Mysore
ಪಿರಿಯಾಪಟ್ಟಣದ ಕೆ.ಆರ್ ಫಂಕ್ಷನ್ ಹಾಲ್ ನಲ್ಲಿ ರೋಟರಿ ಐಕಾನ್ಸ್ ಸಂಸ್ಥೆ ಮತ್ತು ಕಂಪಾನಿಯೋ ಸಹಯೋಗದಲ್ಲಿ 15 ದಿನಗಳ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರ ಕಾರ್ಯಕ್ರಮ

ಬುಧವಾರ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಐಕಾನ್ಸ್ ನಿಯೋಜಿತ ಅಧ್ಯಕ್ಷ ಜೆ.ಎಸ್ ನಾಗರಾಜ್ ಅವರು ಮಾತನಾಡಿದ ಪ್ರತಿನಿತ್ಯ ನಾವು ಉಪಯೋಗಿಸುವ ಆಹಾರ ಪದ್ಧತಿ ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಆರೋಗ್ಯ ಸರಿಯಿಲ್ಲದಿದ್ದರೆ ಯಾವುದೇ ಕೆಲಸ ಕಾರ್ಯ ಮಾಡಲು ಉತ್ಸಾಹವಿರುವುದಿಲ್ಲ, ಸಕ್ಕರೆ ಕಾಯಿಲೆ ಅಧಿಕ ರಕ್ತದೊತ್ತಡ ನಿಯಂತ್ರಣದಿಂದ ದೀರ್ಘಕಾಲ ಆರೋಗ್ಯವಂತರಾಗಿ ಬದುಕಬಹುದು ಎಂದರು.

ರೋಟರಿ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಕೆ.ರಮೇಶ್ ಮಾತನಾಡಿ ಹಲವು ಕಾಯಿಲೆಗಳಿಗೆ ಒಂದೇ ಸೂರಿನಡಿ ಉಚಿತ ಚಿಕಿತ್ಸೆ ದೊರೆತರೆ ಆರೋಗ್ಯದ ಸುಧಾರಣೆಯಾಗಲಿದೆ ಎಂಬ ಭರವಸೆಯೊಂದಿಗೆ ಸಂಸ್ಥೆ ವತಿಯಿಂದ ಉಚಿತ ಫೂಟ್ ತೆರಪಿ ಆಯೋಜಿಸಿದ್ದು ಎಲ್ಲರಿಗೂ ಉತ್ತಮ ಚಿಕಿತ್ಸೆ ಸಿಗುವಂತಾಗಲಿ ಎಂದರು.

ಕಂಪಾನಿಯೋ ಸಂಸ್ಥೆಯ ಶಿವರಾಜ್ ಮಾತನಾಡಿ ಅವಶ್ಯಕತೆಗಿಂತ ಹೆಚ್ಚಿನ ಔಷಧ ಮತ್ತು ಚಿಕಿತ್ಸೆಯನ್ನು ಇಂಗ್ಲಿಷ್ ಮೆಡಿಸನ್ ಹೆಸರಿನಲ್ಲಿ ನಾವು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಣಗುತ್ತಿದ್ದೇವೆ ಇದರಿಂದ ದೀರ್ಘಕಾಲದ ಅಡ್ಡಪರಿಣಾಮಗಳು ಸಹ ನಮ್ಮ ದೇಹದ ಮೇಲಾಗುತ್ತಿದೆ ಈ ರೀತಿಯ ಶಿಬಿರಗಳಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಚಿಕಿತ್ಸೆ ಪಡೆಯಬಹುದು ಎಂದು ಭರವಸೆ ನೀಡಿದರು.

ಈ ಸಂದರ್ಭ ರೋಟರಿ ಐಕಾನ್ಸ್ ಕ್ಲಬ್ ನ ಉಪಾಧ್ಯಕ್ಷ ಸಂಪತ್, ಖಜಾಂಚಿ ಬಿ.ಆರ್ ಗಣೇಶ್, ಪದಾಧಿಕಾರಿಗಳಾದ ರಮೇಶ್, ಸಿ.ಎನ್ ವಿಜಯ್, ಸತೀಶ್ ಆರಾಧ್ಯ ಇದ್ದರು.
ವರದಿ: ಸತೀಶ್ ಆರಾಧ್ಯ ಪಿರಿಯಾಪಟ್ಟಣ
Mysore
ಮಠ ಕಾಪಾಡುವುದು ಭಕ್ತರ ಕರ್ತವ್ಯ : ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಯಾವುದೇ ಮಠ ಇರಲಿ ಅದನ್ನು ಉಳಿಸಿ ಬೆಳೆಸುವ ಕೆಲಸ ಭಕ್ತರದಾಗಿದೆ. ಭಕ್ತರ ಸಹಕಾರ ಇದ್ದರೆ ಮಾತ್ರ ಮಠ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಸುಕ್ಷೇತ್ರ ಮಲ್ಲನ ಮೂಲೆ ಮಠ ಯಶಸ್ವಿಯಾಗಿದ್ದು ಇದರ ಜವಾಬ್ದಾರಿ ಹೊತ್ತ ಚನ್ನಬಸವೇಶ್ವರ ಸ್ವಾಮೀಜಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಇಂದು ನಂಜನಗೂಡು ಸುಕ್ಷೇತ್ರ ಮಲ್ಲನ ಮೂಲೆ ಶ್ರೀ ಗುರು ಕಂಬಳೀಶ್ವರ ಮಠದಲ್ಲಿ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳವರ ಸಂಸ್ಮರಣೆ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಶ್ರೀ ಚನ್ನಬಸವ ಸ್ವಾಮೀಜಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಮಲ್ಲನ ಮೂಲೆ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳವರ ಇತ್ತೀಚಿಗೆ ಲಿಂಗೈಕರಾಗಿದ್ದಾರೆ. ಆದರೆ ಅವರು ಮಠಕ್ಕೆ ಕೊಟ್ಟ ಕೊಡುಗೆಗಳು, ಅವಿಸ್ಮರಣೆಯ ಅವರ ಉತ್ತರ ಅಧಿಕಾರಿಯಾಗಿ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿಗಳು ಆಯ್ಕೆಯಾಗಿದ್ದರು. ಈ ಸ್ಥಾನಕ್ಕೆ ಬರಬೇಕು ಅಂತ ಅವರು ಯಾವತ್ತೂ ನಿರೀಕ್ಷಿಸುತ್ತಿರಲಿಲ್ಲ. ಆದರೆ ಚನ್ನಬಸವ ಸ್ವಾಮಿಗಳು ನೆಚ್ಚಿನ ಶಿಷ್ಯರಾಗಿ ಅವರ ಮನೆಗೆದ್ದು ಮಲ್ಲನ ಮೂಲ ಮಠದ ಪೀಠದ ಪತಿಯಾಗಿದ್ದರೆ. ಮುಂದಿನ ದಿನಗಳಲ್ಲಿ ಮಠವನ್ನು ಇವರಿಗೆ ಭಕ್ತರು ಸಂಪೂರ್ಣ ಸಹಕಾರ ಕೊಟ್ಟು ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮಲ್ಲನ ಮೂಲೆ ಮಠದ 5ನೇ ಪೀಠ ಅಧ್ಯಕ್ಷರಾಗಿ ಚನ್ನಬಸವ ಸ್ವಾಮಿಗಳು ತಮ್ಮ ಕರ್ತವ್ಯಗಳನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕಪಿಲಾ ನದಿಯಲ್ಲಿ ಕಾವೇರಿ ಅರಿಯುದಿದಂತೆ ಮಠಕ್ಕೆ ಭಕ್ತರ ಪ್ರೀತಿ, ಶ್ರದ್ಧೆ, ಭಕ್ತಿ ಹರಿದಿದೆ. ಭಕ್ತರ ಸಹಕಾರದಿಂದ ಮಠ ತನ್ನ ಪ್ರಾವೀಕ್ಯತೆಯನ್ನು ಉಳಿಸಿಕೊಂಡಿದೆ. ಚನ್ನಬಸವೇಶ್ವರ ಸ್ವಾಮೀಜಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಉತ್ತರಧಿಕಾರಿಯಾಗಿ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು ನಮಗೆ ನೀಡಿದ್ದಾರೆ. ಅವರಿಗೆ ಯಾವ ರೀತಿ ಸಹಕರ ಕೊಡುತ್ತಿದ್ದರು, ಅದೇ ರೀತಿ ಸಿದ್ಧಲಿಂಗ ಶ್ರೀಗಳಿಗೆ ಭಕ್ತರು ಬೆಂಬಲ ಮತ್ತು ಸಹಕಾರ ಕೊಡುವಂತೆ ಮನವಿ ಮಾಡಿದರು.

ಸುಕ್ಷೇತ್ರ ಮಲ್ಲನ ಮೂಲೆ ಮಠದ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿಗಳು ಮಾತನಾಡಿ ಶ್ರೀ ಚನ್ನಬಸವ ಸ್ವಾಮೀಜಿಗಳವರ ವ್ಯಕ್ತಿತ್ವವನ್ನು ಬೇರೆಯವರಿಂದ ಕೇಳಲು ಬಯಸುತ್ತೇನೆ. ನಾನು ಬಾಲದಿಂದಲೂ ಬಹಳ ಹತ್ತಿರದಿಂದ ಅವರ ವ್ಯಕ್ತಿತ್ವವನ್ನ ಕಂಡಿದ್ದೇನೆ. ಹೀಗಾಗಿ ನಾನು ಮಾತನಾಡುವುದಕ್ಕಿಂತ ಹೆಚ್ಚಾಗಿ ಬೇರೆಯವರು ಮಾತನಾಡುವ ಮಾತುಗಳನ್ನು ಕೇಳಲು ಇಚ್ಚಿಸುತ್ತೇನೆ. ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನಲ್ಲೇ ಮಠವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಸುಕ್ಷೇತ್ರ ಮಲ್ಲನ ಮೂಲೆ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳವರ ಸ್ಥಾನ ತುಂಬಲು ಶ್ರೀ ಇಮ್ಮಡಿ ಸಿದ್ದಲಿಂಗ ಮಹಾಸ್ವಾಮಿಗಳು ಸ್ಥಾನ ತುಂಬಾಬೇಕು.
ಚನ್ನಬಸವ ಸ್ವಾಮೀಜಿಗಳು ಸ್ಥಾನ ತುಂಬಲು ಸವಾಲುಗಳನ್ನು ಎದುರಿಸಲು ಸ್ವೀಕರಿಸಬೇಕು. ಅವರ ಆದಿ ನಡೆದುಕೊಂಡು ಹೋಗಲು ಕಷ್ಟ ಇದೆ. ಚನ್ನಬಸವ ಮಹಾಸ್ವಾಮಿಗಳು ಸ್ವಾಭಿಮಾನಿಯಾಗಿ ಇದ್ದರು. ಅವರಿಗೆ ನಾನು ಸಣ್ಣಪುಟ್ಟ ಸಹಕಾರ ಬಿಟ್ಟರೆ, ಬೇರೆ ಏನಾದರೂ ಸಹಾಯ ಮಾಡಬೇಕು ಅಂತ ಕೇಳಿದರೆ, ಏನು ಬೇಡ ಅಂತ ಕೇಳುತ್ತಿದ್ದರು. ಪೂಜ್ಯರ ಸ್ಮರಣೆ ಮಾಡಿಕೊಂಡು ಅವರ ಕೆಲಸಗಳನ್ನು ನಿರ್ವಹಿಸಲು ಮುಂದಾಗಬೇಕು ಎಂದು ತಿಳಿಸಿದರು.
ಮುಖ್ಯ ಭಾಷಣಕಾರರು ದೇವನೂರು ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಮಾತನಾಡಿ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳವರ ನುಡಿ ನಮನ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಡಾ. ಶಾಂತಿ ಮಲ್ಲಿಕಾರ್ಜುನ ಸ್ವಾಮಿಗಳು, ಬೆಟ್ಟದಪುರದ ಚೆನ್ನಬಸವ ದೇಶಿ ಕೇಂದ್ರ ಸ್ವಾಮಿಗಳು, ದೇವನೂರು ಮಠದ ಶ್ರೀ ಮಹಾಂತ ಸ್ವಾಮಿಗಳು, ಮಾಜಿ ಶಾಸಕರಗಳಾದ ಎನ್. ಕೇಶವಮೂರ್ತಿ, ಬಿ. ಹರ್ಷವರ್ಧನ್, ನಿರಂಜನ್ ಕುಮಾರ್, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಪ್ರಥಮ ಗುತ್ತಿಗೆದಾರರು ಪದ್ಮನಾಭ ರಾವ್, ಸೇರಿದಂತೆ ಉಪಸ್ಥಿತರಿದ್ದರು.
Mysore
ಮೈಸೂರು ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಸಾ*ವು
ಮೈಸೂರು : ಜಿಲ್ಲೆ ಹುಣಸೂರು ತಾಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ.
ಮೈಸೂರಿನ ಹೊರವಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಹುಲಿ ಮರಿಗಳು,
ನಾಲ್ಕು ದಿನಗಳ ಅಂತರದಲ್ಲಿ ಹುಲಿ ಮರಿಗಳು ಸಾವನ್ನಪ್ಪಿವೆ. ಹುಲಿ ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಗೌಡನಕಟ್ಟೆಯ ಪ್ರಕಾಶ್ ಎಂಬುವರ ಜೋಳದ ಹೊಲದಲ್ಲಿ ಕಳೆದ ನವೆಂಬರ್. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನವೆಂಬರ್. 30ರಂದು ನಾಲ್ಕು ಹುಲಿಮರಿಗಳು ಪತ್ತೆಯಾಗಿದ್ದವು.

ಹುಲಿ ಮರಿಗಳು ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ತುಂಬಾ ಬಳಲಿದ್ದವು. ಜನರ ಕೂಗಾಟದಿಂದ ಅತ್ತಿಂದಿತ್ತ ಓಡಾಡಿ ಸೆರೆ ಹಿಡಿಯುವ ವೇಳೆಗೆ ನಿತ್ರಾಣಗೊಂಡಿದ್ದವು.
ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗಾಬರಿಗೊಳಗಾಗಿದ್ದ ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಒಂದಾದ ನಂತರ ಒಂದು ಸಾವನ್ನಪ್ಪಿವೆ.
ಪಶುವೈದ್ಯರು ಸಾವನ್ನಪ್ಪಿರುವ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನವೆಂಬರ್. 29 ಹಾಗೂ 30 ರಂದು ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ. ಆದರೆ ತಾಯಿ ಹುಲಿ ಆರೋಗ್ಯದಿಂದಿದೆ. ಸತ್ತ ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸತ್ತ ಹುಲಿ ಮರಿಗಳ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಹುಲಿ ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ.
ಹುಲಿ ಮರಿಗಳ ಸಾವಿನ ಬಗ್ಗೆ ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿಟ್ಟಿರುವ ಅರಣ್ಯ ಇಲಾಖೆಗೆ
ಈ ಬಗ್ಗೆ ಖಚಿತ ಪಡಿಸಿಕೊಳ್ಳುವ ಸಲುವಾಗಿ ದೂರವಾಣಿ ಕರೆ ಮಾಡಿದರೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕರೆಯನ್ನು ಸ್ವೀಕರಿಸುತ್ತಿಲ್ಲ.
Mysore
ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸು: ಎಸ್.ಅರುಣ್ ಕುಮಾರ್
ಮೈಸೂರು: ಜಿಲ್ಲೆಯಲ್ಲಿರುವ ಹಾಡಿ ಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ 5 ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಸ್.ಅರುಣ್ ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಡಿ ಜನರಿಗೆ ಆಧಾರ್ ಕಾಡ್೯ ಇಲ್ಲದಿದ್ದಲ್ಲಿ ನೊಂದಣಿ ಮಾಡುವ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಬುಡಕಟ್ಟು ಅಧಿಕಾರಿ ಹಾಜರಿದ್ದು, ನೋಂದಣಿಯಿಂದ ಅರ್ಹರು ಬಿಟ್ಟುಹೋಗದಂತೆ ನೋಡಿಕೊಳ್ಳಿ ಎಂದರು.

ಸಾರ್ವಜನಿಕರಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳಲ್ಲಿ ನೀಡಲಾಗುವ ಪಡಿತರ ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಗುಣಮಟ್ಟ ಕಂಡಬಂದಲ್ಲಿ ತಕ್ಷಣಕ ಕ್ರಮ ಕೈಗೊಳ್ಳಿ ಎಂದರು.
ತೂಕ ಮತ್ತು ಮಾಪನ ಇಲಾಖೆ ಅವರು ನ್ಯಾಯ ಬೆಲೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ಅವರು ಬಳಸುತ್ತಿರುವ ತೂಕದ ಯಂತ್ರ ಸರಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದರು
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಪ್ರೊ. ಶಿವಕುಮಾರ್ ಮಾತನಾಡಿ, ಸರ್ಕಾರದ ನಡೆ ಹಾಡಿಗಳ ಕಡೆ ಎಂಬಂತೆ ಹಾಡಿಗಳಲ್ಲಿರುವ ಫಲಾನುಭವಿಗಳಿಗೆ ಯೋಜನೆಗಳು ತಲುಪಿದರೆ, ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆ ಸಾರ್ಥಕತೆ ಕಾಣುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಕರೀಗೌಡ ಅವರು ಮಾತನಾಡಿ ಮೃತಪಟ್ಟ ಗೃಹಲಕ್ಮ್ಮಿ ಫಲಾನುಭವಿಗಳಿಗೆ ಹಣ ಹೋಗದಂತೆ ಎಚ್ಚರಿಕೆ ವಹಿಸಿ. ಮರಣ ಪ್ರಮಾಣ ಪತ್ರ ಪಡೆದುಕೊಂಡು ತಕ್ಷಣ ಗೃಹಲಕ್ಷ್ಮಿ ಹಣವನ್ನು ತಡೆಯಾಗಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯ ಸಾ.ಮಾ.ಯೋಗೇಶ್ ಅವರು ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯ 8434 ಮಹಿಳೆಯರು ಮೃತಪಟ್ಟಿದ್ದು, ಅವರ ಕುಟುಂಬದಲ್ಲಿ ಬೇರೆ ಮಹಿಳೆಯರು ಇದ್ದಲ್ಲಿ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯನ್ನು ಬದಲಾಯಿಸಿ ಅವರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಒದಗಿಸಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಯ 5 ಇಲಾಖೆಗಳು ಹಾಗೂ ಬುಡಕಟ್ಟು ಯೋಜನೆಗಳ ಇಲಾಖೆ ಅವರು ಒಟ್ಟಿಗೆ ಸೇರಿ ಹಾಡಿಗಳಿಗೆ ಭೇಟಿ ನೀಡಿ ಶಿಬಿರಗಳನ್ನು ನಡೆಸಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಒದಗಿಸುವುದರ ಜತೆಗೆ ಬೇರೆ ಸರ್ಕಾರದ ಯೋಜನೆಗಳನ್ನು ಒದಗಿಸಿಕೊಡಿ ಎಂದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯರಾದ ಹುಣಸೂರು ಬಸವಣ್ಣ, ಕುಮಾರಿ ಲಲಿತಾ, ಅಬ್ದುಲ್ ಖಾದರ್, ಚಲುವರಾಜು, ಎಂ.ಎಸ್. ಮಹದೇವ್, ಉದಯ್ ಶಂಕರ್, ಚಾಮರಾಜು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
-
Hassan22 hours agoಎಲೈಟ್ ಸಂಸ್ಥೆಯ ನಾಗರಾಜ್ಗೆ ’ಕರ್ನಾಟಕ ಗುರುರತ್ನ ಪ್ರಶಸ್ತಿ-2025’
-
Mandya5 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
Mandya21 hours agoಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗಧಿ
-
State3 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Manglore20 hours agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Mandya3 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Hassan24 hours agoNOC ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ: ಆರ್. ಮರಿಜೋಸೆಫ್ ಆಗ್ರಹ
-
Sports19 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
