Mysore
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು

ಮೈಸೂರು: ಮೈಸೂರಿನ ಬೆಳವಾಡಿಯ ಅದ್ವೈತ್ ಹುಂಡೈ ಕಂಪನಿಯು ಮಾರುಕಟ್ಟೆಗೆ ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ.
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 42 KW/h ಮತ್ತು 51.4 KW/h ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು ಎಂ.ಐ.ಡಿ.ಸಿ. ಪರೀಕ್ಷೆಯಲ್ಲಿ 473 ಕಿ.ಮೀ ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಬ್ಯಾಟರಿ ಪ್ಯಾಕ್ಗಳನ್ನು ಮುಂಭಾಗದ ಆಕ್ಸಲ್ಗೆ ಲಿಂಕ್ ಮಾಡಲಾದ ಒಂದೇ ಎಲೆಕ್ಟ್ರಿಕ್ ಮೋಟರ್ನೊಂದಿಗೆ ಜೋಡಿಸಲಾಗಿದೆ.
ಇದು 133 ಬಿ.ಎಚ್.ಪಿ. (42 ಕಿ.ಮೀ ಬ್ಯಾಟರಿ ಪ್ಯಾಕ್) ಮತ್ತು ದೊಡ್ಡ 51.2 KW/h ಬ್ಯಾಟರಿ ಪ್ಯಾಕ್ನೊಂದಿಗೆ 169 ಬಿ.ಎಚ್.ಪಿ ಅನ್ನು ಉತ್ಪಾದಿಸುತ್ತದೆ. ಕ್ರೆಟಾದ ಈ ಹೆಚ್ಚು ಶಕ್ತಿಶಾಲಿ ದೀರ್ಘ-ಶ್ರೇಣಿಯ ಆವೃತ್ತಿಯು 7.9 ಸೆಕೆಂಡುಗಳಲಿ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕ್ರೆಟಾದ ಬ್ಯಾಟರಿ ಪ್ಯಾಕ್ ಕೇವಲ 58 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು ಎಂದು ಹ್ಯುಂಡೈ ಹೇಳಿಕೊಂಡಿದೆ.
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು 10 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಮೂರು ಮ್ಯಾಟ್ ಬಣ್ಣಗಳನ್ನು ಹೊಂದಿದೆ. ಒಳಗೆ ಡ್ಯಾಶ್ ಬೋರ್ಡ್ನಲ್ಲಿ ಟ್ವಿನ್ 10.25 ಇಂಚಿನ ಸ್ಕ್ರೀನ್ಗಳನ್ನು ನೀಡಲಾಗಿದ್ದು, ಒಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮತ್ತೊಂದು ಇನ್ಫೋಟೈನ್ಮೆಂಟ್ ಸೆಟಪ್ಗಾಗಿ ಟಚ್ಸ್ಕ್ರೀನ್ ನೀಡಲಾಗಿದೆ. ಎರಡೂ ಸ್ಕ್ರೀನ್ಗಳು ದೊಡ್ಡದಾಗಿದ್ದು, ಬಳಸಲು ತುಂಬಾ ಸುಲಭ ಎನ್ನಿಸುತ್ತವೆ.
ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಬೋಸ್ನಿಂದ 8-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸೌಂಡ್ ಸಿಸ್ಟಮ್ಗಾಗಿ ಕಂಟ್ರೋಲ್ಗಳು, ಯು.ಎಸ್.ಬಿ.ಎ ಮತ್ತು ಸಿ ಪೋರ್ಟ್ಗಳು, ಜೊತೆಗೆ 12ವಿ ಚಾರ್ಜಿಂಗ್ ಪೋರ್ಟ್ ಮತ್ತು ವೈರ್ಲೆಸ್ ಫೋನ್ ಚಾರ್ಜರ್ನಂತಹ ಪ್ರಮುಖ ಫೀಚರ್ಸ್ ನೀಡಲಾಗಿದೆ.
ಇವಿಷ್ಟೇ ಅಲ್ಲದೆ ದೊಡ್ಡ ಸನ್ರೂಫ್, ಡಿಜಿಟಲ್ ಕೀ, ಕೂಲ್ಡ್ ಗ್ಲೋವ್ಬಾಕ್ಸ್, ವೆಹಿಕಲ್ 2 ಲೋಡ್ [ವಿ2ಎಲ್0), ಮೌಂಟೆಡ್ ಕಂಟ್ರೋಲ್ಗಳೊಂದಿಗೆ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಸುರಕ್ಷತೆಗಾಗಿ ಆರು ಏರ್ಬ್ಯಾಗ್ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್ಗಳು,ಇ.ಬಿ.ಡಿ. ಜೊತೆಗೆ ಎ.ಬಿ.ಸಿ, ಆಟೋ ಹೋಲ್ಡ್ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ಗಳು (ಇಪಿಬಿ) ಇವೆ.
ಹಾಗೆಯೇ ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಚೈಲ್ಡ್ ಸೀಟ್ ಆಂಕರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ 19 ವೈಶಿಷ್ಟ್ಯಗಳೊಂದಿಗೆ ಎರಡು ಹಂತದಲ್ಲಿ ಎ.ಡಿ.ಎ.ಸಿ ಸೆಟಪ್ ಒಳಗೊಂಡಿದೆ.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ದೇವಿಕಾ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಹರ್ಷಿತಾ, ಅನಿಲ್ ಉಪಸ್ಥಿತರಿದ್ದರು.
ಅದ್ವೈತ್ ಹುಂಡೈ ಜನರಲ್ ಮ್ಯಾನೇಜರ್ ಸೇಲ್ಸ್ ಕೆ,ಸಿ. ಪ್ರಮೋದ್ ಸೇಲ್ಸ್ ಮ್ಯಾನೇಜರ್ ಬಿ. ಚಂದನ್ ಮತ್ತು ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮೋಹನ್. ಹಾಜರಿದ್ದರು.
Mysore
ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟ ಮಾಡಲು ಅವಕಾಶ ನೀಡಿ

ಮೈಸೂರು : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಹಾಗೂ ಅವರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಗುರುವಾರ ಭೇಟಿ ಮಾಡಿದ ನಂತರ ಸಂಸದರು ಈ ವಿಷಯ ತಿಳಿಸಿದ್ದಾರೆ.
ಇದಕ್ಕೆ ಸೂಕ್ತವಾಗಿ ಸ್ಪಂದನೆ ವ್ಯಕ್ತಪಡಿಸಿದ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್, ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.
ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.
ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಸಂಸದರು ತಿಳಿಸಿದರು.
ನಮ್ಮ ಕ್ಷೇತ್ರದ ಬೆಳಗಾರರ ಪರವಾಗಿ ದನಿ ಎತ್ತಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.
Mysore
ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿ: ನಾಗರೀಕ ಸೇವಾ ವೇದಿಕೆ ಹಾಗೂ ಆಟೋ ಚಾಲಕರ ಒತ್ತಾಯ

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸ್ವ ಕ್ಷೇತ್ರವಾದ ತಿ.ನರಸೀಪುರ ಪಟ್ಟಣದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದರೆ ಧಾರ್ಮಿಕ ಆಚರಣೆ ಹೊರತು ಪಡಿಸಿ ಪಟ್ಟಣದಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ನಾಗರೀಕ ಸೇವಾ ವೇದಿಕೆಯ ಕಾರ್ಯದರ್ಶಿ ಕರೋಹಟ್ಟಿ ಪ್ರಭುಸ್ವಾಮಿ ಸರ್ಕಾರಕ್ಕೆ ಎಚ್ಚರಿಕ ನೀಡಿದರು.
ಪಟ್ಟಣದ ನಾಗರೀಕ ಸೇವಾ ವೇದಿಕೆ ಕಾರ್ಯಕರ್ತರು ಹಾಗು ಆಟೋ ಚಾಲಕ ಸಂಘದ ಸದಸ್ಯರೊಂದಿಗೆ ಪಟ್ಟಣದಲ್ಲಿ ಹಳ್ಳ ಬಿದ್ದಿರುವ ರಸ್ತೆಗಳ ದುರಸ್ತಿ ಮಾಡಬೇಕೆಂಬ ಸದುದ್ದೇಶದೊಂದಿಗೆ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪತ್ರಕರ್ತರೊಂದಿಗೆ ಗುಂಡಿ ಬಿದ್ದ ರಸ್ತೆ ಬಳಿ ತೆರಳಿ ಅವ್ಯವಸ್ಥೆ ಬಗ್ಗೆ ಕಿಡಿಕಾರಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಫೆ.10 ರಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯುತ್ತಿದೆ. ಆದರೆ ಪಟ್ಟಣದ ಯಾವುದೇ ರಸ್ತೆಗಳು ವ್ಯವಸ್ಥಿತವಾಗಿಲ್ಲ. ತಿ.ನರಸೀಪುರ ಪುರಸಭೆಯ 23 ವಾರ್ಡ್ ಗಳ ಪೈಕಿ17 ವಾರ್ಡ್ ಗಳು ವರುಣ ಕ್ಷೇತ್ರಕ್ಕೆ ಸೇರಿದರೆ, ಉಳಿಕೆ 6 ವಾರ್ಡ್ ಗಳು ಎಚ್‌ಸಿಎಂ ಕ್ಷೇತ್ರಕ್ಕೆ ಸೇರುತ್ತವೆ. ಆದರೆ ಇಲ್ಲಿ ಯಾವುದೇ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಪಟ್ಟಣದ ಎಣ್ಣೆ ಮಿಲ್ ರಸ್ತೆಯ ಸ್ಥಿತಿಯಂತೂ ಹೇಳ ತೀರದಾಗಿದೆ. ಮಂಡಿ ಮಟ್ಟದ ಹಳ್ಳ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.
ಈ ರಸ್ತೆಯಲ್ಲಿ ಅದೆಷ್ಟೋ ಬೈಕ್ ಸವಾರರು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡರೆ, ಲಾರಿ, ಬೈಕ್ ಗಳು ಹಳ್ಳಕ್ಕೆ ಬಿದ್ದು ಅಪಘಾತ ಸಹ ಉಂಟಾಗಿದೆ. ಇನ್ನುಳಿದಂತೆ ಲಿಂಕ್ ರಸ್ತೆ, ತಾಲೂಕು ಕಚೇರಿ ರಸ್ತೆ ಹಾಗು ಕೆನರಾ ಬ್ಯಾಂಕ್ ರಸ್ತೆ ಸಹ ತೀವ್ರವಾಗಿ ಹದಗೆಟ್ಟ ಸ್ಥಿತಿಯಲ್ಲಿದ್ದು ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಕ್ಷೇತ್ರದ ಜನತೆ ನಿಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ದ್ರೋಹ ಬಗೆಯದೇ ಶೀಘ್ರವಾಗಿ ರಸ್ತೆ ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದರು.
ಯಾವುದೇ ಒಂದು ಐತಿಹಾಸಿಕ ಆಚರಣೆ ಮಾಡಬೇಕಾದರೆ ಪೂರ್ವಭಾವಿಯಾಗಿ ಮೂಲಸೌಕರ್ಯದ ಅಭಿವೃದ್ಧಿ ಮಾಡಬೇಕಾದದ್ದು ದೂರದೃಷ್ಟಿ ಇರುವ ನಾಯಕರ ಜವಾಬ್ದಾರಿಯಾಗಿದೆ ಎಂದು ವಿಷಾಧಿಸಿದರು.
ಈ ವೇಳೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ,ಕಾರ್ ಮಲ್ಲಪ್ಪ,ಮಂಜು,ಮಹೇಶ್, ರೇವಣ್ಣ,ಬಸವರಾಜು,ಮಹದೇವ ಸ್ವಾಮಿ,ರಾಜೇಶ ಮತ್ತಿತರರಿದ್ದರು.
Mysore
ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ಸಿ.ನಾರಾಯಣಗೌಡ

ಮೈಸೂರು: ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ಶ್ರೀ ದುರ್ಗಾ ಪೋಡೇಶನ್ ಹಾಗೂ ಅರಿವು ಸಂಸ್ಥೆ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, 20 ವರ್ಷ ನಿರಂತರ ಸಾಮಾಜಿಕ ಸೇವೆ, ಸಂಘಟನೆಯಿಂದ ಸೇವೆ ಸಲ್ಲಿಸುತ್ತಿರುವ ಎಸ್.ಇ.ಗಿರೀಶ್ ಅವರಿಗೆ ಜೀವ ರಕ್ಷಕ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಸೇವೆಯನ್ನು ಆತ್ಮ ತೃಪ್ತಿ ಮತ್ತು ಮನಃಸಂತೋಷಕ್ಕಾಗಿ ಮಾಡುತ್ತೇವೆ. ಆದರೆ, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜೊತೆಗೆ , ಬಡ ವಿದ್ಯಾರ್ಥಿ ಹಾಗೂ ರೋಗಿಗಳ ಸಹಾಯ ಮಾಡುವ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಸೇವೆ ಮಾಡುತ್ತಿರುವುದು ನಿಜವಾದ ಸಮಾಜ ಸೇವೆ ಎಂದರು.
ನಿಸ್ವಾರ್ಥ ಸೇವಾಕಾರಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿ. ಗಿರೀಶ್ ಅವರ 20 ವರ್ಷದ ಸುದೀರ್ಘಕಾಲದ ಸೇವೆಯನ್ನು ಹೀಗೆ ಮುಂದುವರಿಸಲಿ ಎಂದು ಆಶಿಸಿದರು.
ಮೈಸೂರು ಚೇಂಬರ್ ಆ್ ಕಾಮಸ್‌ರ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ,
ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ. ಅಂತಹ ಕೆಲಸದಲ್ಲಿ ಜೀವದಾರ ರಕ್ತನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ಸೇವೆ ಮಾಡುತ್ತ ಬಂದಿದೆ. ಜೀವದಾರ ರಕ್ತ ನಿಧಿ ಕೇಂದ್ರಕ್ಕೆ ಮೈಸೂರು ನಗರದ ಅತ್ಯುತ್ತಮ ರಕ್ತ ನಿಧಿ ಕೇಂದ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ೌಂಡೇಶನ್ ಹಾಗೂ ಅರಿವು ಸಂಸ್ಥೆಯ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ 30 ಯೂನಿಟ್ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಜೆಡಿಎಸ್ ಕಾರ್ಯಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾ ದರ್ಶನ್, ಜಿ.ರಾಘವೇಂದ್ರ, ಆನಂದ್, ಮುತ್ತಣ್ಣ, ಎಂ.ಗಂಟಯ್ಯ (ಕೃಷ್ಣಪ್ಪ), ದುರ್ಗಾ ೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಕೇಬಲ್ ವಿಜಿ, ಸೂರಜ್, ಸದಾಶಿವ್, ವಿನಯ್ ಕಣಗಾಲ್, ರಾಕೇಶ್, ಕೆಂಪಣ್ಣ ,ನಂದೀಶ್, ರಾಘವೇಂದ್ರ ಮತ್ತಿತರರು ಇದ್ದರು.
-
State12 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu9 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar9 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu13 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Kodagu8 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Hassan8 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports10 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್
-
Hassan7 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ