Connect with us

Kodagu

ಕರಡದಲ್ಲಿ ನ.23 ರಿಂದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ

Published

on

ನಾಪೋಕ್ಲು : ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಇದರ ವತಿಯಿಂದ ನ.23 ರಿಂದ 25 ರವರೆಗೆ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪನವರು ತಿಳಿಸಿದ್ದಾರೆ.

ಕರಡದಲ್ಲಿರುವ ಕ್ಲಬ್ ನ ಕಛೇರಿಯಲ್ಲಿ ಕರೆಯಲಾಗಿದ್ದ
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ಪಂದ್ಯಾಟ ನಡೆಯಲಿದೆ.
ಪ್ರಥಮ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಪಾಂಡಂಡ ಕಪ್ ನಡೆದ ಹೆಗ್ಗಳಿಕೆಗೆ ಪಾತ್ರ ವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕರಡದಲ್ಲಿ ನಡೆಯುವ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್ ನಾಡಿಗೆ ಒಳಪಟ್ಟ ಗ್ರಾಮಗಳು ಭಾಗವಹಿಸಲು ಅವಕಾಶವಿದ್ದು ಪಾಲ್ಗೊಳ್ಳುವ ತಂಡಗಳು ನವೆಂಬರ್ 10 ರ ಒಳಗೆ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ಕ್ಲಬ್ ನ ಅಧ್ಯಕ್ಷ ಬಿದ್ದಪ್ಪನವರು ಮಾಹಿತಿ ನೀಡಿದರು.

:ಹೆಸರು ನೋಂದಾಯಿಸಲು
9686445779(ಪ್ರಕಾಶ್ ),6360591530 (ಸುಧಾ ) 9449255167 (ಮಧು) ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳ ಬಹುದು.

ಸುದ್ದಿ ಗೋಷ್ಠಿಯಲ್ಲಿ ಕ್ಲಬ್ ನ ಕಾರ್ಯದರ್ಶಿ ಗಣಪತಿ, ಕೋಶಾಧಿಕಾರಿ ಹಾಗೂ ಗ್ರಾ.ಪಂ. ಸದಸ್ಯ ವಿಲಿನ್, ಉಪಾಧ್ಯಕ್ಷ ಚರ್ಮಣ,ಭೀಮಯ್ಯ,ಅಚ್ಚಪ್ಪ, ಕಿಶನ್,ಪ್ರಕಾಶ್,ಸೋಮಯ್ಯ, ಅರ್ಜುನ್, ಸುಧಾ,ಸುಷ ಮೊಣ್ಣಯ್ಯ,ಕುಶಾಲಪ್ಪ,ಸುಧಿ ಹಾಗೂ ಸದಸ್ಯರು ಹಾಜರಿದ್ದರು.

ವರದಿ :ಝಕರಿಯ ನಾಪೋಕ್ಲು

Continue Reading
Click to comment

Leave a Reply

Your email address will not be published. Required fields are marked *

Kodagu

ವಿರಾಜಪೇಟೆಯಲ್ಲಿ ಸಿಎನ್‌ಸಿ ಜನಜಾಗೃತಿ ಕಾರ್ಯಕ್ರಮ ಭೂಮಾಫಿಯಾದ ವಿರುದ್ಧ ಎಚ್ಚೆತ್ತುಕೊಳ್ಳಲು ಎನ್.ಯು.ನಾಚಪ್ಪ ಕರೆ

Published

on

ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಸಿಎನ್‌ಸಿ ವತಿಯಿಂದ ವಿರಾಜಪೇಟೆ ಗಡಿಯಾರ ಕಂಬದ ಬಳಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.


ಭೂಮಾಫಿಯಾ, ಕಾರ್ಪೋರೇಟ್ ಮಾಫಿಯಾ, ಅರ್ಬನ್ ನಕ್ಸಲರು, ತುಕುಡೇ ಗ್ಯಾಂಗ್ ಹಾಗೂ ಕೊಡವ ವಿರೋಧಿ ಕೂಟಗಳು ಸೇರಿಕೊಂಡು ಆಮದು ಗಿರಿಜನರನ್ನು ಕೊಡಗಿಗೆ ಕರೆತಂದು ಸ್ಥಳೀಯರೆಂದು ಬಿಂಬಿಸಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವರ ಪರ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ದೂರಿದರು.


ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂಪರಿವರ್ತನೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಬಲಾಢ್ಯ ಸಂವಿಧಾನೇತರ ಶಕ್ತಿ ಇದಕ್ಕೆ ಅಡ್ಡಿಯಾಗಿದೆ. ಆದರೆ ಭೂಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಒತ್ತಡಕ್ಕೆ ಮಣಿದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಿಕೊಡಲಾಗುತ್ತಿದೆ. ತಡಿಯಂಡ್ ಮೋಳ್ ನಿಂದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವರೆಗೆ ನಿಷೇಧಿತ ಪ್ರದೇಶದಲ್ಲಿ ತಕ್ಷಣ ತಕ್ಷಣ ಭೂಪರಿವರ್ತನೆಯಾಗುತ್ತಿದೆ.


ತಲಕಾವೇರಿ, ಭಾಗಮಂಡಲ ಕೊಡವ ಟ್ರಸ್ಟ್ ಅವರಿಗೆ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ನಿರಾಕರಣೆ ಮಾಡಿರುವುದು ಸಂವಿಧಾನದ 51 ಎ ಮತ್ತು 25, 26 ವಿಧಿಯ ಉಲ್ಲಂಘನೆಯಾಗಿದೆ. ಅತ್ಯಂತ ಸಣ್ಣ ಸಮುದಾಯವೊಂದು ಧಾರ್ಮಿಕ ಆಚಾರ, ವಿಚಾರಗಳನ್ನು ಮುಕ್ತವಾಗಿ ಆಚರಣೆ ಮಾಡಲು ಅಡ್ಡಿಪಡಿಸಿದಂತ್ತಾಗಿದೆ.
ಕೊಡವರು ತಮ್ಮ ಜನ್ಮಭೂಮಿಯಲ್ಲಿ ನ್ಯಾಯಸಮ್ಮತವಾಗಿ ಮನೆ ನಿರ್ಮಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ನಿಯಮಗಳನ್ನು ರೂಪಿಸಿ ಕಿರುಕುಳ ನೀಡಲಾಗುತ್ತಿದೆ. ಭೂಕುಸಿತವಾದ ಮಗ್ಗುಲದ ಮಲೆತಿರಿಕೆ ಬೆಟ್ಟದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಗೊಂಡಿದೆ. ಬಿಟ್ಟಂಗಾಲ ಬಾಳುಗೋಡು ಬಳಿ ದೇವರಕಾಡು ಲೂಟಿ ಮಾಡಿ ಕೊಡವರ ಪವಿತ್ರ ದೇವನೆಲೆ ಬಳಿಯಲ್ಲಿ ರೆಸಾರ್ಟ್ ಮಾಫಿಯಾ ಮತ್ತು ಡೆವಲಪರ್ ಗೆ ಟೌನ್ ಶಿಪ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.


ವೈಟ್ ಪಪ್ಪೀಸ್ ಎಸ್ಟೇಟ್ ಹಾಲಿಡೇ ಸೀಬರ್ಡ್ ಗ್ರೂಪ್ ನವರು ರೆಸಾರ್ಟ್ ನಿರ್ಮಿಸುತ್ತಿದ್ದು, ರಾತೋರಾತ್ರಿ ಅನುಮತಿ ನೀಡಲಾಗಿದೆ. ಹೊರ ಪ್ರದೇಶ ಮತ್ತು ಹೊರ ರಾಜ್ಯಕ್ಕೆ ನೌಕರ ಶಾಹಿಯನ್ನು ಕಳುಹಿಸಿಕೊಟ್ಟು ಭೂಮಾಫಿಯಾಗಳಿಗೆ ನೋಂದಣಿ ಮಾಡಿಕೊಟ್ಟ ಎಷ್ಟೋ ಉದಾಹರಣೆಗಳಿವೆ ಎಂದು ನಾಚಪ್ಪ ಆರೋಪಿಸಿದರು.
ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಸರ್ವ ಕೊಡವರು ಭೂಮಾಫಿಯಾದ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.


ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.
ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮನೆಯಪಂಡ ಕಾಂತಿ ಸತೀಶ್ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
=============

ಮುಂದಿನ ಮಾನವ ಸರಪಳಿ ಕಾರ್ಯಕ್ರಮ ಜು.29 ರಂದು ಟಿ.ಶೆಟ್ಟಿಗೇರಿ, ಆ.10 ರಂದು ಮಾದಾಪುರ ಹಾಗೂ ಆ.18 ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.

Continue Reading

Kodagu

ಅನುಭವ ಮಂಟಪದ ಛಾಯಾಚಿತ್ರಗಳ ಬಿಡುಗಡೆ ಹಾಗೂ ವಿತರಣೆ

Published

on

ಮಡಿಕೇರಿ : ವಿಧಾನ ಪರಿಷತ್ತಿನ ಸಭಾಪತಿಗಳ ಕಚೇರಿಯಲ್ಲಿ ಅನುಭವ ಮಂಟಪದ ಛಾಯಾಚಿತ್ರಗಳ ಬಿಡುಗಡೆ ಹಾಗೂ ಶಾಸಕರುಗಳಿಗೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಸಚಿವರಾದ ಬಸವರಾಜು, ಬೈರತಿ ಸುರೇಶ್ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ವಿಧಾನ ಪರಿಷತ್ತಿನ ಸದಸ್ಯರಾದ ನಾರಾಯಣಸ್ವಾಮಿ ಬೋಜೇಗೌಡ ಉಪಸ್ಥಿತರಿದ್ದರು.

Continue Reading

Kodagu

ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್‌ಗಳಲ್ಲಿ)

Published

on

ಮಡಿಕೇರಿ ಜು.೨೪(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೨.೭೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೦೨.೬೦ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೭೦೭.೧೫ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೯೬೬.೪೧ ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೫೧.೦೫ ಮಿ.ಮೀ. ಕಳೆದ ವರ್ಷ ಇದೇ ದಿನ ೧೭೩.೪೩ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೩೭೩.೭೦ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೬೩೮.೯೪ ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೭.೨೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೮.೯೫ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೬೦೬.೦೫ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೭೫೨.೩೬ ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೩೧.೦೨ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೭೯.೯೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೬೧೦.೧೩ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೮೦೧.೧೭ ಮಿ.ಮೀ. ಮಳೆಯಾಗಿತ್ತು.


ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೯೧.೬೫ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೨೯.೨೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೮೭೨.೮೧ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೧೦೧೬.೨೬ ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೨೨.೬೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೧.೫೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೦೭೩.೧೦ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೬೨೩.೨೫ ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ ೩೫.೨೦, ನಾಪೋಕ್ಲು ೪೬.೪೦, ಸಂಪಾಜೆ ೭೧, ಭಾಗಮಂಡಲ ೫೧.೬೦, ವಿರಾಜಪೇಟೆ ೧೯.೪೦, ಅಮ್ಮತ್ತಿ ೧೫, ಹುದಿಕೇರಿ ೪೦.೯೦, ಶ್ರೀಮಂಗಲ ೫೬, ಪೊನ್ನಂಪೇಟೆ ೧೭.೧೦, ಬಾಳೆಲೆ ೧೦.೦೭, ಸೋಮವಾರಪೇಟೆ ಕಸಬಾ ೮೪, ಶನಿವಾರಸಂತೆ ೫೮, ಶಾಂತಳ್ಳಿ ೧೮೪, ಕೊಡ್ಲಿಪೇಟೆ ೪೦.೬೦, ಕುಶಾಲನಗರ ೯.೨೦, ಸುಂಟಿಕೊಪ್ಪ ೩೬ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (೨೪-೦೭-೨೦೨೪) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೫೬.೨೭ ಅಡಿಗಳು. ಕಳೆದ ವರ್ಷ ಇದೇ ದಿನ ೨೮೫೩.೭೭ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೨೨.೨೦ ಮಿ.ಮೀ., ಕಳೆದ ವರ್ಷ ಇದೇ ದಿನ ೬೨.೪೦ ಮಿ.ಮೀ., ಇಂದಿನ ನೀರಿನ ಒಳಹರಿವು ೯೨೮೮ ಕ್ಯುಸೆಕ್, ಕಳೆದ ವರ್ಷ ಇದೇ ದಿನ ೧೭೯೭೨ ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ ೭೧೦೪ ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ ೨೩೯೩೭ ಕ್ಯುಸೆಕ್.

Continue Reading

Trending

error: Content is protected !!