Connect with us

National - International

ಪಾಕಿಸ್ತಾನ ವಿರುದ್ದ ಭಾರತದ ಸಿಕ್ಸರ್ ಸ್ಟ್ರೈಕ್

Published

on

*ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯಭೇರಿ
ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ವಿಶ್ವ ಕಪ್ ಹೈ ವೋಲ್ಟೇಜ್ ಕ್ರಿಕೆಟ್ ಕದನದಲ್ಲಿ ಬಾರತ ತಂಡದಿಂದ ‘ಸಿಕ್ಸರ್ ಸ್ಟ್ರೈಕ್’ ನಡೆಯಿತು. ಮೊದಲಿಗೆ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡ 42.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 191 ರನ್ ಗಳನ್ನಷ್ಟೇ ಪೇರಿಸುವಲ್ಲಿ ಶಕ್ತವಾಯಿತು. ಭಾರತ ತಂಡದ ಬೌಲರ್ ಗಳ ಅಬ್ಬರದ ಹೊಡೆತಕ್ಕೆ ಪಾಕಿಸ್ತಾನದ ವಿಕೆಟ್ ಗಳು ತರಗೆಲೆಯಂತೆ ಒಂದರ ಹಿಂದೆ ಒಂದರಂತೆ ಉದುರಿದ್ದವು. ನಂತರ ಬ್ಯಾಟಿಂಗ್ ನ ರಣಕಹಳೆ ಮೊಳಗಿಸಿದ ಭಾರತ ತಂಡ
ಪಾಕಿಸ್ತಾನ ಒಡ್ಡಿದ್ದ 192 ರನ್ ಗಳನ್ನು ಬೆನ್ನಟ್ಟಿತು. ರೋಹಿತ್ ಶರ್ಮ ಮತ್ತು ಶ್ರೇಯಸ್, ಫೋರ್ – ಸಿಕ್ಸ್ ಗಳನ್ನು ಸಿಡಿಸಿ ಸ್ಟೇಡಿಯಂ ನಲ್ಲಿ “ಸರ್ಜಿ ಕಲ್ ಸ್ಟ್ರೈ ಕ್ ‘ನ್ನು ನೆನಪಿಸಿದರು. 30.3 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡರೂ ನಿಗದಿತ ಗುರಿ ತಲುಪಿದ ಭಾರತ ತಂಡ 192 ರನ್ ಗಳಿಸಿ 7 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿ ಪಾಕಿಸ್ತಾನ ತಂಡಕ್ಕೆ ಮಹಾಲಯ ಅಮವಾಸೆಯ ಕಗ್ಗತಲನ್ನು ತೋರಿಸಿತು.

Continue Reading
Click to comment

Leave a Reply

Your email address will not be published. Required fields are marked *

National - International

ರಾಜ್ಯ ಕೈ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದ ಖರ್ಗೆ: ಯಾವೆಲ್ಲಾ ನಾಯಕರು ಏನಂದ್ರು ಗೊತ್ತಾ?

Published

on

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಗಾದಿಗೆಗೆ ಕುಸ್ತಿ, ಸಚಿವ ಸಂಪುಟ ಬದಲಾವಣೆ ಕುರಿತಂತೆ ಒಲಬೇಗುಧಿ ಕಂಡಿರುವ ರಾಜ್ಯ ಕಾಂಗ್ರೆಸ್‌ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರಲ್ಲದೇ ರಾಜ್ಯದ ನಾಯಕರು ಬಾಯಿ ಮುಚ್ಚಿಕೊಂಡಿರಬೇಕು ಎಂದು ಖಡಕ್‌ ಸೂಚನೆಯನ್ನು ಸಹಾ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ಹಲವು ಪ್ರಮುಖ ಕೈ ನಾಯಕರು ಮಾತನಾಡಿದ್ದು, ತಾವು ಖರ್ಗೆ ಅವರ ನಿಲುವಿಗೆ ಬದ್ಧ ಎಂದು ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಡಿಕೆ ಶಿವಕುಮಾರ್‌, ನಾನು ಖರ್ಗೆ ಅವರ ಬುದ್ದಿವಾದವನ್ನು ಪಾಲಿಸುತ್ತೇನೆ. ಉಳಿದವರು ಪಾಲಿಸಲಿ ಎಂದು ಹೇಳಿದ್ದಾರೆ.

ಎಚ್‌.ಸಿ ಮಹದೇವಪ್ಪ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ನೂರಕ್ಕೆ ನೂರು ಸರಿಯಿದೆ. ಎಲ್ಲರೂ ಅವರ ಮಾತನ್ನು ಪಾಲಿಸಬೇಕಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ಹೇಳಿದ್ದನ್ನು ಎಐಸಿಸಿ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ. ಇಲ್ಲಿ ಯಾರ ಬಾಯಿಗೂ ಬೀಗ ಹಾಕಲು ಆಗಲ್ಲ. ನಮ್ಮ ವಿವೇಚನೆಯಿಂದ ಮಾತನಾಡಬೇಕು. ಮಾತಿನಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗದಂತೆ ಮಾತನಾಡಬೇಕು ಎಂದರು.

Continue Reading

National - International

ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್‌ ದೋಷಿ

Published

on

ಕೊಲ್ಕತ್ತಾ: ಕೊಲ್ಕತ್ತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 57 ದಿನಗಳಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್‌ 9 ರಂದು ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನ 31 ವರ್ಷದ ವೈದ್ಯೆಯ ರಕ್ತಸಿಕ್ಕ ಮೃತದೇಹ ಪತ್ತೆಯಾಗಿತ್ತು. ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದಲ್ಲಿಯೇ ದೊಡ್ಡಮಟ್ಟದ ಸಂಚಲನ ಮೂಡಿಸಿತ್ತು. ದೇಶಾದ್ಯಂತ ಹಲವಾರು ಹೋರಾಟ ಪ್ರತಿಭಟನೆಗಳು ನಡೆದಿದ್ದವು.

ಈ ಸಂಬಂಧ ಸಂಜಯ್‌ ರಾಯ್‌ ಎಂಬುವವನನ್ನು ಬಂಧಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಕೊಲ್ಕತ್ತಾ ಸಿಬಿಐನ ವಿಶೇಷಾ ನ್ಯಾಯಾಲಯದ ನ್ಯಾಯಾಧೀಶರಾದ ಅನಿರ್ಬನ್‌ ದಾಸ್‌ ಅವರು ಕೇವಲ 57 ದಿನಗಳಲ್ಲಿ ತೀರ್ಪು ಪ್ರಕಟಿಸಿದ್ದು, ಸಂಜಯ್‌ ರಾಯ್‌ ದೋಷಿ ಎಂದು ಹೇಳಿದೆ. ಜೊತೆಗೆ ಶಿಕ್ಷೆಯ ಪ್ರಮಾಣವನ್ನು ಜನವರಿ 20 ರಂದು ಪ್ರಕಟಿಸಲಾಗುವುದು ಎಂದು ಹೇಳಿದೆ.

Continue Reading

National - International

ಸೈಫ್‌ ಅಲಿ ಖಾನ್‌ ಚಾಕು ಇರಿತ ಪ್ರಕರಣ: ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಹೇಳಿದ್ದೇನು?

Published

on

ಮುಂಬೈ: ಮುಂಬೈನಲ್ಲಿ ಗುರುವಾರ (ಜ.16) ಬೆಳಗಿನ ಜಾವ 2.30 ರ ವೇಳೆ ಬಾಲಿವುಡ್‌ ಖ್ಯಾತನಟ ಸೈಫ್‌ ಅಲಿ ಖಾನ್‌ ಅವರಿಗೆ ಮುಸುಕುದಾರಿಯೊಬ್ಬ ಆರು ಬಾರಿ ಚಾಕುವಿನಿಂದ ಇರಿದ ಪ್ರರಣಕ್ಕೆ ಸಂಬಂಧಿಸಿದಂತೆ ಮುಂಬೈ ನಗರದ ಬಗ್ಗೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದವು.

ಸಾಮಾಜಿಕ ಜಾಲತಾಣ, ವಿರೋಧ ಪಕ್ಷಗಳ ನಾಯಕರು ಮುಂಬೈ ನಗರದ ಇನ್ಮುಂದೆ ವಾಸಿಸಲು ಯೋಗ್ಯವಾಗಿರದ ನಗರವಾಗಿದೆ. ಇದೊಂದು ಸುರಕ್ಷಿತ ನಗರವಲ್ಲ ಎಂದು ಟೀಕೆಗಳು ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪ್ರತಿಕ್ರಿಯೆ ನೀಡಿದ್ದು, ಎಲ್ಲರ ಟೀಕೆಗೆಳನ್ನು ಅಲ್ಲೆಗೆಳೆದಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮುಂಬೈ ಸುರಕ್ಷಿತ ಸ್ಥಳವಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ. ದೇಶದ ಎಲ್ಲಾ ಮಹಾನಗರಗಳ ಪೈಕಿ ಮುಂಬೈ ಅತ್ಯಂತ ಸುರಕ್ಷಿತ ನಗರ ಎಂದು ನಾನು ಭಾವಿಸುತ್ತೇನೆ.

ಮುಂಬೈ ಪ್ರತಿಷ್ಠೆಯನ್ನು ಹಾಳುಮಾಡಲು ಈ ಘಟನೆಯನ್ನು ಬಳಸಿಕೊಂಡು ಅಸುರಕ್ಷಿತ ಎಂದು ಹೇಳುವುದು ಅನ್ಯಾಯವಾಗುತ್ತದೆ. ಮುಂಬೈ ನಗರವನ್ನು ಇನ್ನಷ್ಟು ಸುರಕ್ಷಿತವಾಗಿರಿಸಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ನಾವು ಕೂಡಾ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಫಡ್ನವೀಸ್‌ ಹೇಳಿದ್ದಾರೆ.

Continue Reading

Trending

error: Content is protected !!