Connect with us

Chikmagalur

ಹಾಸ್ಟೆಲ್ ಸಮಿತಿ ಕಾನೂನುಬಾಹಿರವಾಗಿದೆ : ಸೈಯದ್ ಜಮೀಲ್ ಅಹ್ಮದ್

Published

on

ಚಿಕ್ಕಮಗಳೂರು : ನಗರದ ಬೇಲೂರು ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ ಸಮಿತಿಯು ಕಾನೂನುಬಾಹಿರವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಕೌನ್ಸಿಲ್ ಟ್ರಸ್ಟ್ ನ ಅಧ್ಯಕ್ಷ ಸಯ್ಯದ್ ಜಮೀಲ್ ಅಹ್ಮದ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ ಸಮಿತಿಯ ಸದಸ್ಯರು ಕಾನೂನುಬಾಹಿರವಾಗಿ ಸಾಹುಕಾರ್ ಮೊಹಮ್ಮದ್ ಹುಸೇನ್ ಮೆಮೋರಿಯಲ್ ಇನ್ಸ್ಟಿಟ್ಯೂಷನ್ ಮಾಡಿಕೊಂಡಿದ್ದು ಖಂಡನೀಯವಾಗಿದೆ ಎಂದರು.

ಈ ಹಿಂದೆ ಹಾಸನದ ದಾನಿಗಳಾದ ಮೊಹಮ್ಮದ್ ಹುಸೇನ್ ರವರು ಈ ಜಾಗವನ್ನು ಶಾಲೆ, ಆಸ್ಪತ್ರೆ, ಹಾಸ್ಟೆಲ್ ಮತ್ತು ಮಸೀದಿಗಾಗಿ ನಿವೇಶನವನ್ನು ದಾನ ನೀಡಿದ್ದು. ಇದನ್ನು ವಕ್ಫ್ ಬೋರ್ಡ್ ಸಮಿತಿಯವರು ಇದು ವಕ್ಫ್ ಬೋರ್ಡ್ ಸ್ವಾಧೀನದ ಜಾಗವೆಂದು ಕಬಳಿಸಿ, ಇತ್ತೀಚೆಗೆ ಇಲ್ಲಿ ಒಂದು ಅವೈಜ್ಞಾನಿಕ ಟ್ರಸ್ಟ್ ಮಾಡಿ ಹಾಸ್ಟೆಲ್ ಉಸ್ತುವಾರಿಯನ್ನು ಅವರಿಗೆ ನೀಡಿರುತ್ತಾರೆ ಎಂದು ದೂರಿದ್ದಾರೆ.

ಇದು ವಕ್ಫ್ ಬೋರ್ಡ್ ಜಾಗವೇ ಆಗಿದ್ದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ವಕ್ಫ್ ಬೋರ್ಡ್ ನವರು ಯಾವುದೇ ಖಾಸಗಿ ಆಸ್ತಿಗಳಿಗೆ ಇದರ ಉಸ್ತುವಾರಿ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಬಣಕಲ್ ಶ್ಯಾಮಣ್ಣ ವಿಧಿವಶ*

Published

on


:ಮೂಡಿಗೆರೆ : ಬಣಕಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಣಕಲ್ ಶ್ಯಾಮಣ್ಣ ಇಂದು ಬೆಳಗ್ಗೆ 7. 00 ಗಂಟೆಗೆ ವಿಧಿವಶರಾಗಿದ್ದಾರೆ.

ಶ್ಯಾಮಣ್ಣ ಮೂಡಿಗೆರೆ ತಾಲೋಕಿನ ಬಣಕಲ್ ಹೋಬಳಿ ಬಿಜೆಪಿ ಪಕ್ಷದಿಂದ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಸಂಜೆ 7:00 ಗಂಟೆ ಸಮಯದಲ್ಲಿ ಬಣಕಲ್ ಪಟ್ಟಣದಲ್ಲಿ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಸ್ಥಳೀಯ ಖಾಸಗಿ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕೂಡಲೇ ತಾಲೂಕು ಆಸ್ಪತ್ರೆಗೆ ರವಾನಿಸಿ ಅಲ್ಲಿಂದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲೂ ಕೂಡ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಹಾಸ್ಪಿಟಲ್ ಗೆ ಕರೆದೊಯ್ಯಲಾಗಿತ್ತು ಆದರೆ ವಿಧಿ ಆಟ ನಿಮಾನ್ಸ್ ತಲುಪಿದ ಕೂಡಲೆ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಶ್ಯಾಮಣ್ಣ ಅವರು ಭಾರತೀಯ ಜನತಾ ಪಾರ್ಟಿ ಪಕ್ಷದಲ್ಲಿ ಸುಧೀರ್ಘ ಅನನ್ಯ ಸೇವೆ ಸಲ್ಲಿಸಿದ್ದು ಉನ್ನತ ವ್ಯಾಸಂಗವನ್ನು ಕೂಡ ಮಾಡಿದ್ದರು ಶಾಮಣ್ಣ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಚಿಕ್ಕಮಗಳೂರಿನ ಸಂಗಮೇಶ್ವರಪೇಟೆಯಲ್ಲಿ 2004ನೇ ಸಾಲಿನಲ್ಲಿ ಪ್ರಾಥಮಿಕ ಶಿಕ್ಷಣ ವರ್ಗವನ್ನು ಮುಗಿಸಿದ್ದರು ಎಲ್ಲಾ ಸಂಘ ಸಂಸ್ಥೆಗಳ ಸಕ್ರಿಯವಾಗಿ ತೊಡಗಿಕೊಂಡಿದ್ದರು ಹಾಗೂ ಅವರು ಜಿಲ್ಲಾ ಪಂಚಾಯತ್ ಸದಸ್ಯರಾದ ಅವಧಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರು ಕೂಡ ಆಗಿದ್ದರು. ಬಣಕಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ, ಬಣಕಲ್ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸಿದರು. ಶಾಮಣ್ಣ ಅವರು ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಹೊಂದಿದ್ದರು.

ಶಾಮಣ್ಣ ಅವರ ಮೃತ ದೇಹವು ಇಂದು ಸ್ವಗ್ರಾಮಕ್ಕೆ ತರಲಾಗುತ್ತಿದ್ದು ಇಂದು ಮಧ್ಯಾಹ್ನ 3 ಗಂಟೆಗೆ ಬಣಕಲ್ ಸಮೀಪದ ಸಬ್ಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದ್ದು ಮೃತ ಶ್ಯಾಮಣ್ಣ ಅಪಾರ ಬಂಧು ಬಳಗವನ್ನು ಅಗಲಿದ್ದು ಇವರ ವಿಧಿವಶಕ್ಕೆ ಕಂಬನಿ ಮಿಡಿದಿದೆ.

Continue Reading

Chikmagalur

13 ವರ್ಷದ ಬಾಲಕಿಯ ಹತ್ಯೆ ಪ್ರಕರಣ ಆರೋಪಿ ಬಂಧನ- ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ

Published

on

ಮಂಗಳೂರು: 13 ವರ್ಷದ ಬಾಲಕಿಯ ಹತ್ಯೆ ಪ್ರಕರಣ ಆರೋಪಿ ಬಂಧನ- ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ

ಮಂಗಳೂರು: ಮಂಗಳವಾರ ಜೋಕಟ್ಟೆಯಲ್ಲಿ‌13 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ವಿರೋಧ ವ್ಯಕ್ತಪಡಿಸಿದಾಗ ಆತ ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

 

ಬೆಳಗಾವಿ ಜಿಲ್ಲೆ ಮೂಲದ ಪ್ರಸ್ತುತ ಮಂಗಳೂರಿನ ತೋಕೂರು ಗ್ರಾಮದ ಜೋಕಟ್ಟೆ ಬಾಡಿಗೆ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ(51) ಬಂಧಿತ ಆರೋಪಿ.

ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸ್ತವ್ಯವಿದ್ದರು. ಕೈನೋವಿನ ಚಿಕಿತ್ಸೆಗೆಂದು ಬೆಳಗಾವಿಯಿಂದ ಬಂದಿದ್ದ ಅವರ ಸಹೋದರನ ಪುತ್ರಿ 13ವರ್ಷದ ಬಾಲಕಿ ಕಳೆದ 4ದಿನಗಳಿಂದ ಅವರ ಮನೆಯಲ್ಲಿ ವಾಸ್ತವ್ಯವಿದ್ದಳು. ಆಗಸ್ಟ್ 6ರಂದು ಎಂದಿನಂತೆ ಮನೆಯಲ್ಲಿದ್ದ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 10.30ರ ವೇಳೆಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ಹೇಳಿದ್ದಾರೆ. ಅದರಂತೆ ಅವರು ಫೋನ್ ಕೊಡಲು ಬಂದಾಗ ಬಾಡಿಗೆ ಮನೆಯಲ್ಲಿ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಕಂಡುಬಂದಿದೆ. ವಿಚಾರ ತಿಳಿದು ಹನುಮಂತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫಕೀರಪ್ಪನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಫಕೀರಪ್ಪ ಕಳೆದ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಮೃತ ಬಾಲಕಿಯ ಚಿಕ್ಕಪ್ಪನಿಗೆ ಪರಿಚಿತನಾಗಿದ್ದ. ಆದ್ದರಿಂದ ಜೋಕಟ್ಟೆಯ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಅದೇ ರೀತಿ ಆಗಸ್ಟ್ 6ರಂದು ಬೆಳಗ್ಗೆ ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಬಂದಿದ್ದಾನೆ‌. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

Continue Reading

Chikmagalur

ಮಲೆಮನೆ: ಮರ ಬಿದ್ದು ಮನೆ ಜಖಂ.

Published

on

ಕೊಟ್ಟಿಗೆಹಾರ: ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಮರವೊಂದು ಬಿದ್ದು ಮನೆ ಜಖಂ ಗೊಂಡಿರುವ ಘಟನೆ ನಡೆದಿದೆ.
ಬಾಳೂರು ಹೋಬಳಿಯ ಜಾವಳಿ ಸಮೀಪದ ಮಲೆಮನೆ ಗ್ರಾಮದ ಸುಧಾಕರ್ ಎಂಬವರ ಮನೆ ಮೇಲೆ ಬುಧವಾರ ಮುಂಜಾನೆ ಎಲ್ಲರೂ ಮಲಗಿದ್ದ ವೇಳೆ ಬೃಹತಾಕಾರದ ಬೈನೇಮರ ಬಿದ್ದು ಮನೆಯ ಮೇಲ್ಛಾವಣಿ ಹೆಂಚುಗಳು ಪುಡಿಯಾಗಿ ಹಾನಿ ಸಂಭವಿಸಿದೆ.ಅದೃಷ್ಟವಶಾತ್ ಮಲಗಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಪರಿಹಾರಕ್ಕೆ ಒತ್ತಾಯ: ಸುಧಾಕರ್ ಅವರು ಬಡ ಕುಟುಂಬದಿಂದ ಬಂದಿದ್ದು ಮೂಲತಃ ಕೃಷಿಕರಾಗಿದ್ದಾರೆ.ಬುಧವಾರ ಮರ ಬಿದ್ದು ಮನೆ ಕೂಡ ಜಖಂಗೊಂಡಿದೆ.ಮಳೆಗಾಲವಾದ್ದುದರಿಂದ ಮನೆಯು ಶಿಥಿಲವಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು ಮನೆ ದುರಸ್ತಿಗೆ ಪರಿಹಾರ ನೀಡಬೇಕೆಂದು ಸುಧಾಕರ್ ಆಗ್ರಹಿಸಿದ್ದಾರೆ

Continue Reading

Trending

error: Content is protected !!