Connect with us

Chikmagalur

ಹುಯಿಗೆರೆಯಲ್ಲಿ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

Published

on

ಬಾಳೆಹೊನ್ನೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದ ಪಕ್ಷವಾಗಿದೆ ಇವರ ಆಡಳಿತದಲ್ಲಿ ರಾಜ್ಯಾದ್ಯಂತ ಅವ್ಯಾಹತವಾಗಿ ಗೋ ಸಾಗಾಣಿಕೆ, ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ಲವ್ ಜಿಹಾದ್ ನಿರಂತರವಾಗಿ ಮುಂದುವರೆಯುತ್ತಿರುವುದು ಆತಂಕ ಸೃಷ್ಠಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಗೋಪಾಲ್ ಜಿ ತಿಳಿಸಿದರು .

ಅವರು ಬಾಳೆಹೊನ್ನುರು ಸಮೀಪದ ಹುಯಿಗೆರೆಯಲ್ಲಿರುವ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ & ಹಸು, ಕರುವನ್ನು ಪೂಜಿಸಿ ಬಿಡುವ ಮೂಲಕ ಉದ್ಘಾಟಿಸಲಾಯಿತು.

ಸತತ 500 ವರ್ಷಗಳ ಸಂಘರ್ಷದ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದು ನಾವು ಹೆಮ್ಮೆಪಡುವ ವಿಚಾರವಾಗಿದೆ. 30 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಆಕ್ರಮಣಕಾರಿಗಳು ಧ್ವಂಸ ಮಾಡಿದ್ದು, ಅದರಲ್ಲಿ ಅಯೋಧ್ಯೆಯನ್ನು ವ್ಯಾಪಕ ಜನಾಂದೋಲನ, ಕಾನೂನಿನ ಮೂಲಕ ಕಡೆಗೂ ನಮ್ಮದಾಗಿಸಿಕೊಳ್ಳಲಾಗಿದೆ.

ವಿಶ್ವ ಹಿಂದೂ ಪರಿಷತ್ ಸಂಘಟನೆಯು ಮುಂದಿನ ದಿನಗಳಲ್ಲಿ ಕಾಶಿ, ಮಥುರಾ, ಅಯೋಧ್ಯೆಯ ಉಳಿವಿನ ಛಲದ ಹೋರಾಟಕ್ಕೆ ಹಂತಹಂತವಾಗಿ ಜಯ ಲಭಿಸುವ ಕಾಲ ಸನ್ನಿಹಿತವಾಗುತ್ತಿದ್ದು, ಮುಂದೆ ಐತಿಹಾಸಿಕ ಮಥುರೆ, ಕಾಶಿಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಚುರುಕು ಗತಿಯಲ್ಲಿ ಸಾಗಲಿದೆ.

ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ ಮೂಲಕ ಗೋ ಸಂರಕ್ಷಣೆಯ ಆಂದೋಲನದಲ್ಲಿ ಹೊಸ ಆತ್ಮ ವಿಶ್ವಾಸ, ಚೈತನ್ಯವನ್ನು ಹೆಚ್ಚಿಸಿದೆ. ಪ್ರವೀಣ್ ಖಾಂಡ್ಯ ಮತ್ತು ತಂಡ ನಿರ್ವಹಣೆ ಮಾಡುತ್ತಿರುವ ಈ ಗೋ ಸೇವಾ ಕೈಂಕರ್ಯಕ್ಕೆ ಶೃಂಗೇರಿ ಶಾರದಾ ಪೀಠದ ಅನುಗ್ರಹ, ಸಹಕಾರ ದೊರೆತಿದ್ದು, ಅನೇಕ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

ಸಾಕಲು ಅಸಹಾಯಕರಾದ ರೈತರು, ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಹಿಡಿದು ರಕ್ಷಿಸಿದ ಗೋವುಗಳಿಗೆ ಆಶ್ರಯ ನೀಡಿ ಪುನರ್ಜನ್ಮ ಕಲ್ಪಿಸುವಲ್ಲಿ ಗೋ ಸೇವಾ ಕೇಂದ್ರಗಳು ಸಹಕಾರಿಯಾಗಿದೆ. ಸಮಾಜ, ಮಠ, ಮಾನ್ಯಗಳ ಬೆಂಬಲ ಸಿಗದೆ ಇದ್ದಲ್ಲಿ ಇವುಗಳು ಉಳಿಯಲಾರವು. ಪ್ರತಿಯೊಬ್ಬರೂ ಆರ್ಥಿಕ ನೆರವು, ಆಹಾರ, ಮೇವಿನ ರೂಪದಲ್ಲಿ ಧರ್ಮಾಭಿಮಾನಿಗಳು ಗೋಗ್ರಾಸದ ರೂಪದಲ್ಲಿ ದಾನ ನೀಡಬೇಕು ಎಂದರು.

ಆಳುವ ಕಾಂಗ್ರೆಸ್ ಸರಕಾರವು ಮತಾಂಧತೆಗೆ ಬೆಂಬಲ ನೀಡುತ್ತಿದ್ದು, ಹಿಂದೂ ಸಮಾಜ ಅದನ್ನು ದಿಟ್ಟ ಹೋರಾಟದ ಮೂಲಕ ಎದುರಿಸಬೇಕಾಗಿದೆ. ದತ್ತಪೀಠದ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಮ ಮಂದಿರಕ್ಕೆ ಅಯೋಧ್ಯೆ ಮೀಸಲಿಟ್ಟು, ಮುಸ್ಲಿಮರಿಗೆ ಪ್ರತ್ಯೇಕ ಜಾಗ ನೀಡಿದ ಕ್ರಮವನ್ನೇ ದತ್ತಪೀಠಕ್ಕೂ ಅನ್ವಯಿಸುವಂತೆ ಮಾಡುವ ತೀರ್ಪು ಬಂದಾಗ ಸಮಸ್ಯೆ ಬಗೆಹರಿಯಬಲ್ಲದು ಎಂದರು.

ಇದರ ಅಂಗವಾಗಿ ರುದ್ರ, ಶತರುದ್ರ ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ಬೆಂಗಳೂರಿನ ಐಎಎಸ್ ಅಧಿಕಾರಿ ವಿಶ್ವನಾಥ್ ಹಿರೇಮಠ್, ವಿಹಿಂಪ ಮುಖಂಡ ದಾವಣಗೆರೆಯ ಮುರಳಿ, ಶಂಕರ ಭಾರತಿ ಗೋಶಾಲೆ ಟ್ರಸ್ಟ್ ಅಧ್ಯಕ್ಷೆ ಶೃತಿ ಪ್ರವೀಣ್, ಉಪಾಧ್ಯಕ್ಷ ಮುರಳಿಧರ್, ಖಜಾಂಚಿ ಪ್ರವೀಣ್ ಖಾಂಡ್ಯ, ಸಾವಿತ್ರಮ್ಮ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಿರಿಯ ಜಗದ್ಗುರುಗಳ ಆಪ್ತ ಸಹಾಕ ಕೃಷ್ಣಮೂರ್ತಿ ಮಾತನಾಡಿ, ಶ್ರೀ ಪೀಠದಿಂದ ಸಹಕಾರ ಧರ್ಮ, ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಯಾವ ಸಂಘಟನೆ, ವ್ಯಕ್ತಿಗಳು ಮುಂದೆ ಬರುತ್ತಾರೋ ಅವರಿಗೆ ಶ್ರೀ ಪೀಠದ ಉಭಯ ಜಗದ್ಗುರುಗಳ ಅನುಗ್ರಹ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು

Continue Reading

Chikmagalur

ಸಾವಿನಲ್ಲೂ ಸಾರ್ಥಕತೆ ಮೆರೆದ ನೊಂದ ಕುಟುಂಬ

Published

on

ಚಿಕ್ಕಮಗಳೂರು : ಸಾವಿನಲ್ಲೂ ಸಾರ್ಥಕತೆ ಮೆರೆದ ನೊಂದ ಕುಟುಂಬ ಗಂಡನ ಸಾವಿನ ಆಘಾತದ ನಡುವೆಯೂ ನಾಲ್ಕು ಜನರ ಜೀವ ಉಳಿಸಲು ಅಂಗಾಂಗ ದಾನಕ್ಕೆ ಮುಂದಾದ ಪತ್ನಿ ಅಪೂರ್ವ ಶೆಟ್ಟಿ ಅವರ ಮಾನವೀಯ ನಿರ್ಧಾರ ಇಂದು ಸಮಾಜಕ್ಕೆ ಮಾದರಿಯಾಗಿದೆ.

ಕೊಪ್ಪ ತಾಲೂಕಿನ ನಿವಾಸಿ ಮಂಜುನಾಥ್ (35) ಅವರು ಇತ್ತೀಚೆಗೆ ಆಟೋ ಅಪಘಾತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದರು. ಅಪಘಾತದ ವೇಳೆ ಆಟೋ ತಲೆಗೆ ಬಡಿದು ಗಂಭೀರ ಗಾಯವಾಗಿತ್ತು. ಕೊಪ್ಪ ಹಾಗೂ ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ, ವೈದ್ಯಕೀಯವಾಗಿ ಮೆದುಳು ಸಂಪೂರ್ಣವಾಗಿ ಕಾರ್ಯನಿರತವಾಗದ ಸ್ಥಿತಿಗೆ ತಲುಪಿದ್ದರು.


ಈ ದುಃಖದ ಸಂದರ್ಭದಲ್ಲೂ, ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂಬ ಮಹಾನ್ ಸಂಕಲ್ಪದೊಂದಿಗೆ ಪತ್ನಿ ಅಪೂರ್ವ ಶೆಟ್ಟಿ ಅವರು ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು.

ಇಂದು ಮಧ್ಯಾಹ್ನ ಮಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಅವುಗಳನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯವರು ಅಂಗಾಂಗ ದಾನ ಮಾಡಿದರೆ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಾಡುವುದಾಗಿ ತಿಳಿಸಿದರೂ, ಪತ್ನಿ ಅಪೂರ್ವ ಶೆಟ್ಟಿ ಅವರು ಹಣವನ್ನು ಪಾವತಿಸಿ ಪತಿಯ ಮೃತದೇಹವನ್ನು ತಮ್ಮ ಊರಿಗೆ ಕರೆತಂದಿದ್ದಾರೆ.


“ಪತಿ ಸತ್ತರೂ, ಅವರ ಮೂಲಕ ಇನ್ನೂ ನಾಲ್ಕು ಜನರು ಬದುಕಲಿ” ಎಂಬ ಮಾನವೀಯ ಭಾವನೆಯೇ ಈ ನಿರ್ಧಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

ಮಂಜುನಾಥ್–ಅಪೂರ್ವ ಶೆಟ್ಟಿ ದಂಪತಿಗೆ 4 ವರ್ಷ ಹಾಗೂ 1 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಬಡ ಕುಟುಂಬವಾಗಿರುವುದರಿಂದ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಸಂಘ–ಸಂಸ್ಥೆಗಳು ಹಾಗೂ ದಾನಿಗಳ ಸಹಾಯವನ್ನು ಕುಟುಂಬವು ನಿರೀಕ್ಷಿಸಿದೆ.


ತನ್ನ ಪ್ರೀತಿಯ ಗಂಡನ ಸಾವಿನ ನೋವಿನ ನಡುವೆಯೂ ಸಮಾಜ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಈ ಮಹಾನ್ ನಿರ್ಧಾರ ತೆಗೆದುಕೊಂಡ ಅಪೂರ್ವ ಶೆಟ್ಟಿ ಹಾಗೂ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರಿಗೆ ಗೌರವ ವ್ಯಕ್ತವಾಗುತ್ತಿದೆ.

Continue Reading

Chikmagalur

ವಿವಾಹಿತ ಹಿಂದೂ ಮಹಿಳೆಯ ಜೊತೆ : ಸಿಕ್ಕಿ ಬಿದ್ದ ಕಾಂಗ್ರೆಸ್‌ ಮುಖಂಡ

Published

on

ಚಿಕ್ಕಮಗಳೂರು : ವಿವಾಹಿತ ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್‌ ಮುಖಂಡ ಸಿಕ್ಕಿ ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ ವೇಳೆ ಮಹಿಳೆಯಲ್ಲಿ ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್ ಹಿಂದೂ ಮಹಿಳೆ ಇರುವುದನ್ನು ಕಂಡು ಯುವಕರು ಕೋಪಗೊಂಡಿದ್ದಾರೆ.

ಘಟನೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್‌ ಮುಖಂಡ ಮನೆಯಲ್ಲಿ ಇದ್ದ ವೇಳೆಯಲ್ಲಿ ಮನೆ ಮೇಲೆ ದಾಳಿ ನಡೆಸಿದ ಅಕ್ಕಪಕ್ಕದ ಹುಡುಗರು ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ ಅಂತ ಹೇಳಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯು ಚಿಕ್ಕಮಗಳೂರಿನ ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ನಡೆದಿದೆ.

ಇನ್ನೂ ಘಟನೆ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ನೊಂದ ಮಹಿಳೆ ರಾಹಿಲ್ ನನ್ನ ಸ್ನೇಹಿತ, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು. ಈ ವೇಳೆ ಅಕ್ಕ ಪಕ್ಕದ ಮನೆಯವರು ನನ್ನ ಮನೆಗೆ ಬಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಅಂತ ಆರೋಪಿಸಿದ್ದಾರೆ. ಸದ್ಯ ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಪೊಲೀಸ್‌ನವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Chikmagalur

ಯುವತಿ ಮೇಲೆ ದೇವಸ್ಥಾನದ ಅರ್ಚಕರಿಂದಲೇ ಅತ್ಯಾಚಾ*ರ

Published

on

ಚಿಕ್ಕಮಗಳೂರು: ಮದುವೆಗಾಗಿ ಯುವತಿಯೊಬ್ಬಳು ಜಾತಕ ತೋರಿಸಲು ಹೋಗಿದ್ದ ವೇಳೆ ದೇವಸ್ಥಾನದ ಅರ್ಚಕರೇ ಯುವತಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೊರಟ್ಟಿ ಗ್ರಾಮದ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ವಿರುದ್ಧ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಂತ್ರಸ್ತ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಕೃಷ್ಣರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ.

 

ಜಾತಕ ತೋರಿಸಲೆಂದು ಯುವತಿ ಅರ್ಚಕನನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕ ಕೃಷ್ಣರಾವ್‌ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಹಲವು ಬಾರಿ ಯುವತಿ ಮೇಲೆ ಆತ ದೌರ್ಜನ್ಯವೆಸಗಿದ್ದಾಗಿ ಯುವತ್ ಆರೋಪಿಸಿದ್ದಾರೆ.

ನಿನ್ನ ಜಾತಕದಲ್ಲಿ ದೋಷವಿದೆ. ಅದಕ್ಕೆ ತಡೆಯೊಡ್ಡಬೇಕು ಎಂದು ಯುವತಿಯನ್ನು ಅರ್ಚಕ ಹೆದರಿಸಿದ್ದನಂತೆ. ದೋಷ ಪರಿಹಾರ ಹೇಳುತ್ತೇನೆ ಎಂದು ಕರೆದು ಯುವತಿಯನ್ನು ಪದೇ ಪದೇ ಅತ್ಯಚಹಾರವೆಸಗಿದ್ದಾಗಿ ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಣಕಲ್ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Continue Reading

Trending

error: Content is protected !!