Sports
INDvsENG 3rd ODI: ಭಾರತ ಎದುರು ವೈಟ್‌ವಾಷ್ ಮುಖಭಂಗ ಅನುಭವಿಸಿದ ಇಂಗ್ಲೆಂಡ್

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಗೆದ್ದ ಭಾರತ ತಂಡದ ಸರಣಿ ಜೊತೆಗೆ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ವೈಟ್ ವಾಷ್ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ ಆಲ್‌ಔಟ್ ಆಗಿ 356 ರನ್ ಬಾರಿಸಿತು. ಈ ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಪಡೆ 34.2 ಓವರ್‌ಗಳಲ್ಲಿ ಆಲ್‌ಔಟ್ ಆಗಿ 214 ರನ್ ಬಾರಿಸಿ 142 ರನ್‌ಗಳ ಅಂತರದಿಂದ ಹೀನಾಯ ಸೋಲು ಕಾಣುವ ಮೂಲಕ ವೈಟ್‌ವಾಷ್ ಮುಖಭಂಗ ಅನುಭವಿಸಿತು.
ಟೀಂ ಇಂಡಿಯಾ ಇನ್ನಿಂಗ್ಸ್: ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆರಂಭಿಕರಾಗಿ ಕಣಕ್ಕಳಿದರು. ರೋಹಿತ್ 1 ರನ್‌ಗೆ ಸುಸ್ತಾದರೇ, ಗಿಲ್ ಶತಕ ಬಾರಿಸಿ ತಂಡಕ್ಕೆ ನೆರವಾದರು. ಅವರು 102 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 112 ರನ್ ಚಚ್ಚಿದರು. ಆ ಮೂಲಕ ಏಕದಿನದಲ್ಲಿ ತಮ್ಮ ವೈಯಕ್ತಿಕ ಏಳನೇ ಶತಕ ದಾಖಲಿಸಿದರು.
ಉಳಿದಂತೆ ವಿರಾಟ್ ಕೊಹ್ಲಿ 52, ಶ್ರೇಯಸ್ ಅಯ್ಯರ್ 78, ಕೆ.ಎಲ್ ರಾಹುಲ್ 40, ಹಾರ್ದಿಕ್ ಪಾಂಡ್ಯ 17, ಅಕ್ಷರ್ 13, ವಾಷಿಂಗ್ಟನ್ ಸುಂದರ್ 14, ಹರ್ಷಿತ್ ರಾಣಾ 13, ಅರ್ಶ್‌ದೀಪ್ ಸಿಂಗ್ 2 ಮತ್ತು ಕುಲ್ದೀಪ್ ಯಾದವ್ ಔಟಾಗದೇ 1 ರನ್ ಗಳಿಸಿದರು.
ಇಂಗ್ಲೆಂಡ್ ಪರವಾಗಿ ಅದಿಲ್ ರಶೀದ್ ನಾಲ್ಕು, ಮಾರ್ಕ್‌ವುಡ್ ಎರಡು, ಮಹ್ಮೂದ್, ಅಟ್ಕಿನ್ಸನ್ ಮತ್ತು ರೂಟ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ನಿರೀಕ್ಷಿತ ಆರಂಭ ಸಿಗಲಿಲ್ಲ. ಪಿಲ್ ಸಾಲ್ಟ್ 23, ಬೆನ್ ಡಕೆಟ್ 34ರನ್ ಬಾರಿಸಿ ಔಟಾದರು. ಬಳಿಕ ಬಂದ ಟಾಮ್ ಬ್ಯಾಂಟನ್ 38, ಜೋ ರೂಟ್ 24 ಉತ್ತಮ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದರು ಸಾಧ್ಯವಾಗಲಿಲ್ಲ.
ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟ ಪರಿಣಾಮ ಇಂಗ್ಲೆಂಡ್ ತಂಡ ಹೀನಾಯ ಸೋಲು ಅನುಭವಿಸಿತು. ಉಳಿದಂತೆ ಬ್ರೂಕ್ 19, ನಾಯಕ ಬಟ್ಲರ್ 6, ಲಿವಿಂಗ್‌ಸ್ಟೋನ್ 9, ಅಟ್ಕಿನ್ಸನ್ 38, ಆದಿಲ್ ರಶೀದ್ ಶೂನ್ಯ, ಮಾರ್ಕ್ ವುಡ್ 9 ಹಾಗೂ ಮಹ್ಮೂದ್ ಔಟಾಗದೇ 2 ರನ್ ಬಾರಿಸಿದರು.
ಟೀಂ ಇಂಡಿಯಾ ಪರವಾಗಿ ಅರ್ಶ್‌ದೀಪ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಒಂದೊಂದು ವಿಕೆಟ್ ಕಿತ್ತರು.
ಪಂದ್ಯ ಶ್ರೇಷ್ಠ: ಶುಭ್‌ಮನ್ ಗಿಲ್
Sports
IPL 2025: ಲಖನೌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಡೆಲ್ಲಿ

ವಿಶಾಖಪಟ್ಟಣಂ: ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ ರೋಚಕ ಹಣಾಹಣಿಯಲ್ಲಿ ಒಂದು ವಿಕೆಟ್‌ಗಳ ಅಂತರದಿಂದ ಲಖನೌ ತಂಡವನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.
ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕೆಲಹಾಕಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಸಿ 1 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
ಲಖನೌ ಪರ ಮಿಚೆಲ್ ಮಾರ್ಷ್ 72(36), ನಿಕೋಲಸ್ ಪೂರನ್ 75(30) ರನ್ ಗಳ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ಸಹಕರಿಸಿದರು. ಮಾರ್ಕ್ರಂ 15, , ಮಿಲ್ಲರ್ 27, ಆಯುಷ್ ಬದೋನಿ 4, ಶಹಬಾಜ್ ಅಹ್ಮದ್ 9, ನಾಯಕ ಪಂತ್, ರವಿ ಬಿಷ್ಣೋಯ್ ಹಾಗೂ ಶಾರ್ದುಲ್ ಠಾಕೂರ್ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್ ಆದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮೂರು, ಕುಲ್ದೀಪ್ ಯಾದವ್ ಎರಡು, ಮುಖೇಶ್ ಕುಮಾರ್ ಹಾಗೂ ವಿಪ್ರಾವ್ ನಿಗಮ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಜೇಕ್ ಫ್ರೆಸರ್ ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಅಭಿಷೇಕ್ ಪೂರೆಲ್ ಡಕ್‌ಔಟ್ ಹೊರನಡೆದರು. ಸಮೀರ್ ರಿಜ್ವಿ ನಾಲ್ಕು ರನ್‌ಗಳಿಗೆ ಸುಸ್ತಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಡೆಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಬಳಿಕ ಜೊತೆಯಾದ ಫಾಫ್ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್ ಪಟೇಲ್ ತಂಡಕ್ಕೆ ಚೇತರಿಕೆ ಆಟವಾಡಿದರು. ಈ ಇಬ್ಬರು ಕ್ರಮವಾಗಿ 29(18) ಮತ್ತು 22(11) ರನ್ ಗಳಿಸಿ ಔಟಾದರು. ನಂತರ ಸ್ಟಬ್ಸ್ 34(22), ವಿಪ್ರಾಜ್ ನಿಗಮ್ 39(15), ಮಿಚೆಲ್ ಸ್ಟಾರ್ಕ್ 2, ಕಲ್ದೀಪ್ ಯಾದವ್ 5 ರನ್ ಗಳಿಸಿ ಔಟಾದರು.
ಆದರೆ ಮತ್ತೊಂದೆಡೆ ಛಲ ಬಿಡದೇ ಬ್ಯಾಟ್ ಬೀಸಿದ ಇಂಪ್ಯಾಕ್ಟ್ ಪ್ಲೇಯರ್ ಅಶುತೋಶ್ ಶರ್ಮಾ ಔಟಾಗದೇ 31 ಎಸತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 66 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿತ್ ಶರ್ಮಾ ಒಂದು ರನ್ ಗಳಿಸಿ ಔಟಾಗದೇ ಉಳಿದರು.
ಲಖನೌ ಪರ ಶಾರ್ದುಲ್ ಠಾಕೂರ್, ಸಿದ್ಧಾರ್ಥ್, ದಿಗ್ವೇಶ್ ಹಾಗೂ ರವಿ ಬಿಷ್ಣೋಯ್ ತಲಾ ಎರಡೆರೆಡು ವಿಕೆಟ್ ಕಬಳಿಸಿದರು.
Sports
IPL 2025: ವಿರಾಟ್ ಕೊಹ್ಲಿ, ಸಾಲ್ಟ್ ಅರ್ಧ ಶತಕ; ಕೆಕೆಆರ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಆರ್‌ಸಿಬಿ

ಕೊಲ್ಕತ್ತಾ: ಫಿಲ್ ಸಾಲ್ಟ್, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದಾಟದ ಬಲದಿಂದ ಆತಿಥೇಯ ಕೊಲ್ಕತ್ತಾ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದ ಆರ್‌ಸಿಬಿ ಐಪಿಎಲ್ ಸೀಸನ್ 18 ರಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಕೆಕೆಆರ್ ಇನ್ನಿಂಗ್ಸ್: ಡಿಕಾಕ್ ಮತ್ತು ಸುನೀಲ್ ನರೈನ್ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದರು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಡಿಕಾಕ್ 4 ರನ್ ಗಳಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಜೊತೆಯಾದ ನಾಯಕ ಅಜಿಂಕ್ಯ ರಹಾನೆ ಮತ್ತು ಸುನೀಲ್ ನರೈನ್ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.
ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಗಳಿಸಿದರು. ಸುನೀಲ್ ನರೈನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 44 ರನ್ ಗಳಿಸಿ ಔಟಾಗಿ ಹೊರನಡೆದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾರೂ ಉತ್ತಮ ಇನ್ನಿಂಗ್ಸ್ ಕಟ್ಟಿಕೊಡಲಿಲ್ಲ.
ವೆಂಕಟೇಶ್ ಅಯ್ಯರ್ 6, ಕಿಂಕು 12, ರಸೆಲ್ 4 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಘುವಂಶಿ 30 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು. ಹರ್ಷಿತ್ ರಾಣಾ 5, ರಮಣದೀಪ್ ಹಾಗೂ ಸ್ಪೆನ್ಸರ್ ಔಟಾಗದೇ ತಲಾ 6 ಮತ್ತು 1 ರನ್ ಗಳಿಸಿ ಉಳಿದರು.
ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್, ಹೆಜಲ್‌ವುಡ್ ಎರಡು ವಿಕೆಟ್, ಸುಯೇಶ್ ಶರ್ಮಾ, ರಸಿಕ್ ದಾರ್ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ ಪವರ್ ಪ್ಲೇನಲ್ಲಿ ಬರೋಬ್ಬರಿ 80 ಚಚ್ಚಿದರು.
ಫಿಲ್ ಸಾಲ್ಟ್ 31 ಎಸೆತ, 9 ಬೌಂಡರಿ, 2 ಸಿಕ್ಸರ್ ಸಹಿತ 56 ರನ್ ಗಳಿಸಿ ಔಟಾದರು. ಬಳಿಕ ಬಂದ ದೇವದತ್ ಪಡಿಕ್ಕಲ್ 10, ನಾಯಕ ರಜತ್ ಪಟಿದಾರ್ 34 ರನ್ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದರು.
ಮತ್ತೊಂದೆಡೆ ಉಪಯುಕ್ತ ಆಟವಾಡಿದ ವಿರಾಟ್ ಕೊಹ್ಲಿ ಔಟಾಗದೇ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಗಳಿಸಿದರೇ, ಇತ್ತ ಲಿವಿಂಗ್‌ಸ್ಟೋನ್ ಔಟಾಗದೇ 5 ಎಸೆತಗಳಲ್ಲಿ 15 ರನ್ ಬಾರಿಸಿ ಗೆಲುವಿನ ದಡ ಸೇರಿಸಿದರು.
ಕೆಕೆಆರ್ ಪರ ಸುನೀಲ್ ನರೈನ್, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
Sports
IPL 2025: ಅಜಿಂಕ್ಯ ರಹಾನೆ ಅರ್ಧಶತಕ; ಆರ್‌ಸಿಬಿಗೆ 175ರನ್ ಟಾರ್ಗೆಟ್ ನೀಡಿದ ಕೆಕೆಆರ್

ಕೊಲ್ಕತ್ತಾ: ಇಲ್ಲಿನ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಲ್ ಸೀಸನ್ 18ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಅರ್ಧಶತಕದ ಬಲದಿಂದ ಆರ್‌ಸಿಬಿಗೆ 175 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಇತ್ತ ಬಿಗಿ ಬೌಲಿಂಗ್ ದಾಳಿ ಮಾಡಿದ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕುವ ಯೋಜನೆಯಲ್ಲಿದ್ದ ಕೆಕೆಆರ್‌ಗೆ ತಮ್ಮ ಹೋಂ ಗ್ರೌಂಡ್‌ನಲ್ಲಿಯೇ ಟಕ್ಕರ್ ಕೊಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್ ನೀಡಿದೆ.
ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ಕೆಕೆಆರ್‌ಗೆ ಆರಂಭಿಕ ಆಘಾತ ಎದುರಾಯಿತು. ಡಿಕಾಕ್ 4 ರನ್ ಗಳಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಜೊತೆಯಾದ ನಾಯಕ ಅಜಿಂಕೆ ರಹಾನೆ ಮತ್ತು ಸುನೀಲ್ ನರೈನ್ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.
ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಗಳಿಸಿದರು. ಸುನೀಲ್ ನರೈನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 44 ರನ್ ಗಳಿಸಿ ಔಟಾಗಿ ಹೊರನಡೆದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾರೂ ಉತ್ತಮ ಇನ್ನಿಂಗ್ಸ್ ಕಟ್ಟಿಕೊಡಲಿಲ್ಲ.
ವೆಂಕಟೇಶ್ ಅಯ್ಯರ್ 6, ಕಿಂಕು 12, ರಸೆಲ್ 4 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಘುವಂಶಿ 30 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು. ಹರ್ಷಿತ್ ರಾಣಾ 5, ರಮಣದೀಪ್ ಹಾಗೂ ಸ್ಪೆನ್ಸರ್ ಔಟಾಗದೇ ತಲಾ 6 ಮತ್ತು 1 ರನ್ ಗಳಿಸಿ ಉಳಿದರು.
ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್, ಹೆಜಲ್‌ವುಡ್ ಎರಡು ವಿಕೆಟ್, ಸುಯೇಶ್ ಶರ್ಮಾ, ರಸಿಕ್ ದಾರ್ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು.
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan14 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya10 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu11 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan13 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ