ಲಿ ಗೊನೆ ಕೊಯ್ಯುವಾಗ ಬಿದ್ದು ಸಾವಪ್ಪಿದ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ.

ಮಂಜು (35) ಮೃತ ದುರ್ದೈವಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದ  ಕೆ.ಎಸ್.ಗೋಪಾಲಕೃಷ್ಣ

Published

on

ಚಿಕ್ಕಮಗಳೂರು: ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೆಂಪನಹಳ್ಳಿ ಕನಕ ಗೆಳೆಯರ ಬಳಗದಿಂದ ನಗರ ಸಮೀಪ ಆಯೋಜಿಸಿದ್ಧ ಎರಡನೇ ವರ್ಷದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬುಧವಾರ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.


ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಹಾ ಗೂ ದ್ವಿತೀಯ ಹೆಚ್.ಎಫ್. ಡಿಲಕ್ಸ್ ಬೈಕ್, ತೃತೀಯ 25 ಸಾವಿರ ನಗದು ಟ್ರೋಫಿ ಮತ್ತು ಚತುರ್ಥ ವಿಜೇತರಿಗೆ 20 ಸಾವಿರ ನಗದು ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದು ಸ್ಪರ್ಧೆಯ ಆಯೋಜಕ ಕೆಂಪನಹಳ್ಳಿ ಸುನೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಲಕ್ಷ್ಮಣ್, ಎಲ್.ಬಿ.ಎಸ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರತೀಪ್, ಕೆಂಪನಹಳ್ಳಿ ಗ್ರಾಮಸ್ಥರಾದ ಚರಣ್, ಹರೀಶ್, ರಾಕೇಶ್, ಶಶಾಂಕ್, ಸಚಿನ್, ಕಾರ್ತೀಕ್ , ವರುಣ್, ಡಿಂಪು, ವಸಂತ್, ದರ್ಶನ್ ಮತ್ತಿತರರು ಹಾಜರಿದ್ದರು.

Continue Reading

Trending

error: Content is protected !!