Mysore
ವೈವಾಹಿಕ ಜೀವನವೂ ಮೈಸೂರಿನಿಂದಲೆ ಆರಂಭವಾಗಲಿ ಎಂಬ ಆಸೆ: ಡಾಲಿ ಧನಂಜಯ್
ಮೈಸೂರು: ನನ್ನ ಬದುಕಿನ ಎಲ್ಲ ಸಾಧನೆಯು ಮೈಸೂರಿನಿಂದಲೇ ಶುರುವಾಗಿದ್ದರಿಂದ ವೈವಾಹಿಕ ಜೀವನವೂ ಮೈಸೂರಿನಿಂದಲೆ ಆರಂಭವಾಗಲಿ ಎಂಬ ಆಸೆಯಿಂದ ಇಲ್ಲೇ ಮದುವೆಯಾಗುತ್ತಿದ್ದೇನೆ ಎಂದು ನಟ ಡಾಲಿ ಧನಂಜಯ್ ಅವರು ಹೇಳಿದರು.
ವಸ್ತುಪ್ರದರ್ಶನ ಆವರಣದಲ್ಲಿ ಫೆ.15ಮತ್ತು 16 ರಂದು ನಗರದ ನಡೆಯುವ ತಮ್ಮ ಮದುವೆಯ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶಿಕ್ಷಣ, ಬದುಕು, ಚಿತ್ರರಂಗ ಪ್ರವೇಶ ಎಲ್ಲವೂ ಆಗಿದ್ದು ಮೈಸೂರಿನಲ್ಲೆ. ಹೀಗಾಗಿ ನಾನು ಮೈಸೂರಿನೊಂದಿಗೆ ತುಂಬಾ ಕನೆಕ್ಟ್ ಆಗಿದ್ದೇನೆ ಎಂದರು.
ಚಾಮುಂಡೇಶ್ವರಿ ಅಮ್ಮನ ಆಶೀರ್ವಾದ ನಮ್ಮ ಮೇಲೆ ಇರಲಿ ಎಂಬ ಕಾರಣಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನದ ಗೋಪುರ, ದ್ವಾರ ವೇದಿಕೆಯ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದರು.
ಮಂತ್ರಮಾಗಲ್ಯ, ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳ ವಿವಾಹವಾಗಬೇಕೆಂಬ ಆಸೆಯಿತ್ತು. ಸಂಬಂಧಿಕರು, ಸ್ನೇಹಿಕರು, ಚಿತ್ರರಂಗದವರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಊಟ ಹಾಕಿಸುವುದು ಕಷ್ಟ ಸಾಧ್ಯ. ಹೀಗಾಗಿ ಅಭಿಮಾನಿಗಳು, ಸಂಬಂಧಿಕರ ಖುಷಿಗೆ, ಎಲ್ಲರಿಗೂ ಒಂದೇ ಕಡೆ ಊಟ ಹಾಕಿಸಲು ಇಲ್ಲಿ ಮದುವೆ ಆಗುತ್ತಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಹೇಳಿದರು.
ಪ್ರತ್ಯೇಕ ವ್ಯವಸ್ಥೆ: ಮದುವೆಗೆ ಸಿನಿಮಾ ರಂಗದವರು, ರಾಜಕಾರಣಗಳು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಭಿಮಾನಿಗಳಿಗೂ ಮುಕ್ತ ಅವಕಾಶ ಇದೆ. ವಿಐಪಿಗಳು, ಗಣ್ಯರು, ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ನಿರ್ಮಿಸಲಾಗಿದ್ದು, ನೇರವಾಗಿ ಸ್ಟೇಜ್ ಬಳಿ ಬಂದು ನೋಡಿಕೊಂಡು ಹೋಗಬಹುದು. ಸುಮಾರು ೨೫-೩೦ ಸಾವಿರ ಜನ ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ನೂಕುನುಗ್ಗಲು, ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಊಟಕ್ಕೆ ಕೌಂಟರ್: ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದ್ದು, ಅಭಿಮಾನಿಗಳು, ವಿಐಪಿ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ವಿತರಣೆಗೆ 45 ಕೌಂಟರ್ ತೆರೆಯಸಲಾಗುವುದು. ಬಾಳೆ ಎಲೆಯ ಊಟವೂ ಇರಲಿದೆ ಎಂದು ಮಾಹಿತಿ ನೀಡಿದರು.
ಕೋಟ್))
ನಟ ದರ್ಶನ್ ಅವರನ್ನೂ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ದರ್ಶನ್ ಅವರು ಸಿಗುತ್ತಿಲ್ಲ. ನನ್ನ ಮದುವೆಗೆ ಅವರು ಬಂದರೆ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ.
-ಡಾಲಿ ಧನಂಜಯ, ನಟ
Mysore
ಯಾತ್ರಿಕರಿಂದ ಮಹದೇಶ್ವರ ಬೆಟ್ಟದ ಸ್ವಚ್ಛತೆಗೆ ಧಕ್ಕೆ ಆಗದಂತೆ ಕ್ರಮಕ್ಕೆ ಮನವಿ
ಮೈಸೂರು: ಮಹಾ ಶಿವರಾತ್ರಿ ಪಾದಯಾತ್ರೆ ಸಮಯದಲ್ಲಿ ಯಾತ್ರಿಕರಿಂದ ಸ್ವಚ್ಛತೆಗೆ ಧಕ್ಕೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಕೃಷ್ಣಪ್ಪ (ಗಂಟಯ್ಯ) ಮನವಿ ಮಾಡಿದ್ದಾರೆ.
ಮಹಾಶಿವರಾತ್ರಿ ಸಮಯದಲ್ಲಿ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಕರು ಸಾಗುತ್ತಾರೆ. ಈ ದಾರಿಯಲ್ಲಿ ಅನೇಕ ದಾನಿಗಳು ಊಟ ಫಲಹಾರ, ತಿಂಡಿ, ನೀರು, ಪಾನೀಯ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡುವುದು ಸಹಜ. ಅದರಂತೆ ಸ್ವಚ್ಛತೆಯನ್ನು ಕಾಪಾಡಬೇಕು.
ಪಾದಯಾತ್ರೆ ವೇಳೆ ಆಹಾರ ಪದಾರ್ಥ ಸ್ವೀಕರಿಸಿದ ನಂತರ ಕೆಲವರು ದಾರಿಯಲ್ಲಿ ನೀರಿನ ಬಾಟಲ್, ತಟ್ಟೆ, ಲೋಟ ಇತ್ಯಾದಿಗಳನ್ನು ರಸ್ತೆ ಪಕ್ಕದಲ್ಲಿ ಬಿಸಾಡದಂತೆ ಜಿಲ್ಲಾಡಳಿತ ಯಾತ್ರಿಕರು ಸಾಗುವ ಅಲ್ಲಲ್ಲಿ ಒಂದು ಕಸದ ತೊಟ್ಟಿ ವ್ಯವಸ್ಥೆ ಮಾಡಬೇಕು. ಮಾರ್ಗ ಮಧ್ಯ ಆಯಾ ಗ್ರಾಮ ಪಂಚಾಯಿತಿ ಆಡಳಿತವು ಕಸದ ತೊಟ್ಟಿಗಳನ್ನು ನಿರ್ಮಿಸಿ ಕಸ ಸ್ವೀಕರಿಸಬೇಕು. ಈ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೋಂ ಗಾರ್ಡ್ಸ್ ಸಿಬ್ಬಂದಿಗಳನ್ನು ನೇಮಿಸಬೇಕು. ಪಾದಯಾತ್ರೆಗಳು ಹಾಗೂ ದಾನಿಗಳು ಪರಿಸರ ಸ್ವಚ್ಛತೆ ಪಾಲಿಸುವಂತೆ ಸಾರ್ವಜನಿಕರಿಗೆ ಮತ್ತು ದಾನಿಗಳಿಗೆ ಅರಿವು ಮೂಡಿಸಲು ಜಿಲ್ಲಾ ಆಡಳಿತ ಆದೇಶ ಹೊರಡಿಸುವ ಮೂಲಕ ಗ್ರಾಮ ಪಂಚಾಯತಿಗಳಿಗೆ ಮತ್ತು ಮಹದೇಶ್ವರ ಪ್ರಾಧಿಕಾರದವರು ಸಭೆ ವಹಿಸಿ ನಿಯಮವನ್ನು ಶಿಸ್ತಿನಿಂದ ಮಾಡಬೇಕು. ಹೋದ ವರ್ಷ ನಾವು ಮೈಸೂರಿನಿಂದ ಪರಿಸರವಾದಿಗಳು ಬಂದು ದಾನಿಗಳಿಗೆ ಅರಿವು ಮೂಡಿಸಿದವು ಮತ್ತು ನೀರಿನ ಬಾಟಲನ್ನು ತಾಳಗಟ್ಟದಿಂದ ಮಾದೇಶ್ವರ ಬೆಟ್ಟದ ವರಿಗೆ ತೆಗೆದುಕೊಂಡು ಹೋಗಲಿಕ್ಕೆ ಬಿಡಲಿಲ್ಲ. ಸಾವಿರಾರು ಕ್ರೇಟ್ ನೀರಿನ ಬಾಟಲ್ ಹಿಡಿದು ಅದನ್ನು ವಾಪಸ್ಸು ಕಳಿಸಲಾಗಿತ್ತು. ನಮಗೆ ಅರಣ್ಯ ಅಧಿಕಾರಿಗಳು ಅಬಕಾರಿ ಇಲಾಖೆಗಳು ಸಹಾಯ ಮಾಡಿದರು. ನಾವುಗಳು ದಾನಿಗಳಿಗೆಲ್ಲ ನೀವು ನೀರು ಕೊಡುವುದು ದೊಡ್ಡದಲ್ಲ. ಬಾಟಲನ್ನು ಆಯುವುದು, ಸ್ವಚ್ಛತೆ ಮಾಡುವುದು ಯಾರು ಎಂದು ಅರಿವು ಮೂಡಿಸಿದ್ದೆವು. ಅವರಿಗೆ ಮುಂದಿನ ವರ್ಷದಿಂದ ನೀವು ಹಣ್ಣುಗಳನ್ನು ವಿತರಿಸಿ ಬಾಟಲನ್ನು ಕೊಡುವುದು ಬೇಡ, ಮಹದೇಶ್ವರ ಬೆಟ್ಟದ ಪ್ರಾಧಿಕಾರದವರು ನೀರಿನ ವ್ಯವಸ್ಥೆ ಮಾಡಿರುತ್ತಾರೆ. ನೀವುಗಳು ಹಣ್ಣುಗಳನ್ನು ಕೊಟ್ಟರೆ ಒಳ್ಳೆಯದು. ಪರಿಸರ ಉಳಿಯುತ್ತದೆ ಎಂದು ಅರಿವು ಮೂಡಿಸಿದೆವು. ಆದಕಾರಣ ಈ ವರ್ಷ ಜಿಲ್ಲಾಡಳಿತ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕು. ಕಸ ವ್ಯವಸ್ಥೆ ಸರಿಯಾಗಿ ನಿರ್ವಹಿಸಬೇಕು. ಆ ಮೂಲಕ ಮಹದೇಶ್ವರ ಬೆಟ್ಟವನ್ನು ಕಾಪಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
Mysore
ಮೈಸೂರಿಗೆ ಗರುಡ ವಾಹನ ನೀಡಿ, ಕಾನ್ಸ್‌ಸ್ಟೇಬಲ್ ಹುದ್ದೆ ಭರ್ತಿ ಮಾಡಿ: ವಕೀಲ ಗೋಕುಲ್ ಗೋವರ್ದನ್ ಒತ್ತಾಯ
ಮೈಸೂರು: ನಗರದಲ್ಲಿ ನೆಡೆಯುತ್ತಿರುವ ಅನೇಕ ಪ್ರಕರಣಗಳಿಗೆ ಮುಖ್ಯಮಂತ್ರಿ, ಗೃಹ ಸಚಿವರೇ ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆ ಎಂದು ವಕೀಲ, ಬಿಜೆಪಿ ಮುಖಂಡ ಗೋಕುಲ್ ಗೋವರ್ದನ್ ಆರೋಪಿಸಿದ್ದಾರೆ.
ಕಾರಣ ಹಿಂದೆ ಮೈಸೂರು ನಗರದ ಪ್ರತಿ ಆರಕ್ಷಕ ಠಾಣೆಗೆ ಒಂದು ಗರುಡ ವಾಹನ ಇತ್ತು. ಇದು ಗಸ್ತು ಮಾಡಲು, ಗಲಾಟೆ ನಡೆಯದಂತೆ ತಡೆಯಲು ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಲು ತೆರಳುತ್ತಿತ್ತು. ಯಾವುದೇ ಸಂದರ್ಭದಲ್ಲಿ ಆಯಾ ಠಾಣೆಗೆ ಅಥವಾ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಗರುಡ ವಾಹನವನ್ನು ಘಟನಾ ಸ್ಥಳಕ್ಕೆ ತಿಳಿಸುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯದಿಂದ ಮೈಸೂರು ನಗರದ ಪೊಲೀಸ್ ಠಾಣೆಗಳಿಗೆ ಗರುಡ ವಾಹನವಿಲ್ಲದೆ ಅವರು ಪ್ರತಿನಿತ್ಯ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ತುರ್ತು ಸಂದರ್ಭದಲ್ಲಿ ಘಟನೆ ಸ್ಥಳಕ್ಕೆ ತಕ್ಷಣ ತೆರಳಿ ಸಾರ್ವಜನಿಕರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಇದ್ದ ಗರುಡ ವಾಹನ (ಮಹೇಂದ್ರ ಜೀಪುಗಳಿಗೆ) 15 ವರ್ಷಗಳು ತುಂಬಿದ ಕಾರಣದಿಂದಾಗಿ ಸಾರಿಗೆ ಇಲಾಖೆಯ ನೀತಿಯಂತೆ ಅವುಗಳನ್ನು ಬಳಸದೆ ಗುಜರಿಗೆ ನೀಡಲಾಗಿದೆ. ಆದರೆ ಹೊಸ ವಾಹನಗಳನ್ನು ಒಂದೂವರೆ ವರ್ಷಗಳಿಂದ ಠಾಣೆಗಳಿಗೆ ನೀಡಲಾಗಿಲ್ಲ. ಇದು ಮುಖ್ಯಮಂತ್ರಿಗಳ ತವರು ಜಿಲ್ಲೆಯ ಪರಿಸ್ಥಿತಿ. ಇನ್ನೂ ಪ್ರತಿ ಆರಕ್ಷಕ ಠಾಣೆಯಲ್ಲಿ ಪೊಲೀಸ್ ಪೇದೆಗಳ ಕೊರತೆ ಇದೆ. ಮಾಹಿತಿಯ ಪ್ರಕಾರ ಪ್ರತಿ ಠಾಣೆಯಲ್ಲಿ 10 ರಿಂದ 20 ಪೇದೆಗಳ ಕೊರತೆ ಇದೆ. ಇದೇ ತರಹ ಮುಂದುವರೆದರೆ ಎಲ್ಲಿಂದ ಪೊಲೀಸ್ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ? ಮೊದಲೇ ಜನಸಂಖ್ಯೆಗೆ ಅನುಗುಣವಾಗಿ ಪೋಲಿಸ್ ಠಾಣೆಗಳು ಇಲ್ಲ. ಹೆಚ್ಚು ಪೋಲೀಸ್ ಠಾಣೆಗಳ ಅವಶ್ಯಕತೆಯೂ ಇದೆ ಎಂಬ ಕೂಗಿದೆ. ಇಂತಹ ಸಂದರ್ಭದಲ್ಲಿ ಇರುವ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯಾದರೆ ಅವರು ಹೇಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯ,ಅಪರಾಧಗಳನ್ನು ತೆಡೆಯಲು ಸಾಧ್ಯವೇ ?
ಮುಖ್ಯಮಂತ್ರಿಗಳೇ, ಗೃಹ ಸಚಿವರೇ ಮೊದಲು ದಯಮಾಡಿ ಗರುಡ ವಾಹನವನ್ನು ನೀಡಿ, ಹಾಗೆಯೇ ಪ್ರತಿ ಪೋಲೀಸ್ ಠಾಣೆಗೆ ಕೊರತೆ ಇರುವ ಪೊಲೀಸ್ ಸಿಬ್ಬಂದಿಗಳನ್ನು ಭರ್ತಿ ಮಾಡಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
Mysore
ಮೈಸೂರು ಪೊಲೀಸರ ನೈಟ್ ರೌಂಡ್ಸ್
ಮೈಸೂರು: ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ನಗರ ಪೊಲೀಸರು ರಾತ್ರಿ ಗಸ್ತು ನಡೆಸುತ್ತಿದ್ದಾರೆ. ನಗರದ ಪೊಲೀಸ್ ಅಧಿಕಾರಿಗಳು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿದಿನ ಸಂಜೆ, ರಾತ್ರಿ ನಿಯಮಿತವಾಗಿ ಗಸ್ತು ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಬ್‌ಇನ್ಸ್‌ಪೆಕ್ಟರ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗಳು ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳು ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶಗಳ ಮೇಲೆ ಗಮನ ಹರಿಸುತ್ತಿದ್ದಾರೆ.
ನಮ್ಮ ಈ ಪ್ರಯತ್ನದ ಭಾಗವಾಗಿ, ಪ್ರತಿದಿನ ಸಂಜೆ 6 ರಿಂದ ರಾತ್ರಿ 11 ರವರೆಗೆ ಅಧಿಕಾರಿಗಳು ಕಾಲ್ನಡಿಗೆ ಗಸ್ತು (Foot Patrolling) ನಡೆಸುತ್ತಿದ್ದಾರೆ.
-
Mysore23 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya17 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Hassan13 hours agoಜನತೆಯ ಪ್ರೀತಿಗೆ ಮನಸೋತ ಡಿಸಿ ಕೆ.ಎಸ್. ಲತಾ ಕುಮಾರಿ
-
Mysore13 hours ago5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ: ರಸ್ತೆ ಡಾಂಬರೀಕರಣ_ಬಾಗೂರು ಅಣೆಕಟ್ಟು ಅಭಿವೃದ್ಧಿಗೆ ಗುದ್ದಲಿ ಪೂಜೆ
-
Hassan15 hours agoಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
-
Kodagu14 hours agoಸಂಜೀವಿನಿ ಕಟ್ಟಡ ನಿರ್ಮಾಣ ಶ್ಲಾಘನೀಯ : ಶಾಸಕ ಡಾ.ಮಂಥರ್ ಗೌಡ
-
Mysore17 hours agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
Kodagu18 hours ago104 ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ: ಎಸ್ಪಿ ಬಿಂದುಮಣಿ
