Connect with us

National

ಭಾರತ ಟಿ-20 ತಂಡ ಪ್ರಕಟ: ಶ್ರೇಯಸ್ ಅಯ್ಯರ್‌ಗೆ ನಾಯಕತ್ವ, ಸೂರ್ಯಕುಮಾರ್ ಔಟ್

Published

on

ಮುಂಬೈ: ಬಿಸಿಸಿಐ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗಳಿಗೆ ಮತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕನಾಗಿ ಶ್ರೇಯಸ್‌ ಐಯ್ಯರ್‌ ಹಾಗೂ ಉಪನಾಯಕನಾಗಿ ತಿಲಕ್‌ ವರ್ಮ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಆಯ್ಕೆಯ ಪ್ರಮುಖ ಅಚ್ಚರಿ ಎಂದರೆ, ಟಿ-20 ವಿಶ್ವಕಪ್ ವಿಜೇತ ನಾಯಕ  ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಜೊತೆಗೆ ಹಾರ್ದಿಕ್‌ ಪಾಂಡ್ಯ ಕೂಡ ಟಿ-20 ತಂಡದಲ್ಲಿ ಸ್ಥಾನ ಪಡೆಯಲಿಲ್ಲ.

ಇನ್ನು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ 15 ವರ್ಷದ ಯುವ ಪ್ರತಿಭೆ ವೈಭವ್‌ ಸೂರ್ಯವಂಶಿ ಮೊದಲ ಬಾರಿಗೆ ಭಾರತ ಹಿರಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ಅವರ ಅಮೋಘ ಪ್ರದರ್ಶನವೇ ಈ ಅವಕಾಶಕ್ಕೆ ಕಾರಣವಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ಟಿ-20 ತಂಡದಲ್ಲಿ ಅಭಿಷೇಕ್‌ ಶರ್ಮ, ನಿತೀಶ್‌ ಕುಮಾರ್‌ ರೆಡ್ಡಿ, ಮೊಹಮ್ಮದ್‌ ಸಿರಾಜ್‌, ವರುಣ್‌ ಚಕ್ರವರ್ತಿ, ಹರ್ಷಿತ್‌ ರಾಣಾ ಸೇರಿದಂತೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್‌ಗಳಾಗಿ ಸಂಜು ಸ್ಯಾಮನ್ಸ್‌ ಮತ್ತು ಇಶಾನ್‌ ಕಿಶನ್‌ ಸ್ಥಾನ ಪಡೆದಿದ್ದಾರೆ.

ಏಷ್ಯನ್ ಗೇಮ್ಸ್ ತಂಡದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಸರಣಿಗೆ ವಿಶ್ರಾಂತಿ ನೀಡಲಾಗಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಅವರು ಭಾರತ ತಂಡವನ್ನು ಬಲಪಡಿಸಲಿದ್ದಾರೆ.

ಭಾರತ ಟಿ-20 ತಂಡದಲ್ಲಿ ಯಾರೆಲ್ಲಾ ಆಟಗಾರರು ಆಡಲಿದ್ದಾರೆ?

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಪ್ರಿನ್ಸ್‌ ಯಾದವ್‌ ಮತ್ತು ವೈಭವ್‌ ಸೂರ್ಯವಂಶಿ

ಏಷ್ಯನ್ ಗೇಮ್ಸ್ ತಂಡ ಯಾರೆಲ್ಲಾ ಆಟಗಾರರು ಆಡಲಿದ್ದಾರೆ?

ಶ್ರೇಯಸ್ ಅಯ್ಯರ್  (ನಾಯಕ), ತಿಲಕ್ ವರ್ಮಾ (ಉಪನಾಯಕ), ಜಸ್‌ಪ್ರೀತ್‌ ಬ್ರುಮಾ ಸೇರಿದಂತೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

Continue Reading

National

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ರಾಜಕೀಯ ಮಾಡದಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Published

on

ನವದೆಹಲಿ: ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಕಳ್ಳತನ ಆರೋಪದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐಗೆ ವಹಿಸಬೇಕೆಂದು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಕೀಯಗೊಳಿಸದಂತೆ ಎಚ್ಚರಿಕೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸ್ಥಿತಿಗತಿ ವರದಿ ಸಲ್ಲಿಸಿದ್ದು, ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ವರದಿಯನ್ನು ಪರಿಶೀಲಿಸಿದ ಪೀಠವು ತನಿಖೆಯ ಸ್ವರೂಪದ ಬಗ್ಗೆ ಪ್ರಶ್ನಿಸಿತು. ಆರೋಪಗಳ ಸತ್ಯಾಸತ್ಯತೆ ಪತ್ತೆಹಚ್ಚಲು ಎಸ್‌ಐಟಿ ತನಿಖೆ ನಡೆಸಲಾಗಿದ್ದು, ಪ್ರಸ್ತುತ ಪೊಲೀಸ್ ತನಿಖೆ ಮುಂದುವರಿದಿದೆ ಎಂದು ಮೆಹ್ತಾ ಹೇಳಿದರು.

ಸುಪ್ರೀಂ ಕೋರ್ಟ್ ಎಸ್‌ಐಟಿ ತನಿಖೆಯನ್ನು ಮುಂದುವರಿಸಬಹುದೆಂದು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಪುನರ್‌ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ಥಿತಿಗತಿ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಕೆಲವು ದಿನಗಳ ಕಾಲಾವಕಾಶ ಬೇಕಿದ್ದು, ಮುಂದಿನ ವಿಚಾರಣೆಯನ್ನು ಜುಲೈ 27ರಂದು ನಡೆಸಲಾಗುವುದು ಎಂದು ಪೀಠ ತಿಳಿಸಿದೆ.

Continue Reading

National

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

Published

on

ನವದೆಹಲಿ,ಜು.: ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಆಗಸ್ಟ್ 13 ರವರೆಗೆ ಒಟ್ಟು 19 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳ ಮಂಡನೆಯಾಗಲಿದೆ.


ದೇಶದ ವಿವಿಧ ವಿಷಯಗಳ ಕುರಿತು ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಗ್ವಾದಗಳು ನಡೆಯುವ ಸಾಧ್ಯತೆಯಿದೆ. ಅಧಿವೇಶನ ಶುರುವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇಂದಿನಿಂದ ಆಗಸ್ಟ್ 13 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಪರಿಶೀಲನೆಗಾಗಿ ಎಂಟು ಪ್ರಮುಖ ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಅಯೋಧ್ಯೆ ರಾಮಮಂದಿರದಲ್ಲಿನ ದೇಣಿಗೆ ಕಳ್ಳತನದ ಆರೋಪ, ನೀಟ್-ಯುಜಿ (NEET-UG) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದ ವಿವಾದಗಳು ಅಧಿವೇಶನದ ಆರಂಭದಿಂದಲೇ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಚರ್ಚೆಗೆ ನಿಗದಿಯಾಗಿರುವ ಪ್ರಮುಖ ಮಸೂದೆಗಳಲ್ಲಿ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026’ ಸೇರಿದ್ದು, ಇದರ ಚರ್ಚೆಗೆ ನಾಲ್ಕು ಗಂಟೆಗಳ ಸಮಯವನ್ನು ನಿಗದಿಪಡಿಸಲಾಗಿದೆ. ಹಾಗೆಯೇ, ‘ಆದಾಯ ತೆರಿಗೆ (ತಿದ್ದುಪಡಿ) ಮಸೂದೆ, 2026’ ರ ಕುರಿತು ಲೋಕಸಭೆಯಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಯಲಿದೆ.

 

Continue Reading

National

ಮೆಸ್ಸಿಯ ಕೊನೆಯ ವಿಶ್ವಕಪ್ ಕನಸು ಭಗ್ನ’ : ಸ್ಪೇನ್‌ಗೆ ವಿಶ್ವಕಪ್, ಅರ್ಜೆಂಟೀನಾ ಸೋಲು

Published

on

ನ್ಯೂಯಾರ್ಕ್: ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಕೊನೆಯ ವಿಶ್ವಕಪ್ ಗೆಲ್ಲುವ ಕನಸು ಈಡೇರಲಿಲ್ಲ. 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ 1-0 ಗೋಲುಗಳ ಅಂತರದಲ್ಲಿ ಸೋತು, ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್‌ಗೆ ವಿಶ್ವಕಪ್ ಕಿರೀಟ ತಂದುಕೊಟ್ಟಿತು.

ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ಅರ್ಜೆಂಟೀನಾ ಮೇಲೆ ನಿರಂತರ ಒತ್ತಡ ಹೇರಿತು. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಕೆಲ ಅವಕಾಶಗಳನ್ನು ಸೃಷ್ಟಿಸಿದರೂ, ಸ್ಪೇನ್‌ನ ಸಂಘಟಿತ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಹಲವು ಅದ್ಭುತ ಸೇವ್‌ಗಳನ್ನು ಮಾಡಿ ತಂಡವನ್ನು ಪಂದ್ಯದಲ್ಲಿ ಉಳಿಸಿದ್ದರು.

ನಿಗದಿತ 90 ನಿಮಿಷಗಳಲ್ಲಿ ಯಾವುದೇ ತಂಡ ಗೋಲು ದಾಖಲಿಸದ ಕಾರಣ ಪಂದ್ಯ ಹೆಚ್ಚುವರಿ ಸಮಯಕ್ಕೆ ಸಾಗಿತು. 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ನಿರ್ಣಾಯಕ ಗೋಲು ಬಾರಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. ಕೊನೆಯ ಕ್ಷಣಗಳಲ್ಲಿ ಅರ್ಜೆಂಟೀನಾ ಸಮಬಲ ಸಾಧಿಸಲು ಹೋರಾಡಿದರೂ ಯಶಸ್ವಿಯಾಗಲಿಲ್ಲ.

ಈ ಗೆಲುವಿನೊಂದಿಗೆ ಸ್ಪೇನ್ 2010ರ ಬಳಿಕ ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮತ್ತೊಂದೆಡೆ, ಮೆಸ್ಸಿಗೆ ಇದು ವಿಶ್ವಕಪ್‌ನಲ್ಲಿ ಕೊನೆಯ ಪಂದ್ಯವಾಗುವ ಸಾಧ್ಯತೆ ಇದ್ದು, ಮತ್ತೊಮ್ಮೆ ಟ್ರೋಫಿ ಎತ್ತುವ ಅವರ ಕನಸು ಭಗ್ನಗೊಂಡಿತು.

Continue Reading

Trending

error: Content is protected !!