Mysore
“ಗ್ರಾಮ ಪಂಚಾಯಿತಿ ಅಧಿಕಾರಿ ಯಾರು ಎಂಬುದೇ ಗೊತ್ತಿಲ್ಲ… ಅವರು ಬೀದಿಗೂ ಬಂದಿಲ್ಲ”

“ಗ್ರಾಮ ಪಂಚಾಯಿತಿ ಅಧಿಕಾರಿ ಯಾರು ಎಂಬುದೇ ಗೊತ್ತಿಲ್ಲ… ಅವರು ಬೀದಿಗೂ ಬಂದಿಲ್ಲ”
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ನೀರಿನ ನಿರ್ವಹಣೆ ಸರಿಯಿಲ್ಲದೆ ಸಾರ್ವಜನಿಕರು ಪಿಡಿಒ ಹಾಗೂ ಗ್ರಾಮ ಪಂಚಾಯತಿ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ,
ಈ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಾರ್ವಜನಿಕರನ್ನು ಪ್ರಾಣಿಗಳ ತರ ನೋಡುತ್ತಿದ್ದಾರೆ ಪಿಡಿಓ ರವರು ನೀರಿನ ಕೊರತೆ ನೀಗಿಸುವ ಕೆಲಸ ಮಾಡಿಲ್ಲ ಈ ಗ್ರಾಮದಲ್ಲಿ ಪಿಡಿಓ ವಿಜಯಲಕ್ಷ್ಮಿ ಯಾರು ಎಂಬುದೇ ಗೊತ್ತಿಲ್ಲ ಈ ಬೀದಿಗಳಲ್ಲಿ ಕಸ ನಿರ್ವಹಣೆ ನೀರಿನ ಸಮಸ್ಯೆ ಹಾಗೂ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಗಮನಹರಿಸಿಲ್ಲ ಒಟ್ಟಾರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯಾರು ಎಂಬುದೇ ಗೊತ್ತಿಲ್ಲ ಅವರನ್ನು ನೋಡೇ ಇಲ್ಲ
ಗ್ರಾಮದಲ್ಲಿ ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ಬಗೆಹರಿಸಬೇಕು, ವರ್ಷಕ್ಕೆ ಒಂದು ಸಲ ನಡೆಯುವ ಗ್ರಾಮ ದೇವತೆ ಶ್ರೀ ಸಿಡಿಯಮ್ಮನವರ ಜಾತ್ರಾ ಉತ್ಸವದ ಸಮಯದಲ್ಲಿ ಮುಖ ತೊಳೆಯಲು ನೀರು ಇಲ್ಲದಂತಾಗಿದೆ ಈ ಸಮಸ್ಯೆ ಬಗ್ಗೆ ಪಿಡಿಒ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಗೋಜಿಗೂ ಹೋಗಿಲ್ಲ ಆದರೆ ಸಾರ್ವಜನಿಕರು
ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಹೋಗಿ ನೀರು ಹಿಡಿವ ಪರಿಸ್ಥಿತಿ ನಿರ್ಮಾಣವಾಗಿದ್ದು ಮತ್ತೆ ಕೆಲವರು ಬೋರ್ವೆಲ್ ಅವಲಂಬಿಸಿ ನೀರಿ ದಾಹ ತೀರಿಸಿಕೊಳ್ಳುತ್ತಿದ್ದಾರೆ ಎಂದು ನವೀನ, ದಾಸಯ್ಯ, ಚಂದ್ರು, ಶಿವು, ಮಂಜು, ನಾಗಯ್ಯ ಹಾಗೂ ಮೂರ್ತಿ ಇವರು
ಆರೋಪಿಸಿದ್ದಾರೆ ಅಲ್ಲದೆ ಪಿಡಿಒ ವಿಜಯಲಕ್ಷ್ಮಿ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Mysore
ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ

ನಂಜನಗೂಡು: ಹಂದಿಗಳ ಬೇಟೆಗೆ ಹಾಕಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನಿನಲ್ಲಿ ಮೇವು ಮೇಯುತ್ತಿರುವಾಗ ಘಟನೆ ಸಂಭವಿಸಿದೆ. ಕಾಡು ಹಂದಿಗಳನ್ನು ಬೇಡೆಯಾಡಲು ಕಿಡಿಗೇಡಿಗಳು ಸಿಡಿಮದ್ದನ್ನು ಅಳವಡಿಸಿದ್ದಾರೆ ಎಂಬುದನ್ನು ತಿಳಿಯದೇ ರೈತ ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್‌ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ವೇಳೆ ಸಿಡಿಮದ್ದು ಹಠಾತ್ತನೇ ಸಿಡಿದ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ರೈತ ಚನ್ನನಂಜೇಗೌಡ ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಗಂಭೀರ ಗಾಯಗೊಂಡಿರುವ ಹಸುವಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಮದ್ದನ್ನು ಅಳವಡಿಸಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Mysore
ಎಚ್‌ಸಿಎಂ ಮನೆಗೆ ದಸಂಸ ಮುಖಂಡರಿಂದ ಮುತ್ತಿಗೆ ಯತ್ನ

ಮೈಸೂರು: ಸಚಿವ ಡಾ. ಹೆಚ್ ಸಿ ಮಹದೇವಪ್ಪ ನಿವಾಸಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮೈಸೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ದಸಂಸ ಕಾರ್ಯಕರ್ತರು ರಾಜ್ಯ ಸರ್ಕಾರರವನ್ನು ಎಷ್ಟೇ ಮನವಿ ಮಾಡಿದರೂ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಬೇಸತ್ತು ಸಚಿವ ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಚಿವ ಮಹದೇವಪ್ಪ ನಿವಾಸಕ್ಕೆ ಕೂಡಲೇ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಬೆಟ್ಟಯ್ಯ ಕೋಟೆ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ್ದು ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.
Mysore
ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿ

ಮೈಸೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್,ಸದಸ್ಯರಾದ ಗೌತಮ್ ಸಾಲೇಚ ಮತ್ತು ರಿತೇಶ್ ಗೌಡ ಭೇಟಿ ಮಾಡಿ ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಬೇಸ್ ಮೆಂಟ್ನಲ್ಲಿ ನಿಲ್ಲಿಸಿದ್ದು ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿಸಿದರು .
ಕಾಮಗಾರಿ 2019 ರಲ್ಲಿ ಆದೇಶ ಪಡೆದ ಗುತ್ತಿಗೆದಾರರು 2021 ರಲ್ಲಿ ಬೇಸ್ ಮೆಂಟ್ ವರೆಗೆ ಮಾತ್ರ ಮಾಡಿ ನಿಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಮಳೆಗೆ ಶಿಥಿಲವಾಗುತ್ತಿದೆ. ಕೇಂದ್ರ ಸರ್ಕಾರದ 3 ಕೋಟಿ ರೂಪಾಯಿ
ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ಮೈಸೂರು ಕೈಗಾರಿಕೆಗಳ ಸಂಘದ 50 ಲಕ್ಷ ರೂಪಾಯಿ ಕೆ.ಐ.ಎ.ಡಿ.ಬಿ.ಗೆ ವಿ.ಐ.ಪಿ.ಸಿ ಮೂಲಕ ನೀಡಿ 20020 ರಲ್ಲಿ ಕಟ್ಟಡ ಪೂರ್ಣ ಗೊಳಿಸುವ ಭರವಸೆ ಹುಸಿಯಾಗಿದೆ.
ಕೂಡಲೇ ಕಾಮಗಾರಿ ಪುನಾರಂಬಿಸುವಂತೆ ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯ ನಿರ್ವಾಹಕ ಮಹೇಶ್ ಅವರಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ದೂರವಾಣಿಯಲ್ಲಿ ಸೂಚಿಸಿದರು.
ಜಿತೋ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಸ್ಟಾರ್ ಏರ್ ಲೈನ್ಸ್ ಮಾಲೀಕ ಶ್ರೀ ಸಂಜಯ್ ಗೋದಾವತ್ ಮೈಸೂರಿನಲ್ಲಿ ಅವರ ವಿಮಾನ ಸೇವೆಯನ್ನು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಪೂರ್ಣಗೊಂಡ ಬಳಿಕ ಒದಗಿಸಲಾಗುವುದು ಎಂದು ತಿಳಿಸಿದ ವಿಷಯವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಇತು.
ಇದಕ್ಕೆ ಪ್ರಕ್ರಿಯಿಸಿದ ಮುಖ್ಯ ಕಾರ್ಯದರ್ಶಿಗಳು ವಿಮಾನಗಳ ಸದ್ಭಳಕೆ ದಿಕ್ಕಿನಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಸೂಕ್ತ ಪ್ರಚಾರ ಮಾಡಬೇಕೆಂದರು.
-
Mandya6 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan13 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya9 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu11 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Hassan12 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu9 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Mandya8 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan8 hours ago
ಮತಾಂತರಕ್ಕೆ ಪ್ರಯತ್ನಿಸುತ್ತಿರುವುದಾಗಿ ಸುಳ್ಳು ದೂರು ದಾಖಲು: ಪ್ರಶಾಂತ್