Connect with us

Sports

ಹಿಟ್‌ಮ್ಯಾನ್‌ ಶತಕದಾಟಕ್ಕೆ ತಲೆಬಾಗಿದ ಇಂಗ್ಲೆಂಡ್‌; 2-0 ಅಂತರದಿಂದ ಸರಣಿ ವಶಪಡಿಸಿಕೊಂಡ ಭಾರತ

Published

on

ಒಡಿಶಾ: ಟೀಂ ಇಂಡಿಯಾ ಕಪ್ತಾನ್‌ ರೋಹಿತ್‌ ಶರ್ಮ ಅವರ ಶತಕದ ಬಲದಿಂದಾಗಿ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್‌ ಅಂತರದ ಗೆಲುವು ದಾಖಲಿಸಿದೆ.

ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ಏರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 304 ರನ್‌ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ಭಾರತ ತಂಡ 44.3 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 308 ರನ್‌ ಬಾರಿಸಿ 4 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತು.

ಇಂಗ್ಲೆಂಡ್‌ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಭದ್ರ ಬುನಾದಿ ಹಾಕಿದರು. ಗಿಲ್‌ 60 ರನ್‌ ಗಳಿಸಿ ಔಟಾದರೇ, ಹಿಟ್‌ ಮ್ಯಾನ್‌ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್‌ ಸಹಿತ 119 ರನ್‌ ಗಳಿಸಿ ಗೆಲುವಿಗೆ ಸಹಕರಿಸಿದರು.

ಉಳಿದಂತೆ ಕೊಹ್ಲಿ 5ಮ ಶ್ರೇಯಸ್‌ ಅಯ್ಯರ್‌ 44, ಕೆ.ಎಲ್‌ ರಾಹುಲ್‌ 10, ಹಾರ್ದಿಕ್‌ ಪಾಂಡ್ಯ 10 ರನ್‌ ಗಳಿಸಿ ಔಟಾದರು.

ಬಳಿಕ ಜೊತೆಯಾದ ಅಕ್ಷರ್‌ ಪಟೇಲ್‌ ಮತ್ತು ರವೀಂದ್ರ ಜಡೇಜಾ ಔಟಾಗದೇ ಕ್ರಮವಾಗಿ 41 ಹಾಗೂ 11 ರನ್‌ ಗಳಿಸಿ ಜಯ ತಂದಿಟ್ಟರು.

ಇಂಗ್ಲೆಂಡ್‌ ಪರವಾಗಿ ಓವರ್‌ಟನ್‌ ಎರಡು, ಆಟ್ಕಿನ್ಸನ್‌, ರಶೀದ್‌, ಲಿವಿಂಗ್‌ಸ್ಟೋನ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿ ಮಿಂಚಿದರು.

 

 

Continue Reading

Sports

IPL 2025: ರಾಜಸ್ಥಾನ್‌ಗೆ ಸತತ ಎರಡನೇ ಸೋಲು: ಕೆಕೆಆರ್‌ ಶುಭಾರಂಭ

Published

on

ಗುವಾಹಟಿ: ಸಂಘಟಿತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಅತಿಥೇಯ ರಾಯಸ್ಥಾನ್‌ ರಾಯಲ್ಸ್‌ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಕೆಕೆಆರ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಆರ್‌ಆರ್‌ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋತು ನಿರಾಸೆ ಅನುಭವಿಸಿದೆ.

ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್‌ ಮತ್ತು ಆರ್‌ಆರ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್‌ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿ 8 ವಿಕಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು.

ಆರ್‌ಆರ್‌ ಇನ್ನಿಂಗ್ಸ್‌: ತನ್ನ ತವರು ನೆಲದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಆರ್‌ಆರ್‌ಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸ್ಯಾಮ್ಸನ್‌ 13(11), ಜೈಸ್ವಾಲ್‌ 29(24) ರನ್‌ ಗಳಿಸಿ ವೇಗವಾಗಿ ಔಟಾದರು.

ನಂತರ ಬಂದ ನಾಯಕ ರಿಯಾನ್‌ ಪರಾಗ್‌ ಅಬ್ಬರಿಸುವ ಹಾಗೆ ಕಂಡರೂ 25(15) ರನ್‌ ಗಳಿಸಿ ಔಟಾದರು. ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಧ್ರುವ್‌ ಜುರೆಲ್‌ 33(28) ರನ್‌ ಗಳಿಸಿದ್ದೆ ತಂಡದ ಪರ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು.

ಉಳಿದಂತೆ ನಿತೀಶ್‌ ರಾಣಾ 8(9), ವನಿಂದು ಹಸರಂಗ 4(4), ಶುಭಂ ದುಬೆ 9(12), ಹೆಟ್ಮಾಯರ್‌ 7(8), ಜೋಫ್ರಾ ಆರ್ಚರ್‌ 16(7) ರನ್‌ ಗಳಿಸಿ ಔಟಾದರು. ತೀಕ್ಷಣ ಹಾಗೂ ತುಷಾರ್‌ ದೇಶ್‌ಪಾಂಡೆ ಔಟಾಗದೇ 1(1) ಮತ್ತು 2(1) ರನ್‌ ಕಲೆಹಾಕಿದರು.

ಕೆಕೆಆರ್‌ ಪರ ವರುಣ್‌ ಚಕ್ರವರ್ತಿ, ಮೋಯಿನ್‌ ಅಲಿ, ಹರ್ಷಿತ್‌ ರಣಾ, ವೈಭವ್‌ ಅರೋರಾ ತಲಾ 2 ವಿಕೆಟ್‌ ಪಡೆದರು.

ಕೆಕೆಆರ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಕ್ವಿಂಟನ್‌ ಡಿ ಕಾಕ್‌ ಆಸರೆಯಾದರು. ಆರಂಭಿಕ ಬ್ಯಾಟರ್‌ ಮೊಯೀನ್‌ ಅಲಿ 5(12) ರನ್‌ ಗಳಿಸಿ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ ಆಗಿ ಹೊರ ನಡೆದರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 18(15) ಕೂಡಾ ಹಚ್ಚುಹೊತ್ತು ನಿಲ್ಲಲಿಲ್ಲ.

ನಂತರ ಒಂದಾದ ಕ್ವಿಂಟನ್‌ ಡಿ ಕಾಕ್‌ ಹಾಗೂ ರಘುವಂಶಿ ತಂಡದ ದಿಕ್ಕನ್ನೇ ಬದಲಾಯಿಸಿದರು. ತಮ್ಮ ಬಲವಾದ ಹೊಡೆತಗಳ ಮೂಲಕ ಆರ್‌ಆರ್‌ ಬೌಲರ್‌ಗಳನ್ನು ಕಾಡಿದರು. ಡಿಕಾಕ್‌ ಔಟಾಗದೇ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ ಭರ್ಜರಿ 6 ಸಿಕ್ಸರ್‌ ಸಹಿತ 97 ರನ್‌ ಗಳಿಸಿದರು. ರಘುವಂಶಿ 22(17) ರನ್‌ ಗಳಿಸಿ ಔಟಾಗದೇ ಉಳಿದು ಡಿಕಾಕ್‌ಗೆ ಸಾಥ್‌ ನೀಡಿದರು.

ಆರ್‌ಆರ್ ಪರ ಹಸರಂಗ ಒಂದು ವಿಕೆಟ್‌ ಪಡೆದರು.

Continue Reading

Sports

IPL 2025: ಗುಜರಾತ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್‌ ಕಿಂಗ್ಸ್‌

Published

on

ಅಹಮದಾಬಾದ್‌: ನಾಯಕ ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕ, ಅರ್ಶ್‌ದೀಪ್‌ ಸಿಂಗ್‌ ಮಾರಕ ದಾಳಿಯ ಸಹಾಯದಿಂದ ಪಂಜಾಬ್‌ ಕಿಂಗ್ಸ್‌ ಅತಿಥೇಯ ಗುಜರಾತ್‌ ಟೈಟನ್ಸ್‌ ತಂಡವನ್ನು 11 ರನ್‌ಗಳ ಅಂತರಿದಿಂದ ಸೋಲಿಸಿದೆ. ಮೊದಲ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 243 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್‌ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 232 ರನ್‌ ಗಳಿಸಿ 11 ರನ್‌ಗಳ ಅಂತರಿಂದ ಸೋಲು ಕಂಡಿತು.

ಪಂಜಾಬ್‌ ಇನ್ನಿಂಗ್ಸ್‌: ಟೂರ್ನಿಯ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಪ್ರಿಯಾಂಕ್‌ ಆರ್ಯ ಹಾಗೂ ಪ್ರಭ್‌ಸಿಮ್ರಾನ್‌ ಇನ್ನಿಂಗ್ಸ್‌ ಆರಂಭಿಸಿದರು. ಪ್ರಭ್‌ ಸಿಮ್ರಾನ್‌ ಐದು ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿದರು. ಆರ್ಯ 23 ಎಸೆತಗಳಲ್ಲಿ 7ಬೌಂಡರಿ, 2 ಸಿಕ್ಸರ್‌ ಸಹಿತ 47 ರನ್‌ ಗಳಿಸಿ ಔಟಾದರು.

ಅಜ್ಮತ್ತುಲ್ಲಾ 16(15) ರನ್‌ ಗಳಿಸಿದರೇ, ಮ್ಯಾಕ್ಸಿ ಇಲ್ಲದ ಔಟ್‌ಗೆ ವಿಕೆಟ್‌ ಒಪ್ಪಿಸಿದರು. ಸ್ಟೋಯ್ನಿಸ್‌ 20(15) ರನ್‌ ಕಲೆಹಾಕಿ ಔಟಾದರು.

ಮತ್ತೊಂದೆಡೆ ನಿಧಾನವಾಗಿ ಬ್ಯಾಟ್‌ ಬೀಸಿದ ನಾಯಕ ಶ್ರೇಯಸ್‌ ಅಯ್ಯರ್‌ ಜಿಟಿ ಬೌಲರ್‌ಗಳನ್ನು ಬೆಂಡೆತ್ತಿದರು. ಅಯ್ಯರ್‌ ಔಟಾಗದೇ 42 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ ಸಹಿತ 97 ರನ್‌ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಶಶಾಂಕ್‌ ಸಿಂಗ್‌ ಕೇವಲ 16 ಎಸೆತಗಳಲ್ಲಿ 44 ರನ್‌ ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಗುಜರಾತ್‌ ಪರ ಸಾಯ್‌ ಕಿಶೋರ್‌ ಮೂರು ವಿಕೆಟ್‌, ರಶೀದ್‌ ಖಾನ್‌ ಮತ್ತು ರಬಾಡ ತಲಾ ಒಂದೊಂದು ವಿಕೆಟ್‌ ಪಡೆದರು.

ಗುಜರಾತ್‌ ಇನ್ನಿಂಗ್ಸ್‌: ಬೃಹತ್‌ ಮೊತ್ತ ಬೆನ್ನತ್ತಿದ ಜಿಟಿಗೆ ಉತ್ತಮ ಆರಂಭ ದೊರೆಯಿತು. ನಾಯಕ ಶುಭ್‌ಮನ್‌ ಗಿಲ್‌ 33(14) ಹಾಗೂ ಸಾಯ್‌ ಸುದರ್ಶನ್‌ 74(41) ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು.

ಬಳಿಕ ಬಂದ ಬಟ್ಲರ್‌ 54(33), ರುದರ್‌ಫರ್ಡ್‌ 46(28) ರನ್‌ ಗಳಿಸಿ ಹೋರಾಟ ನೀಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ರಾಹುಲ್‌ ತೆವಾಟಿಯ 6(2) ರನ್‌ ಗಳಿಸಿದರು. ಔಟಾಗದೇ ಶಾರುಖ್‌ ಖಾನ್‌ 6(1) ಹಾಗೂ ಅರ್ಶದ್‌ ಖಾನ್‌ 1(1) ರನ್‌ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.

ಪಂಜಾಬ್‌ ಪರ ಅರ್ಶ್‌ದೀಪ್‌ ಎರಡು, ಮಾರ್ಕೋ ಎನ್ಸನ್‌ ಮತ್ತು ಮ್ಯಾಕ್ಸ್‌ವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Continue Reading

Sports

IPL 2025: ಲಖನೌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಡೆಲ್ಲಿ

Published

on

ವಿಶಾಖಪಟ್ಟಣಂ: ಇಂಪ್ಯಾಕ್ಟ್‌ ಪ್ಲೇಯರ್‌ ಅಶುತೋಷ್‌ ಶರ್ಮಾ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ತಂಡ ರೋಚಕ ಹಣಾಹಣಿಯಲ್ಲಿ ಒಂದು ವಿಕೆಟ್‌ಗಳ ಅಂತರದಿಂದ ಲಖನೌ ತಂಡವನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.

ಇಲ್ಲಿನ ವೈ.ಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ ಕೆಲಹಾಕಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ ಗಳಸಿ 1 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.

ಲಖನೌ ಪರ ಮಿಚೆಲ್‌ ಮಾರ್ಷ್‌ 72(36), ನಿಕೋಲಸ್‌ ಪೂರನ್‌ 75(30) ರನ್‌ ಗಳ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ಸಹಕರಿಸಿದರು. ಮಾರ್ಕ್ರಂ 15, , ಮಿಲ್ಲರ್‌ 27, ಆಯುಷ್‌ ಬದೋನಿ 4, ಶಹಬಾಜ್‌ ಅಹ್ಮದ್‌ 9, ನಾಯಕ ಪಂತ್‌, ರವಿ ಬಿಷ್ಣೋಯ್‌ ಹಾಗೂ ಶಾರ್ದುಲ್‌ ಠಾಕೂರ್‌ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್‌ ಆದರು.

ಡೆಲ್ಲಿ ಪರ ಮಿಚೆಲ್‌ ಸ್ಟಾರ್ಕ್‌ ಮೂರು, ಕುಲ್ದೀಪ್‌ ಯಾದವ್‌ ಎರಡು, ಮುಖೇಶ್‌ ಕುಮಾರ್‌ ಹಾಗೂ ವಿಪ್ರಾವ್‌ ನಿಗಮ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಜೇಕ್‌ ಫ್ರೆಸರ್‌ ಕೇವಲ ಒಂದು ರನ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ನಂತರ ಬಂದ ಅಭಿಷೇಕ್‌ ಪೂರೆಲ್‌ ಡಕ್‌ಔಟ್‌ ಹೊರನಡೆದರು. ಸಮೀರ್‌ ರಿಜ್ವಿ ನಾಲ್ಕು ರನ್‌ಗಳಿಗೆ ಸುಸ್ತಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಡೆಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು.

ಬಳಿಕ ಜೊತೆಯಾದ ಫಾಫ್‌ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್‌ ಪಟೇಲ್‌ ತಂಡಕ್ಕೆ ಚೇತರಿಕೆ ಆಟವಾಡಿದರು. ಈ ಇಬ್ಬರು ಕ್ರಮವಾಗಿ 29(18) ಮತ್ತು 22(11) ರನ್‌ ಗಳಿಸಿ ಔಟಾದರು. ನಂತರ ಸ್ಟಬ್ಸ್‌ 34(22), ವಿಪ್ರಾಜ್‌ ನಿಗಮ್‌ 39(15), ಮಿಚೆಲ್‌ ಸ್ಟಾರ್ಕ್‌ 2, ಕಲ್ದೀಪ್‌ ಯಾದವ್‌ 5 ರನ್‌ ಗಳಿಸಿ ಔಟಾದರು.

ಆದರೆ ಮತ್ತೊಂದೆಡೆ ಛಲ ಬಿಡದೇ ಬ್ಯಾಟ್‌ ಬೀಸಿದ ಇಂಪ್ಯಾಕ್ಟ್‌ ಪ್ಲೇಯರ್‌ ಅಶುತೋಶ್‌ ಶರ್ಮಾ ಔಟಾಗದೇ 31 ಎಸತಗಳಲ್ಲಿ 5 ಬೌಂಡರಿ 5 ಸಿಕ್ಸರ್‌ ಸಹಿತ 66 ರನ್‌ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿತ್‌ ಶರ್ಮಾ ಒಂದು ರನ್‌ ಗಳಿಸಿ ಔಟಾಗದೇ ಉಳಿದರು.

ಲಖನೌ ಪರ ಶಾರ್ದುಲ್‌ ಠಾಕೂರ್‌, ಸಿದ್ಧಾರ್ಥ್‌, ದಿಗ್ವೇಶ್‌ ಹಾಗೂ ರವಿ ಬಿಷ್ಣೋಯ್‌ ತಲಾ ಎರಡೆರೆಡು ವಿಕೆಟ್‌ ಕಬಳಿಸಿದರು.

Continue Reading

Trending

error: Content is protected !!