Hassan
ಈಗ ಸಾಹಿತ್ಯದ ದಿಕ್ಕುದೆಸೆಗಳು ಬದಲಾಗಿವೆ
ಹಾಸನ : ಸಾಹಿತಿ ಶಕ್ತಿ ಕೇಂದ್ರದಿಂದ ದೂರ ಇದ್ದು, ವ್ಯವಸ್ಥೆ ನಡುವೆ ನಡೆವ ಘಟನೆಗಳನ್ನ ದಾಖಲಿಸಬೇಕು, ಜನಪರ ಚಿಂತನೆಗಳಿಗೆ ವಾಲಿಸುವ ಬಂಡಾಯಗಾರನಾಗಬೇಕು. ಆದರೆ ಈಗ ಸಾಹಿತ್ಯದ ದಿಕ್ಕುದೆಸೆಗಳು ಬದಲಾಗಿವೆ. ಇವತ್ತು ಸಾಹಿತ್ಯ ಶಕ್ತಿ ಕೇಂದ್ರಗಳ ಸುತ್ತಾ ಸುತ್ತುತ್ತಿವೆ, ಸಾಹಿತ್ಯದ ಪಂಥ ಶುರುವಾಗಿದೆ, ಪಕ್ಷಗಳ ಪರ ಪಂಥಗಳು ಬೇರೆ ಬೇರೆ ಆಮೀಷಗಳಿಗಾಗಿ ಗಿರಕಿ ಹೊಡೆಯುತ್ತಿವೆ ಇದು ಸಾಹಿತ್ಯದ ಬೆಳವಣಿಗೆಗೆ ಮಾರಕ ಎಂದು ಖ್ಯಾತ ಕಥಾ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಹೇಳಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಸಿರುಭೂಮಿ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಹಿತಿ ಟಿ.ಎಚ್. ಅಪ್ಪಾಜಿಗೌಡ ಅವರೆರೆಡು ಸಾಹಿತ್ಯ ಕೃತಿಗಳಾದ ‘ಊರಮುಂದ್ಲಕೆರೆ’ ಕಥಾ ಸಂಕಲನ ಹಾಗೂ ‘ಸೌಪರ್ಣಿಕ’ ಲೇಖನಗಳ ಗುಚ್ಛ ಲೋಕಾರ್ಪಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾWI, ಹಾಸನದ ಜನಪರ ಚಳವಳಿಗಳ ಜೊತೆ ಗುರುತಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಕಥೆಗಾರನಾಗಿ ಬೆಳೆದ ನನಗೆ ಜನರ ಸಾಮಾಜಿಕ ಚಿಂತನೆಗಳ ನೆಲೆಯಲ್ಲಿ ಕಥನವನ್ನು ಕಟ್ಟಿದ ಗದ್ದರ್ ಮತ್ತು ನಕ್ಸಲಿಸಂ ನನ್ನ ಉತ್ತಮ ಸ್ನೇಹಿತರು, ಗದ್ದರನ ಜನನಾಟ್ಯ ಮಂಚ್‌ನಿಂದ ಕವಿಗಳು
ಜನರಿಗೆ ತಲುಪುವಂತಾದರು ಜನರನ್ನು ಹುರಿದಂಬಿಸಿ ಬಂಡಾಯಕ್ಕೆ ನಾಂದಿ ಹಾಡಿದ ಗದ್ದರ್ ಕಡೆಕಡೆಗೆ ಆಧ್ಯಾತ?ಮದ ದಾರಿ ತುಳಿದುಬಿಟ್ಟರು ಕಮ್ಯುನಿಸಂ ವಿತ್ ಸ್ಪಿರುಚುಯಲ್ ಚಿಂತನೆ ಶುರುಮಾಡಿಕೊಂಡುಬಿಟ್ಟರು ಆದರೆ ವರವರರಾವ್ ಮತ್ತಿತರ ನಕ್ಸಲ್ ಚಿಂತಕರು ಶಕ್ತಿಕೇಂದ್ರದ ಬಳಿಗೆ ಸುಳಿಯಲಿಲ್ಲ, ಅಧಿಕಾರ ಬಯಸಲಿಲ್ಲ ಎಂದು ವಿವರಿಸಿದ ಅವರು, ಕೆರೆ ಮತ್ತು ನದಿ ಜೀವ ಚೈತನ್ಯದ ಚಿಲುಮೆಗಳು, ಇಡೀ ಜೀವನದ ವಿಕಾಸವೆಲ್ಲಾ ಈ ಜೀವಚೈತನ್ಯದ ನಡುವೆ ಬೆಳೆದಿರುತ್ತವೆ ಹಾಗಾಗಿ ಯಾವುದೇ ಕಲಾವಿದನ ಕಲಾಕೃತಿಗೆ ಈ ಬೇರುಗಳು ಜೀವತುಂಬಬಲ್ಲವು, ಅಪ್ಪಾಜಿಗೌಡರ ಊರಮುಂದ್ಲ ಕೆರೆ ಭಾರತದ ನೆಲಮೂಲ ಸಾಂಸ್ಕೃತಿಕ ಬದುಕಿನ ಅನುಭವವನ್ನು ಲೋಕದ ಮುಂದೆ ಬಿಚ್ಚಿಡುತ್ತದೆ. ಇದು ನನ್ನ ಕಥನ ಶೈಲಿಗೆ ಪೂರಕವಾಗಿ ಹೊಂದಿಕೊಳ್ಳುತ್ತವೆ ಎಂದರು. ಸಾಹಿತಿಯ ಗುರಿ ಏನು ಎಂದು ಪ್ರಶ್ನಿಸಿದ ಅವರು ಬರಹಗಾರ ಬದುಕಿದ ಕಾಲಘಟ್ಟದದಲ್ಲಿ ಅಥವ ಬರೆಯುವ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಂಗತಿಗಳನ್ನ ಬಿಂಬಿಸಬೇಕು ಕಲೆಗಾರ ಅಥವ ಸಾಹಿತಿಗೆ ಚೌಕಟ್ಟಿನ ಅಗತ್ಯ ಇಲ್ಲ, ಆದರೆ ಅವನು ತನ್ನ ಕಾಲದ ಸಾಮಾಜಿಕ ಸಮಸೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಊರಮುಂದ್ಲ ಕೆರೆ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ, ಕೆರೆಗಳು ಭೂಗಳ್ಳರ ದಾಹಕ್ಕೆ ಬಲಿಯಾಗಿರುವುದನ್ನ ಹಾಸನ ನಗರದ ಸತ್ತೆಕಟ್ಟೆ, ಜವೇನಹಳ್ಳಿ, ಕಾಟಿಹಳ್ಳಿ ಕೆರೆಗಳು ತಮ್ಮನ್ನು ತಾವು ನಿವೇದಿಸಿಕೊಳ್ಳುವ ಮೂಲಕ ಓದುಗನ ಮನಸ್ಸಿನಲ್ಲಿ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುವ ಕೆಲಸವನ್ನು ಈ ಪುಸ್ತಕ ಮೂಲಕ ಮಾಡುತ್ತದೆ ಎಂದ ಅವರು ಸಾಹಿತಿ ಪುಸ್ತಕದಲ್ಲಿ ಕೇವಲ ಕೆರೆ ವಿವರ ನೀಡಿಲ್ಲ ಅದು ಅದರಕ್ಕರೆಯ ಬದುಕಿನ ಪರಿಸ್ಥಿತಿ ಕೇಂದ್ರೀಕರಿಸಿ ಕೆರೆಯಿಂದ ಮಾತನಾಡಿಸುತ್ತಾರೆ. ಪುಸ್ತಕದ ೧೭ಕಥೆಗಳಲ್ಲಿ ೫ಕಥೆ ನಗರದ ಅಭಿವೃದ್ಧಿಯಿಂದ ಕೆರೆಕಟ್ಟೆ ಹಾಗೂ ಗ್ರಾಮೀಣ ಬದುಕಿಗೆ ಆಗುವ ಪ್ರತಿಕೂಲ ಚಿತ್ರಣವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದ ಅವರು, ಇವರ ಎಲ್ಲ ಕಥೆಗಳು ನೆಲಮೂಲ ಸಂಸ್ಕೃತಿಯ ಜಾಡಿನಲ್ಲೇ ಗರಣೆಗಟ್ಟಿವೆ ಎಂದು ಒಂದೊಂದನ್ನೇ ವಿವರಿಸಿದರು.
ಎರಡನೇ ಪುಸ್ತಕ ಸೌಪರ್ಣಿಕಾ ಲೇಖನಗಳ ಗುಚ್ಛ ಬಿಡುಗಡೆ ಮಾಡಿ ಮಾತನಾಡಿದ ಯುವ ಸಾಹಿತಿ ಪರಮೇಶ್ ಮಡಬಲು ಮಾತನಾಡಿ, ಸೌಪರ್ಣಿಕಾ ೨೨ಲೇಖನಗಳ ಗುಚ್ಛ ಬಹುತೇಕ ಲೇಖನಗಳು ಸಾಧಕರ ಕುರಿತು ದಾಖಲೆ ಮಾಡುತ್ತದೆ ಇಬ್ರಾಹಿಂ ಸುತಾರ, ಜಹೊನಾ, ಸಿದ್ದೇಶ್ವರ ಸ್ವಾಮಿಜಿ ಹಾಗೂ ಇತರ ಸಾಧಕರ ಬದುಕಿನ ಎಳೆಗಳನ್ನು ಬಿಡಿಸುತ್ತಾ ಹೋಗುತ್ತದೆ ಹಾಗೆಯೇ ಕರೋನಾ ಕಾಲದಲ್ಲಿ ಲೇಖಕ ದಂಪತಿಗಳು ಇಂಗ್ಲೇಂಡ್ ಯಾತ್ರೆ ಮಾಡುವಾಗ ಅವರ ಮಡದಿಯ ಬ್ಯಾಗಿನೊಳಗಿನ ಕೊಬ್ಬರಿ ತಂದೊಡ್ಡಿದ ಯಡವಟ್ಟುಗಳನ್ನು ವಿಡಂಬನಾತ್ಮಕವಾಗಿ ದಾಖಲಿಸಿರುವುದು ರಸಸ್ವಾದ ನೀಡುತ್ತಾ ಸಾಗುತ್ತದೆ ಅದನ್ನು ಓದುಗರು ಓದಿಯೇ ಅನುಭವಿಸಬೇಕು ಎಂದು ತಿಳಿಸಿ ಮಾತೃ ಭಾಷೆ ಎನ್ನುವುದು ಪ್ರಿತಿಯಭಾಷೆ, ಅಮೃತ ತೂಗುವ ಭಾಷೆ ಕನ್ನಡಿಗರ ಮನೆ-ಮನಗಳಲ್ಲಿ ಹೇಗೆ ಬೆಳಗಬೇಕು ಎನ್ನುವುದನ್ನು ಸನ್ನಿವೇಶ ಅನುಭವಿಸಿ ಬರೆದ ಬರಹಗಳು ಮನಮುಟ್ಟುವಂತಿವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ಊರಮುಂದ್ಲ ಕೆರೆಯ ಮುನ್ನುಡಿ ಲೇಖಕನ ಇಂದ್ರಿಯ ಚುರುಕಾಗಿರಬೇಕು ಅದಕ್ಕೆ ಮಾನವತ್ವದ ಗಾಳಿ ಬೀಸಬೇಕು ಎನ್ನುವ ಸಾಲನ್ನು ವಿಶ್ಲೇಷಿಸಿ ಮಾ.ಹನುಮಂತೆಗೌಡ ಎನ್ನುವವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಚಟುವಟಿಕೆ ನಡೆಸಲು ಕೋರಿಕೊಂಡಾಗ ಜಿಲ್ಲಾಧಿಕಾರಿಗಳನ್ನು ಕೇಳಬೇಕು ಎಂದು ಉದಾಸೀನ ಮಾಡಿ ನಮ್ಮನ್ನು ನಿರಂತರ ನಿರಾಸಗೊಳಪಡಿಸುತ್ತಿದ್ದರು. ಈ ಮನುಷ್ಯ ಮತ್ತು ಈ ಭವನ ಸಾಹಿತ್ಯಕ್ಕಲ್ಲ ಎಂದು ತೀರ್ಮಾನಿಸಿ ಹಾಸನ ನಗರದ ಶಾಲಾ ಕಾಲೇಜುಗಳಿಗೆ ತಿರುತಿರಿಗಿ ಸಾಹಿತಿಗಳನ್ನು ಹುಡುಕಿ ಸಂಘಟನೆ ಮಾಡಿ ಸುಧಾ ಹೋಟೆಲ್ ಪಕ್ಕ ಇರುವ ಶ್ರೀರಾಮ ದೇವಸ್ಥಾನದ ಜಗುಲಿಯಲ್ಲಿ ಜಿಲ್ಲೆಯ ಸಾಹಿತ್ಯದ ಅಂಗಳ ಮಾಡಿ ಸಾಹಿತ್ಯದ ಬೆಳವಣಿಗೆ ಮಾಡಿದ ಇತಿಹಾಸ ನೆನಪಿಸಿಕೊಂಡು ಇದರ ಭಾಗವಾಗಿ ಬೆಳೆದುಬಂದ ಅಪ್ಪಾಜಿಗೌಡರು ೮ಕೃತಿಗಳನ್ನು ಹೊರತಂದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ಚಳವಳಿಗಳು ಸ್ಥಗಿತಗೊಂಡಿವೆ ರಾಜಕೀಯ ಪರಿಸ್ಥಿತಿಯ ಅಭಿವೃದ್ಧಿಯ ಮಂತ್ರಕ್ಕೆ ಒಂದು ಭೂಮಿ ಸಾಲಲ್ಲ, ಈ ಟ್ರಿಲಿಯನ್ ಟ್ರಿಲಿಯನ್ ಆರ್ಥಿಕತೆಗೆ ಆದರ್ಶ ವಿಶ್ವಗುರು ಆಗುವುದು ಇದು ಮಾನವ ಕುಲವನ್ನು ಎಲ್ಲಿಗೆ ತೆಗೆದುಕೊಂಡು ಹೋಗಿನಿಲ್ಲಿಸುತ್ತದೆ ಎನ್ನುವುದನ್ನು ಸಾಹಿತಿಗಳು ಕಾಣಬೇಕು ಹಾಗೇ ವರ್ತಮಾನದ ಸಂದರ್ಬದಲ್ಲಿ ಜನತೆಯ ಹಣವನ್ನು ಲೂಟಿ ಮಾಡುತ್ತಿರುವ ನಗ್ನ ಸತ್ಯ ಕಣ್ಣಮುಂದೆ ಬಂದರೂ, ಭೂಗ್ರವನ್ನು ತಾಪಮಾನ ಏರಿಕೆಯ ದಳ್ಳುರಿಗೆ ಸಿಲುಕಿಸಿ ಜೀವಸಂಕುಲಗಳ ವಿನಾಶಕ್ಕೆ ಕಾರಣವಾದ ಈ ಸವಾಲುಗಳ ಕುರಿತು ಇಂದಿನ ಸಾಹಿತಿಗಳು ಏಕೆ ಬರೆಯುತ್ತಿಲ್ಲ? ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿ ಈ ಸಂದರ್ಭದಲ್ಲಿ ಸಾಹಿತಿ ಒಬ್ಬ ದೊಡ್ಡ ಬಂಡಾಯಗಾರನಾಗಬೇಕು, ಸಾಹಿತಿಗಳ ನಡುವೆ ಮರುಶೋಧ ಆಗಬೇಕು, ಸ್ಪರ್ಧೆ ಕೊನೆಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಪುಸ್ತಕ ಪರಿಚಯಿಸಿದ ಇಬ್ಬರು ವಿಮರ್ಷಕರು ಪುಸ್ತಕದೊಳಗಿನ ತಿರುಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿ ಪುಸ್ತಕ ಬರೆಯುವುದು ಎಷ್ಟು ಕಷ್ಟವೋ ಅದನ್ನು ಪಬ್ಲಿಕೇಶನ್ ಮಾಡಿ ಮಾರಾಟಮಾಡಿವುದು ದುಪ್ಪಟ್ಟು ಕಷ್ಟ ಹಾಗಾಗಿ ಜಿನರನ್ನು ಸಾಹಿತ್ಯದತ್ತ ಒಲವು ಹೆಚ್ಚಿಸುವುದು ಸವಾಲು ಎಂದರು.
ಕೃತಿಕರ್ತ ಟಿ.ಎಚ್.ಅಪ್ಪಾಜಿಗೌಡ ತಮ್ಮ ಸಾಹಿತ್ಯ ಹುಟ್ಟಿದ ಅನುಭವ ಹಂಚಿಕೊಳ್ಳುತ್ತಾ ಸಾಹಿತ್ಯ ಹುಟ್ಟಿಕೊಳ್ಳುವುದು ಅನುಭವಗಳ ಮೊತ್ತದ ಮೂಲಕ, ನಾನು ನೋಡಿದ, ಅನುಭವಿಸಿದ ಸಂಗತಿಗಳನ್ನು ಕಲಾತ್ಮಕವಾಗಿ ದಾಖಲಿಸಿದ್ದೇನೆ ಅಷ್ಟೆ ಎಂದರು.
ಹಸಿರುಭೂಮಿ ಪ್ರತಿಷ್ಠಾನದ ಖಜಾಂಚಿ ಗಿರಿಜಾಂಬಿಕ ಕಾರ್ಯಕ್ರಮ ನಿರೂಪಿಸಿದರು, ಪ್ರತಿಷ್ಠಾನದ ಸದಸ್ಯೆ ಭವಾನಿ ಮೊದಲಿಗೆ ಪ್ರಾರ್ಥಿಸಿದರು, ಟ್ರಸ್ಟಿ ಶಿವಶಂಕರಪ್ಪ ಸ್ವಾಗತಿಸಿದರು, ಕಡೆಯಲ್ಲಿ ಹಸಿರುಸಿರಿ ಸಂಚಾಲಕ ಪುರುಶೋತ್ತಮ ವಂದಿಸಿದರು.
Hassan
ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ
ಹಾಸನ: ನಗರದ ಪ್ರತಿಷ್ಠಿತ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿರುವ ಡಾ.ಎಸ್.ಎ.ನಿತಿನ್ ಅವರು ಈ ಬಾರಿಯ ಜಿಲ್ಲಾಡಳಿತದ ಗಣರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾಡಳಿತ ಅಭಿನಂದಿಸುತ್ತಿದ್ದು, ಈ ಸಲ ವೈದ್ಯಕೀಯ ಕ್ಷೇತ್ರದಿಂದ ಡಾ.ನಿತಿನ್ ಅವರನ್ನು ಆಯ್ಮೆ ಮಾಡಲಾಗಿದೆ. 2001 ರಿಂದ ಆಯುರ್ವೇದ ವೈದ್ಯರಾಗಿ ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದ ಇವರು, 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹಾಸನದ ಪ್ರತಿಷ್ಠಿತ ರಾಜೀವ್ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ವೈದ್ಯರಾಗಿ, ಶೈಕ್ಷಣಿಕ ಸಲಹೆಗಾರರಾಗಿ, ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರಿಂದ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಸದಸ್ಯರಾಗಿದ್ದಾರೆ.
2017 ರಲ್ಲಿ ರಾಷ್ಟ್ರೀಯ ಜೈನ್ ಯುವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜರಾಗಿದ್ದಾರೆ,
ವೈದ್ಯ ಸೇವೆ ಜೊತೆಗೆ ಜನಪರ ಕೆಲಸ ಕಾರ್ಯವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ರೋಗಿಗಳ ಔಷಧ ಚೀಟಿಯನ್ನೂ ಕನ್ನಡದಲ್ಲೇ ಬರೆಯುತ್ತಿರುವುದು ಇವರ ಕನ್ನಡ ಪ್ರೀತಿಗೆ ಹಿಡಿದ ಕನ್ನಡಿ.
ಜಿಲ್ಲೆ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ, ವಿವಿಧ ರೋಗ-ರುಜಿನಗಳ ಬಗ್ಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಲೇಖನ ಬರೆದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ರೀತಿಯ 250ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ. ಅಲ್ಲದೆ ಈಗಿನ ಸಂದರ್ಭಕ್ಕೆ ಆಯುರ್ವೇದ ಮಹತ್ವದ ಬಗ್ಗೆಯೂ ಹತ್ತಾರು ಲೇಖನ ಬರೆದು ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಅರಿವು, ಜಾಗೃತಿ ಕೆಲಸವನ್ನೂ ಮಾಡುತ್ತಿರುವ ಅಪರೂಪದ ವೈದ್ಯರು. ಜೊತೆಗೆ 200ಕ್ಕೂ ಹೆಚ್ಚು ಹನಿಗವನ, 100ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, 100ಕ್ಕೂ ಹೆಚ್ಚು ಆರೋಗ್ಯ ಮಾಹಿತಿ ಕುರಿತು ಉಪನ್ಯಾಸ, 70ಕ್ಕೂ ಹೆಚ್ಚು ಆರೋಗ್ಯ ಶಿಬಿರ ಮಾಡಿದ್ದಾರೆ. ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರವಣಬೆಳಗೊಳದ ಎಸ್.ಎನ್.ಅಶೋಕ್ ಕುಮಾರ್-ಜಿ.ಪಿ.ಶ್ಯಾಮಲಾದೇವಿ ಅವರ ಸುಪುತ್ರರಾದ ನಿತಿನ್ ಅವರು, ಪ್ರಾಥಮಿಕ ಶಿಕ್ಷಣವನ್ನೇ ಶ್ರವಣಬೆಳಗೊಳದಲ್ಲೇ ಮುಗಿಸಿ ಪ್ರೌಢಶಿಕ್ಷಣವನ್ನು ಮಾವಿನಕೆರೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದರು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್, ಎಂಡಿ ಪಡೆದರು. ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಪಿಹೆಚ್ಡಿ ಪಡೆದರು.
Hassan
ಅರೇಳ್ಳಿ: ಜ.26 ರಂದು 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ
ಹಾಸನ: ಸಂವಿಧಾನ ದಿನಾಚರಣೆ ಅಂಗವಾಗಿ ಜನವರಿ 26ರ ರಂದು ಬೇಲೂರು ತಾಲೂಕಿನ ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುವುದು ಎಂದು ದಲಿತ ಮುಖಂಡರಾದ ಅರೆಹಳ್ಳಿ ನಿಂಗರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಭೀಮ ಕೋರೆಂಗಾವ್ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ ಕೇವಲ ೫೦೦ ಜನ ಮಹರ್ ಸೈನಿಕರು ೨೮,೦೦೦ ಪೇಶ್ವೆ ಸೈನಿಕರನ್ನು ಬಗ್ಗುಬಡಿದ ವಿಜಯದ ದಿನವೇ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷವೂ ಹರೇಹಳ್ಳಿಯಲ್ಲಿ ಆಚರಿಸಲಾಗುತ್ತಿದ್ದು ಅದೇ ರೀತಿ ಈ ವರ್ಷವೂ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು. ಜನವರಿ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಂಬೇಡ್ಕರ್ ಭಾವಚಿತ್ರ ಹಾಗೂ ವಿಜಯ ಸ್ತಂಭದ ಮೆರವಣಿಗೆ ನಡೆಯಲಿದೆ ಎಂದರು.
ಅದೇ ದಿನ ಸಂಜೆ ೬ ಸುಮಾರಿಗೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್, ಅಂಬೇಡ್ಕರ್ ಅನುಯಾಯಿ ಹಾಗೂ ನಟ ಚೇತನ್ ಅಹಿಂಸಾ, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಕಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು, ಅರೆಹಳ್ಳಿ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿರೂಪಾಕ್ಷ, ಲಿಂಗರಾಜು, ವಿಜಯೋತ್ಸವ ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಮೇಶ್, ಸಿದರಾಜು, ದಿನೇಶ್, ಸೋಮಶೇಖರ್ ಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ
ಹಾಸನ: ನಗರದ ಡೈರಿ ವೃತ್ತ, ಅರಸೀಕೆರೆ ರಸ್ತೆ ಬಳಿ ಕೈಗಾರಿಕ ಪ್ರದೇಶದಲ್ಲಿ ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ ಸಮಾರಂಭಕ್ಕೆ ಶುಕ್ರವಾರದಂದು ಗುದ್ದಲಿ ಪೂಜೆ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಚಾಲನೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಮಾತನಾಡಿ, ಎರಡನೇ ಅಂತಸ್ಥಿತನ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿದೆ. ಈ ಕಟ್ಟಡ ಸಂಘಕ್ಕೆ ಉಪಯೋಗವಾಗಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.
ಎಫ್.ಕೆ.ಸಿ.ಸಿ.ಐ. ಐಟಿ-ಬಿಟಿ ಸಮಿತಿ ಅಧ್ಯಕ್ಷ ಹೆಚ್.ಎ. ಕಿರಣ್ ಮಾತನಾಡಿ, ಸಂಘದ ಎರಡನೇ ಹಂತದ ಶಿಲನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಕಳೆದ ಎರಡು ದಶಕಗಳಿಂದ ನಮ್ಮ ಸಂಘದ ಕಾರ್ಯಕ್ರಮಗಳು ಹಾಗೂ ಕಾರ್ಯವ್ಯಾಪ್ತಿ ಜಿಲ್ಲಾಧ್ಯಂತ ಹರಡಿದೆ. ಎರಡು ಸಾವಿರ ಜನ ಇದ್ದಂತಹ ಉದ್ಯಮಿಗಳು ಜಿಲ್ಲಾಧ್ಯಂತ ಈಗ ೨೦ ಸಾವಿರಕ್ಕೂ ಹೆಚ್ಚುಜನ ಉದ್ಯಮಿಗಳು ಇದ್ದಾರೆ. ಈ ಭಾಗವು ಕೂಡ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಇ-ಖಾತೆ ವಿಚಾರವಾಗಿಯೂ ಕೂಡ ನಗರಸಭೆ ಅಧ್ಯಕ್ಷರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.
ನಿರ್ಮಾಣವಾಗುತ್ತಿರುವ ಎರಡನೇ ಅಂತಸ್ಥಿನ ಕಟ್ಟಡವು ಕೈಗಾರಿಕ ಉದ್ಯಮಿಗಳ ಕಾರ್ಯಕ್ರಮಕ್ಕೆ ಮತ್ತು ಇಂಡಸ್ಟ್ರಿಯಲ್ ಕಾರ್ಯಕ್ರಮ ನಡೆಸುವುದಕ್ಕೆ ಒಂದು ಹಾಲ್ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಅಂತಸ್ಥನ್ನು ಸ್ಕಿಲ್ ಡೆವಲಪ್ ಮೆಂಟ್ ಗೆ ಈಗಾಗಲೇ ಉದ್ಘಾಟನೆಗೊಂಡಿದೆ. ಉದ್ಯಮಿಗಳ ಹಲವಾರು ಜನರಿಗೆ ಕಾರ್ಯಕ್ರಮವನ್ನು ಸದ್ಯದಲ್ಲೆ ಮಾಡಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಹೆಚ್.ಎ.ಡಿ.ಎಸ್.ಎಸ್.ಐ.ಎ. ಅಧ್ಯಕ್ಷ ಆರ್. ಶಿವರಾಮ್, ಉಪಾಧ್ಯಕ್ಷ ಪ್ರಕಾಶ್ ಎಸ್. ಯಾಜಿ, ಪ್ರಧಾನ ಕಾರ್ಯದರ್ಶಿ ಎನ್. ಸುದರ್ಶನ್, ಲಘು ಒದ್ಯೋಗ ಭಾರತೀ ಪ್ರಸನ್ನ ಕುಮಾರ್ ಮತ್ತು ಶಿವಾನಂದ್ ಇತರರು ಉಪಸ್ಥಿತರಿದ್ದರು.
-
Mysore23 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Education24 hours ago
Free Coaching : ಮಾಸಿಕ 5,000ರೂ. ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರದಿಂದ ಉಚಿತ ತರಬೇತಿ
-
Cinema24 hours ago
ಬಿಗ್ಬಾಸ್ ಸೀಸನ್ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್ ತಲುಪಿದ್ದಾರೆ ಎಂದ ನಟಿ ಹಂಸ
-
Mysore8 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu9 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu9 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Mysore6 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu7 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ