Connect with us

National - International

ಎರಡು ವಾರದಲ್ಲಿ 1 ರೂ.ಗಿಂತ ಹೆಚ್ಚು ಇಳಿಕೆ ಕಂಡ ರೂಪಾಯಿ: ಡಾಲರ್‌ ಎದುರು ಸಾರ್ವಕಾಲಿಕ ಕುಸಿತ

Published

on

ನವದೆಹಲಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ (ಜ.11) ನಡೆದ ವಹಿವಾಟಿನಲ್ಲಿ 55 ಪೈಸೆ ಇಳಿಕೆ ಕಾಣುವ ಮೂಲಕ ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಕುಸಿತ ಕಂಡಿದೆ.

ಒಂದೇ ದಿನದಲ್ಲಿ ರೂಪಾಯಿ ಮೌಲ್ಯ 58 ಪೈಸೆ ಕುಸಿದಿದ್ದು, ಕಳೆದ ಎರಡು ವಾರದಲ್ಲಿ ರೂ.1 ಗಿಂತ ಹೆಚ್ಚು ಕುಸಿದಿದೆ. ಇದರೊಂದಿಗೆ ಡಾಲ್‌ ಮೌಲ್ಯ ಸದ್ಯ 86.62 ರೂ.ಗೆ ಬಂದು ನಿಂತಿದೆ ಎಂದು ವರದಿಯಾಗಿದೆ.

2024ರ ಡಿಸೆಂಬರ್‌ 30 ರಂದು 85.52 ರೂ. ಇದ್ದ ಡಾಲರ್‌ ಮೌಲ್ಯ ಎರಡೇ ವಾರಗಳಲ್ಲಿ ದಿಡೀರ್‌ ಏರಿಕೆ ಕಾಣುವ ಮೂಲಕ ಅಂತರಾಷ್ಟ್ರೀಯ ಮಾರಾಟ ಕೇಂದ್ರದಲ್ಲಿ ಭಾರತದ ರೂಪಾಯಿ ಕುಸಿತ ಕಂಡಿದೆ.

Continue Reading

National - International

ದೆಹಲಿ ಚುನಾವಣೆ: Exit Poll ನಲ್ಲಿ ಬಿಜೆಪಿಗೆ ಜೈ ಎಂದ ಮತದಾರ; ಎಎಪಿಗೆ 2ನೇ ಸ್ಥಾನ

Published

on

ನವದೆಹಲಿ: ಬಹು ನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆ ಬುಧವಾರ ಸಂಜೆ ಆರು ಗಂಟೆಗೆ ಮುಕ್ತಾಯವಾಗಿದ್ದು, ಈ ಚುನಾವಣೆ ಸಂಬಂಧ ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಹೊರಹಾಕಿವೆ.

ಅಚ್ಚರಿಯಂಬಂತೆ ಇದರಲ್ಲಿ ಎಲ್ಲಾ ಸಂಸ್ಥೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳುತ್ತಿದ್ದು, ಎಎಪಿ (ಆಮ್‌ ಆದ್ಮಿ ಪಾರ್ಟಿ) ಎರಡನೇ ಸ್ಥಾನ ಪಡೆಯಲಿದೆ ಎಂದು ತಮ್ಮ ತೀರ್ಪು ಪ್ರಕಟಿಸಿದೆ.

ಹಾಲಿ ಅಧಿಕಾರದಲ್ಲಿರುವ ಎಎಪಿಯೂ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಹಿಡಿಯಲು ಎಲ್ಲಾ ಸಿದ್ದತೆ ನಡೆಸಿಕೊಂಡಿದೆ. ಇತ್ತ ದಶಕಗಳ ಬಳಿಕ ದೆಹಲಿ ಗದ್ದುಗೆ ಹಿಡಿಯಲು ಬಿಜೆಪಿ ಪರಿತಪಿಸುತ್ತಿದ್ದರೇ, ಈ ಎರಡು ಪಕ್ಷಗಳ ನಡುವೆ ಕಾಂಗ್ರೆಸ್‌ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ದೆಹಲಿಯ ಈ ತ್ರಿಕೋನ ಸ್ಪರ್ಧೆಯಲ್ಲಿ ದೆಹಲಿಯ ಗದ್ದುಗೆ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಚುನಾವಣೋತ್ತರ ಸಮೀಕ್ಷೆ ವರದಿ ಇಲ್ಲಿದೆ ನೋಡಿ!

ಜೆವಿಸಿ Exit Poll
ಎಎಪಿ: 22-31
ಬಿಜೆಪಿ: 39-45
ಕಾಂಗ್ರೆಸ್‌: 0-2

ಮ್ಯಾಟ್ರಿಜ್‌ Exit Poll
ಎಎಪಿ: 32-37
ಬಿಜೆಪಿ: 35-40
ಕಾಂಗ್ರೆಸ್‌: 0-1

ಪೋಲ್‌ ಡೈರಿ Exit Poll
ಎಎಪಿ: 10-19
ಬಿಜೆಪಿ: 51-60
ಕಾಂಗ್ರೆಸ್‌: 0

ಪೀಪಲ್ಸ್‌ ಇನ್‌ಸೈಟ್‌ Exit Poll
ಎಎಪಿ: 25-29
ಬಿಜೆಪಿ: 40-44
ಕಾಂಗ್ರೆಸ್‌: 0-1

ಪೀಪಲ್ಸ್‌ ಪಲ್ಸ್‌ Exit Poll
ಎಎಪಿ: 10-19
ಬಿಜೆಪಿ: 51-60
ಕಾಂಗ್ರೆಸ್‌: 0

ಚಾಣಕ್ಯ Exit Poll
ಎಎಪಿ: 25-29
ಬಿಜೆಪಿ: 39-44
ಕಾಂಗ್ರೆಸ್‌: 2-3

ಸುದರ್ಶನ್‌ ಟಿ.ವಿ Exit Poll
ಎಎಪಿ: 33-36
ಬಿಜೆಪಿ: 34-37
ಕಾಂಗ್ರೆಸ್‌: 0-2

ಡಿವಿ ರಿಸರ್ಚ್‌ Exit Poll
ಎಎಪಿ: 26-34
ಬಿಜೆಪಿ: 36-44
ಕಾಂಗ್ರೆಸ್‌: 0

ದೈನಿಕ್‌ ಭಾಸ್ಕರ್‌ Exit Poll
ಎಎಪಿ: 43-47
ಬಿಜೆಪಿ: 23-27
ಕಾಂಗ್ರೆಸ್‌: 0-1

Continue Reading

National - International

ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ: ಜಯ ಬಚ್ಚನ್‌ ಆರೋಪ

Published

on

ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ.

ಮಹಾ ಕುಂಭಮೇಳದಲ್ಲಿ ಇರುವ ನಿಜವಾದ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಸಮಾನ್ಯ ಜನರಿಗೆ ವಿಶೇಷ ಚಿಕಿತ್ಸೆಗಳು ದೊರೆಯುತ್ತಿಲ್ಲ. 34 ಕೋಟಿ ಜನರು ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದು ಸ್ಥಳದಲ್ಲಿ ಇಷ್ಟೊಂದು ಜನರು ಸೇರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸದ್ಯಕ್ಕೆ ಹೆಚ್ಚು ಕಲುಷಿತ ನೀರು ಎಲ್ಲಿದೆ? ಅದು ಕುಂಭದಲ್ಲಿದೆ. (ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ) ದೇಹಗಳನ್ನು ನದಿಗೆ ಎಸೆಯಲಾಗಿದೆ, ಇದರಿಂದಾಗಿ ನೀರು ಕಲುಷಿತವಾಗಿದೆ. … ಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಲಾಗುತ್ತಿಲ್ಲ, ಕೋಟಿಗಟ್ಟಲೆ ಜನರು ಭೇಟಿ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಸಮಯದಲ್ಲಿ ಆ ಸ್ಥಳದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರುತ್ತಾರೆ? ಎಂದು ಜಯ ಬಚ್ಚನ್‌ ಕಿಡಿಕಾರಿದ್ದಾರೆ.

Continue Reading

National - International

ಕೇಂದ್ರ ಬಜೆಟ್ 2025-26: ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?

Published

on

ನವದೆಹಲಿ: ಕೇಂದ್ರ ಬಜೆಟ್ 2025-26ರ ಬಜೆಟ್‌ ಸಂಪೂರ್ಣವಾಗಿ ಮಂಡಿಸಲಾಗಿದ್ದು, ಇದರಲ್ಲಿ ಯಾವೆಲ್ಲಾ ವಸ್ತುಗಳು ದುಬಾರಿ, ಯಾವೆಲ್ಲಾ ವಸ್ತುಗಳು ಅಗ್ಗ ಎಂಬ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲಿದೆ ನೋಡಿ.

ಯಾವೆಲ್ಲ ಅಗ್ಗ:

ಲಿಥಿಯಂ ಬ್ಯಾಟರಿ ದರ, ಎಲ್‌ಇಡಿ, ಎಲ್‌ಸಿಡಿ
ಮೊಬೈಲ್, ಕೋಬಾಲ್ಟ್ ಝಿಂಕ್
ಸ್ವದೇಶಿ ಬಟ್ಟೆಗಳು
ಎಲೆಕ್ಟಿಕ್ ವಾಹನಗಳು
ಚರ್ಮೋತ್ಪನ್ನ ವಸ್ತುಗಳು

ಯಾವೆಲ್ಲ ದುಬಾರಿ:

ಮೊಬೈಲ್ ರೀಚಾರ್ಜ್ ಯೋಜನೆಗಳು ಮತ್ತು ಇಂಟರ್ನೆಟ್ ಸೇವೆಗಳು
ವಿಮಾನ ಟಿಕೆಟ್ ದರ
ಚಿನ್ನ ಮತ್ತು ಬೆಳ್ಳಿ
ಹೈಟೆಕ್ ಎಲೆಕ್ಟ್ರಾನಿಕ್ಸ್‌ ಆಮದು ಕಾರುಗಳು
ತಂಬಾಕು ಮತ್ತು ಸಿಗರೇಟ್

Continue Reading

Trending

error: Content is protected !!