Hassan
ಅತ್ಯಾಧುನಿಕ ತಂತ್ರಜ್ಞಾನದ ನೂತನ ಇಂಡಿಯಾನಾ ಆಸ್ಪತ್ರೆ, ಹಾರ್ಟ್ ಸೆಂಟರ್ : ಯೂಸುಫ್ ಎ. ಕುಂಬ್ಳೆ
ಹಾಸನ: ನಗರದ ಆರ್.ಸಿ. ರಸ್ತೆ ಬಳಿ ನೂತನವಾಗಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಇರುವ ನೂತನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಪ್ರಾರಂಭವಾಗಿದೆ ಎಂದು ಇಂಡಿಯಾನಾ ಗ್ರೂಪ್ ಆಫ್ ಹಾಸ್ಪಿಟಲ್ಸ್ ಛೇರ‍್ಮನ್ ಡಾಕ್ಟರ್ ಯೂಸುಫ್ ಎ ಕುಂಬ್ಳೆ ತಿಳಿಸಿದರು.

ತಮ್ಮ ಆಸ್ಪತ್ರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಲವು ದಶಕಗಳಿಂದ ಮಂಗಳೂರಿನಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸಿಟ್ಯೂಟ್ ನ ಒಂದು ಅಂಗ ಸಂಸ್ಥೆಯಾಗಿರುವ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಹಾಸನದಲ್ಲಿ ಕಳೆದ ಎಂಟು ವರ್ಷಗಳಿಂದ ಜಿಲ್ಲೆಯ ನಾಗರೀಕರ ಆರೋಗ್ಯ ಸಂರಕ್ಷಣೆಯ ಸೇವಾ ಕಾರ್ಯವನ್ನು ಮಾಡುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯ ಉತ್ತಮ ಪರಂಪರೆಯನ್ನು ಹೊಂದಿದೆ ಎಂದರು. ಇಂತಹ ಜಾಗತಿಕ ಮಟ್ಟದ ಆರೋಗ್ಯ ಸಂಬಂಧಿತ ಸೇವೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಹಾಸನದಲ್ಲಿ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ವಿಸ್ತರಿಸುತ್ತಿದೆ. ಹಾಸನದಲ್ಲಿ ಮಲ್ಲಿ ಸ್ಪೆಷಾಲಿಟಿ ಹಾಸ್ಪಿಟಲ್ ಕಾಂಪ್ಲೆಕ್ಸ್ ಅನ್ನು ಹೊಂದಿದ್ದು, ಶುಭ ಶುಕ್ರವಾರ ಸಂಜೆ ಉದ್ಘಾಟನೆಯಾಗಿರುವುದಾಗಿ ಹೇಳಿದರು.

ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಬಂದಾಗ ದೂರದ ಜಿಲ್ಲೆಗೆ ತೆರಳಬೇಕಾಗಿತ್ತು. ಈ ವೇಳೆ ಅನೇಕರು ದಾರಿ ಮಧ್ಯೆಯೇ ಪ್ರಾಣ ಬಿಡುತ್ತಿದ್ದರು. ಆದರೇ ಹಾಸನ ಜಿಲ್ಲೆಯಲ್ಲೆ ಇಂತಹ ಖಾಯಲೆಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಒದಗಿಸಲಾಗಿದೆ. ಇತರೆ ಆಸ್ಪತ್ರೆಗೆ ಹೋಲಿಕೆ ಮಾಡಿದರೇ ಶೇಕಡ ೧೦ ರಷ್ಟು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರಕಲಿದೆ ಎಂದರು. ವೈದ್ಯಕೀಯ ವೃತ್ತಿಪರರಿಗೆ ಮೀಸಲಾದ ತಂಡವು ರೋಗಿಗಳ ಸೇವೆಗೆ ಮತ್ತು ಅವರ ಯೋಗಕ್ಷೇಮ ಹಾಗೂ ಸಮಗ್ರ ಆರೋಗ್ಯ ಚೇತರಿಕೆ ನೀಡಲು ಸದಾ ಸಿದ್ಧವಾಗಿರುತ್ತದೆ. ಕಾರ್ಡಿಯೋಲಜಿ ಎಂಬ ಏಕೈಕ ವಿಭಾಗದಿಂದ ಪ್ರಾರಂಭವಾದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಇದೀಗ ಬದಲಾದ ರೂಪುರೇಷೆಗಳೊಂದಿಗೆ ಉತ್ತಮ ತಂತ್ರಜ್ಞಾನ, ಆಧುನಿಕ ಚಿಕಿತ್ಸಾ ವಿಧಾನಗಳನ್ನು ಅನೇಕ ವಿಭಾಗಗಳಲ್ಲಿ ಅಳವಡಿಸಿಕೊಂಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೋಗಿಗಳ ಸೇವೆಗೆ ಸಿದ್ಧವಾಗಿದೆ ಎಂದರು. ಹಾಸನದ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ನಲ್ಲಿ ಉತ್ತಮವಾದ ಓಪಿಡಿ, ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಉತ್ತಮ ೬೦ ಬೆಡ್ ವ್ಯವಸ್ಥೆ ಇದರೊಂದಿಗೆ ರೋಗಿಗಳ ಸಂಬಂಧಿಕರು ತಂಗಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಉತ್ತಮ ತಜ್ಞ ವೈದ್ಯರೊಂದಿಗೆ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳೊಂದಿಗೆ ಸೇವೆ ಲಭ್ಯವಿದೆ. ಬಡವರಿಗೆ ಕೈಗೆ ಎಟಕುವ ಬೆಲೆಯಲ್ಲಿ ಲಭ್ಯವಿದೆ. ಯಶಸ್ವಿನಿ ಇತರೆ ಎಲ್ಲಾ ಯೋಜನೆಯ ಕಾಡ್‌ಗಳು ಈ ಆಸ್ಪತ್ರೆಗೆ ಅನ್ವಯವಾಗುವುದು ಎಂದು ಮಾಹಿತಿ ನೀಡಿದರು.

ಇದೆ ವೇಳೆ ಇಂಡಿಯಾನಾ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಅಬ್ದೂಲ್ ಲತೀಫ್ ಉಪ್ಪಲಾ, ಡಾ. ಎಂ. ಅನೂಪ್, ಡಾ. ಆಲಿ ಕುಂಬ್ಳೆ ಆಸ್ಪತ್ರೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
Hassan
ರೈತ ಸಂಘದ ಹೋರಾಟ ಫಲಿಸಿದ್ದು ಜೋಳ ಖರೀದಿ ಆದೇಶ: ಖರೀದಿ ಕೇಂದ್ರ ತೆರೆಯಬೇಕು ಕಣಗಾಲ್ ಮೂರ್ತಿ ಅಗ್ರಹ
ಹಾಸನ: ರೈತ ಸಂಘದ ಹೋರಾಟ ಫಲಿಸಿದ್ದು, ರಾಜ್ಯ ಸರ್ಕಾರದಿಂದ ಜೋಳ ಖರೀದಿ ಆದೇಶ ನೀಡಿದ್ದು ಜಿಲ್ಲೆಯಲ್ಲಿ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಕಣಗಾಲ್ ಮೂರ್ತಿ ಅಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಸನ ಘಟಕದ ನಿರಂತರ ಹೋರಾಟದ ಪರಿಣಾಮವಾಗಿ, ಸರ್ಕಾರವು ಮೆಕ್ಕೆಜೋಳವನ್ನು ಕನಿಷ್ಠ 50 ಕ್ವಿಂಟಾಲ್‌ದಷ್ಟು ಪ್ರತಿಯೊಬ್ಬ ರೈತನಿಂದ ಖರೀದಿಸಲು ಆದೇಶ ಹೊರಡಿಸಿದೆ. ಜೊತೆಗೆ, ಬಿಳಿಸುಳಿ ರೋಗದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡುವ ಭರವಸೆಯನ್ನೂ ಸರ್ಕಾರ ವ್ಯಕ್ತಪಡಿಸಿದೆ.
ನವೆಂಬರ್ 24ರಿಂದ 31ರ ವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತ ಸಂಘವು ಅಹೋರಾತ್ರಿ ಧರಣಿ–ಸತ್ಯಾಗ್ರಹ ನಡೆಸಿತ್ತು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಮತ್ತು ಬಿಳಿಸುಳಿ ರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ತುರ್ತು ಪರಿಹಾರ ನೀಡಬೇಕು ಎಂಬುದು ಮುಖ್ಯ ಬೇಡಿಕೆಗಳಾಗಿದ್ದವು.
ಧರಣಿಯ ಬಳಿಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಎಂಎಫ್, ಎಪಿಎಂಸಿ, ಕೃಷಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೆಎಂಎಫ್ 1 ಡಿಸೆಂಬರ್‌ರಿಂದಲೇ ಸರ್ಕಾರ ನಿಗದಿ ಪಡಿಸಿದ ರೂ.2400 ದರಕ್ಕೆ ಖರೀದಿ ಪ್ರಾರಂಭಿಸುವುದಾಗಿ ಹೇಳಿತ್ತು. ಆದರೆ ಪ್ರಾರಂಭಿಕ ಹಂತದಲ್ಲಿ ಒಬ್ಬ ರೈತನಿಗೆ 20 ಕ್ವಿಂಟಾಲ್‌ವರೆಗೆ ಮಾತ್ರ ಮಿತಿ ವಿಧಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಅವರ ನೇತೃತ್ವದಲ್ಲಿನ ತಂಡವು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, 50 ಕ್ವಿಂಟಾಲ್ ಪೂರ್ಣ ಪ್ರಮಾಣದ ಖರೀದಿ ಹಾಗೂ ಬಿಳಿಸುಳಿ ರೋಗದಿಂದ ಬಳಲುತ್ತಿರುವ 12,000 ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿತು.
ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಪರಿಹಾರದ ಬಗ್ಗೆ ಭರವಸೆ ನೀಡಿದ್ದು, 7 ಡಿಸೆಂಬರ್ ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಮೂಲಕ ಪ್ರತಿಯೊಬ್ಬ ರೈತನಿಂದ 50 ಕ್ವಿಂಟಾಲ್ ಜೋಳವನ್ನು ಖರೀದಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.
ಹಾಸನ ಜಿಲ್ಲೆಯಾದ್ಯಂತ ತಕ್ಷಣ ಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗು ಬಿಳಿಸುಳಿ ರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜು ಬಿಟ್ಟ ಗೌಡನಹಳ್ಳಿ, ಲಕ್ಷ್ಮಣ್ , ಕಾಂತರಾಜ್ , ಶಿವಣ್ಣ ಇತರರು ಹಾಜರಿದ್ದರು
Hassan
ಗೋಸಾಗಾಟ ಕಾಯಿದೆ ತಿದ್ದುಪಡಿಗೆ ವಿರೋಧ: ನಾಳೆ ರಾಜ್ಯವ್ಯಾಪಿ ಪ್ರತಿಭಟನೆ-ಹಿಂದು ಸಂಘಟನೆಗಳ ಘೋಷಣೆ
ಹಾಸನ: ಕಾಂಗ್ರೆಸ್ ಸರ್ಕಾರ ತರಲು ಮುಂದಾಗಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ 2020ರ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆಗಳು, ನಾಳೆ ರಾಜ್ಯವ್ಯಾಪಿ ತಳಮಟ್ಟದ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಮಹಿಪಾಲ್ ಅವರು ತಿಳಿಸಿದರು.
ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ವಶಪಡಿಸುವ ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ಇಲ್ಲದೆ ಕೇವಲ ಇಂಡೆಮ್ನಿಟಿ ಬಾಂಡ್ ಮೇಲೆ ಬಿಡುಗಡೆ ಮಾಡುವಂತೆಯಾದ ಈ ತಿದ್ದುಪಡಿ ಗೋವಿನ ರಕ್ಷಣೆಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿ ಮಂಡನೆಯಾಗಬಹುದೆಂಬ ವರದಿ ಹಿನ್ನೆಲೆಯಲ್ಲಿ, ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಜಾಗರಣ ವೇದಿಕೆ ಸೇರಿ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಈ ಕ್ರಮ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.
ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲೂ ಶಾಂತ್ಯುತ ಪ್ರತಿಭಟನೆಗಳನ್ನು ಹಿಂದು ಸಂಘಟನೆಗಳು ನಡೆಸಲಿದ್ದು, ತಿದ್ದುಪಡಿಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗ ಕಾರ್ಯದರ್ಶಿ ಮಹಿಪಾಲ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲೋಕೇಶ್, ವಿ.ಹಿಂ.ಪ ಹಾಸನ ಜಿಲ್ಲಾಧ್ಯಕ್ಷ ಅನುಪ್, ಜಿಲ್ಲಾ ಸಹಕಾರ್ಯದರ್ಶಿ ಮಂಜು, ಬೀಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿ.ಹಿಂ.ಪ ದಕ್ಷಿಣ ಪ್ರಾಂತ ಗೋರಕ್ಷಕ ವಿಕಾಸ್, ಬಜರಂಗದಳ ಜಿಲ್ಲಾ ಸಂಯೋಜಕ ಅಭಿಷೇಕ್ ಸೇರಿದಂತೆ ಘಟನೆಗೆ ಸಂಬಂಧಿಸಿದಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಗೊಳ್ಳುವ ನಿರ್ಧಾರವನ್ನು ಘೋಷಿಸಿದರು.
Hassan
ಕರ್ನಾಟಕ ರತ್ನ ವಿಷ್ಣುವರ್ಧನ್ 75ನೇ ಅಮೃತ ಮಹೋತ್ಸವ:ಅನಿರುಧ್ ಪುಷ್ಪಾರ್ಚನೆ, ಅಭಿಮಾನಿಗಳಿಗೆ ಕೋಟಿಕೋಟಿ ನಮನ
ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಸರಸ್ವತಿ ದೇವಸ್ಥಾನ ವೃತ್ತದಲ್ಲಿರುವ ಕರ್ನಾಟಕ ರತ್ನ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಅಮೃತ ಮಹೋತ್ಸವವನ್ನು ಸ್ಮರಿಸುವ ಕಾರ್ಯಕ್ರಮ ಭಾವಪೂರ್ಣವಾಗಿ ನಡೆಯಿತು.
ಅವರ ಪ್ರತಿಮೆಗೆ ನಟ ಅನಿರುದ್ದೀನ್ ಅವರು ಪುಷ್ಪಾರ್ಚನೆ ನೆರವೇರಿಸಿ, ದಿವಂಗತ ನಟನಿಗೆ ಗೌರವ ಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅನಿರುದ್ದ್, ಅಭಿಮಾನಿಗಳ ಪ್ರೀತಿ ಏನಿದೆ ಎಂಬುದು ವಿಷ್ಣುವರ್ಧನ್ ಅಪ್ಪನಿಗೆ ಸಿಗುತ್ತಿರುವ ಅಮೋಘ ಗೌರವದಿಂದಲೇ ಕಾಣಿಸುತ್ತದೆ.
ದೈಹಿಕವಾಗಿ ನಮ್ಮನ್ನೆಲ್ಲಾ ಬಿಟ್ಟು 16 ವರ್ಷ ಕಳೆದರೂ, ಜನರ ಪ್ರೀತಿ ಕ್ಷಣವೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಅಸಿಮ ಪ್ರೀತಿಗೆ ಕುಟುಂಬದ ಪರವಾಗಿ ನಾನು ಕೋಟಿಕೋಟಿ ನಮನ ಸಲ್ಲಿಸುತ್ತೇನೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಅವರು ತಮ್ಮ ಕಲಾ ಪ್ರಯಾಣದ ಕುರಿತು ಮಾತನಾಡುತ್ತಾ, ಪ್ರಸ್ತುತ “ಸೂರ್ಯವಂಶ” ಧಾರವಾಹಿಯಲ್ಲಿ ನಟಿಸುತ್ತಿದ್ದು, ಸುಮಾರು 550 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂಜu ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೊತೆಗೆ ಬರವಣಿಗೆಯ ಮೇಲಿನ ಆಸಕ್ತಿ ಮುಂದುವರಿದಿದ್ದು, ಇತ್ತೀಚೆಗೆ “ಸಾಲುಗಳು” ಎಂಬ ಪುಸ್ತಕ ಬಿಡುಗಡೆಯಾಗಿದೆ. ಜನವರಿಯಲ್ಲಿ ಇದರ ಇಂಗ್ಲಿಷ್ ಆವೃತ್ತಿ ಸಹ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಒಂದು ಕಾದಂಬರಿಯ ಬರವಣಿಗೆ ಅಂತಿಮ ಹಂತದಲ್ಲಿದ್ದು, ಮುಂದಿನ ವರ್ಷವೇ ಅದನ್ನು ಲೋಕಾರ್ಪಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್, ಸಮಾಜಸೇವಕರಾದ ಗಣೇಶ್ ತಮ್ಲಾಪುರ, ವಿಜಯಕುಮಾರ್ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.
-
Mysore18 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya2 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mysore21 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special16 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
State23 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Hassan20 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Mysore4 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Chikmagalur21 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
