Connect with us

Chamarajanagar

ಹೊಂಗನೂರು ಹಿರಿಕೆರೆಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ,ತಂತ್ರಜ್ಞಾನ ಸಚಿವ ಬೋಸರಾಜು ಭೇಟಿ

Published

on

ಯಳಂದೂರು: ಸಮೀಪದ ಹೊಂಗನೂರು ಹಿರಿಕೆರೆಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ,ತಂತ್ರಜ್ಞಾನ ಸಚಿವ ಬೋಸರಾಜು ಭೇಟಿ ನೀಡಿ ಹಿರಿಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು ಹೊಂಗನೂರು ಹಿರಿಕೆರೆ ಅಭಿವೃದ್ಧಿಗೆ ಕ್ರಮವಹಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಶಾಸಕ ಎಆರ್ ಕೃಷ್ಣಮೂರ್ತಿ ಅವರೊಂದಿಗೆ ಹೊಂಗನೂರು ಹಿರಿಕೆರೆಯನ್ನು ವೀಕ್ಷಿಸಿದ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಮಾತನಾಡಿದರು. ಶಾಸಕ ಎಆರ್ ಕೃಷ್ಣಮೂರ್ತಿ ಹಿರಿಕೆರೆ ಅಭಿವೃದ್ಧಿಯ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದ ವೇಳೆ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ ಎಂದರು.

350 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವ ಈ ಕೆರೆಯಿಂದ ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹನ್ನೆರಡು ಗ್ರಾಮಗಳ ರೈತರಿಗೆ ಅನುಕೂಲವಾಗುತ್ತಿದೆ. ಒಟ್ಟು 1200 ಹೆಚ್ಚು ಎಕರೆ ಭೂಮಿಗೆ ಇದು ನೀರುಣಿಸುತ್ತದೆ . ಇದರ ವ್ಯಾಪ್ತಿಗೆ ಒಳಪಡುವ ಮುಖ್ಯ ಕಾಲುವೆ 6 km ಇದ್ದು ಇದರ ಉಪಕಾಲುವೆಗಳು 30 ಕಿಲೋಮೀಟರ್ ಇದೆ ಆದರೆ ಕಳೆದ 40 ವರ್ಷಗಳ ಹಿಂದೆ ಈ ಕಾಲುವೆ ನಿರ್ಮಾಣವಾಗಿದ್ದು ಇಲ್ಲಿ ನೀರು ಹರಿಯುವುದಿಲ್ಲ ಇದನ್ನು ದುರಸ್ತಿ ಗೊಳಿಸಬೇಕು. ಈ ಕೆರೆ ಮಳೆಯಾದರೆ ಮಾತ್ರ ತುಂಬುತ್ತದೆ ಇದಕ್ಕೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆಯನ್ನು ರೂಪಿಸಬೇಕು. ಈ ಕೆರೆ ತುಂಬಿದರೆ ನೀರು ಹೆಚ್ಚುವುದರಿಂದ ಬಿ ಆರ್ ಟಿ ಕಾಡಂಚಿನ ಜಮೀನಿಗೆ ತೆರಳಲು ತೊಂದರೆಯಾಗುತ್ತದೆ ಹಾಗಾಗಿ ಇಲ್ಲಿಗೆ ಸೇತುವೆ ನಿರ್ಮಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾತನಾಡಿದ ಸಚಿವರು ಈ ಕೆರೆ ಎ ಆರ್ ಕೃಷ್ಣಮೂರ್ತಿ ಅವರ ತಂದೆ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯ ಅವರ‌ ಶ್ರಮದ ಫಲವಾಗಿ ನಿರ್ಮಾಣಗೊಂಡ ಹೊಂಗನೂರು ಹಿರಿಕೆರೆ, ಅವರು ಅಪಾರ ಕೊಡುಗೆ ನೀಡಿ ಈ ಕೆರೆಯ ಅಭಿವೃದ್ಧಿ ಗೆ ಕಾರಣರಾಗಿದ್ದಾರೆ. ಹಾಗಾಗಿಯೇ ನಾನು ವೈಯಕ್ತಿಕ ಆಸಕ್ತಿ ವಹಿಸಿ ಇಲ್ಲಿಗೆ ಬಂದಿದ್ದೇನೆ ಕೆಳಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಇದಕ್ಕೆ ಉತ್ತಮ ಯೋಜನೆ ರೂಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದು ಮುಂದಿನ ಬಜೆಟ್ ನಲ್ಲಿ ಇದನ್ನು ಸೇರಿಸಿ ಹಿರಿಕೆರೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿಶಾಲಾಕ್ಷಿ ರೇವಣ್ಣ ಉಪಾಧ್ಯಕ್ಷ ನವೀನ್ ಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ‌. ಚಂದ್ರು , ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರ ಜೆ.ಯೋಗೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ರವಿ , ಮಹೇಶ್ , ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ ,ಕಮರವಾಡಿ ರೇವಣ್ಣ ,ಬಸವಣ್ಣ ,ಹೊಂಗನೂರು ಮಣಿ ಮಾಸ್ಟರ್, ಪುಟ್ಟಸ್ವಾಮಿ, ಸಿ ಮಹದೇವ್, ನಂಜಯ್ಯ , ಹೊನ್ನೂರು ರಾಜೇಂದ್ರ, ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ವಡಗೆರೆ ಯೋಗೇಂದ್ರ ಸಿ, ಡಿಸಿಸಿ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್ , ಶಾಸಕರ ಆಪ್ತ ಕಾರ್ಯದರ್ಶಿ ಚೇತನ್, ನವೀನ, ಮಣಿಕಂಠ, ಸೇವಾದಳ ಜಯರಾಜ್, ಪಂಜು, ರಾಜಶೇಖರ್, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ

Published

on

ಯಳಂದೂರು ಜೂನ್ 21

ಯೋಗ ಕೇವಲ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಅಥವಾ ಕಸರತ್ತು ಆಗಬಾರದು. ಅದೊಂದು ಬದುಕಿನ ತಿಳುವಳಿಕೆ, ನಡವಳಿಕೆ ಮತ್ತು ವ್ಯಕ್ತಿತ್ವವಾಗಬೇಕು ಎಂದು ಗುಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾ ಗೋವಿಂದರಾಜು ತಿಳಿಸಿದರು.ಅವರು ಗುಂಬಳ್ಳಿ ಗ್ರಾಮ ಪಂಚಾಯಿತಿ ಅಮೃತ ಸರೋವರ ಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.


ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ. ಯೋಗ ಮತ್ತು ಪ್ರಾಣಾಯಾಮ ಆರೋಗ್ಯ ಪೂರ್ಣ ಜೀವನದ ಒಂದು ವೈಜ್ಞಾನಿಕ ವಿಧಾನ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಎ, ಡಿ ರಾಧಾ, ಜಿಲ್ಲಾ ಪಂಚಾಯತ್ ನರೇಗಾ ಸಂಯೋಜಕರು ನವಿನ್ ,ತಾಲ್ಲೂಕು ಪಂಚಾಯಿತಿ ಸಂಯೋಜಕರು ಹರೀಶ್ ,ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಕೃಷ್ಣ ನಾಯಕ, ಗೋವಿಂದ ಕಂಪೋಟರ್ ಆಪರೇಟರ್ ಉಷಾ ಜಿ,

ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಎನ್ ಬಿ ಕೆ ರವರು ಮಹಿಳಾ ಸಂಘದ ಪ್ರತಿನಿಧಿಗಳು ಶಾಲಾ ಶಿಕ್ಷಕರು ಶಾಲಾ ಮಕ್ಕಳ ಹಾಜರಿದ್ದರು

Continue Reading

Chamarajanagar

ಸುಷ್ಮಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಕಾರ್ಯಗಾರ ಕಾರ್ಯಕ್ರಮ

Published

on

ಯಳಂದೂರು ಜೂನ್ 22

ಗ್ಲೋಬಲ್ ಫೌಂಡ್ರೀಸ್ ಬೆಂಗಳೂರು ಹಾಗೂ ಉಡುಪ ಫೌಂಡೇಶನ್ ಬೆಂಗಳೂರು ಸಹಯೋಗದಲ್ಲಿ ತಾಲೂಕಿನ ಎರಗಂಬಳ್ಳಿ ಗ್ರಾಮದ ಸುಷ್ಮಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಗಾರ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಿಗೆ ಸಂಗೀತದ ಬಗ್ಗೆ ತರಬೇತಿ ನೀಡಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಷ್ಮಾ ಪ್ರೌಢಶಾಲೆ ವಿದ್ಯಾರ್ಥಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -1 ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-2 ರ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಹೇಳಿಕೊಡಲಾಯಿತು.

ಕಾರ್ಯಕ್ರಮವನ್ನು ಸಂಗೀತ ದಿಗ್ಗಜರಾದ ಮಾನಸ ನಯನ ಹಾಡುಗಾರಿಕೆ, ಶೃತಿ ಪಿಟೀಲು, ನಂದನ್ ಕಶ್ಯಪ್ ಮೃದಂಗ, ಸಮಿತ್ ಗೌಡ ಕಟಮ್ ಮತ್ತು ತಂಡದವರು ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು.

ಶಿಕ್ಷಕರಾದ ಪ್ರಭುಸ್ವಾಮಿ, ಸಿದ್ದೇಶ್ ,ಶಿವಕುಮಾರ್, ಅನಿಲ್ ,ರವಿಕುಮಾರ್, ಶಿವಣ್ಣ, ಮಹೇಶ್, ಗುಡದಿರಪ್ಪ, ಗ್ಲೋಬಲ್ ಫೌಂಡ್ರಿಸ್ ಸದಸ್ಯರು ಮತ್ತು ಉಡುಪ ಫೌಂಡೇಶನ್ ಸದಸ್ಯರು ವಿದ್ಯಾರ್ಥಿಗಳು ಹಾಜರಿದ್ದರು

Continue Reading

Chamarajanagar

ಜೆಡಿಎಸ್ ಪಕ್ಷದ ಮುಖಂಡರ ವರ್ತನೆ ವಿರುದ್ಧ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ.

Published

on

ಮಹದೇವ್ ಸಿಸಿ ಭೇರ್ಯ.

ಕೆ ಆರ್ ನಗರ- ಚಂದಗಾಲು ಗ್ರಾಮದ ಘಟನೆ ಬಗ್ಗೆ ತಾಲೂಕಿನ ಎಲ್ಲಾ ಜನರಿಗೆ ವಿಷಾದವಿದೆ. ಆದರೆ ಜೆಡಿಎಸ್ ಮುಖಂಡರು ಈ ಘಟನೆಗೆ ಪರೋಕ್ಷವಾಗಿ ವಿವಾದಾತ್ಮಕ ಪ್ರಚೋದನೆ ಉಂಟಾಗುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸೈಯದ್ ಜಾಬಿರ್ ಆರೋಪಿಸಿದರು. ಕೆ ಆರ್ ನಗರ ಪಟ್ಟಣದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಸಾವನ್ನಪ್ಪಿದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವಪ್ಪ ಅವರೊಂದಿಗೆ ಮಾತನಾಡಿ ಪರಿಹಾರವನ್ನು ಕೊಡಿಸಿದ್ದಾರೆ. ಇನ್ನೂ ಹೆಚ್ಚು ಪರಿಹಾರ ಕೊಡಿಸಲು ಶಾಸಕ ರವಿಶಂಕರ್ ನಿರಂತರ ಪ್ರಯತ್ನದಲ್ಲಿದ್ದಾರೆ ಆದರೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ನಮ್ಮ ಸರ್ಕಾರ ಕೊಟ್ಟಿರುವ ಪರಿಹಾರವನ್ನು ನಾನೇ ಕೊಡಿಸಿದ್ದು ಎಂದು ಜೆಡಿಎಸ್ ಮುಖಂಡರು ಹೇಳಿಕೊಂಡು ತಿರುಗುತ್ತಿರುವುದು ಎಷ್ಟು ಸರಿ ಎಂದರು.


ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಮಾಜದ ಸ್ವಾಮೀಜಿಗಳೊಂದಿಗೆ ಶಾಸಕರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ ಎಂದರು.

ಉಮೇಶ್ ಇದರ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಇಲ್ಲ. ಅರ್ಕೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೊಟ್ಟಿರುವ ನಿವೇಶನ ನಿಮ್ಮ ಅಧಿಕಾರ ಮತ್ತು ನಿಮ್ಮ ಮಾಜಿ ಶಾಸಕ ಸಾ ರಾ ಮಹೇಶ್ ಅವಧಿಯಲ್ಲಿ ಏನು ಮಾಡಿದ್ದೀರಿ ಎಂದು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಟಿ ಕುಮಾರ್ ಬ್ಲಾಕ್ ಮೇಲ್ ರಾಜಕಾರಣಿ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಅವರು ರವಿಶಂಕರ್ ಮತ್ತು ದೊಡ್ಡ ಸ್ವಾಮಿಗೌಡರ ಹತ್ತಿರ ಎಷ್ಟು ಸಹಾಯ ಪಡೆದಿದ್ದಾರೆ. ಆಗ ಸಾ ರಾ ಮಹೇಶ್ ಅವರನ್ನು ಯಾವ ಯಾವ ಭಾಷೆಯಲ್ಲಿ ರೀತಿ ಟೀಕಿಸಿದ್ದಾರೆ ಮತ್ತೊಮ್ಮೆ ತಿಳಿಸಿ ಸ್ವಾಮಿ. ಈಗ ರವಿಶಂಕರ್ ಅವರನ್ನ ಟೀಕಿಸುತ್ತಿದ್ದಿರೀ ಇದು ತಾಲೂಕಿನ ಜನರಿಗೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಿದೆ ಬಿಡ್ರಿ ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಒಕ್ಕಲಿಗ ಮತ್ತು ಲಿಂಗಾಯಿತ ಮತಗಳು ಒಂದಷ್ಟು ಹೆಚ್ಚಾಗಿರುವುದರಿಂದ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಒಂದಷ್ಟು ಮತಗಳ ಲೀಡ್ ಬಂದಿದೆ. ಅದೇ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದಾಗ ಮಂಡ್ಯದಲ್ಲಿ ಏಳು ಶಾಸಕರು. ಕುಮಾರಸ್ವಾಮಿ ಹಾಲಿ ಮುಖ್ಯಮಂತ್ರಿ. ಸಾ ರಾ ಮಹೇಶ್ ಸೂಪರ್ ಸಿಎಂ ಆಗಿದ್ದರು ಆಗ ಬಂದ ಲೀಡ್ ಎಷ್ಟು ಸ್ವಾಮಿ ಎಂದು ಟೀಕಿಸಿದರು.

ನಮ್ಮ ಶಾಸಕರು ಗುದ್ದಲಿ ಪೂಜೆ ಮಾಡುತ್ತಿರುವುದು ಹಿಂದಿನ ಶಾಸಕರ ಅನುದಾನ ಅಲ್ಲ. ನಮ್ಮ ಶಾಸಕರು ತಂದಿರುವ ಅನುದಾನದಲ್ಲೇ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಜೆಡಿಎಸ್ ಪಕ್ಷದ ಮುಖಂಡರಿಗೆ ಮಾಹಿತಿ ಕೊರತೆ ಇದೆ ಇದನ್ನ ತಿಳಿದುಕೊಳ್ಳಲಿ ಎಂದರು

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎಸ್ ಮಾದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಜೆ ರಮೇಶ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ವಕೀಲ ಮೂರ್ತಿ ಇದ್ದರ

Continue Reading

Trending

error: Content is protected !!