Hassan
ವಿಮಾನ ನಿಲ್ದಾಣ ಕಾಮಗಾರಿ ವಿಳಂಬ 2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದ ರಾಜ್ಯ ಸರ್ಕಾರ
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮತ್ತೊಂದು ವರ್ಷ ಮುಂದಕ್ಕೆ ಹೋಗಿದೆ. ಈ ಮೊದಲು 2024 ರ ಅಂತ್ಯಕ್ಕೆ ವಿಮಾನ ಹಾರಾಟ ಆರಂಭ ಆಗಲಿದೆ ಎಂದು ಹೇಳಲಾಗಿತ್ತು. ಆದರೀಗ ಹಾಸನ ವಿಮಾನ ನಿಲ್ದಾಣದ ಕಾಮಗಾರಿಗಳನ್ನು 2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ.
ಹಾಸನ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿರುವ ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಕಾಮಗಾರಿಯ ಸಂಪೂರ್ಣ ವಿವರ ನೀಡಿದ್ದಾರೆ.
ಯೋಜನೆಗೆ ತಯಾರಿಸಿರುವ ಅಂದಾಜು ಮೊತ್ತ ಎಷ್ಟು ಎಂಬ ಸ್ವರೂಪ್ ಅವರ ಪ್ರಶ್ನೆಗೆ, ಲೋಕೋಪಯೋಗಿ ಇಲಾಖೆಯಿಂದ ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ವಿವರವಾದ ಯೋಜನಾ ವರದಿಯನ್ನು 220 ಕೋಟಿ ಮೊತ್ತದಲ್ಲಿ ತಯಾರಿಸಲಾಗಿತ್ತು. ಈ ಪೈಕಿ ಕಾಂಪೌಂಡ್ ಗೋಡೆ, ಅಪ್ರೋಚ್ ರಸ್ತೆ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಟವರ್ ಕಾಮಗಾರಿಗೆ19.67 ಕೋಟಿ, ರನ್ ವೇ, ಏಪ್ರಾನ್ ಟ್ರಾಕ್ಸಿ ವೇ, ಫೆರಿಫರಲ್ ರೋಡ್ ಮತ್ತು ಒಳಾವರಣ ರಸ್ತೆಗೆ 98.85 ಕೋಟಿ, ಟರ್ಮಿನಲ್ ಕಟ್ಟಡ, ಕಾರ್ಗೋ ಏಟಿಸಿ ಟವರ್, ಹ್ಯಾಂಗರ್, ಅಗ್ನಿಶಾಮಕ ಠಾಣೆಗೆ 94.23 ಕೋಟಿ, ನೀರು ಸರಬರಾಜು ಮತ್ತು ನೈರ್ಮಲೀಕರಣ, ವಿದ್ಯುತ್ ಮತ್ತು ಇತರೆ ಕಾಮಗಾರಿಗಳು 6.05 ಕೋಟಿ ಹಾಗೂ ಇತರೆ ವೆಚ್ಚಗಳು 7.20 ಕೋಟಿ ಎಂದು ಮಾಹಿತಿ ನೀಡಿದ್ದಾರೆ.
ಕಾಮಗಾರಿಯ ಅಂದಾಜು ಮೊತ್ತವೆಷ್ಟು, ಬಿಡುಗಡೆಯಾಗಿರುವ ಅನುದಾನ ಎಷ್ಟು ಎಂಬ ಇನ್ನೊಂದು ಪ್ರಶ್ನೆಗೆ, ಒಟ್ಟು ಅಂದಾಜು ಮೊತ್ತ 193.65:ಕೋಟಿಯಾಗಿದ್ದು, ಈವರೆಗೂ 164.70 ಕೋಟಿ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದುವರಿದು ಹಾಸನ ವಿಮಾನ ನಿಲ್ದಾಣದ ಮೂಲ ಉದ್ದೇಶ ಹಾಗೂ ಮೂಲ ನಕ್ಷೆಯಂತೆ ಎಲ್ಲಾ ಜಮೀನುಗಳನ್ನು ಸಂಪೂರ್ಣವಾಗಿ ಭೂ ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಜೊತೆಗೆ ಗಾಲ್ಫ್‌ಕೋರ್ಟ್, ಕಾರ್ಗೋ, ಎಂಆರ್‌ಒ ಸೌಲಭ್ಯ ಮತ್ತು ವಾಯುಯಾನ ತರಬೇತಿ, ಸಂಪರ್ಕರಸ್ತೆ ಮುಂತಾದ ಮೂಲ ಸೌಲಭ್ಯಗಳುಲ್ಲ ಹಾಸನ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಸ್ವರೂಪ್ ಪ್ರಶ್ನೆ ಮಾಡಿದರು. ಇದಕ್ಕೆ ಹಾಸನ ವಿಮಾನ ನಿಲ್ದಾಣವನ್ನು ಎಟಿಆರ್-32 ಮಾದರಿ ವಿಮಾನಗಳ ಕಾರ್ಯಾಚರಣೆಗೆ ಅನುವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ನಿಲ್ದಾಣಗಳನ್ನು A-320 ಮಾದರಿ ವಿಮಾನಗಳ ಕಾರ್ಯಾಚರಣೆಗೆ ವಿನ್ಯಾಸ ಮಾಡಲಾಗಿದೆ. ಅದರಂತೆ ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಸ್ತುತ ಯಾವ ಹಂತದಲ್ಲಿದೆ. ಯಾವ ಕಾಲಮಿತಿಯಲ್ಲಿ ಮುಗಿಯಲಿದೆ ಎಂಬ ಪ್ರಶ್ನೆಗೆ, ಪ್ಯಾಕೇಜ್ 1 ಆರ್ಥಿಕ ಪ್ರಗತಿ ಶೇ:62.26. ಹಾಗೂ ಭೌತಿಕ ಪ್ರಗತಿ ಶೇ 63.40.೬೩ ಮತ್ತು ಪ್ಯಾಕೇಜ್ 2 ರ ಆರ್ಥಿಕ ಪ್ರಗತಿ ಶೇ.೫.20, ಭೌತಿಕ ಪ್ರಗತಿ ಶೇ12.14. ರಷ್ಟು ಸಾಧಿಸಲಾಗಿದೆ. ಎಲ್ಲಾ ಕಾಮಗಾರಿಗಳನ್ನು ೨೦೨೪-೨೫ ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಜೊತೆಗೆ 536 ಎಕರೆ ಪ್ರದೇಶದಲ್ಲಿ ಮಾತ್ರ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
Hassan
ಜು.29ರಂದು ಜಿಲ್ಲಾ ಕ್ರೈಸ್ತ ಅಪೋಸ್ತಲರ ಒಕ್ಕೂಟದ ಉದ್ಘಾಟನೆ
ಅಧ್ಯಕ್ಷ ಲಿಂಗರಾಜು
ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ ೨೯ರ ಸೋಮವಾರದಂದು ಹಾಸನ ಜಿಲ್ಲಾ ಕ್ರೈಸ್ತ ಅಪೋಸ್ತಲರ ಒಕ್ಕೂಟ ಉದ್ಘಾಟನೆಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಲಿಂಗರಾಜು ಮತ್ತು ಕಾನೂನು ಸಲಹೆಗಾರರಾದ ವಿ.ಸಿ. ಧರ್ಮರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಜುಲೈ ೨೩ ರಂದು ಕಾನೂನಾತ್ಮಕವಾಗಿ ನಮ್ಮ ಜಿಲ್ಲಾ ಕ್ರೈಸ್ತ ಅಪೋಸ್ತಲರ ಒಕ್ಕೂಟ ನೋಂದಾವಣಿ ಆಗಿದ್ದು, ಬರುವ ಸೋಮವಾರ ನಮ್ಮ ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಸಮಸ್ತ ಜಿಲ್ಲೆಯ ಕ್ರೈಸ್ತ ಬಾಂಧವರು, ಫಾಸ್ಟರ್ ಗಳು, ಕ್ರೈಸ್ತ ನಾಯಕರು ಸೇರಿ ಎಲ್ಲಾರನ್ನು ಆಹ್ವಾನಿಸುತ್ತಿದ್ದೇವೆ. ಇದರ ಉದ್ದೇಶ ಏನೆಂದರೇ ಕ್ರೈಸ್ತರ ಸಂರಕ್ಷಣೆ, ಸಮುದಾಯದ ಹೇಳಿಗೆಗೆ ಹಾಗೂ ಸಮಾಜದ ಹಿತಾದೃಷ್ಠಿ ಕಾಪಾಡುವುದು ಮತ್ತು ರಾಜ್ಯದ ರಕ್ಷಣೆ ಕುರಿತು ಅಧ್ಯಾಯನ ಇಟ್ಟುಕೊಂಡು ಈ ಸಂಘಟನೆ ಆರಂಭ ಮಾಡಲಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಸ್ಥಳೀಯ ಶಾಸಕರಾದ ಹೆಚ್.ಪಿ. ಸ್ವರೂಪ್, ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಹವಾರು ಗಣ್ಯರಿಗೆ ಆಹ್ವಾನ ಮಾಡಲಾಗುತ್ತಿದೆ ಎಂದು ಹೇಳಿದರು. ನಮ್ಮ ಸಮುದಾಯದಲ್ಲಿ ಏನಾದರೂ ಸಮಸ್ಯೆ ಆದರೇ ಅವರೊಂದಿಗೆ ನಾವು ಇದ್ದು, ಬಗೆಹರಿಸಲು ಸೂಕ್ತ ಸಲಹೆ ಕೊಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ರೈಸ್ತ ಅಪೋಸ್ತಲರ ಒಕ್ಕೂಟದ ಕಾರ್ಯದರ್ಶಿ ರಜಿನಿಕಾಂತ್, ಸಹ ಕಾರ್ಯದರ್ಶಿ ಜೋಶುವಾ ಜೈ ಪಾಲ್, ಉಪಾಧ್ಯಕ್ಷ ಆನಂದ್, ವಿಜಯರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ವಾಟೆಹೊಳೆ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆ 600 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ.
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಮಳೆ ಅಬ್ಬರ ಜೋರಾಗಿದ್ದು ಸುಮಾರು 600 ಕ್ಯೂಸೆಕ್ ನೀರನ್ನ ಒಳಗೆ ಹೊರಬಿಡಲಾಯಿತು.
ಆಲೂರು ತಾಲೂಕಿನ ವಾಟೆಹೊಳೆ ಜಲಾಶಯವು 966.5 ಕ್ಯೂಸೆಕ್ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ 965.7 ಕ್ಯೂಸೆಕ್ ನೀರು ಭರ್ತಿಯಾಗಿದ್ದು. ನಿತ್ಯ ಸುಮಾರು 600 ಕ್ಯೂಸೆಕ್ ನಷ್ಟು
ಒಳ ಹರಿವು ಏರಿಕೆ ಕಂಡಿದೆ. ಇದೇ ರೀತಿ ಮುಂದುವರೆದ್ರೆ ತಿಂಗಳಾಂತ್ಯಕ್ಕೆ ಡ್ಯಾಂ ಭರ್ತಿಯಾಗುವುದು ಖಚಿತವಾದ ಹಿನ್ನೆಲೆಯಲ್ಲಿ ಶಾಲಾಶಯದಿಂದ 600ಕ್ಯೂಸೆಕ್ ನೀರನ್ನು ನದಿಗೆ ಹೊರಿಸಲಾಗಿದೆ.
Hassan
ಭಾರಿ ಮಳೆಗೆ ಮುಳುಗಿದ ಸಕಲೇಶಪುರದ ಅಜಾದ್ ರಸ್ತೆ
ಭಾರಿ ಮಳೆಗೆ ಮುಳುಗಿದ ಸಕಲೇಶಪುರದ ಅಜಾದ್ ರಸ್ತೆ
ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುತ್ತಿರುವ ತಹಸೀಲ್ದಾರ್ ಮೇಘನಾ.
ಸಕಲೇಶಪುರ : ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ತಾಲೂಕಿನಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.
ಭಾರಿ ಮಳೆ ಹೇಮಾವತಿ ನದಿಯ ನೀರಿನ ಮಟ್ಟ ಏರಿಕೆಯಾದ ತೊಡಗಿದ್ದು ಇದೀಗ ಪಟ್ಟಣದ ಆಜಾದ್ ರಸ್ತೆ ಸಂಪೂರ್ಣವಾಗಿ ಮುಳುಗಿ ಹೋಗಿದೆ.
ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಾಗದ ಹಿನ್ನೆಲೆಯಲ್ಲಿ ಅಜಾದ್ ರಸ್ತೆಯಲ್ಲಿ ನೀರು ಆವರಿಸಿಕೊಂಡಿರಲಿಲ್ಲ. ಇದೀಗ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಜಾದ್ ರಸ್ತೆಯ ಮನೆಗಳು, ಗ್ಯಾರೇಜ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದೆ. ಈ ಪ್ರದೇಶದಲ್ಲಿ ಜನರು ಓಡಾಡಲು ನೀರಿನ ಬೋಟ್ ಬಳಸಿ ತಿರುಗಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ನೀರಿನಲ್ಲಿ ಸಿಲುಕಿರುವ ನಿರಾಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕೆಲಸವನ್ನು ತಹಶೀಲ್ದಾರ್ ಮೇಘನ ಮಾಡುತ್ತಿದ್ದಾರೆ. ನೀರಿನ ಪ್ರಭಾವ ತಾಗುವವರೆಗೂ ನಿರಾಶಿಕರನ್ನು ಕಾಳಜಿ ಕೇಂದ್ರದಲ್ಲಿ ಆರೈಕೆ ಮಾಡಲು ತಾಲೂಕು ಆಡಳಿತ ಸಿದ್ದವಾಗಿದೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.