Connect with us

Hassan

ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ

Published

on

ಹಾಸನ : ಇಶಾ ಚೈತನ್ಯ ಫೌಂಡೇಶನ್‌ನಲ್ಲಿ, ಆರೋಗ್ಯಕರ, ಸುರಕ್ಷಿತ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮದೊಂದಿಗೆ ನಾವು ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿದ್ದೇವೆ.

ಕಾರ್ಯಕ್ರಮದಲ್ಲಿ ನಮ್ಮ ಗೌರವಾನ್ವಿತ ಸಂಪನ್ಮೂಲ ವ್ಯಕ್ತಿಗಳಿಂದ ಒಳನೋಟವುಳ್ಳ ಭಾಷಣಗಳು ನಡೆದವು, ಅವರು ಮಾದಕ ದ್ರವ್ಯ ದುರುಪಯೋಗದ ಕಾರಣಗಳು, ಸಾಮಾಜಿಕ ಅಂಶಗಳು ಮತ್ತು ಪರಿಣಾಮಗಳನ್ನು ಚರ್ಚಿಸಿದರು. ಗೆಳೆಯರ ಒತ್ತಡ, ನಿರುದ್ಯೋಗ, ಕೌಟುಂಬಿಕ ಸಂಘರ್ಷಗಳು, ಮಾನಸಿಕ ಆರೋಗ್ಯ ಸವಾಲುಗಳು, ಸಾಮಾಜಿಕ ಪ್ರತ್ಯೇಕತೆ ಮತ್ತು ಅರಿವಿನ ಕೊರತೆಯಂತಹ ಸಮಸ್ಯೆಗಳು ಮಾದಕ ದ್ರವ್ಯ ದುರುಪಯೋಗಕ್ಕೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಅವರು ಎತ್ತಿ ತೋರಿಸಿದರು. ತಡೆಗಟ್ಟುವಿಕೆ, ಆರಂಭಿಕ ಹಸ್ತಕ್ಷೇಪ, ಚಿಕಿತ್ಸೆ ಮತ್ತು ಪುನರ್ವಸತಿಯ ಮಹತ್ವವನ್ನು ಒತ್ತಿ ಹೇಳುವಾಗ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ವ್ಯಸನದ ವಿನಾಶಕಾರಿ ಪರಿಣಾಮವನ್ನು ಅವರು ವಿವರಿಸಿದರು.

ವ್ಯಸನವನ್ನು ಜಯಿಸಲು ವೈಯಕ್ತಿಕ ನಿರ್ಣಯ ಮಾತ್ರವಲ್ಲದೆ ಕುಟುಂಬಗಳು, ಸಮುದಾಯಗಳು, ಆರೋಗ್ಯ ವೃತ್ತಿಪರರು ಮತ್ತು ಒಟ್ಟಾರೆಯಾಗಿ ಸಮಾಜದ ಸಾಮೂಹಿಕ ಬೆಂಬಲವೂ ಅಗತ್ಯ ಎಂದು ಈ ಕಾರ್ಯಕ್ರಮವು ನೆನಪಿಸಿತು. ಒಟ್ಟಾಗಿ, ನಾವು ವ್ಯಸನದ ಸುತ್ತಲಿನ ಕಳಂಕವನ್ನು ಮುರಿಯಬಹುದು ಮತ್ತು ಜನರು ತಮ್ಮ ಜೀವನವನ್ನು ಘನತೆ ಮತ್ತು ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡಬಹುದು.

“ಮಾದಕ ದ್ರವ್ಯಗಳಿಗೆ ಬೇಡ ಎಂದು ಹೇಳಿ. ಜೀವನಕ್ಕೆ ಹೌದು ಎಂದು ಹೇಳಿ. ಒಟ್ಟಾಗಿ, ನಾವು ಮಾದಕ ದ್ರವ್ಯ ಮುಕ್ತ ಭವಿಷ್ಯವನ್ನು ರಚಿಸಬಹುದು.”

Continue Reading

Hassan

ಪಂಚಭೂತಗಳಲ್ಲಿ ಲೀನರಾದ ಚೆನ್ನಮ್ಮ ದೇವೇಗೌಡ

Published

on

ಹಾಸನ/ ಮಾವಿನಕೆರೆ: ಚೆನ್ನಮ್ಮ ದೇವೇಗೌಡ ಅವರ ಕಿರಿಯ ಮಗ  ಡಾ.ಎಚ್‌.ಡಿ.  ರಮೇಶ್‌ ಗೌಡ ಅವರು, ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಸಮೀಪವಿರುವ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮನವರ ಸುಮಾರು 5.45  ಗಂಟೆಗೆ ಅಂತ್ಯಕ್ರಿಯೆಯನ್ನು  ಅಂತಿಮ ವಿಧಿವಿಧಾನದಂತೆ ನೆರವೇರಿಸಿದ್ದಾರೆ.

ಚೆನ್ನಮ್ಮನವರಿಗೆ ಸಕಲ ರಾಜ್ಯ ಸರ್ಕಾರದ ಗೌರವಗಳೊಂದಿಗೆ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್, ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ , ವಿ. ಸೋಮಣ್ಣ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಶ್ರೇಯಸ್‌ ಎಂ. ಪಟೇಲ್‌, ಡಾ.ಕೆ.ಸುಧಾಕರ್‌, ಬಿ.ವೈ.ರಾಘವೇಂದ್ರ , ಡಾ.ಸಿ.ಎನ್‌.ಮಂಜುನಾಥ್‌, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್‌, ಹಾಸನ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎನ್‌.ಚಲುವರಾಯಸ್ವಾಮಿ, ಜಮೀರ್‌ ಅಹಮದ್‌ ಖಾನ್‌, ಸುರೇಶ್‌ ಬಾಬು, ಸೂರಜ್‌ ರೇವಣ್ಣ,  ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಐಜಿಪಿ ಡಾ. ಸಲೀಂ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ, ಸಿ.ಎಸ್‌.ಪುಟ್ಟರಾಜು, ಮಾಜಿ ಶಾಸಕ ಸಾ.ರಾ.ಮಹೇಶ್‌, ಎಚ್‌.ಆಂಜನೇಯ, ಮಾಜಿ ಸಚಿವರಾದ, ಗೋಪಾಲಯ್ಯ, ರಾಮಣ್ಣ, ಎಚ್‌.ಕೆ.ಕುಮಾರಸ್ವಾಮಿ, ಶಾಸಕರಾದ ಎ.ಮಂಜು, ಟಿ.ಡಿ.ರಾಜೇಗೌಡ, ಎಚ್.ಕೆ.ಸುರೇಶ್‌, ಸಿಮೆಂಟ್‌ ಮಂಜು, ಡಾ.ರಂಗನಾಥ್‌, ಸುರೇಶ್‌ ಗೌಡ, ಭೋಜೇಗೌಡ, ಜಿ.ಡಿ.ಹರೀಶ್‌ ಗೌಡ, ಸಿ.ಎನ್‌.ಕೃಷ್ಣೇಗೌಡ, ಕೆ.ಹರೀಶ್‌ ಗೌಡ, ಮುನಿರತ್ನ, ಗಣಿಗ ರವಿ, ಸ್ವರೂಪ್‌ ಪ್ರಕಾಶ್‌, ಶರವಣ, ಮಾಜಿ ಸಂಸದ ಪ್ರತಾಪ್‌ ಸಿಂಹ, ಸೊಸೆಯಾದ ಅನಿತಾ ಕುಮಾರಸ್ವಾಮಿ, ಮಕ್ಕಳಾದ ಅನಸೂಯ ಮಂಜುನಾಥ್‌, ಶೈಲಜಾ ಚಂದ್ರಶೇಖರ್‌, ಮೊಮ್ಮಗನಾದ ನಿಖಿಲ್‌ ಕುಮಾರ್‌ ಸ್ವಾಮಿ ಅವರು ಅಂತಿಮ   ಪುಷ್ಪಾ ನಮನ ಸಲ್ಲಿಸಿದ್ದಾರೆ. 

ರಾಷ್ಟ್ರಧ್ವಜವನ್ನು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಪ್ರಧಾನಿ ಹಾಗೂ ಪತಿ ಎಚ್.ಡಿ.ದೇವೇಗೌಡರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್‌ ಇಲಾಖೆ ಹಾಗೂ  ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ. ಆನಂತರ ಕುಟುಂಬಸ್ಥರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನಮಸ್ಕರಿಸಿದ್ದಾರೆ.

 

Continue Reading

Hassan

ಎತ್ತಿನಗಾಡಿಯಲ್ಲಿ ದೇವರ ಒಡವೆ ವಸ್ತ್ರ ಮೆರವಣಿಗೆ: ಮಲೆಕಲ್ಲು ತಿರುಪತಿ ಜಾತ್ರೆಗೆ ಸಂಪ್ರದಾಯದ ಚಾಲನೆ

Published

on

ಅರಸೀಕೆರೆ: ತಾಲೂಕಿನ ಇತಿಹಾಸ ಇನ್ನಲೆ ಹೊಂದಿರುವ ಮಾಲೆ ಕಲ್ಲು ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಜಾತ್ರಾ ಮಹೋತ್ಸವ ಜರಿಗಿದ್ದು ಮಲೆಕಲ್ಲು ತಿರುಪತಿ ಗ್ರಾಮಸ್ಥರು ಸಂಪ್ರದಾಯ ಸಮೇತ ತಾಲೂಕು ಕಚೇರಿಗೆ ಆಗಮಿಸಿ ದೇವರ ಒಡವೆ ವಸ್ತ್ರ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಮೂಲಕ ಆಗಮಿಸಿದರು.


ನಂತರ ಸಂಪ್ರದಾಯ ಸಮೇತ ಎತ್ತಿನಗಾಡಿಯಲ್ಲಿ ದೇವರ ಒಡವೆ ವಸ್ತ್ರ ಇಟ್ಟು ತಾಲೂಕು ಕಚೇರಿ ಮುಂಭಾಗ ದೇವರ ಒಡವೆಗೆ ಪೂಜೆ ಸಲ್ಲಿಸಿದರು, ನಿರ್ವಿಘ್ನವಾಗಿ ಜಾತ್ರಾ ಮಹೋತ್ಸವ ನಡೆಯಲಿ ಎಂದು ಗ್ರೇಡ್-2 ತಹಶೀಲ್ದಾರ್ ಪಾಲಾಕ್ಷ ಪೂಜೆ ಸಲ್ಲಿಸಿ ಮಾತನಾಡಿದರು. ನಂತರ ಪೊಲೀಸ್ ಸರ್ಪಗಾವಳಿನಲ್ಲಿ ಎತ್ತಿನಗಾಡಿ ಮೂಲಕ ರಸ್ತೆ ಮಾರ್ಗವಾಗಿ ತಿರುಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು.
ಈ ಸಂದರ್ಭದಲ್ಲಿ ಹಾಜರಿದ್ದ ಶಿರಸ್ತೆದಾರ್ ಶಿವಶಂಕರ್,ಚೇತನ್ ಸಿಬ್ಬಂದಿಗಳು ಹಾಜರಿದ್ದರು.


ಮಲೆಕಲ್ಲು ತಿರುಪತಿ ಗ್ರಾಮಸ್ಥರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರೀಶ್, ಲೋಕಣ್ಣ, ಬೊಮ್ಮೇನಹಳ್ಳಿ ಪರಮಶಿವಯ್ಯ ಪ್ರಧಾನ ಅರ್ಚಕಗಳಾದ ರಾಮ್ ಪ್ರಸಾದ್ ವರದರಾಜು ಇತರೆ ಅರ್ಚಕರುಗಳಾದ ಗಿರಿ ಕೇಸರಿ, ಶ್ರೀನಿವಾಸ್ ಊರಿನವರು ಪ್ರಮುಖ ಮುಖಂಡರು ಹಾಜರಿದ್ದರು.

Continue Reading

Hassan

ನೀಟ್–ಜೆಇಇ ಫಲಿತಾಂಶದಲ್ಲಿ ಹೊಸ ಇತಿಹಾಸ ಬರೆದ ಪಾಠಶಾಲಾ ನೀಟ್ ಅಕಾಡೆಮಿ

Published

on

ಹಾಸನ : ಪಾಠಶಾಲಾ ನೀಟ್ ಅಕಾಡೆಮಿ ಸಂಸ್ಥೆಯು 2021ರ ಫೆಬ್ರವರಿ ತಿಂಗಳಿನಲ್ಲಿ ಕೆಆರ್ ಪುರಂನ ಸ್ಮಾರ್ಟ್ ಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭವಾಯಿತು ನಂತರ ಸತತ ನಾಲ್ಕು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಿ ತನ್ನ ಎರಡನೇ ಅಂಗ ಸಂಸ್ಥೆಯನ್ನು ಕುವೆಂಪು ನಗರದ ಕೆಎನ್‌ಟಿ ಟವರ್ ಎಂಬ ಕಟ್ಟಡದಲ್ಲಿ 2024 ರ ಡಿಸೆಂಬರ್ ತಿಂಗಳಿನಲ್ಲಿ ಸ್ಥಾಪನೆಯಾಯಿತು. ಹಾಸನ ಜಿಲ್ಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಎನ್‌ಇಇಟಿ ಹಾಗೂ ಜೆಇಇ ಪರೀಕ್ಷೆಗಳಿಗೆ ಅತ್ಯಂತ ನುರಿತ ಶಿಕ್ಷಕರಿಂದ ವಿದ್ಯಾಭ್ಯಾಸ ಒದಗಿಸುವುದು ತನ್ಮೂಲಕ ಜಿಲ್ಲೆಯ ಸ್ಥಳೀಯ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರು ನಗರಗಳಿಗೆ ವ್ಯಾಸಂಗಕ್ಕೆ ಹೋಗುವ ಅವಶ್ಯಕತೆಯನ್ನು ಇಲ್ಲವಾಗಿಸುವುದು ಸಂಸ್ಥೆಯ ಪ್ರಾರಂಭದ ಉದ್ದೇಶವಾಗಿತ್ತು.


ಹಾಸನದ ಜನತೆಗೆ ನಮ್ಮ ಸಂಸ್ಥೆ ಮೇಲೆ ಪ್ರಾಥಮಿಕ ದಿನಗಳಲ್ಲಿ ವಿಶ್ವಾಸದ ಕೊರತೆ ಇದ್ದರೂ ಸಹ ನಮ್ಮ ಬಿಡದ ಹಠದಿಂದ ನಮಗೆ ಒಂದು ಲಾಂಗ್‌ಟರ್ಮ್ ನೀಟ್ ಬ್ಯಾಚ್‌ನಷ್ಟು ಪ್ರವೇಶಾತಿ ಪಡೆಯಲು ದಾರಿ ಮಾಡಿಕೊಟ್ಟಿತು,2022ನೇ ನೀಟ್ ಪರೀಕ್ಷೆಯಲ್ಲಿ ಪ್ರವೇಶಾತಿ ಪಡೆದಿದ್ದ ಕೇವಲ 24 ವಿದ್ಯಾರ್ಥಿಗಳಲ್ಲಿ ಒಂಭತ್ತು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ ಸಿಕ್ಕಿದ್ದು, ಆಶೀಶ್ ಎಂಬ ವಿದ್ಯಾರ್ಥಿ 636 ಅಂಕಗಳೊಂದಿಗೆ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಂಮಿದ್ದರು. ಪಟ್ಟು ಬಿಡದ ಶ್ರಮದೊಂದಿಗೆ ತರಗತಿ ಸಮಯವನ್ನು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ, ವಾರದ ಪ್ರತಿದಿನವನ್ನು ಮೀಸಲಿಡಲು ನಿರ್ಧರಿಸಿದ ನಮಗೆ ಹಾಸನದ ಜನತೆ ಕಾಲಕ್ರಮೇಣ ಹೆಚ್ಚಿನ ಮಕ್ಕಳನ್ನು ನೀಡತೊಡಗಿತು. 2023ರ ಬ್ಯಾಚಿನಲ್ಲಿ ಸುಹಾನಿ ಎಂಬ ವಿದ್ಯಾರ್ಥಿನಿ 646 ಅಂಕಗಳಿಸಿ ಮೈಸೂರಿನ ಎಂಎಂಸಿ ಕಾಲೇಜಿಗೆ ಪ್ರವೇಶ ಪಡೆದ ಹಾಸನ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ಆಗಿದ್ದರು.
ನಂತರದ ದಿನಮಾನದಲ್ಲಿ ಇತಿಹಾಸ ರಚಿಸಿದ ನಮ್ಮ ನೀಟ್ ಕೇಂದ್ರದಲ್ಲಿ 2024ರಲ್ಲಿ ಸುಹಾಸ್ ಎಂಬ ವಿದ್ಯಾರ್ಥಿ ಐತಿಹಾಸಿಕ 705 ಅಂಕ ಪಡೆದು ಎಐಆರ್-1052 ಪಡೆದು AIIMs ಗೆ ಪ್ರವೇಶಾತಿ ಪಡೆದು ಇಡೀ ಜಿಲ್ಲೆಯ ನೀಟ್ ಪರೀಕ್ಷೆಯ ಫಲಿತಾಂಶದ ಹೊಸ ಮೈಲುಗಲ್ಲು ಸೃಷ್ಟಿಸಿದರು ಅಲ್ಲದೆ ರೀತನ್ ಎಂಬ ವಿದ್ಯಾರ್ಥಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಕೈಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.


ಪ್ರಸಕ್ತ ಸಾಲಿನಲ್ಲಿ 600 ಅಂಕಗಳಿಗಿಂತ ಹೆಚ್ಚಿನ ಅಂಕ ಪಡೆದ ಎರಡು ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ನೀಡಿದ ಹಾಸನದ ಏಕೈಕ ವಿಶ್ವಾಸ ಸಂಸ್ಥೆ ಪಾಠಶಾಲಾ ಆಗಿದೆ. 2026ರಲ್ಲಿ ಕ್ರಮವಾಗಿ ಒಂದರಿಂದ ಐದು ವಿದ್ಯಾರ್ಥಿಗಳು 2026 ರ ಜೆಇಇ ಮೇನ್ಸ್ – 2 ರ ಟಾಪರ್ ಆಗಿದ್ದು ಇದರ ಹೆಗ್ಗಳಿಕೆಯಾಗಿದೆ ಈ ವರ್ಷ ಅಭಿಜ್ಞಾ 605 ಹಾಗೂ ಚಿನ್ಮಯಿ 600 ಅಂಕ ಗಳಿಸಿ ನೀಟ್‌ನಲ್ಲಿ ಜಿಲ್ಲಾ ಟಾಪರ್ಸ್ ಆಗಿದ್ದಾರೆ. ನಮ್ಮಲ್ಲಿ ಮಕ್ಕಳಿಗೆ ಎಸಿ ಕ್ಲಾಸ್‌ರೂಮ್ಸ್, ಡಿಜಿಟಲ್ ಬೋರ್ಡ್ ನಂತಹ ಹೈಟೆಕ್ ಕ್ಲಾಸ್ ರೂಮ್‌ಗಳು ಇರುವ ಹಾಸನದ ಏಕೈಕ ಸಂಸ್ಥೆ ಪಾಠಶಾಲೆಯಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್, 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎಎಂಎಸ್, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಡಿಎಸ್, ಅಲ್ಲದೆ ಸಾಕಷ್ಟು ಉಚಿತ ಇಂಜಿನಿಯರಿಂಗ್ ಸೀಟ್ ಕೊಡಿಸಿದ ಹಾಸನದ ಮಣ್ಣಿನ ಮಕ್ಕಳ ಸಂಸ್ಥೆಯಾಗಿದೆ.


ನೂರಾರು ಬ್ರಾಂಚ್‌ಗಳುಳ್ಳ, ಆರ್ಥಿಕ ಬಲ ಉಳ್ಳ ಸಂಸ್ಥೆಗಳು ಮಾಡದ ಸಾಧನೆಯನ್ನು ಮಾಡಿ ನಮ್ಮೂರಿನ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತಮ್ಮಿಷ್ಟದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ 400ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಶುಲ್ಕದಲ್ಲಿ ಶೇಕಡ 30ರಷ್ಟು ರಿಯಾಯಿತಿ ನೀಡುವ ಯೋಜನೆ ಈ ವರ್ಷದಿಂದ ಪ್ರಾರಂಭವಾಗಲಿದೆ.
ವಿದ್ಯಾರ್ಥಿಗಳಲ್ಲಿ ಶಿಸ್ತು, ಕ್ರಮಬದ್ಧ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿ ಹಾಸನದ ಮಕ್ಕಳು ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ಪಡೆಯಲು ನಾವು ಉತ್ತಮ ತರಬೇತಿ ನೀಡಲು ಸಿದ್ದರಿದ್ದು ಹಾಸನ ಜಿಲ್ಲೆಯ ನಾಗರಿಕರು ನಮ್ಮೊಂದಿಗೆ ಕೈಜೋಡಿಸಲು ಕೇಳಿಕೊಳ್ಳುತ್ತೇವೆ.

Continue Reading

Trending

error: Content is protected !!