Connect with us

Hassan

ಇಂಡಿಯಾನ ಆಸ್ಪತ್ರೆ ಪ್ರಚಾರ ವಾಹನಕ್ಕೆ ಚಾಲನೆ

Published

on

ಹಾಸನ : ಇಂಡಿಯಾನ ಆಸ್ಪತ್ರೆ ಹಾಗೂ ಹಾರ್ಟ್ ಸೆಂಟರ್ ನ ಅದ್ದೂರಿ ಪ್ರಾರಂಭೋತ್ಸವದ ಅಂಗವಾಗಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಅತ್ಯಾಧುನಿಕ 5g ತಂತ್ರಜ್ಞಾನ ಸೌಲಭ್ಯ ಹೊಂದಿರುವ ಮೊಟ್ಟ ಮೊದಲ ಹೃದಯ ಚಿಕಿತ್ಸೆ ಮತ್ತು ಮಲ್ತಿಸ್ಪೆಷಲಿಟಿ ಆಸ್ಪತ್ರೆ ಆಗಿರುವ ಇಂಡಿಯಾನ ಆಸ್ಪತ್ರೆ ಹಾಗೂ ಹಾರ್ಟ್ ಸೆಂಟರ್ ಇದೀಗ ಹಾಸನದಲ್ಲೂ ಪ್ರಾರಂಭವಾಗಿದ್ದು, ತಮ್ಮ ಆಸ್ಪತ್ರೆಯ ಎಲ್ಲಾ ಸೌಲಭ್ಯಗಳ ಮಾಹಿತಿಯೊಂದಿಗೆ ಪ್ರಚಾರ ವಾಹನವನ್ನು ಹಾಸನದ ಇಂಡಿಯಾನ ಆಸ್ಪತ್ರೆ ಚೀಫ್ ಆಪರೇಟಿಂಗ್ ಆಫೀಸರ್ ಪ್ರದೀಪ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಮಹೇಶ್ ರವರು ಇಂದು ಆಸ್ಪತ್ರೆಯ ಆವರಣದಲ್ಲಿ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬಂದಿಗಳು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನದಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿಕೆ

Published

on

ದೇಶದ ಸಂಪತ್ತನ್ನು ಹಂಚುತ್ತೇವೆ ಎಂದು ಕಾಂಗ್ರೆಸ್‌ನವರು ಜಗಳವಾಡುತ್ತಿದ್ದಾರೆ

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿನೇ ಇಲ್ಲ. ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಗೌಡರು

ಆದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ*

ಭೂಮಿ, ಸಂಪತ್ತನ್ನು ಹಂಚುತ್ತೇವೆ ಎಂದು ರಾಹುಲ್‌ಗಾಂಧಿ ಹೇಳ್ತಾರೆ

ಕಾವೇರಿ ಬೇಸಿನ್‌ಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ

ಪ್ರಧಾನಮಂತ್ರಿಗಳ ಜೊತೆ ಎರಡು ಸಭೆ ಮಾಡಿದ್ದೇನೆ

ಎರಡನೇ ಹಂತದ ಚುನಾವಣೆ ಹೈದರಾಬಾದ್, ಕರ್ನಾಟಕ, ಮುಂಬೈ ಕರ್ನಾಟಕ ಮೇ.7 ರಂದು ನಡೆಯಲಿದೆ

ಶಿವಮೊಗ್ಗ ಸೇರಿ ಎರಡನೇ ಹಂತದ ಚುನಾವಣೆ ನಡೆಯುತ್ತದೆ

ಹಾಸನದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಕೇಳಬಹುದು, ನಾನೇ ಹೇಳ್ತಿನಿ

ಇವತ್ತು ಕಾವೇರಿ ಬೇಸಿನ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ

ಬಿಜೆಪಿಯ ಕೆಲವು ವ್ಯಕ್ತಿಗಳು ಹಾಸನದಲ್ಲಿ ಕೋಆಪರೇಟ್ ಮಾಡ್ತಿಲ್ಲ

ಮಂಡ್ಯದಲ್ಲಿ ಸುಮಲತಾ ಕುಮಾರಸ್ವಾಮಿಗೆ ಕೋಆಪರೇಟ್ ಮಾಡ್ತಿಲ್ಲ

ಅದರಿಂದ ಕುಮಾರಸ್ವಾಮಿ ಏನೋ ಅಪಾಯ ಆಗುತ್ತೆ ಅಂತ, ಏನು ಆಗಲ್ಲ

ಪ್ರಮುಖವಾಗಿ ಕಾವೇರಿ ಸಮಸ್ಯೆ ಇದೆ, ಅದು ಜೀವನ್ಮರಣದ ಪ್ರಶ್ನೆ

ಮಂಡ್ಯದಲ್ಲಿ ಕೈ ಅಭ್ಯರ್ಥಿ ಗೆಲ್ಲಲು 125 ಕೋಟಿ ಎನ್‌ಓಸಿ ರಿಲೀಸ್ ಮಾಡಿದ್ದಾರೆ

28 ಕ್ಕೆ 28 ಸ್ಥಾನ ಗೆಲ್ಲುಬೇಕು

ಯಾರೇ ಪ್ರಚಾರ, ಅಪಪ್ರಚಾರ ಏನೇ ಮಾಡಲಿ

ಈ ದೇವೇಗೌಡ 91 ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದಾನೆ ಅದು ಎಲ್ಲರ ಮನಸ್ಸಿಗೆ ನಾಟಿದೆ

ಮೋದಿಯವರು ಡಿಎಂಕೆಯ ಹಂಗಿನಿಂದ ಈ ದೇಶ ಆಳುವ ಪರಿಸ್ಥಿತಿ ಬರುವುದಿಲ್ಲ

ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಹಾಕಿದೆ

ಒಬ್ಬ ಪೊಲೀಸ್ ಅಧಿಕಾರಿ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೋರಾಡುತ್ತಿದ್ದಾರೆ

ಅಣ್ಣಾ ಡಿಎಂಕೆಯಲ್ಲಿ ಪಕ್ಷದಲ್ಲಿ ಕೆಲವರು ಪರಸ್ಪರ ಭಿನ್ನಾಭಿಪ್ರಾಯಗೊಂಡು ಅವರು ಕೂಡ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿದ್ದಾರೆ

ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ ಯಾವುದೇ ಸಂಶಯವಿಲ್ಲ

ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಅರ್ಥ ಆಗಿದೆ

ನಾನು ಗಮನ ಹರಿಸುತ್ತೇನೆ ಎಂದು ಪ್ರಧಾನಮಂತ್ರಿಗೂ ಹೇಳಿದ್ದೇನೆ

ಮೇಕೆದಾಟು, ಕಾವೇರಿ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಮಾಡುತ್ತಿದ್ದೇನೆ

ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲ್ಲ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೋದಲೆಲ್ಲ ಜನ

ಅವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ

ಮೂರು ಜನ ಡಾ.ಮಂಜುನಾಥ್ ಅವರನ್ನು ನಿಲ್ಲಿದ್ದಾರೆ

ಆದರೂ ಡಾ.ಮಂಜುನಾಥ್ ಗೆಲ್ತಾರೆ

ಅವರು ಅಧಿಕಾರ ಎಷ್ಟು ದುರುಪಯೋಗ ಮಾಡಬೇಕು ಮಾಡಿದ್ದಾರೆ

ಏನೇ ಸಮಸ್ಯೆ ಇಲ್ಲ, ಡಾ.ಮಂಜುನಾಥ್ ಗೆಲ್ತಾರೆ

ಯಾವ ಕಾವೇರಿ ನೀರನ್ನು ಉಳಿಸುತ್ತೇನೆ ಎಂದು ಹೇಳಿದ್ದೇನೋ ಅದನ್ನು ಮಾಡುತ್ತೇನೆ, ಅದು ಶತಸಿದ್ದ

ಆದರೆ ಭತ್ತದ ಬೆಳೆಯಿರಿ ಎಂದು ಹೇಳಲು ಹೋಗಲ್ಲ

Continue Reading

Hassan

ಪೆಂಡ್ರೈವ್ ಹಾಗೂ ಅಶ್ಲೀಲ ವೀಡಿಯೋ ಮೂಲಕ ಕಾಂಗ್ರೆಸ್ ರಾಜಕೀಯ -ಜಿ. ದೇವರಾಜೇಗೌಡ ಹೇಳಿಕೆ

Published

on

ಹಾಸನ: ಪೆಂಡ್ರೈವ್ ಹಾಗೂ ಅಶ್ಲೀಲ ವೀಡಿಯೋ ಬಿಡುಗಡೆ ಪ್ರಕರಣದಲ್ಲಿ ನನ್ನ ಕೈವಾಡ ಯಾವುದು ಇಲ್ಲ. ಇದು ಕಾಂಗ್ರೆಸ್ ಪಕ್ಷದ ರಾಜಕೀಯ ಕುತಂತ್ರ ಎಂದು ಬಿಜೆಪಿ ಮುಖಂಡ ಜಿ. ದೇವೇರಾಜೇಗೌಡ ಗಂಬೀರವಾಗಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪೆಂಡ್ರೈವ್ ಜೊತೆ ಅಶ್ಲೀಲ ವೀಡಿಯೋ ಗಳ ಜೊತೆಗೆ ರಾಜಕೀಯ ಮಾಡಲು ಮುಂದಾಗಿರುವ ಕಾಂಗ್ರೆಸ್ ನಡೆ ಖಂಡನೀಯ, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಹೆಣ್ಣು ಮಕ್ಕಳ ಶೀಲದ ಜೊತೆ ರಾಜಕೀಯ ಮಾಡಲು ಮುಂದಾಗಿರುವ ಕಾಂಗ್ರೆಸ್ ಆಡಳಿತ ನಡೆಸಲು ಅರ್ಹತೆ ಇಲ್ಲ ಎಂದು ತಮ್ಮ ಅಸಮಾಧಾನ

ವ್ಯಕ್ತಪಡಿಸಿದರು. ಈ ಹಿಂದೆ ತನ್ನ ಪಕ್ಷದ ನಾಯಕರಿಗೆ ನಾನು ಬರೆದಿರುವ ತುರ್ತು ರಹಸ್ಯ ಪತ್ರ ಬಹಿರಂಗವಾಗಿದ್ದು, ಪತ್ರದಲ್ಲಿ ಪ್ರಜ್ವಲ್ ಗೆ ಟಿಕೆಟ್ ನೀಡುವ ವಿಚಾರದಲ್ಲಿ ಆರೋಗ್ಯಕರ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದೆ, ಜೊತೆಗೆ ಪ್ರಜ್ವಲ್ ಅವರ ಅಶ್ಲೀಲ ವೀಡಿಯೋಗಳು ಇವೆ ಎಂದು ಉಲ್ಲೇಖ ಮಾಡಿದ್ದೇನೆ.

ಆದರೆ ಈಗ ಆ ಪತ್ರ ಉಲ್ಲೇಖಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದ್ದು ಕೆಲವರು ನನ್ನ ಮೇಲೆ ಕೆಲವರು ಅನುಮಾನ ವ್ಯಕ್ತ ಪಡಿಸಿದ್ದಾರೆ ಆದರೆ ಅದು ಸುಳ್ಳು ಎಂದರು. ತಾನು ಕೂಡ ಈ ಹಿಂದೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿ ಅಲ್ಲಿನ ರಾಜಕೀಯ ಸ್ಥಿತಿಗತಿಗಳನ್ನು ಅರಿತು ಕೆಟ್ಟ ರಾಜಕಾರಿಣಿಗಳಿಂದ ಕಳಂಕ ಬರಬಾರದು ಎಂಬ ಉದ್ದೇಶದಿಂದ ಬಿಜೆಪಿ ಹೈ ಕಮಾಂಡ್ ಗಳಿಗೆ ಪತ್ರ ಬರೆದಿದ್ದೆ, ಆರೋಗ್ಯಕರ ತೀರ್ಮಾನ ಕೈಗೊಳ್ಳುವ ಕುರಿತು ಸಲಹೆ ನೀಡಿದ್ದೆ ಆದರೆ ಬಿಜೆಪಿ ಹೈ ಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಅದರ ಪರಿಣಾಮವಾಗಿ ಇಂದು ಜೆಡಿಎಸ್ ಜೊತೆ ಕೈ ಜೋಡಿಸಿರುವ ಬಿಜೆಪಿ ಗೆ ಕೂಡ ಅಪಾಮಾನ ಆಗಿದೆ ಎಂದರು.

ಹಾಸನ ಜಿಲ್ಲೆ ರಾಜಕೀಯ ಹಾಗೂ ಐತಿಹಾಸಿಕ ಇತಿಹಾಸ ಹೊಂದಿರುವ ಜಿಲ್ಲೆಯಲ್ಲಿ ಮಹಿಳೆಯರಿಗೆ ಆಗುತ್ತಿರುವ ಅಪಮಾನ ಖಂಡನೀಯ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ಇದ್ದರೂ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದು, ಸುಮೊಟೊ ಕೇಸು ದಾಖಲು ಮಾಡಿ ತಪ್ಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂದು ದೂರಿದರು.

Continue Reading

Hassan

ಸಂಸದರು ಮಾಡಬೇಕಿದ್ದ ರೈಲು ನಿಲುಗಡೆ ಕೆಲಸ ನಾನು ಮಾಡಿದ್ದೇನೆ ಕರಪತ್ರದಲ್ಲಿ ಸುಳ್ಳು ಪ್ರಚಾರ : ಹೇಮಂತ್ ಕುಮಾರ್

Published

on

ಹಾಸನ: ಸಂಸದರು ಮಾಡಬೇಕಾಗಿದ್ದ ರೈಲು ನಿಲುಗಡೆ ಕೆಲಸವನ್ನು ನಾನು ದೆಹಲಿಗೆ ಹೋಗಿ ಮಾಡಿಸಲಾಗಿದ್ದು, ಈಗ ಚುನಾವಣೆ ಪ್ರಚಾರದಲ್ಲಿ ಪ್ರಜ್ವಲ್ ಅವರು ಕರಪತ್ರ ಮಾಡಿಸಿ ರೈಲು ನಿಲುಗಡೆ ನಾನು ಮಾಡಿಸಿದ್ದೀನಿ ಎಂದು ಬಿಂಭಿಸಿಕೊಳ್ಳುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ರಾಧಮ್ಮ ಜನಸ್ಪಂದನ ವೇದಿಕೆಯ ಹೇಮಂತ್ ಗವಿಶ್ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹೇಮಂತ್ ರಾಧಮ್ಮ ಜನಸ್ಪಂದನ ಆಲೂರುನಲ್ಲಿ ವಾಸವಾಗಿರುವ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕ್ರಮ ಸಂಖ್ಯೆ ೧೫ ನನ್ನ ಚಿಹ್ನೆಯ ಗುರುತು ಗ್ಯಾಸ್ ಸಿಲಿಂಡರ್ ಲೋಕಸಭಾ ಹಾಸನ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಸಂಸದರು ಮಾಡಬೇಕಾಗಿರುವ ಕೆಲಸವನ್ನು ದೆಹಲಿಯ ಮಟ್ಟದವರೆಗೂ ಹೋಗಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ಆಲೂರು ತಾಲೂಕಿಗೆ ರೈಲು ನಿಲುಗಡೆ ತಂದಿ ಕೊಟ್ಟಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಈ ನನ್ನ ಹೋರಾಟನವನ್ನು ಗಮನಿಸಿದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದರು. ಮಾಧ್ಯಮದ ಮುಖಾಂತರ ಸಾರ್ವಜನಿಕರಲ್ಲಿ ಗಮನ ಸೆಳೆಯುತ್ತಿರುವ ವಿಷಯ ಎಂದರೆ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಹಾಲಿ ಸಂಸದರು ಚುನಾವಣಾ ಪ್ರಚಾರಕ್ಕೆ ಬಳಸಿರುವ ಕರಪತ್ರಗಳಲ್ಲಿ ರೈಲ್ವೆ ಅಭಿವೃದ್ಧಿ ಎಂದು ನಮೂದಿಸಿರುವ ಪಟ್ಟಿಯಲ್ಲಿ ಆಲೂರು, ಮೊಸಳೆ ಹೊಸಳ್ಳಿ ಮತ್ತು ದುದ್ದ ಹಾಗೂ ಹಿರಿಸೇವೆ ರೈಲು ನಿಲುಗಡೆ ಮಾಡಿಸಿದ್ದೇನೆ ಎಂದು ನಮೂದಿಸಿದ್ದಾರೆ ಎಂದರು. ದಯವಿಟ್ಟು ಇದನ್ನು ಗಮನಿಸಿ ಸತ್ಯವನ್ನ ಸಾರ್ವಜನಿಕರಿಗೆ ಮತದಾರರಿಗೆ ತಿಳಿಸಬೇಕಾಗಿ ಮನವಿ ರೈಲ್ವೆ ಇಲಾಖೆಯಿಂದ ಮತ್ತು ವೇರ್ ಇಸ್ ಮೈ ಟ್ರೈನ್ ಆನ್ಸೆನ್ ಅಲ್ಲು ಪರಿಶೀಲನೆ ಮಾಡಬಹುದು. ಆಲೂರು ಹೊರತುಪಡಿಸಿ ಬೇರೆ ಎಲ್ಲಿಯೂ ರೈಲು ನಿಲುತ್ತಿಲ್ಲ. ನಿಲುಗಡೆ ಆದೇಶ ತಂದು ಇಲ್ಲ ಆದರೂ ಕೂಡ ಸುಳ್ಳು ಪ್ರಚಾರವನ್ನ ಮಾಡುತ್ತಾ ಸಾಧನೆ ಎಂದು ಬಿಂಬಿಸುತ್ತಾ ಮತದಾರರಲ್ಲಿ ಮತವನ್ನು ಕೇಳುತ್ತಿದ್ದಾರೆ. ನಾನು ಒಬ್ಬ ನರೇಂದ್ರ ಮೋದಿಜಿ ಭಕ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಳೆದ ೨೪ ವರ್ಷ ತೊಡಗಿಸಿಕೊಂಡಿದ್ದು, ಬಿಜೆಪಿಯ ಜಿಲ್ಲಾ ಸಹವಕ್ತರನಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಾಮಾಣಿಕ ಸಿದ್ಧಾಂತದ ಅಡಿಯಲ್ಲಿ ರಾಧಮ್ಮ ಜನಸ್ಪಂದನ ಹುಟ್ಟು ಹಾಕಿ ಸೇವೆಯನ್ನು ಕೊಟ್ಟಿದ್ದೇನೆ ಎಂದು ಹೇಳಿದರು.

ನರೇಂದ್ರ ಮೋದಿಜಿಯ ಫೋಟೋವನ್ನು ಬಳಸಿ ಸುಳ್ಳು ಸುಳ್ಳು ಮಾಹಿತಿಗಳನ್ನು ಕೊಟ್ಟರೆ ಯಾರು ನಿಮಗೆ ಮತಗಳನ್ನು ಕೊಡುವುದಿಲ್ಲ. ತಕ್ಷಣವೇ ನಿಮ್ಮ ತಪ್ಪನ್ನು ತಿದ್ದಿಕೊಂಡು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ಕೊಡಿ ಎಂದು ಈ ಮುಖಾಂತರ ತಿಳಿಸಿದ್ದೇನೆ. ಜೆಪಿಯಲ್ಲಿ ಇದ್ದರೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ ಉದ್ದೇಶ ನನ್ನ ಆಲೂರು ತಾಲೂಕಿಗೆ ಯಾವುದೇ ಅಭಿವೃದ್ಧಿಯು ಆಗಿಲ್ಲ. ನಾನು ಸಂಪೂರ್ಣವಾಗಿ ಎ.ಟಿ. ರಾಮಸ್ವಾಮಿ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದೆ ಆದರೆ ಅವರು ಬೇಡ ಎಂದು ತಿಳಿಸಿ ತಟಸ್ಥ ಎಂದು ಹೇಳಿದಕ್ಕೆ ನಾನೇ ಖುದ್ದಾಗಿ ಸ್ಪರ್ಧೆ ಮಾಡಿದ್ದೇನೆ. ನಮ್ಮ ಅಮೂಲ್ಯವಾದ ಮತಗಳು ವಿಚಾರವಂತರು ಆರ್.ಎಸ್.ಎಸ್. ಪ್ರತಿಯೊಬ್ಬರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್, ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!