Connect with us

Hassan

ಹೋಮ್ ಓಟಿಂಗ್ ಕಾರ್ಯ ನಿರ್ವಹಿಸುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಡಿಸಿ ಸಿ. ಸತ್ಯಭಾಮ ಕಟ್ಟುನಿಟ್ಟಿನ ಸೂಚನೆ

Published

on

ಹಾಸನ: ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು, ಅಂಧರುಗಳ ಮತದಾರರ ಮನೆಗಳಿಗೆ ಹೋಗಿ ಡಿ ಅರ್ಜಿಗಳನ್ನು ವಿತರಿಸಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಅಪರ ಜಿಲ್ಲಾಧಿಕಾರಿ ಶಾಂತಲಾ ಸಲಹೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯಲ್ಲಿ ಹೋಮ್ ಓಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ (ಂಗಿSಅ) ಮತ್ತು ದಿವ್ಯಾಂಗ (ಂಗಿPಆ) ಮತದಾರರಿಗೆ ನಮೂನೆ ೧೨ಡಿ ಅರ್ಜಿಗಳನ್ನು ವಿತರಿಸಿ, ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದ ಮತದಾರರಿಗೆ ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ವಿಧಾನವನ್ನು ಊome voಣiಟಿg ಎಂದು ಕರೆಯಲಾಗುವುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ೦೮ ವಿಧಾನಸಭಾ ಕ್ಷೇತ್ರಗಳಿದ್ದು, ಈ ಎಲ್ಲಾ ಕ್ಷೇತ್ರಗಳಿಂದ ೮೫ಕ್ಕಿಂತ ಹೆಚ್ಚು ವಯಸ್ಸು ಆಗಿರುವವರು ೧೫,೦೯೨ ದಿವ್ಯಾಂಗ ೧೮,೭೭೬ ಓಟು ಸೇರಿ ೩೩,೮೬೮ ಮತದಾರರಿಗೆ ೧೨ ಡಿ ಅರ್ಜಿಗಳನ್ನು ವಿತರಿಸಲಾಗಿರುತ್ತದೆ. ಎರಡು ವರ್ಗದ ಮತದಾರರ ಪೈಕಿ ೮೫ ವರ್ಷ ಮೇಲ್ಪಟ್ಟ ೨೬೩೫ ಮತ್ತು ದಿವ್ಯಾಂಗ ೧೩೭೩ ಸೇರಿ ಒಟ್ಟು ೪೦೦೯ ಮತದಾರರು ಅಂಚೆ ಮತ ಪತ್ರ ಮೂಲಕ ಮತದಾನ ಮಾಡಲು ಇಚ್ಚಿಸಿರುವುದರಿಂದ ಇವರುಗಳಿಗೆ ಅಂಚೆ ಮತ ಪತ್ರ ನೀಡಿ ಮತದಾನ ಮಾಡಿಸುವ ಕುರಿತು ವಿಧಾನದಂತೆ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಅಂಚೆ ಮತಪತ್ರ ಮತದಾರರ ಸಂಖ್ಯೆ ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮೊದಲೇ ನಿಗಧಿ ಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿರುವ ಅನುಮೋದಿತ ಸೆಕ್ಟರ್ ಮಾರ್ಗ ನಕ್ಷೆಯನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಬೇಕು. ಮತಗಟ್ಟೆಗೆ ತೆರಳುವ ತಂಡದ ಜೊತೆ ಒಬ್ಬರೂ ಪಿ.ಆರ್.ಓ. ಪಿಓ, ಒಬ್ಬರು ಮೈಕ್ರೋ ಅಬ್ಸರ್ವರ್, ಓರ್ವ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋ ಗ್ರಾಫರ್ ಇರುತ್ತಾರೆ. ಮತದಾರರಿಂದ ಮತದಾನದ ಪ್ರಕ್ರಿಯೆಯನ್ನು ಮೇಲೆ ನೀಡಿರುವ ಸೂಚನೆಗಳಂತೆ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ಕಟ್ಟು ನಿಟ್ಟಾಗಿ ನಿರ್ವಹಿಸಲು ಸೂಚಿಸಿದೆ ಎಂದು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದ ಡಿಸಿ ಲತಾಕುಮಾರಿ

Published

on

ಹಾಸನ:  ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿರುವ 1069 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕುರಿತು ವರದಿ ನೀಡುವುದರ ಜೊತೆಗೆ ಇಂದು ಸ್ವೀಕಾರ ಮಾಡಿರುವ 135 ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ  ಕೆ.ಎಸ್‌. ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜನ ಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು ಸಾರ್ವಜನಿಕರ ಸ್ವಂತ ಜಮೀನು ಒತ್ತುವರಿ ಆಗಿದ್ದಲ್ಲಿ ನ್ಯಾಯಾಲಯದ ನಿರ್ದೇಶನವಿದ್ದರೆ ಮಾತ್ರ ಬಿಡಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

 


ಕಳೆದ 20 ವರ್ಷದಿಂದ ಪಡಿತರ ಕಾರ್ಡ್ ಹೊಂದಿದ್ದು, ಆದಾಯ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿರುವುದರಿಂದ ೫ ವರ್ಷದಿಂದ ಪಡಿತರ ಕಾರ್ಡ್ ರದ್ದಾಗಿರುವುದನ್ನು ಸರಿಪಡಿಸಲು ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಅರಕಲಗೂಡು ತಾಲೂಕಿನ ಮಾದಿಹಳ್ಳಿಯಲ್ಲಿ ಏತನೀರಾವರಿಗೆ ಭೂಸ್ವಾಧೀನವಾಗಿದ್ದು, ಪರಿಹಾರ ಕೋರಿ ಬಂದ ಮನವಿಗೆ ಖುದ್ದು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ಪೌತಿಖಾತೆ, ಹದ್ದುಬಸ್ತು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸಾಗುವಳಿ ಚೀಟಿ, ಕಂದಾಯ ಗ್ರಾಮ, ಖಾತೆ ಮಾಡುವ ಬಗ್ಗೆ, ಪೋಡಿ ದುರಸ್ತಿ, ಪಹಣಿ ತಿದ್ದುಪಡಿ, ಹೊಲಕ್ಕೆ ದಾರಿ ಬಿಡಿಸಿಕೊಡುವ ಬಗ್ಗೆ, ಶ್ರವಣಬೆಳಗೊಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ, ಇನಾಮು ರದ್ದು ಪಡಿಸುವ ಕುರಿತು, ಕೊಣನೂರು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡಲು ಮನವಿ, ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಸೂಚಿಸಿದರಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಾಯ ಗ್ರಾಮದಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು, ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಅಂತಿಮ ಬಿಲ್ ಹಣ ಪಾವತಿ ಮಾಡುವಂತೆ ಸೂಚಿಸಿದರಲ್ಲದೆ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೇಡ್ ಹಾಕಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸಲು ನಿರ್ದೇಶನ ನೀಡಿದರು.

ಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಸ್ವಾಧೀನವಾಗಿರುವ ಜಾಗಕ್ಕೆ ಹಾಗೂ ಬೆಳೆ ಪರಿಹಾರ, ಖಾತೆ ಬದಲಾವಣೆ, ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರದಲ್ಲಿ ಗೋಮಾಳದಲ್ಲಿ ಎರಡು ಗುಂಟೆ ಜಾಗ ಕಲ್ಪಿಸುವಂತೆ ಅಹವಾಲು ಅರ್ಜಿಗಳು ಸ್ವೀಕಾರವಾಯಿತು.

ಸಾರ್ವಜನಿಕರಿಗೆ ಕಾನೂನು ಸೇವೆಗಳ ಸಹಾಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಕೋಶ ತೆರೆಯಲಾಗಿದೆ ಯಾರ ಸಹಾಯವಿಲ್ಲದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

Continue Reading

Hassan

ಹಾಸನದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವದ ಸಂಭ್ರಮ.

Published

on

ಹಾಸನ ನಗರದ ಪ್ರತಿಷ್ಠಿತ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವ ದಿನಾಂಕ 19 .12. 2025 ರಂದು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಾಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೆ ಎಸ್ ಲತಾ ಕುಮಾರಿ, ಐಎಎಸ್ ಭಾಗವಹಿಸಿದ್ದರು. ವಿಶಿಷ್ಟ ಅತಿಥಿಯಾಗಿ ರಾಜೀವ ಶಿಕ್ಷಕ ಪ್ರಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ।। ಮಿನಿ ವರ್ಗೀಸ್ ರವರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಪಂಚತಂತ್ರ, ಚಂದಮಾಮ, ನೈತಿಕ ಮೌಲ್ಯವನ್ನು ಬೆಳಗಿಸುವ ಹಾಗೂ ಜ್ಞಾನ ವಿಜ್ಞಾನದ ಪುಸ್ತಕಗಳ ಅರಿವಿನಿಂದ ಜ್ಞಾನ ಸಂಪಾದಿಸಬೇಕು,ಒಳ್ಳೆಯ ಸುಸಂಸ್ಕೃತ ಹಾಗೂ ದೇಶ ಕಟ್ಟುವ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರು ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಶುಭ ಹಾರೈಸಿದರು. ವರಿಷ್ಠ ವಿದ್ಯಾರ್ಥಿಗಳು ನೀಡಿದ 12 ಸೋಲಾರ್ ವಿದ್ಯುತ್ ಬೀದಿ ದೀಪಗಳನ್ನು ಉದ್ಘಾಟಿಸಿದರು.

ಈ ಸಂಭ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ ಡಾ. ಮಿನಿ ವರ್ಗೀಸ್ ರವರು ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಜಗತ್ತು ಮೊಬೈಲ್ ಯುಗವಾಗಿದೆ. ಸಾಧ್ಯವಾದಷ್ಟು ಮೊಬೈಲನ್ನು ಅತಿಯಾಗಿ ಬಳಸದೆ ಒಳ್ಳೆಯದಕ್ಕೆ ಮಾತ್ರ ಉಪಯೋಗಿಸಿ ನಿಮ್ಮ ಬದುಕು ಸಾರ್ಥಕಗೊಳಿಸಬೇಕು. ಶಿಕ್ಷಕರು ಮತ್ತು ಪೋಷಕರನ್ನು ಗೌರವಿಸುತ್ತಾ ಅವರ ಮಾರ್ಗದರ್ಶನದಲ್ಲಿ ನಡೆದರೆ ನಿಮ್ಮ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಹಿತ ನುಡಿದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ನಿವೃ ತ್ತಿಯಾಗಲಿರುವ ಶಾಲೆಯ ಪ್ರಾಂಶುಪಾಲರಾದ ಶ್ರೀ ಎಂ ಜಯಶೀಲನ್ ಮತ್ತು ಸಮಾಜ ವಿಜ್ಞಾನದ ಶಿಕ್ಷಕರಾದ
ಬಿ ಸತ್ಯನಾರಾಯಣ್ ರವರನ್ನು ಸನ್ಮಾನಿಸಲಾಯಿತು.

ಶಾಲೆಯ ಪ್ರಾಂಶುಪಾಲರಾದ
ಶ್ರೀ ಜಯಶೀಲನ್ ರವರು ವಿದ್ಯಾಲಯದ ವಾರ್ಷಿಕ ಪ್ರಗತಿಯ ಬಗ್ಗೆ ವರದಿ ಓದಿದರು. ವರಿಷ್ಠ ಶಿಕ್ಷಕರಾದ ಶ್ರೀ ಸತ್ಯನಾರಾಯಣರವರು ಸ್ವಾಗತಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ರಶ್ಮಿಯವರು ಧನ್ಯವಾದ ಅರ್ಪಿಸಿದರು. ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಇದಕ್ಕೆ ಸಾಕ್ಷಿಯಾದರು.

Continue Reading

Hassan

ನಗರದಲ್ಲಿ ಗಮನಸೆಳೆದ ಕ್ರಿಸ್ಮಸ್-2025 ಭರವಸೆಯ ಜಾಥಾ

Published

on

ಹಾಸನ: ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಹಾಸನ ಘಟಕದ ವೇದಿಕೆಯಡಿ, ಹಾಸನ ಜಿಲ್ಲೆಯ ಸಮಸ್ತ ಕ್ರೈಸ್ತ ಸಮುದಾಯದ ವತಿಯಿಂದ ಶನಿವಾರ ಸಂಜೆ ಆಯೋಜಿಸಲಾದ ಕ್ರಿಸ್ಮಸ್-೨೦೨೫ ಭರವಸೆಯ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು.

ಚರ್ಚಿನ ಫಾದರ್ ಮಾಧ್ಯಮದೊಂದಿಗೆ ಮಾತನಾಡಿ, ಕ್ರಿಸ್ಮಸ್ ಹಬ್ಬದ ಅಂಗವಾಗಿ ಈ ಭರವಸೆಯ ಜಾಥಾವನ್ನು ಹಾಸನದ ಸಂತ ಅಂತೋಣಿಯವರ ದೇವಾಲಯದಿಂದ ಆರಂಭಿಸಿ, ಎನ್.ಆರ್. ಸರ್ಕಲ್‌ನ ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಸರ್ಕಲ್, ಮಹಾರಾಜ ಪಾರ್ಕ್ ರಸ್ತೆ, ಸೈಟರ್ಸ್ ಮೆಮೋರಿಯಲ್ ಹಾಲ್ ವೃತ್ತ ಹಾಗೂ ಆರ್.ಸಿ. ರಸ್ತೆ ಮೂಲಕ ಸಂಚರಿಸಿ, ಪುನಃ ಜಿಲ್ಲಾ ಪಂಚಾಯತ್ ಸರ್ಕಲ್ ಮೂಲಕ ಸಂತ ಅಂತೋಣಿಯವರ ದೇವಾಲಯಕ್ಕೆ ವಾಪಸ್ಸು ತಲುಪಿಸಲಾಯಿತು. ನಂತರ ಚರ್ಚ್ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು..

ಜಾಥಾದ ವೇಳೆ ಸ್ತಬ್ಧಚಿತ್ರಗಳು, ಕ್ರಿಸ್ಮಸ್ ನೃತ್ಯ ರೂಪಕಗಳು, ಕೋಲಾಟ, ಕ್ರಿಸ್ಮಸ್ ಹಾಡುಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಮಾಜದಲ್ಲಿ ಶಾಂತಿ, ಭರವಸೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಾದರ್ ಪ್ಯಾಟ್ರಿಕ್, ಫಾದರ್‌ಗಳಾದ ಸುದರ್ಶನ್ ಕುಮಾರ್, ಸಿ.ಎಸ್. ಯೂಸೇಫ್, ಸಿಲ್ವರ್ ಸ್ಟಾರ್, ಪಾಸ್ಟರ್ ಜೋಸೇಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!