Hassan
೭೦ನೇ ಸಂಚಿಕೆಯ ಕಾವ್ಯ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮೋಹನ್ ರವರಿಗೆ ಸನ್ಮಾನ

ಹಾಸನ: ಶಾಂತಿನಗರದ ಹಲ್ಮಿಡಿ ಶಾಸನ ವೃತ್ತದ ಕವಿರಾಜಮಾರ್ಗ ರಸ್ತೆಯ ಚಾಣಕ್ಯ ಸಭಾಂಗಣದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಕರ್ನಾಟ ಭಾರತ ಕಥಾಮಂಜರಿಯ ೭೦ನೇ ಸಂಚಿಕೆ ಆಯ್ದ ಭಾಗದ ಕಾವ್ಯ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಈ ಕಥಾ ಭಾಗದಲ್ಲಿ ಬ್ರಹ್ಮ ಶ್ರೀ ನಾರದರು ಧರ್ಮರಾಯರಿಗೆ ಅಷ್ಟೇ ಅಲ್ಲದೇ ಪ್ರಸ್ತುತ ಪ್ರಜಾಪ್ರತಿನಿಧಿಗಳಿಗೂ ಪ್ರಜೆಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕು. ರಾಜನಾದವನ್ನು ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಎಲ್ಲಾರಿಗೂ ಅನ್ವಯಿಸುವಂತೆ ತಿಳಿಸಿಕೊಟ್ಟಿದ್ದಾರೆ. ಅವರ ಉಪದೇಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ನಾಯಕರಹಳ್ಳಿ ಮಂಜೇಗೌಡ ಮಾತನಾಡುತ್ತಾ, ಈ ಕಾವ್ಯ ಮಹಾಭಾರತ ಬರಿಕಾವ್ಯವಲ್ಲಾ, ಪಂಡಿತ ಪಾಮರರಿಗಲ್ಲದೆ, ಜನಸಾಮಾನ್ಯರಿಗೂ ತಲಪುವ ಮಹಾಕಾವ್ಯವಾಗಿ ಎಂದರು.
ನಂತರ ಇದೆ ಸಂದರ್ಭದಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಕೆ.ಎಂ. ಕಣತೂರು ಮೋಹನ ರವರು ಜಿಲ್ಲಾ ವರದಿಗಾರರು ವಿಜಯವಾಣಿ ಹಾಗೂ ಹಲೋ ಹಾಸನ ಪತ್ರಿಕೆ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಭಾರಿ ಗಣರಾಜ್ಯೋತ್ಸವ ಪ್ರಶಸ್ತಿ ಪಡೆದ ಇವರಿಗೆ ಸನ್ಮಾನಿಸಲಾಯಿತು. ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಇಂದಿನ ಯುವ ಪೀಳಿಗೆ ಇಂತಹ ಕಾರ್ಯಕ್ರಮದ ಕೇಳದೆ ಕೇವಲ ಮೊಬೈಲ್ ಕಡೆ ಮುಖ ಮಾಡಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ನಾನು ವಿದ್ಯಾರ್ಥಿ ದೆಸೆಯಿಂದ ಶಿಸ್ತು, ಪರಿಶ್ರಮ ರೂಢಿಸಿಕೊಂಡು ಬಂದಿದ್ದರಿಂದ ಪತ್ರಿಕಾ ಕ್ಷೇತ್ರದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿಯಲ್ಲಿ ಇರುವ ವಿಷಯ ನಮ್ಮ ಬದುಕಿಗೆ ಬೇಕಾದ ಸಂಸ್ಕಾರ ಕಲಿಸುತ್ತದೆ ಎಂದು ಹೇಳಿದರು.
ಇದೆ ವೇಳೆ ಗಾಯನ ಶ್ರೀಮತಿ ಪ್ರೇಮಲತಾ ರಾಜೇಂದ್ರ ವ್ಯಾಖ್ಯಾನವನ್ನು ಗಮಕ ವಿದುಷಿ ರುಕ್ಮಿಣಿ ನಾಗೇಂದ್ರ ಮಾಡಿದರು. ಕಾವ್ಯಭಾಗದಲ್ಲಿ ಧರ್ಮರಾಯನನ್ನು ಪ್ರಶ್ನಿಸುವ ಮೂಲಕ ರಾಜನಾದವನು ರಾಜ್ಯಭಾರ ಮಾಡುವ ರೀತಿಯನ್ನು ಮಹರ್ಷಿ ನಾರದನು ವಿವರಿಸಿದರು. ರಾಜನಾದ ನೀನು ಜಾತಿ ಸಂಘರ್ಷವನ್ನು ಮಾಡಲಾರೆ ತಾನೇ? ಜನ ಸಮೂಹದಲ್ಲಿ ಹೀನಾ, ನಿಷ್ಕೃಷ್ಟ ಮೇಲು-ಕೀಳು ಭೇದ ಭಾವ ಮಾಡಲಾರೆ ತಾನೇ? ಅವರ ಧರ್ಮದಲ್ಲಿ ನಂಬಿಕೆ ಇದೇ ತಾನೇ? ಜೂಜಾಟ ಅತಿಯಾಗಿ ಇಲ್ಲಾವಲ್ಲ, ದಾಯಾದಿ ಮಾತ್ಸರ್ಯ ನಿನ್ನವರೊಡಗೂಡಿ ,ನಿನ್ನ ರಾಜ್ಯದಲ್ಲಿ ತಲೆಹಾಕಲಾರದು ತಾನೇ ? ನಿನ್ನ ಸಂಪರ್ಕದಲ್ಲಿರುವ ಅನೇಕ ರಾಜರ ಅಂತರ್ಯ ತಿಳಿದು ಅವರ ನಡತೆಯ ಆಧಾರದ ಮೇಲೆ ಆಧ್ಯತೆಯನ್ನು ಕೊಡುವೆ ತಾನೇ? ನೀನು ರಾಜ್ಯ ಭಾರ ಮಾಡುವ ಭರದಲ್ಲಿ ಪ್ರಜೆಗಳ ಅಂತರಂಗವನ್ನು ಅರಿಯದೆ ಹೋಗಬೇಡ. ರಾಜ್ಯದಲ್ಲಿ ತಾರತಮ್ಯವಿಲ್ಲದೆ ಎಲ್ಲಾರಿಗೂ ಸಮಾನ ಹಕ್ಕುಗಳನ್ನು ಕೋಡ ಮಾಡು ? ರಾಜ್ಯದಲ್ಲಿ ಕೆಲವು ಕ್ಷೇತ್ರ ಆದಾಯವಿದ್ದರು ಮತ್ತೆ ಕೆಲವರಲ್ಲಿ ಅನುತ್ಪಾದಕತೆ. ಕೆಲವರು ಏಷ್ಟು ಶ್ರಮ ಹಾಕಿದರು ನಿರರ್ಥಕ, ಕೆಲವು ಕರ್ಮಣ್ಯೆವಾಧಿಕಾರಸ್ತೆ ಎಂಬಂತೆ ದೈವಾಧೀನ. ಇವೆಲ್ಲವೂ ಗಮನದಲ್ಲಿರಲಿ.ಅಷ್ಟೇ ಅಲ್ಲಾ ರಾಜನ ರಾಜ್ಯಭಾರ ಅಂದರೆ ಎರಡು ಅಲಗಿನ ಕತ್ತಿಯಂತೆ ಬಹಳ ನಾಜೂಕಾಗಿ ಸಂಭಾಳಿಸು. ಅಂತ: ಪುರದಲ್ಲಿ ಸ್ತ್ರೀ ಕಲಹ ಬಾರದಂತೆ ನೋಡಿಕೋ ಶತ್ರುಗಳ ಬಲಾಬಲ ತಿಳಿ,ಶತ್ರು ರಾಜರಲ್ಲಿ ಸಂಧಿ ಹಾಗೂ ಯುದ್ದದ ಅವಶಕತೆಗಳನ್ನು ಮನಗಾಣು.ಒಟ್ಟಿನಲ್ಲಿ ಸತ್ಯ,ನಿಷ್ಠೆ ಧರ್ಮ ನೀತಿ ಪ್ರಜಾನುರಾಗಿಯಾಗಿ ಅತಿಯಾದ ತೆರಿಗೆಯನ್ನು ಹಾಕದೇ ಸಂತೃಪ್ತ ರಾಜನಾಗಿಯೂ, ಪ್ರಜಾಪತಿಯಾಗಿಯೂ ರಾಜ್ಯಭಾರ ಮಾಡು ಎಂದು ಅಶಿರ್ವಧಿಸಿ ಇಂದಿನ ಪ್ರಜಾಪ್ರತಿನಿಧಿಗಳಿಗೂ ಅನ್ವಯವಾಗುವಂತೆ ಜೀವನ ಧರ್ಮ ಉಪದೇಶಿಸಿದರು ಬ್ರಹ್ಮಶ್ರೀ ನಾರದರು ಉಪದೇಶಿದರು ಎಂಬ ಕಾವ್ಯ ಭಾಗವನ್ನು ಗಾಯನ ಮತ್ತು ವ್ಯಾಖ್ಯಾನದ ಮೂಲಕ ಸ್ವಾರಸ್ಯಕರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಪರಿಷತ್ತು ನಿಕಟಪೂರ್ವ ಗೌರವ ಕಾರ್ಯದರ್ಶಿಗಳಾದ ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ, ವೀರಾಪುರ ನಾಗರಾಜು, ಸ್ಕೌಟ್ ಅಂಡ್ ಗೈಡ್ಸ್ ನ ಸಂಘಟಕಿ ಕಾಂಚನ ಮಾಲಾ, ಜಿ.ಓ. ಮಹಾಂತಪ್ಪ, ಅಡಗೂರು ಕೇಶವಮೂರ್ತಿ, ಶಿಕ್ಷಕರಾದ ವೀಣಾ ಭಟ್ಟ್, ಮಲೆನಾಡು ಕಾಲೇಜು ಉಪನ್ಯಾಸಕರಾದ ರಾಜೇಂದ್ರ, ಕೆ.ಎಸ್. ನಾಗೇಂದ್ರ ಇತರರು ಉಪಸ್ಥಿತರಿದ್ದರು.
Hassan
ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ಎಟಿಆರ್ ರಾಜಿನಾಮೆ: ಪತ್ರ ವೈರಲ್

ಹಾಸನ: ರಾಜಕೀಯ ದಿಂದ ದೂರ ಸರಿದ್ರಾ ಹಿರಿಯ ರಾಜಕಾರಣಿ ಎಟಿ ರಾಮಸ್ವಾಮಿ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ.
ಏಪ್ರಿಲ್ 15 ರಂದೇ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರಗೆ ಬರೆದಿರೊ ಪತ್ರ ಎಂದು ಹೇಳಲಾಗುತ್ತಿರುವ ಈ ಪತ್ರದಲ್ಲಿಪರಿಸರ ಉಳಿವಿಗಾಗಿ ತೊಡಗಿಸಿಕೊಳ್ಳೋದಾಗಿ ಉಲ್ಲೇಖಿಸಿ ರಾಜಿನಾಮೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಹವಾಮಾನ ವೈಪರಿತ್ಯದಿಂದ ನೆರೆ ಬರ, ಭೂ ಕಂಪ ಸೃಷ್ಟಿ ಆಗುತ್ತಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಅಹಾರ ವಿಷಪೂರಿತವಾಗಿದೆ. ಬೆಟ್ಟಗುಡ್ಡ ಅರಣ್ಯ ನಾಶದಿಂದ ನದಿ ತೊರೆ ಗಳು ಬತ್ತಿ ಹೋಗಿವೆ. ಈ ಹೊತ್ತಿನಲ್ಲಿ ರಾಜಕಾರಣ ಕ್ಕಿಂತ ಪರಿಸರ ದ ಉಳಿವು ಮುಖ್ಯವಾಗಿದೆ. ನಾನು ಪರಿಸರದ ಸಂರಕ್ಷಣೆಯಲ್ಲಿ ನನ್ನ ಸಂಪೂರ್ಣ ಸಮಯ ತೊಡಗಿಸಿಕೊಳ್ಳಬೇಕೆಂದಿದ್ದೇನೆ ಎಂದು ಉಲ್ಲೇಖಿಸಲಾಗಿದೆ.
ಈಗಾಗಲೆ ಪರಿಸರಕ್ಕಾಗಿ ನಾವು ಸಂಘಟನೆಯಲ್ಲಿ ರಾಜ್ಯಾದ್ಯಕ್ಷ ಹುದ್ದೆ ಅಲಂಕರಿಸಿರೊ ಎಟಿ ರಾಮಸ್ವಾಮಿ. ರಾಜ್ಯಮಟ್ಟದ ಹಲವು ಸಾಹಿತಿ ಚಿಂತಕರುಣ ಸ್ವಾಮಿಜಿಗಳು ಹೋರಾಟಗಾರ ರ ನೇತೃತ್ವದಲ್ಲಿ ಉದಯಿಸಿರೊ ಸಂಘಟನೆ ರಾಜಕೀಯದಲ್ಲಿ ಸಕ್ರಿಯರಾಗಿರೋರಿಗೆ ಸಂಘಟನೆಯಲ್ಲಿ ಅವಕಾಶ ಇಲ್ಲದ ಹಿನ್ನೆಲೆ ಸಕ್ರಿಯ ರಾಜಕಾರಣದಿಂದ ದೂರ ಸರಿದು ಪರಿಸರ ಸಂರಕ್ಷಣೆ ಯಲ್ಲಿ ತೊಡಗಿಕೊಳ್ಳಲು ತೀರ್ಮಾನ ಮಾಡಿರೊ ಬಗ್ಗೆ ಮಾಹಿತಿ ಇದ್ದು, ಹಾಗಾಗಿಯೇ ಬಿಜೆಪಿ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಲ್ಕು ಬಾರಿ ಶಾಸಕರಾಗಿ ವಿಧಾನಸಬೆಗೆ ಆಯ್ಕೆಯಾಗಿದ್ದ ಎಟಿಆರ್, ಕಳೆದ ವಿಧಾನಸಭೆ ಚುನಾವಣೆ ಹಾಲಿ ಶಾಸಕರಾಗಿದ್ದರೂ ಟಿಕೇಟ್ ನೀಡದ ಜೆಡಿಎಸ್. ಇದರಿಂದ ಮನನೊಂದು ಬಿಜೆಪಿ ಸೇರಿದ್ದ ಎಟಿ ಆರ್, ಕಾಂಗ್ರೆಸ್ ನಿಂದ ಎರಡುಬಾರಿ ಜೆಡಿಎಸ್ ನಿಂದ ಎರಡುಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಟಿ ರಾಮಸ್ವಾಮಿ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದದಿಂದ ಆಯ್ಕೆಯಾಗಿದ್ದ ಎಟಿಆರ್, 2023 ರಿಂದಲೂ ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದರು.
Hassan
ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ: ಸಂಸದ ಶ್ರೇಯಸ್ ಪಟೇಲ್

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ರೈಲ್ವೆ ಮೇಲ್ಸೇತುವೆ 2ನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2026ರ ಫೆಬ್ರವರಿ ಇಲ್ಲವೇ ಮಾರ್ಚ್ ವೇಳೆಗೆ ಮುಗಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಶನಿವಾರದಂದು ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಿಮಾಣ ಹಂತದಲ್ಲಿರುವ ಮೇಲ್ಸೇತುವೆ ಮೇಲೆ ತೆರಳಿ ಎಲ್ಲೆಲ್ಲಿ ಕಾಮಗಾರಿ ಆಗಬೇಕು ಎಂಬುವರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹಲವು ಕಾರಣಗಳಿಂದಾಗಿ ಕೆಲ ವರ್ಷಗಳಿಂದ ಕಾಮಗಾರಿ ನಿಂತಿತ್ತು. ಇದೀಗ ತಮ್ಮ ತಮ್ಮ ಪಾಲಿನ ಅನುದಾನ ನೀಡಲು ಸಮ್ಮತಿಸಿವೆ. ಹೀಗಾಗಿ ಈಗಾಗಲೇ ಶುರುವಾಗಿರುವ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿದ್ದು, ಹೆಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲೀವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು. ಉಸುಮಾರು ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸಹ ತನ್ನ ಪಾಲಿನ ಅನುದಾನ ನೀಡಲು ಒಪ್ಪಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿ ಇನ್ನು ಮಂದೆ ಯಾವುದೇ ಅಡೆ-ತಡೆ ಇಲ್ಲದೆ ಮುನ್ನಡೆಯಲಿದೆ ಎಂದರು. ಎರಡೂ ಬದಿಯ ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣ ಆದರೆ ವಾಹನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Hassan
ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ: ಸಂಸದ ಶ್ರೇಯಸ್ ಪಟೇಲ್

ಹಾಸನ : ನಮ್ಮದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಪಕ್ಷ ಹಾಗಾಗಿ ಇದರ ಬಗ್ಗೆ ಜವಾಬ್ದಾರಿಯುತ ತೀರ್ಮಾನವನ್ನು ಸರ್ಕಾರದ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲಾ ಸಮಾಜವನ್ನು ಸಮವಾಗಿ ನೋಡಿ ಜಾತಿಗಣತಿಯಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾತಿಗಣತಿ ವರದಿ ಗೊಂದಲ ವಿಚಾರ ಹಾಸನದಲ್ಲಿ ಸಂಸದ ಶ್ರೇಯಸ್‌ಪಟೇಲ್ ಹೇಳಿಕೆ ನೀಡಿದರು.
ಮೊನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುಬೇಕೆಂದು ಒತ್ತಾಯಿಸಿದ್ದಾರೆ. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗುವ ಕೆಲಸವನ್ನು ನಮ್ಮ ಪಕ್ಷ ಮಾಡಲ್ಲ. ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸಮಾಜ ಮಾಡಿಲ್ಲ, ಮಾಡುವುದಿಲ್ಲ. ಜನಸ್ನೇಹಿಯಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. 2015 ರಲ್ಲಿ ಜಾತಿಗಣತಿ ನಡೆದಿತ್ತು, ಎಲ್ಲರ ಬೇಡಿಕೆ ಇತ್ತು ಜಾತಿಗಣತಿಗಾಗಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ಈಗೀನ ವರದಿಯ ನೈಜತೆಯನ್ನು, ಸತ್ಯಾಸತ್ಯತೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರದಿಯನ್ನು ಇನ್ನೂ ಮಂಡಿಸಿಲ್ಲ, ವರದಿ ಹೊರಗೆ ಬಂದ ಮೇಲೆ ಗೊತ್ತಾಗುತ್ತೆ. ಇನ್ನೂ ಯಾರಿಗೂ ವರದಿಯಲ್ಲಿದೆ ಎಂದು ಗೊತ್ತಿಲ್ಲ.
ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಯಾವಾಗಲೂ ಆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದೇ ವಿರೋಧ ಪಕ್ಷಗಳ ಗುರಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತೆ ನಮಗೂ ಆಸೆ ಇದೆ, ಆದರೆ ಸಿದ್ಧಾಂತ ಇದೆ, ಜನಸೇವೆ ಮಾಡಲು ನಾವು ಬಂದಿದ್ದೇವೆ. ಅಧಿಕಾರದ ದುರಾಸೆಗೋಸ್ಕರ ಈ ಕೆಲಸ ಮಾಡಬಹುದು.ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟು ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಸಿಇಟಿ ಪರೀಕ್ಷೆಗೆ ಹೋಗುವ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಅದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ, ಆ ತರ ಮಾಡಬಾರದು. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಒಬ್ಬ ಸಾರ್ವಜನಿಕನಾಗಿ ಹೇಳುತ್ತಿದ್ದೇನೆ. ಅವರವರ ಆಚರಣೆಗಳು, ಅವರವರ ವೈಯುಕ್ತಿಕ. ಜನಿವಾರ ತೆಗೆದು ಹೋಗಿ ಎನ್ನುವುದು ಅಪರಾಧ. ನಾನಂತು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.
-
Chamarajanagar23 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu6 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ