Connect with us

Mysore

ನಾಡಹಬ್ಬ ದಸರಾಗೆ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಘೋಷಿಸಿದೆ

Published

on

ಮೈಸೂರು: ಮೈಸೂರು ದಸರಾ ಹಿನ್ನೆಲೆ ರಾಜ್ಯ, ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ತಡೆಯಲು ನಾಡಹಬ್ಬ ದಸರಾಗೆ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳನ್ನು ಘೋಷಿಸಿದೆ.

ರೈಲು ನಂ. ೦೬೨೭೯/೦೬೨೮೦ ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಅನ್ ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್‌ಗಳನ್ನು ಮಾಡಲಿದೆ. ರೈಲು ನಂ. ೦೬೨೭೯ ಅಕ್ಟೋಬರ್ ೨೦, ೨೧, ೨೨, ೨೩ ಮತ್ತು ೨೪ ರಂದು ರಾತ್ರಿ ೧೧.೧೫ ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ ೨.೩೦ ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ. ರೈಲು ನಂ. ೦೬೨೮೦ ಕೆಎಸ್‌ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ. ೨೧, ೨೨, ೨೩, ೨೪ ಮತ್ತು ೨೫ ರಂದು ಬೆಳಿಗ್ಗೆ ೩ ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೬.೧೫ ಕ್ಕೆ ಮೈಸೂರು ತಲುಪಲಿದೆ.

ರೈಲು ನಂ. ೦೬೫೯೭/೦೬೫೯೮ ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಅನ್‌ರಿಸರ್ವ್ಡ್ ಸ್ಪೆಷಲ್ ರೈಲು ಐದು ಟ್ರಿಪ್‌ಗಳನ್ನು ಮಾಡುತ್ತದೆ. ರೈಲು ನಂ. ೦೬೫೯೭ ಮೈಸೂರಿನಿಂದ ಅಕ್ಟೋಬರ್ ೨೦, ೨೧, ೨೨, ೨೩ ಮತ್ತು ೨೪ ರಂದು ಮಧ್ಯಾಹ್ನ ೧೨.೧೫ ಕ್ಕೆ ಹೊರಟು ಮಧ್ಯಾಹ್ನ ೩.೩೦ ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸುತ್ತದೆ. ರೈಲು ನಂ. ೦೬೫೯೮ ಕೆಎಸ್‌ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ. ೨೦, ೨೧, ೨೨, ೨೩ ೨೪ ರಂದು ಮಧ್ಯಾಹ್ನ ೩.೪೫ ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ರಾತ್ರಿ ೭.೨೦ ಕ್ಕೆ ಮೈಸೂರಿಗೆ ತಲುಪಲಿದೆ. ರೈಲು ನಂ. ೦೬೨೮೧/೦೬೨೮೨ ಮೈಸೂರು-ಚಾಮರಾಜನಗರ-ಮೈಸೂರು ಅನ್‌ರಿಸರ್ವ್ಡ್ ಸ್ಪೆಷಲ್ ಒಂದು ಟ್ರಿಪ್ ಮಾಡಲಿದೆ.

ರೈಲು ನಂ. ೦೬೨೮೧ ಮೈಸೂರು-ಚಾಮರಾಜನಗರ ವಿಶೇಷ ರೈಲು ಅ, ೨೪ ರಂದು ರಾತ್ರಿ ೧೧.೩೦ ಕ್ಕೆ ಮೈಸೂರಿನಿಂದ ಹೊರಟು ೧.೧೫ ಕ್ಕೆ ಚಾಮರಾಜನಗರ ತಲುಪುತ್ತದೆ. ರೈಲು ನಂ. ೦೬೨೮೨ ಚಾಮರಾಜನಗರ-ಮೈಸೂರು ವಿಶೇಷ ರೈಲು ಅ. ೨೫ ರಂದು ಸಂಜೆ ೫ ಗಂಟೆಗೆ ಚಾಮರಾಜನಗರದಿಂದ ಹೊರಟು ಬೆಳಿಗ್ಗೆ ೬.೫೦ ಕ್ಕೆ ಮೈಸೂರು ತಲುಪುತ್ತದೆ. ರೈಲು ನಂ. ೦೬೨೮೩/೦೬೨೮೪ ಮೈಸೂರು-ಚಾಮರಾಜನಗರ-ಮೈಸೂರು ಪ್ರವಾಸಕ್ಕೆ ಕಾಯ್ದಿರಿಸಿದೆ. ರೈಲು ನಂ. ೦೬೨೮೩ ಮೈಸೂರಿನಿಂದ ಅ. ೨೪ ರಂದು ರಾತ್ರಿ ೯.೧೫ ಕ್ಕೆ ಹೊರಟು ರಾತ್ರಿ ೧೧.೧೦ ಕ್ಕೆ ಚಾಮರಾಜನಗರ ತಲುಪಲಿದೆ. ರೈಲು ನಂ. ೦೬೨೮೪ ಚಾಮರಾಜನಗರ-ಮೈಸೂರು ವಿಶೇಷ ರೈಲು ಅ. ೨೪ ರಂದು ರಾತ್ರಿ ೧೧.೩೦ ಕ್ಕೆ ಚಾಮರಾಜನಗರದಿಂದ ಹೊರಟು ಬೆಳಗ್ಗೆ ೧.೩೦ಕ್ಕೆ ಮೈಸೂರು ತಲುಪುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡಿನಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆ

Published

on

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ
ಚಿಕ್ಕ ಜಾತ್ರೆ ಮಹೋತ್ಸವ ಮಂಗಳವಾರ ವೈಭವಯುತವಾಗಿ ನೆರವೇರಿತು.

ಬೆಳಿಗ್ಗೆ 10.45 ರಂದು ಸಲ್ಲುವ ಶುಭ ಮಕರ ಲಗ್ನದಲ್ಲಿ ದೇಗುಲದ ಪ್ರಧಾನ ಆಗಮಿಕ ಜೆ. ನಾಗ ಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಯ೯ ನೆರವೇರಿಸಿ ರಥಗಳಿಗೆ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಉತ್ಸವ ರಥಕ್ಕೆ ಚಾಲನೆ ನೀಡಿ ತೇರನ್ನು ಎಳೆದರು.

ಹೂವಿನ ಹಾರ ಅಲಂಕೃತಗೊಂಡ ರಥೋತ್ಸವ ನಂಜುಂಡೇಶ್ವರ ಸ್ವಾಮಿಯ ಹಾಗೂ ಪಾರ್ವತಿ ದೇವಿ ಸಮೇತ ಉತ್ಸವ ಮೂರ್ತಿ, ಗಣಪತಿ ಚಂಡಿಕೇಶ್ವರ, ಸೇರಿದಂತೆ ಮೂರು ರಥಗಳು ರಥ ಬೀದಿಯಲ್ಲಿ
ರಥಗಳನ್ನು ಸಾವಿರಾರು ಭಕ್ತಾದಿಗಳು ಹಗ್ಗ ಹಿಡಿದು ಜೈ ನಂಜುಂಡೇಶ್ವರ, ಜೈ ಶ್ರೀಕಂಠೇಶ್ವರ, ಜೈ ನಂಜುಂಡ, ಎಂಬ ಘೋಷಣೆಗಳನ್ನು ಕೂಗುತ್ತಾ ಎಳೆದರು.

ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ರಥಕ್ಕೆ ಹಣ್ಣು ದವನ ಎಸೆದು ಪುನೀತರಾದರು.

ರಥ ಬೀದಿಗಳಲ್ಲಿ ನಿಧಾನವಾಗಿ ಚಲಿಸಿ ಭಕ್ತಾದಿಗಳು ಭಕ್ತಿಯಿಂದ ನಮಿಸಿದರು.

ಪೋಲಿಸ್ ಇಲಾಖೆಯಿಂದ ಬಿಗಿ ಬಂದೋಬಸ್ತು ಇರುವುದರಿಂದ ರಥದಲ್ಲಿ ಯಾವುದೇ ಅಡೆ-ತಡೆಗಳಿಲ್ಲದೆ ಮೂರು ರಥಗಳು 12.50 ಗಂಟೆಗೆ ಸ್ವಸ್ಧಾನಕ್ಕೆ ಸೇರಿದವು.

ಜಾತ್ರಾಯಲ್ಲಿ: ಶಾಸಕರಾದ ದರ್ಶನ್ ಧ್ರುವನಾರಾಯಣ್, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಕಾರ್ಯನಿವ೯ಹಣಾಧಿಕಾರಿ ಎಂ. ಜಗದೀಶ್ ಕುಮಾರ್, ಪೌರಾಯುಕ್ತಧಿಕಾರಿ ನಂಜುಂಡಸ್ವಾಮಿ, ಡಿಎಸ್ಪಿ ಗೋವಿಂದ್ ರಾಜ್, ಇದ್ದರು.

Continue Reading

Mysore

ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.

Published

on

ಮೈಸೂರು : ರಾಜ್ಯದ ಮಹತ್ವದ ಯೋಜನೆ ಗೃಹಲಕ್ಷ್ಮಿ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಯೋಜನೆ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ 2 ಸಾವಿರ ಅರ್ಪಣೆಯಾಗಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್‌ಗೆ ಪತ್ರ ಬರೆದಿದ್ದರು.ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಪತ್ರಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸೂಚಿಸಿದ್ದ ಡಿ ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದ್ದು, ಅದರಂತೆ 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಾಗಿದೆ.

ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಹಣ ಸಂದಾಯವಾಗಿದೆ.1,18,000 ರೂಪಾಯಿ ಹಣ ದೇಗುಲಕ್ಕೆ ನೀಡಿಕೆಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಹಣ ಸಂದಾಯ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯ ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.

Continue Reading

Mysore

ಪತ್ರಕರ್ತ ಪುನೀತ್ ಗೆ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿ

Published

on

ಪಿರಿಯಾಪಟ್ಟಣ: ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಜನಮಿತ್ರ ವರದಿಗಾರ ಪತ್ರಕರ್ತ ಸಿ.ಜಿ ಪುನೀತ್ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ನೀಡಲಾಗುವ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಪ್ರಸ್ತಕ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದ ಸೇವೆಗೆ ಸಿ.ಜಿ ಪುನೀತ್ ಆಯ್ಕೆಯಾಗಿದ್ದು, ನ.29ರ ಬುಧವಾರ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕನ್ನಡಾಂಬೆ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Continue Reading

Trending