Connect with us

Mandya

ಹೆಣ್ಣು ಮನೆಯ ದೀಪ ಹಾಗೂ ಲೋಕದ ದೀಪವನ್ನು ಬೆಳಗಿಸುವ ಶಕ್ತಿ ‌: ಡಾ.ಕುಮಾರ

Published

on

ಮಂಡ್ಯ : ಮಹಿಳೆಯರು ಕುಟುಂವದಲ್ಲಿ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜದಲ್ಲೂ ಕೆಲಸ ನಿರ್ವಹಿಸಿ, ಮನೆ ಮತ್ತು ಲೋಕದ ದೀಪವನ್ನು ಬೆಳಗಿಸುವ ಶಕ್ತಿಯಾಗಿದ್ದಾಳೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಅವರು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು ಎಂದರು.

ಹೆಣ್ಣಿಲ್ಲದೆ ಜೀವ ಮತ್ತು ಜೀವನವಿಲ್ಲ

ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ ಎಂದರು..

ಸ್ವಾಮಿ ವಿವೇಕನಂದರು ಮಹಿಳೆಯರಿಗೆ ಅಂತರಿಕವಾಗಿ ಮಹಾಶಕ್ತಿ ಇದೆ. ಪುರುಷರು ಮಹಿಳೆಯರ ಶಕ್ತಿ ಕುಂದಿಸದೆ ಇದ್ದರೆ ಸಾಕು. ಮಹಿಳೆ ತನಾಗಿಯೇ ಸಮಾಜದಲ್ಲಿ ಬೆಳೆಯುತ್ತಾಳೆ ಎಂದು ಹೇಳಿದ್ದಾರೆ ಅದನ್ನು ಪಾಲಿಸೋಣ.

ಮಹಿಳೆಯರನ್ನು ಪ್ರಕೃತಿ ಹಾಗೂ ಭೂಮಿಗೆ ಹೋಲಿಸುತ್ತಾರೆ. ಸೂಪರ್ ಮೆನ್ ಎಂಬ ಪದ ಕೇಳಿಬರುತ್ತದೆ. ಸೂಪರ್ ವುಮೆನ್ ಎಂಬ ಪದ ಹೇಳಲು ಸಮಾಜ ತಯಾರಿಲ್ಲ, ಇದನ್ನು ಬದಲಾಯಿಸಿ ಎಲ್ಲರೂ ಸೂಪರ್ ವುಮೆನ್ ಆಗಿ ಹೊರಹೊಮ್ಮಿ ಎಂದು ಶುಭ ಹರೈಸಿದರು. ಮಹಿಳಾ ದಿನಾಚರಣೆಗಳು ಆತ್ಮವಲೋಕಲನದ ವೇದಿಕೆಗಳಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸ್ವಾತಂತ್ರ್ಯಕ್ಕೂ ಹಿಂದೆ ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ ಇಂದು ಅಟೋ ರಿಕ್ಷಾ ದಿಂದ ಅಂತರಿಕ್ಷಾ ತಲುಪುವ ರಾಕೆಟ್ ನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ಧೆ ಇದೆ ಎಂಬುದನ್ನು ಎತ್ತಿ ತೋರುತ್ತದೆ ಎಂದರು.

ಮಹಿಳೆಯರ ರಕ್ಷಣೆ ಹಾಗೂ ಹಕ್ಕುಗಳನ್ನು ಕಪಾಡಲು ಹಲವಾರು ಬಲಿಷ್ಠ ಕಾನೂನುಗಳನ್ನು ಬಿ.ಎನ್ ಎಸ್ ಕಾಯಿದೆ ಯಲ್ಲಿ ತರಲಾಗಿದೆ‌ ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ ನೇದಾಗ ದೈರ್ಯವಾಗಿ ದನಿ ಎತ್ತಬೇಕು.

ಇಂದಿನ ಸಮಾಜದಲ್ಲಿ ಸಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ತೇಜೋವದೆ ಮಾಡಿ ಗೌರವಕ್ಕೆ ದಕ್ಕೆ ತರುತ್ತಾರೆ. ಇವುಗಳ ವಿರುದ್ಧವು ಗಟ್ಟಿಯಾಗಿ ಹೋರಾಟ ಮಾಡುವ ದಿಟ್ಟತನವನ್ನು ಮಹಿಳೆಯರು ಬೆಳಸಿಕೊಳ್ಳಬೇಕಿದೆ ಎಂದರು.

ನಂತರ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆನಂದ್.ಎಂ ಅವರು ಪ್ರಸ್ತುತ 21 ನೇ ಶತಮಾನವು ಮಹಿಳೆಯರ ಶತಮಾನ ಎಂದರೆ ತಪ್ಪಾಗುವುದಿಲ್ಲ ಈಗಿನ ಕಾಲದಲ್ಲಿ ಮಹಿಳೆಯರು ಸ್ವಭಾಲಂಬಿಯಾಗಿ ಬುದುಕುತ್ತಿರುವುದನ್ನು ನಾವು ಕಾಣಬಹುದು. ಆಟೋರಿಕ್ಷಾದಿಂದ ಹಿಡಿದು ಅಂತರಿಕ್ಷದವರೆಗೂ ಮಹಿಳೆಯರ ಸಾಧನೆ ನಿಜಕ್ಕೂ ಅಪಾರ ಎಂದರು.

ಸ್ವತಂತ್ರ ಪೂರ್ವದಲ್ಲಿ ಮಹಿಳೆಯರು ಕೇವಲ ಗೃಹ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು ಸ್ವತಂತ್ರದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನವನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಕಾನೂನಿನ ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡುವುದು ಬಹಳ ಮುಖ್ಯವಾಗಿದ್ದು ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ಸುಮಾರಾಣಿ ಅವರು ಮಹಿಳೆಯರನ್ನು ಉದ್ದೇಶಿಸಿ ಉಪನ್ಯಾಸ ನೀಡಿ, ಹೆಣ್ಣು ಶಕ್ತಿಯ ಪ್ರತಿಕಾವಾಗಿದ್ದು ಯಾರಲ್ಲಿಯೂ ಅವಲಂಬಿತವಾಗದೆ ಸ್ವತಂತ್ರವಾಗಿ, ಆತ್ಮ ವಿಶ್ವಾಸದಿಂದ ಬದುಕುವ ಶಕ್ತಿ ಬೆಳಸಿಕೊಳ್ಳಬೇಕು. ಭಯ ವಿಲ್ಲದೆ ಶೋಷಣೆಯ ವಿರುದ್ಧವಾಗಲಿ, ದೌರ್ಜನ್ಯದ ವಿರುದ್ಧವಾಗಿಲಿ ದ್ವನಿ ಎತ್ತಿ ಎದುರಿಸಬೇಕು ಎಂದು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಮಹಿಳೆಯರ ಮೇಲಿನ ಶೋಷಣೆಗೆ ಕೇವಲ ಪುರುಷರು ಮಾತ್ರ ಕಾರಣರಲ್ಲ ಮಹಿಳೆಯರು ಕೆಲವೊಮ್ಮೆ ಕಾರಣರಾಗುತ್ತಿರುವುದು ವಿಪರ್ಯಾಸ. ಮೊದಲಿಗೆ ಮಹಿಳೆಯರು ಬಾಲ್ಯ ವಿವಾಹ ಮತ್ತು ಹೆಣ್ಣು ಭ್ರೂಣಹತ್ಯೆಯನ್ನು ಪ್ರೋತ್ಸಾಹಿಸುವುದು ಅಂತ್ಯವಾಗಬೇಕು. ಮಹಿಳೆಯರ ಸಹಾಯಕ್ಕಾಗಿ ಮಹಿಳೆಯರು ಜೋತೆಯಲ್ಲಿ ನಿಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜ ಮೂರ್ತಿ, ಆಯುಷ್ ಇಲಾಖೆಯ ಹಿರಿಯ ವೈದ್ಯಧಿಕಾರಿ ಬಿ. ಎಸ್ ಸೀತಾಲಕ್ಷ್ಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರೂಪಶ್ರೀ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶರಾದ ಎಸ್ ಹೆಚ್ ನಿರ್ಮಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Mandya

ಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್

Published

on

ಮಂಡ್ಯ: ದಿ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಫೆ.18 ರಂದು ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20214-15ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಆಯೋಜಿಸಿದ್ದರು. ಅಂದಿನಿಂದ ಹತ್ತು ವರ್ಷಗಳು ಯಾವುದೇ ಸಭೆ ಮಾಡಿರಲಿಲ್ಲ. ಇದೀಗ 2015-16ನೇ ಸಾಲಿನ ಸಭೆಯನ್ನು ಅಂದು ಬೆಳಿಗ್ಗೆ10 ಗಂಟೆಗೆ, 2016-17ನೇ ಸಾಲಿನ ಸಭೆಯನ್ನು ಮಧ್ಯಾಹ್ನ12ಗಂಟೆಗೆ ಆಯೋಜಿಸಲಾಗಿದೆ ಎಂದರು.

ಮೈಶುಗರ್ ಕಂಪನಿಯ82 ಹಾಗೂ83ನೇ ಸಾಲಿನ ವಾರ್ಷಿಕ ವರದಿಯನ್ನು ವಿತರಣೆ ಮಾಡಲಾಗುತ್ತಿದೆ. ಆಡಿಟ್ ವರದಿಯನ್ನು ಸದಸ್ಯರು ಕಂಪನಿಯಿಂದ ಪಡೆಯಬಹುದಾಗಿರುತ್ತದೆ. ಸದಸ್ಯರು ಯಾವುದೇ ಪ್ರಶ್ನೆ ಕೇಳುವುದಿದ್ದರೆ ಫೆ.12ನೇ ತಾರೀಖಿನೊಳಗೆ ಲಿಖಿತ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು.

ಮೈಶುಗರ್ ಕಂಪನಿಗೆ ಸಂಬಂಧಿಸಿದಂತೆ 2017ರಿಂದ 2025ರವರೆಗಿನ ವಾಷಿರ್ಕ ವರದಿಯೂ ಸಿದ್ದವಾಗಿದೆ. ಅದನ್ನೂ ಸಂಪೂರ್ಣವಾಗಿ ಐಟಿ ಫೈಲ್ ಮಾಡಿಸಿ ಅಂತಿಮ ಮಾಡಲಾಗುವುದು. ಈ ಮೂಲಕ ಕಂಪನಿಯ ಶೇರುದಾರರಿಗೆ ಮಾಹಿತಿ ಒದಗಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಕಾರ್ಖಾನೆಯನ್ನು ಸಬಲೀಕರಣಗೊಳಿಸು300 ಕೋಟಿ ಗೂ ಹೆಚ್ಚು ಆರ್ಥಿಕ ಶಕ್ತಿ ತುಂಬಿರುವ ಸಲುವಾಗಿ ಸಭೆಯಲ್ಲಿ ಮಾಹಿತಿ ನೀಡಲಾಗುವುದು. ಸಭೆಗೆ ಕಾರ್ಖಾನೆಯ ಸಂಸ್ಥಾಪಕ ಕೋಲ್ಮನ್ ಅವರ ಕುಟುಂಬದಿಂದ ಯಾರನ್ನಾದರೂ ಓರ್ವ ಸದಸ್ಯರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸರಕಾರದಿಂದ113.5 ಕೋಟಿ ಸರಕಾರದಿಂದ ಆರ್ಥಿಕ ಶಕ್ತಿ ನೀಡಲಾಗಿದೆ. ಸರಕಾರೇತರವಾಗಿ2024ರ ಜುಲೈನಲ್ಲಿ ಐಟಿ ಮುಕ್ತವಾಗಿದ್ದೇವೆ. 127 ಕೋಟಿ ಜಿಓಗೆ ಸರಕಾರಿ ಆದೇಶವಾಗಿದೆ. 300 ಕೋಟಿ ಬೆಲೆ ಬಾಳುವ 27ಎಕರೆ ಭೂಮಿಯ ವಶಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಂಗಾಮಿಗೆ5.70 ಲಕ್ಷ ಟನ್ ಒಪ್ಪಿಗೆ ಮಾಡಿಕೊಂಡಿದ್ದು, ಎಲ್ಲವನ್ನು ನುರಿಸುವ ಪ್ರಯತ್ನ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೌಡ್ಲೆ ಚನ್ನಪ್ಪ, ಸ್ವಾಮೀಗೌಡ, ಸುಂಡಹಳ್ಳಿ ಮಂಜುನಾಥ ಇತರರಿದ್ದರು.

Continue Reading

Mandya

14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಿದ ಎಂ.ಎ.ಹಾಲಪ್ಪ

Published

on

ಮದ್ದೂರು: ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ 14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು ಎಂದು ಯೋಜನಾಧಿಕಾರಿ ಎಂ.ಎ.ಹಾಲಪ್ಪ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಯರಗನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರಹೆಗ್ಗಡೆ ದಂಪತಿ ಆಶಯದಂತೆ ಆಸಹಾಯಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರದಿಂದ 3 ಸಾವಿರದವರೆಗೆ ಮಾಶಾಸನ ನೀಡಲಾಗುತ್ತಿದೆ ಎಂದರು.

ಇದೇ ರೀತಿ ಮೂಲ ಸೌಕರ್ಯಗಳಿಂದ ವಂಚಿತರಾದ ಕುಟುಂಬಗಳಿಗೆ ವಾತ್ಸಲ್ಯ ಮನೆ, ಶೌಚಾಗೃಹ, ಸ್ನಾನಗೃಹ, ಮನೆ ರಿಪೇರಿ, ಸೋಲಾರ್ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಒದಗಿಸಿಕೊಡಲಾಗುತ್ತಿದೆ. ತಾಲೂಕಿನಲ್ಲಿ 81 ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ ಎಂದ ಅವರು, ರಾಜ್ಯದಾದ್ಯಂತ ಒಂದೇ ದಿನ ವಾತ್ಸಲ್ಯ ಕಿಟ್ ವಿತರಣೆ ನಡೆಯಿತು ಎಂದು ಹೇಳಿದರು.


ಮುಖಂಡರಾದ ರಾಮಕೃಷ್ಣ ಯರಗನಹಳ್ಳಿ, ಸಚಿನ್ ಯರಗನಹಳ್ಳಿ, ಪ್ರೀತಂ ಕದಲೂರು, ಮಂಜು ತಗ್ಗಳ್ಳಿ, ಸುಕನ್ಯಾ ಹೊಸಳ್ಳಿ, ಕೃಷ್ಣ ಕಿಳಘಟ್ಟ, ನಾಗರಾಜ್ ದೊಡ್ಡರಸಿನಕೆರೆ, ಚಿಕ್ಕೋನು ದೊಡ್ಡರಸಿನಕೆರೆ, ವೆಂಕಟೇಶ್ ಇದ್ದರು.

Continue Reading

Mandya

ಅರ್ಹ ಮಕ್ಕಳು ಜಂತು ನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ: ಡಾ. ಶ್ರೀಧರ್

Published

on

ಶ್ರೀರಂಗಪಟ್ಟಣ: ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದಡಿಯಲ್ಲಿ ಯಾವುದೇ ಮಗು ಜಂತು ನಿವಾರಕ ಮಾತ್ರೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕೆಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ಸಿ ಎಂ ಹೇಳಿದರು.

ಅವರು ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದ ಅಂಗವಾಗಿ ಅಧಿಕಾರಿಗಳಿಗಾಗಿ ಏರ್ಪಡಿಸಿದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬರುವ ಜಂತು ಬಾಧೆ, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟುವ ಸಲುವಾಗಿ ರಾಜ್ಯಾದ್ಯಂತ ಫೆ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಹಮ್ಮಿಕೊಳ್ಳಲಾಗಿದ್ದು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತು ನಿವಾರಣ ಅಲ್ಬಂಡಾಜೋಲ್ ಮಾತ್ರೆಗಳನ್ನು ಅಂಗನವಾಡಿ ಕೇಂದ್ರದ ಮಕ್ಕಳಿಗೆ,ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತಪ್ಪದೆ ನೀಡಬೇಕು ಜತೆಗೆ ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಂತುಹುಳು ನಿವಾರಣ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು. ತರಬೇತಿ ಕಾರ್ಯಗಾರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್,ಜಿ ಬಿ ಹೇಮಣ್ಣ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಯರಾಮ್ ಟಿ ಬಿ,ಚಿಕ್ಕ ಬೋರಯ್ಯ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ್,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಣ್ಯವತಿ, ಶಾಂತರಾಮ,ನರ್ಸಿಂಗ್ ಅಧಿಕಾರಿ ಕುಸುಮ,ವಸತಿ ಶಾಲಾ ನರ್ಸಿಂಗ್ ಅಧಿಕಾರಿ ಶಿವಮ್ಮ,ತ್ರಿವೇಣಿ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ,ಲಲಿತಾ ಹಾಗೂ ಎಲ್ಲಾ ಶಾಲೆಯ ವಿಜ್ಞಾನ ಶಿಕ್ಷಕರು,ಕ್ಷೇತ್ರ ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.

Continue Reading

Trending

error: Content is protected !!