Mandya
ಅಪರಿಚಿತ ವಾಹನ ಡಿಕ್ಕಿ: ಫಿಲ್ಡ್ ಆಫೀಸರ್ ಸ್ಥಳದಲ್ಲೇ ಸಾವು
ಮದ್ದೂರು: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫೀಲ್ಡ್‌ಮನ್ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡಹೊಸಗಾವಿ ಗ್ರಾಮದ ಬಳಿ ಗುರುವಾರ ನಡೆದಿದೆ.
ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಫೀಲ್ಡ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್(40) ಎಂಬುವರೇ ಅಪಘಾತದಲ್ಲಿ ಮೃತರಾದ ವ್ಯಕ್ತಿಯಾಗಿದ್ದಾರೆ.

ಮಂಡ್ಯ ನಗರದ ಚಾಮುಂಡೇಶ್ವರಿನಗರ ಬಡಾವಣೆಯಲ್ಲಿ ವಾಸವಾಗಿದ್ದ ಮಂಜುನಾಥ್ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ವಾಪಸ್ಸು ಬರುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ ಮಂಜುನಾಥ್ ಅವರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya
“ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಕೆ.ಟಿ. ಚಂದು”
ಮದ್ದೂರು: ಮಕ್ಕಳಿಗೆ ಕೇವಲ ಪುಸ್ತಕ ಮತ್ತು ಅಂಕಗಳಿಗೆ ಸೀಮಿತವಾದ ಶಿಕ್ಷಣ ನೀಡದೆ ಉತ್ತಮ ವ್ಯಕ್ತಿತ್ವ, ಯೋಜನಾ ಶಕ್ತಿ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸುವಂತಹ ಶಿಕ್ಷಣವನ್ನು ನೀಡಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಕೆ . ಟಿ. ಚಂದು ಹೇಳಿದರು.
ನಗರದ ಡಾ. ಎಚ್. ಕೆ. ಮರಿಯಪ್ಪ ಕಾನ್ವೆಂಟಿನಲ್ಲಿ ಎಂ.ಹೆಚ್ .ಚನ್ನೇಗೌಡ ವಿದ್ಯಾ ಸಂಸ್ಥೆಯಡಿ ಎಚ್. ಕೆ .ವೀರಣ್ಣಗೌಡರ ಮಡದಿ ತಾಯಮ್ಮ ವೀರಣ್ಣಗೌಡರ ಹೆಸರಿನಲ್ಲಿ ನೂತನವಾಗಿ ಪ್ರಾರಂಭವಾದ” ತಾಯಿ ನೆಸ್ಟ್” ಶಿಶುವಿಹಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಶೈಕ್ಷಣಿಕ ಜ್ಞಾನದಷ್ಟೇ, ಮೌಲ್ಯ ಶಿಕ್ಷಣವು ಅಗತ್ಯವಾಗಿದ್ದು ಒಳ್ಳೆಯ ನಡತೆ ಮತ್ತು ಮಾನವೀಯತೆಯನ್ನು ಬೆಳೆಸುವಂತಹ ಪರಿಸರದೊಂದಿಗೆ ಶಿಕ್ಷಣವನ್ನು ನೀಡುವುದು ಅನಿವಾರ್ಯ ವಾಗಿದೆ ಎಂದರು.
ಬಾಲ್ಯದಿಂದಲೇ ಮಕ್ಕಳಲ್ಲಿ ಪ್ರಾಮಾಣಿಕತೆ, ದಯೆ, ಸಹಾನುಭೂತಿ ಮತ್ತು ಗೌರವದಂತಹ ಗುಣಗಳನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶವಾದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ ಬೆಳೆದು ಸಾಮಾಜಿಕ ಜವಾಬ್ದಾರಿಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್ ಮಾತನಾಡಿ ಆಧುನಿಕ ಒತ್ತಡದ ಜೀವನದಿಂದಾಗಿ ಪೋಷಕರು ಮಕ್ಕಳ ಸಾಮಾಜಿಕ ಜೀವನದ ಕಡೆಗೆ ಗಮನ ಕೊಡುವುದು ಕಡಿಮೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕರು ಕಲಿಕೆಯ ಜೊತೆಯಲ್ಲಿ ಮಕ್ಕಳು ಕೋಪ, ಭಯ, ಒತ್ತಡದಂತ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುವಂತಹ ಮನೋಭಾವನೆಯನ್ನು ಬೆಳೆಸುವ ಜೊತೆಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವ ಜವಾಬ್ದಾರಿ ಇದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಟಿ. ಹೇಮಾವತಿ ಹಾಗೂ ಬಿಇಓ ಧನಂಜಯ ರವರನ್ನು ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ. ಹೆಚ್ . ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ. ಸ್ವರೂಪ ಚಂದ್, ಕಾರ್ಯದರ್ಶಿ ಸಿ, ಅಪೂರ್ವಚಂದ್ರ ನಿರ್ದೇಶಕ ಪ್ರೊ. ಮಲ್ಲಿಕಾರ್ಜುನ್, ಶಾಂತಾ ಚಂದು, ಕವಿತಾ ಅಪೂರ್ವ ಚಂದು, ಪ್ರಾಂಶುಪಾಲರುಗಳಾದ ಯು.ಎಸ್ ಶಿವ ಕುಮಾರ್, ಎಸ್. ಪಿ. ಕಿರಣ್, ಮುಖ್ಯ ಶಿಕ್ಷಕರಾದ ಎನ್. ಕೃಷ್ಣ, ಎಂ.ಟಿ. ಚಂದ್ರಶೇಖರ್, ವರದರಾಜು ಆಡಳಿತ ಅಧಿಕಾರಿ ಯು.ಎಸ್. ರವಿ ,ಹರೀಶ, ಚೆನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.
Mandya
ಮುಸ್ಲೀಂ ಬಾಂಧವರಿಂದ ಬಕ್ರೀದ್ ಆಚರಣೆ
ಮಂಡ್ಯ: ನಗರದ ಸಂತೆ ಮೈದಾನ ಬಳಿಯ ಈದ್ಗಾ ಮೈದಾನ ಮಸೀದಿಯ ಮುಂಭಾಗದಲ್ಲಿ ಮುಸಲ್ಮಾನ ಭಾಂದವರು ಪ್ರಾರ್ಥನೆ ಸಲ್ಲಿಸಿ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.


ತ್ಯಾಗ, ಬಲಿದಾನ ಮತ್ತು ಸಹೋದರತ್ವದ ಪ್ರತೀಕವಾದ ಪವಿತ್ರ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಆಲಿಂಗನೆ ಮೂಲಕ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
Mandya
ಸಾಧನೆಯ ಸಂಕಲ್ಪ ಮಾಡಿದಾಗ ದೇಹದಲ್ಲಿ ಧನಾತ್ಮಕ ಜೀನ್‌ಗಳ ಉತ್ಪತ್ತಿ : ಯೋಗಿನಿ ಕಾಲೀಜಿ
ಮಂಡ್ಯ: ಸಾಧನೆಯ ಸಂಕಲ್ಪ ಮಾಡಿದಾಗ ದೇಹದಲ್ಲಿ ಉತ್ಪತ್ತಿಯಾಗುವ ಋಣಾತ್ಮಕ ಜೀನ್‌ಗಳು ತೊಲಗಿ ಧನಾತ್ಮಕ ಜೀನ್‌ಗಳ ಉತ್ಪತ್ತಿಯಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಮೆರಿಕಾ ಕ್ಯಾಲಿಫೋರ್ನಿಯಾದ ವ್ಯಾಸ ಭಾರತಿ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಯೋಗಿನಿ ಕಾಲೀಜಿ ತಿಳಿಸಿದರು.
ನಗರದ ಪತ್ರಕರ್ತರೊಂದಿಗೆ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ ಅವರು, ಧ್ಯಾನಮಯ ಪ್ರವಾಹದಲ್ಲಿ ದೇಹ, ಉಸಿರು ಮತ್ತು ಮನಸ್ಸನ್ನು ಒಂದಾಗಿಸುವ ಸಮಗ್ರ ಯೋಘಪಥವೇ ತ್ರೈಯೋಗ, ಕ್ರಿಯಾವತಿ ಸಿದ್ಧಿಯ ಮೂಲಕ ೧೩೦೦ಕ್ಕೂ ಹೆಚ್ಚು ಸಂಪೂರ್ಣ ಯೋಗ ಪದ್ಧತಿಗಳು ರೂಪಿತಗೊಂಡಿವೆ ಎಂದರು.
ನಿಯಮಿತ ಯೋಗಾಭ್ಯಾಸದಿಂದ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ, ದೈಹಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ನೆಲಯಲ್ಲಿ ಒತ್ತಡ ಮುಕ್ತ ಜೀವನ ಸಾಧ್ಯ. ಆಧುನಿಕ ಶಿಕ್ಷಣದ ಜತೆಗೆ ಯೋಗಜ್ಞಾನ, ಶಿಸ್ತು, ಕರುಣೆ ಮತ್ತು ಆತ್ಮಜಾಗೃತಿಯನ್ನು ಸಂಯೋಜಿಸಿದಾಗ ಆಂತರಿಕ ಸಮತೋಲನದೊಂದಿಗೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ವ್ಯಾಸ ಭಾರತಿ ತ್ರೈಯೋಗ ವಿಶ್ವವಿದ್ಯಾಲಯ ಕೇವಲ ವಿದ್ಯಾಸಂಸ್ಥೆಯಲ್ಲ ಪರಿವರ್ತನಾತ್ಮಕ ಶಿಕ್ಷಣದ ಕೇಂದ್ರ, ಜ್ಞಾನದ ಜತೆಗೆ ಪ್ರಜ್ಞೆಯನ್ನು ಬೆಳೆಸುವುದು ಇದರ ಉದ್ದೇಶ. ಜಾಗೃತಿ, ಸರಳತೆ, ಕೃತಜ್ಞತೆ ಮತ್ತು ಸರ್ವ ಜೀವಿಗಳ ಮೇಲಿನ ಪ್ರೀತಿಯಿಂದ ಬಹುಕಬೇಕು. ಉಸಿರಿನ ಜಾಗೃತಿ ಮತ್ತು ಧ್ಯಾನವು ವಿದ್ಯಾರ್ಥಿಗಳ ವಿಚಲತೆ ಮಧ್ಯೆ ಏಕಾಗ್ರತೆಯನ್ನು ಒದಗಿಸುತ್ತದೆ ಎಂದು ನುಡಿದರು.
ಈ ವೇಳೆ ವಿಶ್ವವಿದ್ಯಾಲಯದ ಉಪಕುಲಾಧಿಪತಿ ರಾಘವೇಂದ್ರ ಪೈ, ಬೇಬಿಮಠದ ಶ್ರೀ ತ್ರಿನೇಂತ್ರ ಮಹಂತ ಶಿವಯೋಗಿ ಸ್ವಾಮೀಜಿ ಭಾಗವಹಿಸಿದ್ದರು.
-
Special13 hours agoಗೃಹಲಕ್ಷ್ಮಿ ಯೋಜನೆಯಲ್ಲಿ 1.04 ಲಕ್ಷ ಅನರ್ಹ ಫಲಾನುಭವಿಗಳ ಪತ್ತೆ: ಸರ್ಕಾರದಿಂದ ಪರಿಶೀಲನೆ!
-
Politics7 hours agoಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ಸಲ್ಲಿಕೆ: ಸಿದ್ದರಾಮಯ್ಯ
-
Kodagu8 hours agoಗುಡ್ಲೂರು ಗ್ರಾಮದಲ್ಲಿ ಆರೋಗ್ಯ ಜಾಗೃತಿ ಹಾಗೂ ತಪಾಸಣಾ ಶಿಬಿರ
-
Hassan4 hours agoಹಾಸನ ಜಿಲ್ಲೆಯಲ್ಲಿ ಭಾರೀ ಮಳೆ: ಕೆರೆ–ಕಟ್ಟೆಗಳು ತುಂಬಿ ರೈತರಲ್ಲಿ ಸಂತಸ
-
Chikmagalur14 hours agoತೋಟದ ಗೋಡೋನ್ನಿಂದ ₹2.5 ಲಕ್ಷ ಮೌಲ್ಯದ 7 ಅಡಿಕೆ ಮೂಟೆ ಕಳ್ಳತನ
-
State3 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
National2 hours agoಈ ಬಾರಿ ಕೋಲ್ಕತ್ತಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
-
Politics2 hours agoಜೈಪುರದಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
