Connect with us

National - International

ಜೂಜುಕೋರ ಟ್ರಂಪ್‌ ಎಂದ ಇರಾನ್‌

Published

on

ದುಬೈ: ಇರಾನ್‌ ದೇಶವೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ನನ್ನು ಜೂಜುಕೋರ ಎಂದಿದ್ದು, ನೀವೂ ಪ್ರಾರಂಭಿಸುವ ಯುದ್ಧವನ್ನು ನಾವು ಕೊನೆಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಹೇಳುತ್ತಿದ್ದ ಅಮೆರಿಕಾಗೆ, ಶನಿವಾರ ತಡರಾತ್ರಿ ಇರಾನ್‌ನ ಮೂರು ಮುಖ್ಯ ಪರಮಾಣು ಘಟಕಗಳ ಮೇಲೆ ಭಾರಿ ಬಾಂಬ್‌ ದಾಳಿ ನಡೆಸಿತ್ತು.

ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್‌ ಹೆಸರಿನ ಸೇನಾ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್‌ ವಿರುದ್ಧ ಇಸ್ರೇಲ್‌ ಸಾರಿರುವ ಯುದ್ಧವನು ಅಮೆರಿಕಾ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ, ಇರಾನ್‌ನ ಫೋರ್ಡೊ, ನಟಾನ್ಜ್‌ ಮತ್ತು ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ ಎಂದು ಪೋಸ್ಟ್‌ ಮಾಡಿದ್ದರು.

ಮುಖ್ಯ ಪರಮಾಣು ಘಟಕಗಳ ಮೇಲೆ ಭಾರಿ ಪ್ರಮಾಣದ ಬಾಂಬ್‌ ಹಾಕಲಾಗಿದ್ದು, ಎಲ್ಲ ಯುದ್ಧ ವಿಮಾನಗಳು ಸುರಕ್ಷಿತವಾಗಿ ಹಿಂತಿರುಗಿವೆ ಎಂದಿದ್ದಾರೆ.

ಇನ್ನೂ ಅಮೆರಿಕಾದ ಈ ನಡೆ ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಇರಾನ್‌ ಪ್ರತಿಕ್ರಿಯಿಸಿದೆ. ಅಲ್ಲದೇ ತನ್ನ ಜನರ ಮತ್ತು ಸಾರ್ವಭಾಮತೆ ರಕ್ಷಣೆಗಾಗಿ ಎಲ್ಲಾ ಆಯ್ಕೆಗಳನ್ನು ಇರಾನ್‌ ಮುಕ್ತವಾಗಿರಿಸಿ ಕೊಂಡಿದ್ದು, ತಕ್ಕ ಉತ್ತರ ನೀಡುವುದಾಗಿ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಟಿ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು, ಇಂತಹ ದಿಟ್ಟ ತೀರ್ಮಾನ ಕೈಗೊಂಡಿದ್ದಕ್ಕಾಗಿ ಟ್ರಂಪ್‌ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದಾಗಿ ಇಸ್ರೇಲ್‌ ಘೋಷಣೆ ಮಾಡಿದೆ.

ಈ ಎಲ್ಲಾ ಬೆಳವಣಿಗೆಗೆ ಮಧ್ಯೆ ಇರಾನ್‌ ಮೇಲಿನ ದಾಳಿಯನ್ನು ಇಸ್ರೇಲ್‌ ಇಂದು ತೀವ್ರಗೊಳಿಸಿದೆ. ಪಶ್ಚಿಮ ಪೂರ್ವ ಹಾಗೂ ಮಧ್ಯ ಇರಾನ್‌ನ ಆರು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್‌ ಮುಖ್ಯ ಸ್ಥಳಗಳನ್ನು ಗುರಿಯಾಗಿಸಿ ಇರಾನ್‌ ಸಹಾ ದಾಳಿ ನಡೆಸುವ ಮೂಲಕ ಸಂಘರ್ಷವನ್ನು ತೀವ್ರಗೊಳಿಸಿದೆ.

Continue Reading

National - International

ಅಹ್ಮದಾಬಾದ್‌ನಲ್ಲಿ ಐಪಿಎಲ್ ಮಹಾಸಮರ: ಆರ್‌ಸಿಬಿ ಕಪ್ ಗೆಲ್ಲುತ್ತಾ? ಗುಜರಾತ್ ಇತಿಹಾಸ ಬರೆಯುತ್ತಾ?

Published

on

ಮೊದಲ ಆರು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಸಾಧಾರಣ ಆರಂಭ ಕಂಡಿದ್ದ ಶುಭ್ ಮನ್ ಗಿಲ್ ಪಡೆ, ನಂತರದ 10 ಪಂದ್ಯಗಳಲ್ಲಿ ಏಳು ಗೆಲುವುಗಳನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದುಕೊಂಡಿತು.

ಅಹ್ಮದಾಬಾದ್: ಐಪಿಎಲ್ 2026 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಗುಜರಾತ್ ಟೈಟನ್ಸ್ ಪ್ರಶಸ್ತಿಗಾಗಿ ಸೆಣಸಲಿವೆ.

ಟೂರ್ನಿ ಆರಂಭದಿಂದಲೂ ತನ್ನ ಪ್ರಭಾವಿ ಪ್ರದರ್ಶನದ ಮೂಲಕ ಫೈನಲ್ ಗೇರಿದ ಆರ್ ಸಿಬಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಗುಜರಾತ್ ಟೈಟನ್ಸ್ ತಂಡವು ಈ ಬಾರಿಯ ಫೈನಲ್ ತಲುಪಲು ಸಾಕಷ್ಟು ಸವಾಲಿನ ಹಾದಿಯನ್ನು ಕ್ರಮಿಸಿದೆ.

ಮೊದಲ ಆರು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಸಾಧಾರಣ ಆರಂಭ ಕಂಡಿದ್ದ ಶುಭ್ ಮನ್ ಗಿಲ್ ಪಡೆ, ನಂತರದ 10 ಪಂದ್ಯಗಳಲ್ಲಿ ಏಳು ಗೆಲುವುಗಳನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದುಕೊಂಡಿತು.

ತಂಡದ ಯಶಸ್ಸಿನಲ್ಲಿ ಪ್ರಮುಖ ತಿರುವು ತಂದದ್ದು ವೇಗಿ ಜೇಸನ್ ಹೋಲ್ಡರ್ (Jason Holder) ಅವರ ಸೇರ್ಪಡೆ. ಗಾಯಗೊಂಡ ಗ್ಲೇನ್ ಫಿಲಿಪ್ಸ್ (Glenn Phillips) ಬದಲಿಗೆ ತಂಡಕ್ಕೆ ಬಂದ ಹೋಲ್ಡರ್, ಕೇವಲ 10 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿ ಜಿಟಿಯ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದರು.

ಜಿಟಿಯ ಪ್ರಶಸ್ತಿ ಕನಸು ಹೆಚ್ಚಾಗಿ ಅದರ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶುಭ್ ಮನ್ ಗಿಲ್, ಸಾಯಿ ಸುದರ್ಶನ್, ಜಾಸ್ ಬಟ್ಲರ್ ಮೇಲೆ ಅವಲಂಬಿತವಾಗಿದೆ. ಹೊಸ ಚೆಂಡಿನಲ್ಲಿ ಆರ್‌ಸಿಬಿಯ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಜಲ್ ವುಡ್ ಅವರ ಸವಾಲನ್ನು ಎದುರಿಸಿದರೆ, ಜಿಟಿ ದೊಡ್ಡ ಮೊತ್ತ ಕಲೆಹಾಕುವ ಅಥವಾ ಬೆನ್ನಟ್ಟುವ ವಿಶ್ವಾಸ ಹೊಂದಿದೆ.

ಆದರೆ, ತಂಡವು ಅತಿಯಾಗಿ ಟಾಪ್-3 ಬ್ಯಾಟರ್‌ಗಳ ಮೇಲೆ ಅವಲಂಬಿತವಾಗಿರುವುದು ಹಾಗೂ ಕ್ವಾಲಿಫೈಯರ್-2 ಬಳಿಕ ಕಡಿಮೆ ವಿಶ್ರಾಂತಿ ಸಿಕ್ಕಿರುವುದು ಕೆಲವು ಆತಂಕಗಳಿಗೆ ಕಾರಣವಾಗಿದೆ.

ಆರ್ ಸಿಬಿಗೆ ಸಿಕ್ತು ಸಾಕಷ್ಟು ವಿಶ್ರಾಂತಿ

ಇದಕ್ಕೆ ತದ್ವಿರುದ್ಧವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್-1ರಲ್ಲಿ ಗೆಲುವು ಸಾಧಿಸಿದ ಬಳಿಕ ಮೂರು ದಿನಗಳ ವಿಶ್ರಾಂತಿಯೊಂದಿಗೆ ಫೈನಲ್‌ಗೆ ಪ್ರವೇಶಿಸಿದೆ. ಹಾಲಿ ಚಾಂಪಿಯನ್‌ಗಳಾದ ಆರ್‌ಸಿಬಿ ಈ ಬಾರಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಬಲದಿಂದಲೇ ಯಶಸ್ಸು ಕಂಡಿದೆ.

ತಂಡವು ಒಂಬತ್ತು ಬಾರಿ 200ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ್ದು, ಎರಡು ಬಾರಿ 200ಕ್ಕೂ ಅಧಿಕ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ತಂಡದ ಬಲವೆಂದರೆ ಕೇವಲ ಒಬ್ಬ ಅಥವಾ ಇಬ್ಬರು ಆಟಗಾರರಲ್ಲ. ನಾಯಕ ರಜತ್ ಪಟಿದಾರ್, ರನ್ ಮೆಷಿನ್ ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯಾ ಮತ್ತು ವೆಂಕಟೇಶ್ ಅಯ್ಯರ್ ತಂಡದ ಯಶಸ್ಸಿನ ಭಾಗವಾಗಿದ್ದಾರೆ.

ಐತಿಹಾಸಿಕ ಮೈದಾನದಲ್ಲಿ ಫೈನಲ್ ಸಮರ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಎರಡೂ ತಂಡಗಳಿಗೆ ವಿಶೇಷ ಮಹತ್ವ ಹೊಂದಿದೆ. ಗುಜರಾತ್ ಟೈಟನ್ಸ್ 2022ರಲ್ಲಿ ಇದೇ ಮೈದಾನದಲ್ಲಿ ತನ್ನ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಅಂತೆಯೇ ಆರ್‌ಸಿಬಿ 2025ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಇದೇ ಮೈದಾನದಲ್ಲಿ 18 ವರ್ಷಗಳ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಈಗ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಕಿರೀಟಕ್ಕಾಗಿ ಸೆಣಸುತ್ತಿವೆ.

ಆರ್‌ಸಿಬಿ vs ಜಿಟಿ ಮುಖಾಮುಖಿ

ಐಪಿಎಲ್ ಇತಿಹಾಸದಲ್ಲಿ ಆರ್ ಸಿಬಿ ಮತ್ತು ಜಿಟಿ ಪರಸ್ಪರ 9 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆರ್ ಸಿಬಿ 5ರಲ್ಲಿ ಗೆದ್ದಿದ್ದರೆ, ಗುಜರಾತ್ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಪಿಚ್ ವರದಿ

ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುವ ನಿರೀಕ್ಷೆಯಿದೆ. ಕೆಂಪು ಮಣ್ಣಿನ ಮಿಶ್ರಿತ ಈ ಪಿಚ್ ಉತ್ತಮ ಬೌನ್ಸ್ ಮತ್ತು ಕ್ಯಾರಿಯನ್ನು ಒದಗಿಸುವುದರಿಂದ ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಸ್ವತಂತ್ರವಾಗಿ ಆಡಲು ಸಾಧ್ಯವಾಗುತ್ತದೆ.

ಈ ಮೈದಾನದಲ್ಲಿ ಈ ಹಿಂದೆ ಹಲವು ಹೈ-ಸ್ಕೋರಿಂಗ್ ಪಂದ್ಯಗಳು ನಡೆದಿದ್ದು, ಫೈನಲ್ ಕೂಡ ಅದೇ ರೀತಿಯ ರನ್ ಮಳೆಯ ಪಂದ್ಯವಾಗುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳಿಗೆ ಆರಂಭದಲ್ಲಿ ಹೊಸ ಚೆಂಡಿನಿಂದ ಸ್ವಲ್ಪ ಸಹಾಯ ದೊರೆಯಬಹುದು. ಆದರೆ ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಇಬ್ಬನಿ (ಡ್ಯೂ) ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು.

ಮರುಕಳಿಸುತ್ತಾ ಪಿಚ್ ನಂ 6 ಕರಾಳತೆ

ಐಪಿಎಲ್ 2026ರ ಫೈನಲ್ ಪಂದ್ಯವು ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ನಂ. 6ರಲ್ಲಿ ನಡೆಯಲಿದ್ದು, ಇದೇ ಪಿಚ್ ಅನ್ನು ಈ ಹಿಂದೆ Gujarat Titans ಮತ್ತು Royal Challengers Bengaluru ನಡುವಿನ ಲೀಗ್ ಹಂತದ ಪಂದ್ಯಕ್ಕೂ ಬಳಸಲಾಗಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ಕೇವಲ 155 ರನ್‌ಗಳನ್ನು ಗಳಿಸಿತ್ತು. ಬಳಿಕ ಗುಜರಾತ್ ಟೈಟನ್ಸ್ 25 ಎಸೆತಗಳು ಬಾಕಿ ಇರುವಾಗಲೇ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಈ ಫಲಿತಾಂಶ ಪಿಚ್‌ನ ಸ್ವಭಾವದ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದೀಗ ಲಭ್ಯವಾಗಿರುವ ವರದಿಗಳ ಪ್ರಕಾರ, ಫೈನಲ್‌ಗಾಗಿ ಬಳಸಲಾಗುತ್ತಿರುವ ಪಿಚ್ ಸ್ವಲ್ಪ ನಿಧಾನಗತಿಯ (ಸ್ಲೋ) ಸ್ವರೂಪ ಹೊಂದಿರಬಹುದು ಎನ್ನಲಾಗುತ್ತಿದೆ. ಹೀಗಾಗಿ ವೇಗದ ಬದಲಾವಣೆಗಳು, ಸ್ಲೋವರ್ ಬಾಲ್‌ಗಳು ಹಾಗೂ ವೈವಿಧ್ಯಮಯ ಎಸೆತಗಳ ಮೇಲೆ ಅವಲಂಬಿತವಾಗಿರುವ ಬೌಲರ್‌ಗಳಿಗೆ ಇದು ಅನುಕೂಲಕರವಾಗುವ ಸಾಧ್ಯತೆ ಇದೆ.

ಇಂತಹ ಪಿಚ್‌ನಲ್ಲಿ ಬ್ಯಾಟರ್‌ಗಳಿಗೆ ಮುಕ್ತವಾಗಿ ಹೊಡೆತಗಳನ್ನು ಆಡಲು ಕಷ್ಟವಾಗಬಹುದು. ಆದ್ದರಿಂದ ದೊಡ್ಡ ಶಾಟ್‌ಗಳಿಗಿಂತ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುವುದು, ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಮತ್ತು ಪಂದ್ಯದ ಅರಿವಿನೊಂದಿಗೆ ಇನ್ನಿಂಗ್ಸ್ ಕಟ್ಟುವುದು ಅತ್ಯಂತ ಮುಖ್ಯವಾಗಲಿದೆ.

ಸಂಭಾವ್ಯ ಆಟಗಾರರ ಪಟ್ಟಿ

ಆರ್‌ಸಿಬಿ

ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ರಸಿಖ್ ಸಲಾಂ ದಾರ್, ಜೇಕಬ್ ಡಫಿ

ಇಂಪ್ಯಾಕ್ಟ್ ಆಟಗಾರರು: ರೊಮಾರಿಯೊ ಶೆಫರ್ಡ್ ಅಥವಾ ಸುಯಾಶ್ ಶರ್ಮಾ

ಗುಜರಾತ್ ಟೈಟನ್ಸ್

ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ಇಂಪ್ಯಾಕ್ಟ್ ಆಟಗಾರರು: ಅರ್ಷದ್ ಖಾನ್ ಅಥವಾ ಆರ್ ಸಾಯಿ ಕಿಶೋರ್

Continue Reading

National - International

INDW vs ENGW T-20: ಇಂದು ಬ್ರಿಸ್ಟಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 2ನೇ ಟಿ-20 ಸರಣಿ ಆಡಲಿರುವ ಭಾರತ ತಂಡ

Published

on

ಬ್ರಿಸ್ಟಲ್‌:  ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು 3 ಪಂದ್ಯಗಳ T20 ಸರಣಿಯ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಿದೆ.

ಇದೀಗ ಸರಣಿಯ 2ನೇ ಟಿ20 ಪಂದ್ಯ ಇಂದು (ಮೇ 30) ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಈ ಪಂದ್ಯವನ್ನು ಗೆದ್ದರೆ ಭಾರತ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಳ್ಳುವ ಅವಕಾಶ ಹೊಂದಿದೆ.

ಟಿ-20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

 ತಂಡಗಳಲ್ಲಿ ಯಾರೆಲ್ಲಾ ಇದ್ದಾರೆ?

ಭಾರತ ಮಹಿಳಾ ಕ್ರಿಕೆಟ್ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ: ಎಮ್ ಅರ್ಲಾಟ್, ಟ್ಯಾಮಿ ಬ್ಯೂಮಾಂಟ್, ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಚಾರ್ಲಿ ಡೀನ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಆಮಿ ಜೋನ್ಸ್, ನ್ಯಾಟ್ ಸಿವರ್-ಬ್ರಂಟ್, ಪೈಗೆ ಸ್ಕೋಲ್ಫೀಲ್ಡ್, ಲಿನ್ಸೆ ಸ್ಮಿತ್, ಡ್ಯಾನಿ ವ್ಯಾಟ್-ಹಾಡ್ಜ್, ಇಸ್ಸಿ ವಾಂಗ್.

Continue Reading

National - International

ಇಂದಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ಟಿ-20 ಸರಣಿ ಆರಂಭ

Published

on

ಚೆಲ್ಮ್ಸ್‌ಫೋರ್ಡ್‌:  ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಗಾಗಿ ಮಹತ್ವದ ಸರಣಿಯನ್ನು ಆಡಲು ಸಜ್ಜಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ ನಡುವೆ 4 ಪಂದ್ಯಗಳ ಟಿ20 ಸರಣಿ ಮತ್ತು ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಸರಣಿಯ ಮೊದಲ ಟಿ20 ಪಂದ್ಯ ಮೇ 28 (ಗುರುವಾರ) ಇಂಗ್ಲೆಂಡ್‌ನ ಚೆಲ್ಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಇಂಗ್ಲೆಂಡ್ ತಂಡದ ನಾಯಕತ್ವವನ್ನು ಚಾರ್ಲೆಟ್ ಡೀನ್ ವಹಿಸಿದ್ದಾರೆ. ಈ ಸರಣಿ ಟಿ20 ವಿಶ್ವಕಪ್‌ಗೆ ಮುನ್ನ ಉಭಯ ತಂಡಗಳಿಗೂ ತಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳುವ ಪ್ರಮುಖ ಅವಕಾಶವಾಗಿದೆ.

ಹೆಡ್-ಟು-ಹೆಡ್ ದಾಖಲೆಯಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದ್ದು, ಒಟ್ಟು 35 ಟಿ20 ಪಂದ್ಯಗಳಲ್ಲಿ 24 ಗೆಲುವು ಸಾಧಿಸಿದೆ. ಭಾರತ 11 ಪಂದ್ಯಗಳಲ್ಲಿ ಜಯ ಪಡೆದಿದೆ. ಆದಾಗ್ಯೂ, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಯಶಸ್ಸು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಪಂದ್ಯಗಳ ನೇರ ಪ್ರಸಾರವನ್ನು Sony Sports Network ಚಾನೆಲ್‌ಗಳಲ್ಲಿ ಹಾಗೂ SonyLIV ಆಪ್‌ನಲ್ಲಿ ವೀಕ್ಷಿಸಬಹುದು.

Continue Reading

Trending

error: Content is protected !!