Mandya
ಮತದಾನ ಹೆಚ್ಚಿಸಲು ಪ್ರತಿ ಕುಟುಂಬಕ್ಕೂ ಆಮಂತ್ರಣ ಪತ್ರಿಕೆ: ಡಾ.ಕುಮಾರ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ನಡೆಯಬೇಕೆಂಬ ಉದ್ದೇಶದಿಂದ ‘ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ’ ಎಂಬ ಆಹ್ವಾನ ಪತ್ರಿಕೆಯನ್ನು ಪ್ರತಿ ಕುಟುಂಬಕ್ಕೂ ನೀಡಲಾಗುವುದು ಎಂದು ಜಿಲ್ಲಾ ಚುನವಣಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್ಓಗಳ ಮೂಲಕ ಆಮಂತ್ರಣ ಪತ್ರಿಕೆ, ಮತಗಟ್ಟೆಯ ಸಂಖ್ಯೆ, ಕ್ರಮ ಸಂಖ್ಯೆ ವಿಳಾಸವನ್ನು ಹೊಂದಿರುವ ವೋಟರ್ ಸ್ಲಿಪ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮತದಾರರು ತಮ್ಮ ಮತಕೇಂದ್ರ ಮತ್ತು ಸಂಖ್ಯೆ ಬಗ್ಗೆ ತಿಳಿದುಕೊಳ್ಳಲು ಸಿ-ವಿಜಿಲ್ ಆ್ಯಪ್ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಚುನಾವಣಾ ಸಂಬಂಧಿ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ದೂರನ್ನು ದಾಖಲಿಸಬಹುದು, ಈಗಾಗಲೇ ಮಂಡ್ಯ ಲೋಕಸಭಾ ವ್ಯಾಪ್ತಿಗೆ ನೀರಜ್‌ಕುಮಾರ್ ಸಾಮಾನ್ಯ ವೀಕ್ಷಕರಾಗಿದ್ದು, ವೆಚ್ಚ ವೀಕ್ಷಕರಾಗಿ ರೋಹಿತ್ ಅಸುದಾನಿ, ಕುಮಾರ್ ಪ್ರೀಯತಮ್ ಅವರು ನಿರ್ವಹಿಸುತ್ತಿದ್ದಾರೆ. ದೀಪಾ ಸತ್ಯನ್ ಅವರು ಪೊಲೀಸ್ ವೀಕ್ಷಕರಾಗಿ ಆಗಮಿಸಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದ್ದು, 17,79,239 ಮಂದಿ ಮತದಾರರಿದ್ದು, ಈ ಪೈಕಿ 8,76,112 ಮಂದಿ ಪುರುಷರು, 9,02,959 ಮಂದಿ ಮಹಿಳೆಯರು ಹಾಗೂ 168 ಮಂದಿ ಇತರೆ ಮತದಾರರು ಇದ್ದಾರೆ,
ಲೋಕಸಭಾ ಚುನಾವಣೆಗೆ 2074 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ 2 ಹೆಚ್ಚುವರಿಯಾಗಿದ್ದು, 693 ಕ್ರಿಟಿಕಲ್, 33 ವರ್ನರಬಲ್, 40 ಪಿಂಕ್, ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 1 ರಂತೆ 8 ವಿಶಿಷ್ಠ ಚೇತನರು, ವಿಧಾನ ಸಭಾ ಕ್ಷೇತ್ರಕ್ಕೆ 2 ರಂತೆ 16 ಸಾಂಪ್ರದಾಯಿಕ ಮತ್ತು ಯುವ ಮತಗಟ್ಟೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲು ಸ್ವೀಪ್ ಸಮಿತಿ ಮುಂದಾಗಿದೆ ಎಂದು ತಿಳಿಸಿದರು.
ಸಿಸಿಟಿವಿ ಕ್ಯಾಮೆರಾಗಳನ್ನು 1037 ಮತಕೇಂದ್ರಗಳಲ್ಲಿ ಅಳವಡಿಸಲಾಗಿದ್ದು, ಇದು ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ ಮತ್ತು ರಾಜ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್ ರೂಂನಲ್ಲಿ ವೀಕ್ಷಿಸಬಹುದಾಗಿದೆ, ಜಿಲ್ಲೆಯಲ್ಲಿ 85 ವರ್ಷಕ್ಕೂ ಮೇಲ್ಪಟ್ಟವರು 23044 ಮಂದಿ ಇದ್ದು, ಈ ಪೈಕಿ 2569 ಮಂದಿ ಮನೆಯಿಂದಲೇ ಮತದಾನ ಮಾಡಲು ಬಯಸಿದ್ದಾರೆ, 25673 ಮಂದಿ ವಿಶಿಷ್ಠಚೇತನ ಮತದಾರರಿದ್ದು, ಈ ಪೈಕಿ 1075 ಮಂದಿ ಮನೆಯಿಂದಲೇ ಮತದಾನ ಮಾಡಲು ನಿರ್ಧರಿಸಿದ್ದಾರೆ ಎಂದರು.
ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಾದ ವ್ಹೀಲ್‌ಚೇರ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೃಷ್ಠಿ ದೋಷವುಳ್ಳವರಿಗೆ ಬ್ರೈಲ್ ಪಿಲಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ಯಾಲೆಟ್ ಪೇಪರ್ ಮಾಡಲಾಗಿದೆ. ಏ.26 ರಂದು ಲೋಕಸಭಾ ಚುನಾವಣಾ ಮತದಾನ ಮಾಡಲು ವೇತನ ಸಹಿತ ರಜೆ ಘೋಷಿಸಲಾಗಿದ್ದು, ಮತದಾನ ಮಾಡಲು ರಜೆ ನೀಡದ ಮಾಲೀಕರ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲ್ಲಿವರೆಗೆ ಕಳೆದ ಮಾ.16 ರಿಂದ 8 ವಿಧಾನ ಸಭಾ ವ್ಯಾಪ್ತಿಯಲ್ಲಿ ₹1,06,08,990 ನಗದು, ₹1.04 ಕೋಟಿ ಮೌಲ್ಯದ 5,400.82 ಲೀಟರ್ ಲಿಕ್ಕರ್, ₹2.17 ಲಕ್ಷ ಮೌಲ್ಯದ 5.704 ಕೆ.ಜಿ. ಡ್ರಗ್ ಹಾಗೂ 2 ಸಾವಿರ ಸ್ಯಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 773 ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, 743 ಮಂದಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಡೆಪಾಸಿಟ್ ಮಾಡಿದ್ದು, 28 ಮಂದಿಗೆ ವಿನಾಯಿತಿ ನೀಡಲಾಗಿದೆ. ಒಬ್ಬರು ಡೆಪಾಸಿಟ್ ಮಾಡಿಲ್ಲ ಎಂದು ಹೇಳಿದರು.
ಶುಷ್ಕ ದಿನ ಘೋಷಣೆ: 10365 ಮಂದಿ ಸರ್ಕಾರಿ ನೌಕರರು ಚುನಾವಣಾ ಪ್ರಕ್ರಿಯೆಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ಎಲ್ಲರಿಗೂ ಅಗತ್ಯ ತರಬೇತಿಗಳನ್ನು ನೀಡಲಾಗಿದೆ. ಕೆಲವರು ತರಬೇತಿಗೆ ಗೈರು ಹಾಜರಾಗಿದ್ದು, ಅವರಿಗೆ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ, ಏ.24ರ ಸಂಜೆ 6 ಗಂಟೆಯಿಂದ 27ರ ಬೆಳಿಗ್ಗೆ 6 ಗಂಟೆಗೆಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಶುಷ್ಕ ದಿನವನ್ನಾಗಿ ಘೋಷಣೆ ಮಾಡಲಾಗಿದೆ. ಜೂ.3 ಸಂಜೆ 6 ರಿಂದ 5 ಬೆಳಿಗ್ಗೆ 6 ಗಂಟೆಯವರೆಗೆ ನಗರ ವ್ಯಾಪ್ತಿ ಮತ್ತು 5.ಕಿ.ಮೀ. ವ್ಯಾಪ್ತಿಯಲ್ಲಿ ಶುಷ್ಕ ದಿನ ಘೋಷಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಸಿಇಓ ಶೇಖ್ ತನ್‌ವೀರ್ ಆಸಿಫ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದ್ದರು.
Mandya
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ

ಮಂಡ್ಯ: ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮದ್ಯೆದಲ್ಲಿಯ ಮೃತನ ಶವ ಸುಟ್ಟ ಘಟನೆಗೆ ಸಂವಂಧಿಸಿದಂತೆ ಜನಮಿತ್ರ ಪತ್ರಿಕೆ ಹಾಗೂ ಡಿಜಿಟಲ್ ವರದಿಗೆ ಫಲಶೃತಿ ದೊರೆತಿದೆ.
ಜನಮಿತ್ರ ವರದಿಯಿಂದ ಎಚ್ಚತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ರಸ್ತೆಯ ಇಕ್ಕೆಲಗಳ ಇಬ್ಬರೂ ರೈತರಿಂದ ಹತ್ತು, ಹತ್ತು ಅಡಿ ಜಾಗವನ್ನು ಸ್ಮಶಾಬದ ರಸ್ತೆಗೆ ಬಿಡಿಸಿ ಸಫಲತೆ ಕಂಡಿದೆ.
ಜನಮಿತ್ರ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳ ತಂಡ, ಸ್ಮಶಾನ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ತೆರಳುವ ರಸ್ತೆಯ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿನ ರೈತರಾದ ಅಂಧಾನಿಗೌಡ ಹಾಗೂ ಯಶೋಧಮ್ಮ ರವರಿಂದ ತಲಾ ಹತ್ತು ಹತ್ತು ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಟ್ಟುಕೊಡುವಂತೆ ಮನವಲೈಸಿದ್ದಾರೆ.
ತಾಲ್ಲೂಕು ಆಡಳಿತದ ಮದ್ಯಸ್ಥಿಕೆಯಿಂದಾಗಿ ಇದೀಗ ಹೆಬ್ಬಾಡಿಹುಂಡಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜನಮಿತ್ರ ಪತ್ರಿಕೆ ಹಾಗೂ ಜನಮಿತ್ರ ಡಿಜಿಜಿಟಲ್ ನ್ಯೂಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Mandya
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಚೆಲುವರಾಯಸ್ವಾಮಿ

ನಾಗಮಂಗಲ : ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಬಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡುತ್ತ ಮಾತನಾಡಿದರು.
ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್. ಎಚ್ ಟಿ ಕೃಷ್ಣೆ ಗೌಡ. ಪುರಸಭಾ ಅಧ್ಯಕ್ಷರು ಗಣ್ಯರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
Mandya
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ

ಮಂಡ್ಯ : ಈ ಚಿತ್ರದಲ್ಲಿರುವ ವ್ಯಕ್ತಿ ಇಂದು (ಮಾ.14) ರಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲುಗಾಡಿಯಿಂದ ಬಿದ್ದು ಗಾಯಗೊಂಡಿರುತ್ತಾರೆ.
ಸದರಿಯವರ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ, ಅಥವ ಇವರ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ ಮಾಹಿತಿ ನೀಡಲು
ರೈಲ್ವೆ ಹೊರ ಉಪ ಠಾಣೆ ಮಂಡ್ಯ ಕೋರಿದೆ.
-
Mandya8 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Kodagu8 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Mandya10 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu11 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ