Mandya
ನರೇಗಾ ಯೋಜನೆಯ ಮೂಲಕ ಶಾಲೆಯ ಸಮಗ್ರವಾಗಿ ಅಭಿವೃದ್ಧಿಗೆ ಸೂಚನೆ: ಜಿಪಂ ಸಿಇಒ
ಮಂಡ್ಯ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಯನ್ನು ಸೇರಿಸಿ ಪ್ರತಿಯೊಂದು ಶಾಲೆಯನ್ನು ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಅನುಷ್ಠಾನಮಾಡಿ ಅಭಿವೃದ್ಧಿ ಸಾಧಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ಮಳವಳ್ಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ವಹಿಸಬೇಕು, ಸರ್ಕಾರದ ಎಲ್ಲಾ ಯೋಜನೆಯ ಹಣವನ್ನು ದುರುಪಯೋಗವಾಗದಂತೆ ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೆಲಸ ನಿರ್ವಹಿಸಬೇಕು ಹಾಗೂ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಅವರು ಅನುಷ್ಠಾನ ಇಲಾಖೆಗಳು ನಿಗದಿತ ಅವಧಿಯೊಳಗೆ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಸಿಇಒ ನಂದಿನಿ.ಕೆ.ಆರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಗರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ತುಸು ಕಾಲ ಸಮಯ ಕಳೆದರು. ಕೇಂದ್ರದಲ್ಲಿ ಅಳವಡಿಸಿರುವ ವಿವಿಧ ಚಾರ್ಟಗಳನ್ನು ಮಕ್ಕಳಿಗೆ ತೋರಿಸಿ ಹೆಸರು ಹೇಳಲು ಸೂಚಿಸಿದಾಗ ಮಕ್ಕಳು ಅವುಗಳ ಹೆಸರು ಹೇಳಿದರು. ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆ ಪೋಷಣ ಟ್ರಾಕರ್ ದಾಖಲಾತಿ ಹಾಗೂ ತೂಕ, ಎತ್ತರ ಪರಿಶೀಲನೆ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಉಪಾಹಾರ ಮತ್ತು ಕೋಳಿ ಮೊಟ್ಟೆಗಳನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಿವಾಸ್. ಹೆಚ್.ಜಿ, ತಾಲ್ಲೂಕು ಯೋಜನಾಧಿಕಾರಿಗಳಾದ ದೀಪು, ಪಂ.ರಾ.ಸಹಾಯಕ ನಿರ್ದೇಶಕರಾದ ಪಾರ್ಥಸಾರಥಿ, ಗ್ರಾ.ಉ.ಸಹಾಯಕ ನಿರ್ದೇಶಕರಾದ ಲಿಂಗರಾಜು, ಎಲ್ಲಾ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ತಾಲ್ಲೂಕಿನ ಎಲ್ಲಾ ಪಿಡಿಒಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
Mandya
ಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
ಮಂಡ್ಯ: ದಿ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಫೆ.18 ರಂದು ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20214-15ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಆಯೋಜಿಸಿದ್ದರು. ಅಂದಿನಿಂದ ಹತ್ತು ವರ್ಷಗಳು ಯಾವುದೇ ಸಭೆ ಮಾಡಿರಲಿಲ್ಲ. ಇದೀಗ 2015-16ನೇ ಸಾಲಿನ ಸಭೆಯನ್ನು ಅಂದು ಬೆಳಿಗ್ಗೆ10 ಗಂಟೆಗೆ, 2016-17ನೇ ಸಾಲಿನ ಸಭೆಯನ್ನು ಮಧ್ಯಾಹ್ನ12ಗಂಟೆಗೆ ಆಯೋಜಿಸಲಾಗಿದೆ ಎಂದರು.

ಮೈಶುಗರ್ ಕಂಪನಿಯ82 ಹಾಗೂ83ನೇ ಸಾಲಿನ ವಾರ್ಷಿಕ ವರದಿಯನ್ನು ವಿತರಣೆ ಮಾಡಲಾಗುತ್ತಿದೆ. ಆಡಿಟ್ ವರದಿಯನ್ನು ಸದಸ್ಯರು ಕಂಪನಿಯಿಂದ ಪಡೆಯಬಹುದಾಗಿರುತ್ತದೆ. ಸದಸ್ಯರು ಯಾವುದೇ ಪ್ರಶ್ನೆ ಕೇಳುವುದಿದ್ದರೆ ಫೆ.12ನೇ ತಾರೀಖಿನೊಳಗೆ ಲಿಖಿತ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು.
ಮೈಶುಗರ್ ಕಂಪನಿಗೆ ಸಂಬಂಧಿಸಿದಂತೆ 2017ರಿಂದ 2025ರವರೆಗಿನ ವಾಷಿರ್ಕ ವರದಿಯೂ ಸಿದ್ದವಾಗಿದೆ. ಅದನ್ನೂ ಸಂಪೂರ್ಣವಾಗಿ ಐಟಿ ಫೈಲ್ ಮಾಡಿಸಿ ಅಂತಿಮ ಮಾಡಲಾಗುವುದು. ಈ ಮೂಲಕ ಕಂಪನಿಯ ಶೇರುದಾರರಿಗೆ ಮಾಹಿತಿ ಒದಗಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಕಾರ್ಖಾನೆಯನ್ನು ಸಬಲೀಕರಣಗೊಳಿಸು300 ಕೋಟಿ ಗೂ ಹೆಚ್ಚು ಆರ್ಥಿಕ ಶಕ್ತಿ ತುಂಬಿರುವ ಸಲುವಾಗಿ ಸಭೆಯಲ್ಲಿ ಮಾಹಿತಿ ನೀಡಲಾಗುವುದು. ಸಭೆಗೆ ಕಾರ್ಖಾನೆಯ ಸಂಸ್ಥಾಪಕ ಕೋಲ್ಮನ್ ಅವರ ಕುಟುಂಬದಿಂದ ಯಾರನ್ನಾದರೂ ಓರ್ವ ಸದಸ್ಯರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸರಕಾರದಿಂದ113.5 ಕೋಟಿ ಸರಕಾರದಿಂದ ಆರ್ಥಿಕ ಶಕ್ತಿ ನೀಡಲಾಗಿದೆ. ಸರಕಾರೇತರವಾಗಿ2024ರ ಜುಲೈನಲ್ಲಿ ಐಟಿ ಮುಕ್ತವಾಗಿದ್ದೇವೆ. 127 ಕೋಟಿ ಜಿಓಗೆ ಸರಕಾರಿ ಆದೇಶವಾಗಿದೆ. 300 ಕೋಟಿ ಬೆಲೆ ಬಾಳುವ 27ಎಕರೆ ಭೂಮಿಯ ವಶಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಂಗಾಮಿಗೆ5.70 ಲಕ್ಷ ಟನ್ ಒಪ್ಪಿಗೆ ಮಾಡಿಕೊಂಡಿದ್ದು, ಎಲ್ಲವನ್ನು ನುರಿಸುವ ಪ್ರಯತ್ನ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೌಡ್ಲೆ ಚನ್ನಪ್ಪ, ಸ್ವಾಮೀಗೌಡ, ಸುಂಡಹಳ್ಳಿ ಮಂಜುನಾಥ ಇತರರಿದ್ದರು.
Mandya
14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಿದ ಎಂ.ಎ.ಹಾಲಪ್ಪ
ಮದ್ದೂರು: ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ 14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು ಎಂದು ಯೋಜನಾಧಿಕಾರಿ ಎಂ.ಎ.ಹಾಲಪ್ಪ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿಯ ಯರಗನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರಹೆಗ್ಗಡೆ ದಂಪತಿ ಆಶಯದಂತೆ ಆಸಹಾಯಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರದಿಂದ 3 ಸಾವಿರದವರೆಗೆ ಮಾಶಾಸನ ನೀಡಲಾಗುತ್ತಿದೆ ಎಂದರು.
ಇದೇ ರೀತಿ ಮೂಲ ಸೌಕರ್ಯಗಳಿಂದ ವಂಚಿತರಾದ ಕುಟುಂಬಗಳಿಗೆ ವಾತ್ಸಲ್ಯ ಮನೆ, ಶೌಚಾಗೃಹ, ಸ್ನಾನಗೃಹ, ಮನೆ ರಿಪೇರಿ, ಸೋಲಾರ್ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಒದಗಿಸಿಕೊಡಲಾಗುತ್ತಿದೆ. ತಾಲೂಕಿನಲ್ಲಿ 81 ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ ಎಂದ ಅವರು, ರಾಜ್ಯದಾದ್ಯಂತ ಒಂದೇ ದಿನ ವಾತ್ಸಲ್ಯ ಕಿಟ್ ವಿತರಣೆ ನಡೆಯಿತು ಎಂದು ಹೇಳಿದರು.

ಮುಖಂಡರಾದ ರಾಮಕೃಷ್ಣ ಯರಗನಹಳ್ಳಿ, ಸಚಿನ್ ಯರಗನಹಳ್ಳಿ, ಪ್ರೀತಂ ಕದಲೂರು, ಮಂಜು ತಗ್ಗಳ್ಳಿ, ಸುಕನ್ಯಾ ಹೊಸಳ್ಳಿ, ಕೃಷ್ಣ ಕಿಳಘಟ್ಟ, ನಾಗರಾಜ್ ದೊಡ್ಡರಸಿನಕೆರೆ, ಚಿಕ್ಕೋನು ದೊಡ್ಡರಸಿನಕೆರೆ, ವೆಂಕಟೇಶ್ ಇದ್ದರು.
Mandya
ಅರ್ಹ ಮಕ್ಕಳು ಜಂತು ನಿವಾರಕ ಮಾತ್ರೆಯಿಂದ ವಂಚಿತರಾಗದಿರಲಿ: ಡಾ. ಶ್ರೀಧರ್
ಶ್ರೀರಂಗಪಟ್ಟಣ: ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದಡಿಯಲ್ಲಿ ಯಾವುದೇ ಮಗು ಜಂತು ನಿವಾರಕ ಮಾತ್ರೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕೆಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ಸಿ ಎಂ ಹೇಳಿದರು.
ಅವರು ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದ ಅಂಗವಾಗಿ ಅಧಿಕಾರಿಗಳಿಗಾಗಿ ಏರ್ಪಡಿಸಿದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬರುವ ಜಂತು ಬಾಧೆ, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟುವ ಸಲುವಾಗಿ ರಾಜ್ಯಾದ್ಯಂತ ಫೆ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಹಮ್ಮಿಕೊಳ್ಳಲಾಗಿದ್ದು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತು ನಿವಾರಣ ಅಲ್ಬಂಡಾಜೋಲ್ ಮಾತ್ರೆಗಳನ್ನು ಅಂಗನವಾಡಿ ಕೇಂದ್ರದ ಮಕ್ಕಳಿಗೆ,ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತಪ್ಪದೆ ನೀಡಬೇಕು ಜತೆಗೆ ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಂತುಹುಳು ನಿವಾರಣ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು. ತರಬೇತಿ ಕಾರ್ಯಗಾರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್,ಜಿ ಬಿ ಹೇಮಣ್ಣ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಯರಾಮ್ ಟಿ ಬಿ,ಚಿಕ್ಕ ಬೋರಯ್ಯ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ್,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಣ್ಯವತಿ, ಶಾಂತರಾಮ,ನರ್ಸಿಂಗ್ ಅಧಿಕಾರಿ ಕುಸುಮ,ವಸತಿ ಶಾಲಾ ನರ್ಸಿಂಗ್ ಅಧಿಕಾರಿ ಶಿವಮ್ಮ,ತ್ರಿವೇಣಿ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ,ಲಲಿತಾ ಹಾಗೂ ಎಲ್ಲಾ ಶಾಲೆಯ ವಿಜ್ಞಾನ ಶಿಕ್ಷಕರು,ಕ್ಷೇತ್ರ ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.
-
Chikmagalur20 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan16 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan17 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
State19 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Chamarajanagar22 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Kodagu15 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Hassan24 hours agoಸದನದಲ್ಲಿ ನಾನು ಆವೇಶಭರಿತನಾಗಿ ಮಾತನಾಡುವುದಕ್ಕೆ ಬಿಜೆಪಿಯವರ ಪ್ರಚೋದನೆಯೇ ಕಾರಣ : ಕೆ.ಎಂ. ಶಿವಲಿಂಗೇಗೌಡ
-
Mandya17 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
