Chikmagalur
ಹೊಸ ವರ್ಷಾಚರಣೆ ನಿಯಮ ಮೀರಿದರೆ ಕಾನೂನು ಕ್ರಮ : ವಿಕ್ರಮ ಅಮಟೆ ಖಡಕ್ ವಾರ್ನಿಂಗ್

ಚಿಕ್ಕಮಗಳೂರು: ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಿಯಮ ಪಾಲಿಸದಿರುವ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ. ವಿಕ್ರಮ ಅಮಟೆ ವಾರ್ನಿಂಗ್ ಕೊಟ್ಟಿದ್ದಾರೆ.
ಶನಿವಾರ ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮಾಲೀಕರಿಗೆ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ಹೊಸ ವರ್ಷದ ದಿನ ರಾತ್ರಿ ಜಿಲ್ಲೆಯಲ್ಲಿರುವ ಎಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಲಿದ್ದು. ಅಂತಹ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೋಂ ಸ್ಟೇಗಳಲ್ಲಿ ಹೊಸ ವರ್ಷದ ಆಚರಣೆ ನೆಪದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಾಗಲಿ ಅಥವಾ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿ ಧ್ವನಿ ವರ್ಧಕ ಬಳಕೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದರು. ಕಾನೂನು ಬಾಹಿರವಾಗಿ ಹೋಂಸ್ಟೇ ಕಾರ್ಯನಿರ್ವಹಿಸುತ್ತಿದ್ದರೆ ಇಲಾಖೆಯ ಗಮನಕ್ಕೆ ತರಬೇಕು. ಹೊಸ ವರ್ಷದ ಆಚರಣೆಯನ್ನು ೧೨ ಗಂಟೆಗೆ ಮುಕ್ತಾಯ ಗೊಳಿಸುವಂತೆ ಎಚ್ಚರಿಸಿದರು.
ಇನ್ನೂ ಕುಡಿದು ವಾಹನ ಚಾಲನೆ ಮಾಡುವವರು, ಅತಿ ವೇಗದಿಂದ ವಾಹನ ಚಾಲನೆ ಮಾಡುವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ ಅವರು ಹೋಂ ಸ್ಟೇ ಮತ್ತು ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ, ಡ್ರಗ್ಸ್ ಇತರೆ ಗುಂಪುಗಾರಿಕೆ ಡ್ಯಾನ್ಸ್ ನಡೆವುದನ್ನು ನಿಷೇಧಿಸಲಾಗಿದೆ ಎಂದರು.
ನೈತಿಕ ಪೊಲೀಸ್ ಗಿರಿಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ನಿಮಗೆ ಯಾರಾದರೂ ಪ್ರಶ್ನಿಸಿದ್ದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು, ಹೋಂ ಸ್ಟೇಗೆ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಎಂದರು.
ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ರಕ್ಷಣೆ ನೀಡುವುದು ನಿಮ್ಮ ಹೋಂ ಸ್ಟೇ, ರೇಸಾರ್ಟ್ ಮಾಲೀಕರ ಆದ್ಯ ಕರ್ತವ್ಯ ಎಂದು ಎಚ್ಚರಿಸಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿಗಳಾದ ಕೃಷ್ಣಮೂರ್ತಿ, ಯೋಗೀಂದ್ರನಾಥ್, ಡಿವೈಎಸ್ಪಿ ಶೈಲೇಂದ್ರ ಸೇರಿದಂತೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಇದ್ದರು .
Chikmagalur
ವಶಿಷ್ಠ ತೀರ್ಥದಲ್ಲಿ ಮುಳುಗಿ ರಾಜಸ್ಥಾನ ಮೂಲದ ಇಬ್ಬರು ಸಾ*ವು

ಕಳಸ : ಭದ್ರಾ ನದಿಯ ವಶಿಷ್ಠ ತೀರ್ಥ ಸಮೀಪ ರಾಜಸ್ಥಾನ ಮೂಲದ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತರಾದವರು ಜಗದೀಶ್(23) ಚೋಟಾ ಸಿಂಗ್(23) ಎಂದು ಗುರುತಿಸಲಾಗಿದೆ. ರಾಜಸ್ಥಾನದ ಇವರು ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಹನ್ನೆರಡು ಜನ ಹೋಳಿ ಹಬ್ಬದ ಎರಡು ದಿನದ ರಜೆಯಲ್ಲಿ ಕಳಸ ಕಡೆ ಪ್ರವಾಸಕ್ಕೆ ಬಂದಿದ್ದಾರೆ.
ಶನಿವಾರ ಕಳಸಕ್ಕೆ ಬಂದವರು ಇಲ್ಲಿ ಸ್ಥಳೀಯ ಪ್ರವಾಸಿ ಕೇಂದ್ರಗಳಿಗೆ ಬೇಟಿ ನೀಡಿ ಭಾನುವಾರ ಬೆಳಿಗ್ಗೆ ಮತ್ತೆ ಬೆಂಗಳೂರು ಕಡೆ ಪ್ರಯಾಣ ಬೆಳೆಸುವಾಗ ವಶಿಷ್ಠ ತೀರ್ಥದಲ್ಲಿರುವ ತೂಗು ಸೇತುವೆಯನ್ನು ನೋಡಲು ಭದ್ರಾ ನದಿಗೆ ಬಂದಿದ್ದಾರೆ.ಸ್ವಲ್ಪ ಜನ ತೂಗು ಸೇತುವೆ ನೋಡಲು ತೂಗು ಸೇತುವೆಯತ್ರ ಹೋದರೆ ಇಬ್ಬರು ಮಾತ್ರ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾರೆ.
ಆದರೆ ಇಬ್ಬರು ಈಜು ಬರದೆ ಇರುವ ಕಾರಣ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಸ್ಥಳಕ್ಕೆ ಕಳಸ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.ಎಲ್ಲಾ ಹನ್ನೆರಡು ಜನ ಯುವಕರಾಗಿದ್ದು, ಹತ್ತಿರದ ಸಂಭಂದಿಕರೇ ಆಗಿದ್ದಾರೆ.
Chikmagalur
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ

ಚಿಕ್ಕಮಗಳೂರು
ಜಿಲ್ಲಾ ಪೊಲೀಸ್ ದ್ವಿಚಕ್ರ ವಾಹನ ಕಳ್ಳತನ ಆರೋಪಿಯನ್ನು ಬಂಧಿಸಿ ಒಟ್ಟು 11 ದ್ವಿ ಚಕ್ರ ವಾಹನಗಳ ಅಂದಾಜು ಮೌಲ್ಯ 10,50,000/- (ಹತ್ತು ಲಕ್ಷ ಐವತ್ತೂ ಸಾವಿರ) ರೂ ಗಳ ಸ್ವತ್ತು ವಶ
ದಿ: 22/01/2025 ರಂದು ಪಿರ್ಯಾದುದಾರರಾದ ಶ್ರೀ ನಯಾಜ್ ಪಾಷ ರವರು ಠಾಣೆಗೆ ಹಾಜರಾಗಿ ತಮ್ಮ KA18 ಎಚ್ 1752 ನಂಬರಿನ ಹೊಂಡಾ ಆಕ್ಟಿವಾ ಸ್ಕೂಟಿ ದ್ವಿ ಚಕ್ರ ವಾಹನವನ್ನು ದಿ:18/01/2025 ರಂದು ರಾತ್ರಿ 8.00 ಗಂಟೆಯಲ್ಲಿ ಚಿಕ್ಕಮಗಳೂರು ನಗರ ಜಾಮೀಯ ಮಸೀದಿ ಉರ್ದು ಶಾಲೆಯ ಬಳಿ ನಿಲ್ಲಿಸಿ ನಮಾಜ್ ಗೆ ಹೋಗಿ ವಾಪಸ್ಸು ರಾತ್ರಿ 9.40 ಗಂಟೆಗೆ ಬಂದು ನೋಡಲಾಗಿ ಇರಲಿಲ್ಲ ನಂತರ ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಸಿಗದ ಕಾರಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಮೊ.ನಂ. 15/2025 ಕಲಂ 303 (1) ಬಿ ಎನ್ ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿರುತ್ತೆ.
ದಿ: 14/03/2025 ರಂದು ಡಾ.ವಿಕ್ರಮ್ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಶ್ರೀ ಶೈಲೇಂದ್ರ ಪೋಲಿಸ್ ಉಪಾಧೀಕ್ಷಕರು ಚಿಕ್ಕಮಗಳೂರು ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಅಭಯ್ ಪ್ರಕಾಶ್ ಸೋಮನಾಳ್ ಪೊಲೀಸ್ ನಿರೀಕ್ಷಕರು, ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ಶಂಭುಲಿಂಗನಗೌಡ ಪೊಲೀಸ್ ಉಪ ನಿರೀಕ್ಷಕರು ಶ್ರೀ ಸತೀಶ್ ಕೆ ಎಸ್ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳಾದ ಸಿ ಹೆಚ್.ಸಿ 27 ನಂಜಪ್ಪ ಹೆಚ್ ಎಸ್ ಸಿ ಹೆಚ್ ಸಿ 78 ದಿನೇಶ್, ಸಿಪಿಸಿ 161 ರವ, ಸಿಪಿಸಿ 292 ಪ್ರದೀಪ ಹೆಚ್.ಜಿ ಸಿಪಿಸಿ 315 ನವೀನ ಎ.ಎಸ್, ಸಿಪಿಸಿ 175 ಮಂಜುನಾಥ್ ನಾಯ್ಕ, ಸಿಪಿಸಿ 67 ಮಹಮ್ಮದ್ ರಪೀಕ್ ಘಾಟ್ಟಿ, ಎಹೆಚ್ಸಿ 67 ಮುಸ್ತಾಪ್ ಹಾಗೂ ತಾಂತ್ರಿಕ ಸಿಬ್ಬಂದಿ ಎಪಿಸಿ 233 ಅಬ್ದುಲ್ ರಬ್ಬಾನಿ ರವರನ್ನೊಳಗೊಂಡ ತಂಡ ಈ ಮೇಲ್ಕಂಡ ಪ್ರಕರಣದಲ್ಲಿ ಆರೋಪಿ ಸೈಯದ್ ಇಮ್ಹಾದ್ ಬಿನ್ ಸೈಯದ್ ಆಸೀಪ್ 23 ವರ್ಷ, ಮುಸ್ಲಿಂ ಜಾತಿ, ಗ್ಲಾಸ್ ಪಿಟ್ಟಿಂಗ್ ಕೆಲಸ, ವಾಸ 80 ಅಡಿ ರಸ್ತೆ, ಹುಣಸಿನಕೆರೆ ಲೇಔಟ್, ಹಾಸನ ಟೌನ್ ಇತನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ಆರೋಪಿತನಿಂದ ಈ ಕೆಳಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
1] KA18 EC1752 ಹೊಂಡಾ ಆಕ್ಟಿವ್
2] KA 18 EB1622 ಹೋಂಡಾ ಡಿಯೋ
3] KA 18 EC 5605 ಹೋಂಡಾ ಡಿಯೋ
4] KA18 ED 8981 ಹೋಂಡಾ ಡಿಯೋ
5] KA 66 H 2515 ಹೋಂಡಾ ಡಿಯೋ
6] KA18 EJ 1919 ಹೋಂಡಾ ಆಕ್ಸಿಸ್ 125
7] KA 45 EC 8433 ಹೋಂಡಾ ಆಕ್ಸಿಸ್ 125
8] KA 12 Q 5561 ಹೊಂಡಾ ಡಿಯೋ
9] KA 46 K 3387 ಹೋಂಡಾ ಡಿಯೋ
10] KA 05 KE 3049 ಹೋಂಡಾ ಡಿಯೋ
11] KA02 JR 8877 ಹೋಂಡಾ ಡಿಯೋ
ಒಟ್ಟು 11 ದ್ವಿ ಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ.
ಮೇಲ್ಕಂಡ ಅಮಾನತ್ತುಪಡಿಸಿಕೊಂಡ ದ್ವಿ ಚಕ್ರ ವಾಹನಗಳಲ್ಲಿ 06 ದ್ವಿ ಚಕ್ರ ವಾಹನಗಳು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಉಳಿದ ದ್ವಿ ಚಕ್ರ ವಾಹನಗಳಲ್ಲಿ ಒಂದು ಬೆಂಗಳೂರು ನಗರ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಉಳಿದ 04 ದ್ವಿ ಚಕ್ರ ವಾಹನಗಳನ್ನು ಬೆಂಗಳೂರು ನಗರದಲ್ಲಿ 01 ಮೈಸೂರು ನಗರದಲ್ಲಿ 01 ಹಾಸನದ ಹೊಳೆನರಸೀಪುರ ಟೌನ್ ನಲ್ಲಿ 01 ಹಾಗೂ ಬೇಲೂರು ನಗರದಲ್ಲಿ 01 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದ್ದಾಗಿರುತ್ತೆ.
ಮೇಲ್ಕಂಡ ಒಟ್ಟು 11 ದ್ವಿ ಚಕ್ರ ವಾಹನಗಳ ಅಂದಾಜು ಮೌಲ್ಯ 10,50,000/- (ಹತ್ತು ಲಕ್ಷ ಐವತ್ತೂ ಸಾವಿರ) ರೂ ಗಳಾಗಿರುತ್ತದೆ.
ಸದರಿ ಆರೋಪಿಯನ್ನು ದಿ:15/03/2025 ರಂದು ಮಾನ್ಯ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಘನ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿ ಆತನಿಂದ ಕದ್ದ ಬೈಕ್ ಗಳನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ಪತ್ತೆದಳದಲ್ಲಿದ್ದ ಅಧಿಕಾರಿ ಸಿಬ್ಬಂದಿಯವರನ್ನು ಪೋಲಿಸ್ ಅಧೀಕ್ಷಕರು ಚಿಕ್ಕಮಗಳೂರು ಜಿಲ್ಲೆ ರವರು ಶ್ಲಾಘಿಸಿ ಬಹುಮಾನ ನೀಡಿರುತ್ತಾರೆ.
ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿ ವಾಹನಕ್ಕೆ ಸೂಕ್ತ ಸುರಕ್ಷತಾ ರೀತಿಯಲ್ಲಿ ಸರಿಯಾಗಿ ಲಾಕ್ ಆಗಿರುವುದರ ಬಗ್ಗೆ ಗಮನಿಸಿಕೊಳ್ಳುವುದು .
Chikmagalur
ವಿಶ್ವಕ್ಕೆ ಉತ್ತಮ ಸಂದೇಶ ಸಾರಿದವರು: ಶ್ರೀ ಯೋಗಿ ನಾರೇಯಣ ಯತೀಂದ್ರರು

ಚಿಕ್ಕಮಗಳೂರು: ಮಾ. ೧೪: ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು’ ಎಂದು ಗ್ರೇಡ್- ೨ ಉಪತಹಸೀಲ್ದಾರ್ ರಾಮ್ ರಾವ್ ದೇಸಾಯ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿನಾರೇಯಣ ಯತ್ರೀಂದ್ರರ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು .
ಜಾತಿ-ಮತ ಕುಲಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ-ದಲಿತರ-ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀನಿವಾಸ. ಪಾ. ನಾಯ್ಡು ಉಪನ್ಯಾಸ ನೀಡಿ ’ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ಪದ್ಯ, ಕೀರ್ತನೆ ಹಾಗೂ ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ್ ಯೋಗಿ. ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯಬಹುದಾದ ಪಾಪ ಕೃತ್ಯಗಳ ಪ್ರಾಬಲ್ಯ, ಪ್ರಳಯ ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳು, ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ ಎಂದರು.
ಅನೇಕ ಪವಾಡಗಳನ್ನು ಮಾಡಿದ ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ. ತಮ್ಮ ಜೀವಮಾನದುದ್ದಕ್ಕೂ ಆಧ್ಯಾತ್ಮಿಕ ಬೋಧನೆ ಮತ್ತು ಕೀರ್ತನೆಗಳಿಂದ ಉತ್ತಮ ಬದುಕಿನ ಅರ್ಥಗಳನ್ನು ತಿಳಿಸುತ್ತಿದ್ದ ಯೋಗಿ ನಾರೇಯಣರು ಜಗತ್ತಿನ ಭವಿಷ್ಯವಾಣಿ ಎಂದೇ ಕರೆಯಲ್ಪಡುವ ತಾಳೆ ಗರಿಗಳ ಲಿಪಿ ಬದ್ದ ಸಂಗ್ರಹವನ್ನು ಕಾಲಜ್ಞಾನ ಗ್ರಂಥವಾಗಿ ರಚಿಸಿ, ಜಗತ್ತಿನ ಗಮನ ಸೆಳೆದ ಮೇರು ಸಂತರಾಗಿದ್ದಾರೆ ಎಂದು ಹೇಳಿದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಾತಯ್ಯನವರು ಜನ್ಮತಾಳಿದ್ದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನುಭಾವರ ಜಯಂತ್ಯೋತ್ಸವವನ್ನು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ಮಾತನಾಡಿ ಶ್ರೀ ಯೋಗಿ ನಾರಾಯಣ ಅವರು ಜನರಿಗೆ ಅವರದೇ ಆದ ಶೈಲಿಯಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಸಮಾಜದ ಸಮಗ್ರ ಅಭಿವೃದ್ಧಿ ಬಯಸಿದವರು. ಶ್ರೀ ಯೋಗಿ ನಾರಾಯಣ ಅವರು ವಚನಗಳ ಮೂಲಕ ಸರಳ ರೀತಿಯಲ್ಲಿ ಅವರ ವಿಚಾರ ಮತ್ತು ತತ್ವಾದರ್ಶಗಳನ್ನು ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದ್ದಾರೆ. ಹಾಗೇ ನಾವು ಕೂಡಾ ಅವರ ಇತಿಹಾಸ ಅವರ ವಚನ ಸಂದೇಶ, ಬೋಧನೆ ಹಾಗೂ ಅವರ ತತ್ವವಾದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಸಮಿತಿಯ ಸದಸ್ಯ ಲಕ್ಷ್ಮಣ್, ಬಲಿಜ ಸಮಾಜದ ಹಿರಿಯ ಮುಖಂಡ ಮರಿ ಶೆಟ್ಟರು, ಬಲಿಜಾ ಸಮಾಜದ ಪ್ರಧಾನ ಕಾರ್ಯದರ್ಶಿ ಕುಮಾರ್, ಜಿಲ್ಲಾ ಬಲಿಜ ಸಮಾಜದ ಖಜಾಂಚಿ ಮಂಜುನಾಥ್, ಚಿಕ್ಕಮಗಳೂರು ತಾಲ್ಲೂಕು ಬಲಿಜ ಸಮಾಜದ ಖಜಾಂಚಿ ವಾಸುದೇವ್ ಹಾಗೂ ಬಲಿಜ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.

-
State21 hours ago
ಬೆಂಗಳೂರು ನಮ್ಮ ಮೆಟ್ರೋ ನೇಮಕಾತಿ : ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿ
-
Kodagu20 hours ago
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ
-
National - International21 hours ago
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ
-
Kodagu23 hours ago
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ
-
State23 hours ago
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ: ಬಸವರಾಜ ಬೊಮ್ಮಾಯಿ
-
Chikmagalur7 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
Chamarajanagar6 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Uncategorized4 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್