Mysore
ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಯೋಜನೆ ಪ್ರಶಸ್ತಿ

ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರ ಜೊತೆಗೆ ಸಮರ್ಪಕ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಾ ಬರುತ್ತಿರುವ ಸಾಲಿಗ್ರಾಮ ತಾಲೂಕಿನ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಮೈಸೂರು ಜಿಲ್ಲೆಯಲ್ಲಿ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿ ಕಾಯಕಲ್ಪ ಯೋಜನೆಯ ಪ್ರಶಸ್ತಿಗೆ ಭಾಜನವಾಗಿದೆ.
ಅತೀ ಹೆಚ್ಚು ಜನಸಂಖ್ಯೆ: ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹಾಗೂ ಅಕ್ಕಪಕ್ಕದ ಗಡಿ ಜಿಲ್ಲೆಯ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ೨8 ಸಾವಿರ ಜನಸಂಖ್ಯೆ ಇದ್ದು, ನಿತ್ಯ ನೂರಾರು ಹೊರ ರೋಗಿಗಳು ಸೇರಿದಂತೆ ಇಷ್ಟೂ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ೫ ಉಪ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ವರ್ಷಗಳ ಕಾಲ ಆರೋಗ್ಯ ಸಿಬ್ಬಂದಿಗಳು ಹಾಗೂ ಖಾಯಂ ವೈದ್ಯರು ಇಲ್ಲದೆ ಸ್ವಚ್ಛತೆ ಮರೀಚಿಕೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯು ಸ್ವಚ್ಚತೆಯಿಂದ ಕೂಡಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲಿ ಸಾಲಿಗ್ರಾಮ ಮತ್ತು ಕೆ ಆರ್ ನಗರ ಆವಳಿ ತಾಲೂಕಿನಲ್ಲಿ ಬರುವ ಪ್ರಾಥಾಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಮಾಡುವ ಹಂಬಲ ಹೊಂದಿದ್ದೇನೆ, ಮೊದಲ ಆದ್ಯತೆ ಸ್ವಚ್ಚತೆ, ಸುರಕ್ಷತೆ, ಶುದ್ದ ಕುಡಿಯುವ ನೀರು, ಅನೇಕ ವೈದ್ಯಕೀಯ ಸೌಲಭ್ಯಗಳನ್ನು ಸೇರಿದಂತೆ ಎಲ್ಲವನ್ನೂ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಿದ್ದೇನೆ.ಜಿಲ್ಲೆಯಲ್ಲಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿರುವ ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲರನ್ನು ಅಭಿನಂದಿಸುತ್ತೇನೆ.
ಡಾ.ಡಿ.ನಟರಾಜು. ತಾಲೂಕು ಆರೋಗ್ಯಾಧಿಕಾರಿಗಳು.
ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಹಾಗೂ ಎರಡು ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಯಕಲ್ಪ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ದೊರೆತಿದೆ. ಭೇರ್ಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸೌಜನ್ಯ ಆಸ್ಪತ್ರೆಯ ಸಿಬ್ಬಂದಿಗಳೊಡನೆ ಪ್ರಶಸ್ತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಪಡೆದು ಕೊಂಡರು.
Mysore
ಎಚ್.ಎನ್. ವಿಜಯ್ ರವರ 51 ನೇ ವರ್ಷದ ಹುಟ್ಟುಹಬ್ಬ ಸಂತಸ ತಂದಿದೆ: ಲಕ್ಕಿಕುಪ್ಪೆ ಸುಬ್ಬೇಗೌಡ

ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಹರದನಹಳ್ಳಿ ಎನ್. ವಿಜಯ್ ರವರ 51 ನೇ ವರ್ಷದ ಹುಟ್ಟು ಹಬ್ಬ, ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಲಕ್ಕಿಕುಪ್ಪೆ ಸುಬ್ಬೇಗೌಡ ತಿಳಿಸಿದ್ದಾರೆ.
ಮೈಸೂರು ಮುಡಾ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಅವರು ಹಾಂಗ್ ಕಾಂಗ್ ನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕೃಷಿಕ ಪ್ರಶಸ್ತಿಗೆ ಭಾಜನ ರಾಗಿರುವುದು ಹೆಮ್ಮೆಯ ವಿಷಯವಾಗಿದೆ. 500 ಕ್ಕೂ ಅಧಿಕ ನಿರುದ್ಯೋಗ ಯುವಕ, ಯುವತಿಯರಿಗೆ ಕೆಲಸ ನೀಡಿ, ಅವರ ಕುಟುಂಬ ನಿರ್ವಹಣೆಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.
ಬಡ ಜನತೆಗೆ ಹಣ ಸಹಾಯ ಮಾಡಿ ಬಡವರ ಬಂದು ಆಗಿರುವ ಎಚ್.ಎನ್. ವಿಜಯ್ ಅವರು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡಿ ಈ ಊರಿನ ಕೀರ್ತಿಯನ್ನು ರಾಜ್ಯವೇ ಮೆಚ್ಚುವಂತೆ ಮಾಡಲಿ ಎಂದರು.
ಜುಲೈ .16 ರಂದು ನಡೆಯಲಿರುವ ಅವರ ಜನ್ಮ ದಿನದ ಪ್ರಯುಕ್ತ ಹರದನಹಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಅನ್ನ ಸಂತರ್ಪಣೆ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ವಿಶೇಷ ವಾಗಿದೆ ಎಂದು ತಿಳಿಸಿದರು.
Mysore
ಎಚ್.ಎನ್.ವಿಜಯ್ ಹುಟ್ಟು ಹಬ್ಬ: ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಪರಿಶೀಲನೆ

ವರದಿ: ಎಸ್. ಬಿ. ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಮೈಸೂರುನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಯನ್ನು ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಶನಿವಾರ ಪರಿಶೀಲಿಸಿದರು.
ವಿಜಯ್ ಅವರ ಹುಟ್ಟೂರು ತಾಲ್ಲೂಕಿನ ಹರದನಹಳ್ಳಿಯಲ್ಲಿ ನಡೆಯುತ್ತಿರುವ ಜನ್ಮದಿನೋತ್ಸವ ಕಾರ್ಯಕ್ರಮದ ಪೆಂಡಾಲ್, ಪಾರ್ಕಿಂಗ್, ಊಟದ ಸ್ಥಳ, ವೇದಿಕೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಬರುವಂತಹ ಎಲ್ಲರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಮುಖಂಡರಾದ ಮಿರ್ಲೆ ರಾಜೀವ್, ಎಲ್ಐಸಿ ನಿಂಗಪ್ಪ, ವೆಂಕಟೇಶ್, ಕೆ.ಟಿ.ಮೋಹನ್ ಕುಮಾರ್, ಹೆಚ್.ಜೆ.ಗೋಪಾಲ್, ಪೊಲೀಸ್ ಬಸವೇಗೌಡ, ತಿಮ್ಮೇಗೌಡ, ಡಾಲ್ಪಿ, ಎಸ್. ಆರ್.ರವಿಕುಮಾರ, ಲಕ್ಷ್ಮೀಶ ಸೇರಿದಂತೆ ಹಲವರು ಇದ್ದರು.
Mysore
ಜು.14ಕ್ಕೆ ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್ ಲೋಕಾರ್ಪಣೆ: ಡಾ.ಪುಷ್ಪಾ ಅಮರನಾಥ್

ಮೈಸೂರು: ನಮ್ಮ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೂ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು, ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಜು.14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ನಮ್ಮ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ 5 ಶತಕ ಮಹಿಳಾ ಸಂಭ್ರಮ ಆಚರಿಸುತ್ತಿದೆ. ನಮ್ಮದು ಮೊದಲೇ ಬಡವರ ಪರ ಮಹಿಳೆಯರ ಪರವಾದ ಸರ್ಕಾರ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ಸ್ವಾತಂತ್ರ್ಯ ಅನುಭವಿಸುವ ಅವಕಾಶವನ್ನು ನಮ್ಮ ಸರ್ಕಾರ ನೀಡಿದೆ. ಹಾಗಾಗಿ ಇದೇ ಸೋಮವಾರ(ಜು.14) ದಂದು ಈ ಯಶಸ್ಸನ್ನು ಸಿಹಿ ಹಂಚಿ ಮಹಿಳೆಯರೊಂದಿಗೆ ಪ್ರಯಾಣಿಸಿ ಸಂಭ್ರಮಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮೈಸೂರಲ್ಲಿ ಶಕ್ತಿ ಯೋಜನೆಗೆ 776.8 ಕೋಟಿ ರೂ. ಹಣ ವ್ಯವವಾಗಿದೆ. ರಾಜ್ಯದಲ್ಲಿ 12000,733.80 ಕೋಟಿ ರೂ. ಹಣ ವ್ಯಯವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಇಡೀ ದೇಶದಲ್ಲೇ ಯಾವ ಸರ್ಕಾರವೂ ನೀಡಿಲ್ಲ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ. 14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ ನೂತನ ಸಾರಿಗೆ ಬಸ್‌ಗಳನ್ನು ಸಚಿವ ರಾಮಲಿಂಗ ರೆಡ್ಡಿ ಅವರು ಮೈಸೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮ ನಗರ ಬಸ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ 200 ಬಸ್ ಲೋಕಾರ್ಪಣೆ ಆಗಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
-
Special10 hours ago
ಸೃಷ್ಟಿಯ ನಿಯಮವನ್ನು ಮೀರುವುದೆಂದರೆ ಇದೇ….?
-
Chamarajanagar5 hours ago
ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ
-
Chamarajanagar10 hours ago
ಮಹಿಳಾ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ
-
Hassan5 hours ago
ಮುಸುಕಿನ ಜೋಳಕ್ಕೆ ಬಿಳಿ ಸುಳಿ ರೋಗ: ರೈತರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ ಎ.ಎಸ್.ಪಾಟೀಲ್ ನಡಹಳ್ಳಿ
-
Mysore7 hours ago
ಮುಖ್ಯಮಂತ್ರಿ ಬದಲಾವಣೆ ವಿಚಾರ| ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ: ಎಚ್.ಸಿ.ಮಹದೇವಪ್ಪ
-
Mysore6 hours ago
ಸರ್ಕಾರದ ಸಾಧನೆಗಳ ಸಮಾವೇಶ, ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ ಎಚ್.ಸಿ.ಮಹದೇವಪ್ಪ
-
Hassan5 hours ago
ಹೆಣ್ಣಿನ ವ್ಯಕ್ತಿತ್ವ ಪ್ರತಿಪಾದಿಸುವ ವಕ್ತಿತ್ವದವರು ನಮ್ಮ ಜೊತೆ ಇರುವುದೇ ಒಂದು ಹೆಮ್ಮೆಯ ವಿಷಯ: ಕೆ.ಎಸ್. ಲತಾ ಕುಮಾರಿ
-
Kodagu4 hours ago
ಬಂದೂಕು ವಿನಾಯಿತಿ ಪ್ರಮಾಣ ಪತ್ರ : ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಿಎನ್ಸಿ ಸಲಹೆ